ಬನ್ನೂರು ಶ್ರೀ ಶನೀಶ್ವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶನಿಪೂಜೆ

ಪುತ್ತೂರು:ಬನ್ನೂರು ಶಾಲಾ ಬಳಿಯ ಸ್ಪೂರ್ತಿ ಮೈದಾನದಲ್ಲಿರುವ ಶ್ರೀ ಶನೀಶ್ವರ ದೇವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶ್ರೀಶನಿಪೂಜೆ ಶನಿವಾರ ನಡೆಯಿತು. ಅರ್ಚಕ ಹರೀಶ್ ಶಾಂತಿಯವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣಪತಿಹೋಮ, ಶ್ರೀ ಶನೀಶ್ವರ ದೇವರ ಪೂಜೆ ಆರಂಭ, ಮಧ್ಯಾಹ್ನ ಶ್ರೀದೇವರಿಗೆ ಮಹಾ ಮಂಗಳಾರತಿ, ಶನೀಶ್ವರ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಣಿಯೂರು ಚಾಮುಂಡೇಶ್ವರಿ ಕ್ಷೇತ್ರ ಶ್ರೀ ಮಹಾಬಲ ಸ್ವಾಮೀಜಿ, ನವಗ್ರಹಗಳಿಗೆ ಶನಿದೇವರು […]

ಬನ್ನೂರು ಶ್ರೀ ಶನೀಶ್ವರ ಸನ್ನಿಧಿಯಲ್ಲಿ 20ನೇ ವರ್ಷದ ಸಾಮೂಹಿಕ ಶನಿಪೂಜೆ Read More »

ಮಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿವಿ ಸ್ಥಾಪನೆ : ವೀರಪ್ಪ ಮೊಯ್ಲಿ ಒತ್ತಾಯ

ಬಜೆಟ್‌ನಲ್ಲಿ ಘೋಷಿಸುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಬೆಂಗಳೂರು: ರಾಜ್ಯದ ಎರಡನೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಮಂಗಳೂರಿನಲ್ಲಿ ಸ್ಥಾಪಿಸುವಂತೆ ರಾಜ್ಯ ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಮೊಯ್ಲಿ, ಬೆಂಗಳೂರಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಕಾನೂನು ಶಾಲೆ ಎನ್‌ಎಲ್‌ಎಸ್‌ಐಯು ಸ್ಥಾಪಿಸಲು ಕ್ರಮಗಳ ಕೈಗೊಂಡಿದ್ದೆ. ಇದು ಅತ್ಯಂತ ಯಶಸ್ವಿ ಪ್ರಯೋಗವಾಗಿದ್ದು, ಇಂದು ಭಾರತದಲ್ಲಿ 27 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿವೆ. ಕೆಲವು ರಾಜ್ಯಗಳು ಒಂದಕ್ಕಿಂತ ಹೆಚ್ಚು ರಾಷ್ಟ್ರೀಯ ಕಾನೂನು

ಮಂಗಳೂರಿನಲ್ಲಿ ರಾಷ್ಟ್ರೀಯ ಕಾನೂನು ವಿವಿ ಸ್ಥಾಪನೆ : ವೀರಪ್ಪ ಮೊಯ್ಲಿ ಒತ್ತಾಯ Read More »

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ | ಪುತ್ತೂರಿನ ಬಿಜೆಪಿ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಹರ್ಷಾಚರಣೆ.

ಪುತ್ತೂರು: ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿ ಮುಂದೆ ಬಿಜೆಪಿ ಸಂಭ್ರಮಿಸಿತು. ಬಿಜೆಪಿ ಪ್ರಮುಖರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ತಿಂಡಿ ವಿತರಿಸಿ ಹರ್ಷಚಾರಣೆಯನ್ನು ವ್ಯಕ್ತಪಡಿಸಿದರು. ಇದೆ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ‌ ಅಧ್ಯಕ್ಷ ದಯಾನಂದ ಉಜಿರೆಮಾರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ವಿದ್ಯಾಗೌರಿ, ಸುರೇಶ್ ಆಳ್ವ, ಚಂದ್ರಶೇಖರ ಬಪ್ಪಳಿಗೆ,ಸಾಜ ರಾಧಾಕೃಷ್ಣ ಆಳ್ವ,ಪುರೊಷೋತ್ತಮ ಮುಂಗ್ಲಿಮನೆ,ರಾಜೇಶ್

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ | ಪುತ್ತೂರಿನ ಬಿಜೆಪಿ ಕಚೇರಿ ಮುಂದೆ ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಹರ್ಷಾಚರಣೆ. Read More »

ಸವಣೂರು-ಬೆಳ್ಳಾರೆ ರಸ್ತೆಯಲ್ಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ದಾರಿ ಸೂಚನಾ ಫಲಕ ಅನಾವರಣ

ಸವಣೂರು: ಬೆಳ್ಳಾರೆ-ಸವಣೂರು ರಸ್ತೆಯ ಪರಣೆಯಲ್ಲಿ ಸವಣೂರು  ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ದಾರಿ ಸೂಚಿಸುವ ಫಲಕ ಇಂದು ಲೋಕರ್ಪಣೆಗೊಂಡಿತು. ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಅವರು ಸೂಚನಾ ಫಲಕವನ್ನು ಕೊಡುಗೆಯಾಗಿ ನೀಡಿದ್ದಾರೆ. ನಾಮಫಲಕ ಲೋಕಾರ್ಪಣಾ ಸಂದರ್ಭದಲ್ಲಿ ಸವಣೂರು ಶ್ರೀ  ವಿಷ್ಣುಮೂರ್ತಿ  ದೇವಾಲಯದ ಜಾತ್ರೋತ್ಸವ ಸಮಿತಿ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಸವಣೂರು ಗ್ರಾಮ ದೈವ ಶ್ರೀರಾಡಿ‌ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್. ಕೋಡಿಬೈಲು,

ಸವಣೂರು-ಬೆಳ್ಳಾರೆ ರಸ್ತೆಯಲ್ಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ದಾರಿ ಸೂಚನಾ ಫಲಕ ಅನಾವರಣ Read More »

ದೈಪಿಲ ಶ್ರೀ ಕ್ಷೇತ್ರದಲ್ಲಿ ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ

ಕಾಣಿಯೂರು: ಗ್ರಾಮದ ಚಾರ್ವಾಕ ದೈಪಿಲ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಶಿರಾಡಿ ರಾಜನ್‍ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ಫೆ.7 ಶುಕ್ರವಾರ ಹಾಗೂ ಫೆ.8 ಶನಿವಾರದಂದು ದೈಪಿಲದಲ್ಲಿ ನಡೆಯಿತು. ಫೆ.7 ಶುಕ್ರವಾರ ಬೆಳಿಗ್ಗೆ 8 ಕ್ಕೆ ದೈಪಿಲ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ ನಡೆದು ಸಂಜೆ 6 ಕ್ಕೆ ಭಂಡಾರ ತೆಗೆಯಲಾಯಿತು. ಫೆ.8 ಶನಿವಾರ ಬೆಳಿಗ್ಗೆ 10 ಕ್ಕೆ ಸೇವೆ ಹಾಗೂ ಹರಿಕೆಗಳನ್ನು ಒಪ್ಪಿಸುವವರು ದೈವದ ಸನ್ನಿಧಿಗೆ ಬಂದು ಒಪ್ಪಿಸಿದರು. ಮಧ್ಯಾಹ್ನ 12

ದೈಪಿಲ ಶ್ರೀ ಕ್ಷೇತ್ರದಲ್ಲಿ ಶಿರಾಡಿ ರಾಜನ್ ದೈವ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ Read More »

ಆಪ್‌ ಪರಮೋಚ್ಚ ನಾಯಕರಾದ ಕೇಜ್ರಿವಾಲ್‌, ಸಿಸೋಡಿಯ ಪರಾಭವ

ಚುನಾವಣೆಯಲ್ಲಿ ಆಪ್‌ಗೆ ಹೀನಾಯ ಮುಖಭಂಗ; ಮೂಲೆ ಸೇರಿದ ಪೊರಕೆ ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಪರಮೋಚ್ಚ ನಾಯಕಮಾಜಿ ಮುಖ್ಯಮಂತ್ರಿ ಅರವಿಂದ ಕೆಜ್ರಿವಾಲ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಪರಾಭಚ ಅನುಭವಿಸಿದ್ದಾರೆ. ಇದರೊಂದಿಗೆ ಚುನಾವಣೆಯಲ್ಲಿ ಆಡಳಿತಾರೂಢ ಆಪ್‌ಗೆ ಕೂಡ ಭಾರಿ ಮುಖಭಂಗವಾದಂತಾಗಿದೆ. ಸತತ ಎರಡು ಬಾರಿ ದಿಲ್ಲಿಯ ಗದ್ದುಗೆ ಏರಿದ್ದ ಎಎಪಿ ಮತ್ತು ಕೇಜ್ರಿವಾಲ್​ಗೆ ಈ ಬಾರಿ ಅಬಕಾರಿ ನೀತಿ ಹಗರಣದಿಂದ ಭಾರಿ ಹಿನ್ನಡೆಯಾಗಿತ್ತು. ಅದು ಮತದಾನದ ಮೇಲೂ ಪರಿಣಾಮ ಬೀರಿದಂತಿದೆ. ಬಿಜೆಪಿ 40ಕ್ಕೂ ಅಧಿಕ ಸ್ಥಾನಗಳೊಂದಿಗೆ ನಿಚ್ಚಳ ಬಹುಮತದೊಂದಿಗೆ

ಆಪ್‌ ಪರಮೋಚ್ಚ ನಾಯಕರಾದ ಕೇಜ್ರಿವಾಲ್‌, ಸಿಸೋಡಿಯ ಪರಾಭವ Read More »

ಯಕ್ಷಗಾನ ಸ್ತ್ರೀ ವೇಷಧಾರಿಯ ಹನಿಟ್ರ್ಯಾಪ್‌ ಬಲೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಅರ್ಚಕ

ರಾತೋರಾತ್ರಿ ಕಲಾವಿದನನ್ನು ಬಂಧಿಸಿ ಕರೆದೊಯ್ದ ಕಾಸರಗೋಡು ಪೊಲೀಸರು ಮಂಗಳೂರು: ಯಕ್ಷಗಾನದ ಪ್ರಸಿದ್ಧ ಸ್ತ್ರೀ ವೇಷಧಾರಿಯೊಬ್ಬರು ಕಾಸರಗೋಡಿನ ಸಮೀಪದ ಅರ್ಚಕರೊಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಿ 10 ಲಕ್ಷಕ್ಕೂ ಅಧಿಕ ಹಣ ವಸೂಲು ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ ಎನ್ನಲಾಗಿದೆ. ಪ್ರಸಿದ್ಧ ಮೇಳಗಳಲ್ಲಿ ಸ್ತ್ರೀ ಪಾತ್ರ ನಿರ್ವಹಣೆ ಮಾಡುತ್ತಿದ್ದ ಅಶ್ವಥ್‌ ಆಚಾರ್ಯ ಆರೋಪಿ ಎನ್ನಲಾಗಿದೆ.ಯಕ್ಷಗಾನ ಕಲಾವಿದನೊಬ್ಬ ಎಸಗಿರುವ ಈ ಕೃತ್ಯದಿಂದ ಇಡೀ ಯಕ್ಷಗಾನ ಲೋಕವೇ ತಲೆತಗ್ಗಿಸುವಂತೆ ಆಗಿದೆ ಎಂದು ಅನೇಕರು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.ಅಶ್ವಥ್‌ ಆಚಾರ್ಯ ಫೇಸ್‌ಬುಕ್‌ನಲ್ಲಿ ಕಾಸರಗೋಡು ಸಮೀಪದ

ಯಕ್ಷಗಾನ ಸ್ತ್ರೀ ವೇಷಧಾರಿಯ ಹನಿಟ್ರ್ಯಾಪ್‌ ಬಲೆಗೆ ಬಿದ್ದು 10 ಲಕ್ಷ ಕಳೆದುಕೊಂಡ ಅರ್ಚಕ Read More »

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ

ಬೆಳ್ತಂಗಡಿ : ಉಜಿರೆಯ ಎಸ್.ಡಿ.ಯಂ ಮಹಾವಿದ್ಯಾಲಯದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ| ಹಾಮಾನಾ ಸಂಶೋಧನಾ ಕೇಂದ್ರದ ಅಭ್ಯರ್ಥಿ ಸುವೀರ್ ಜೈನ್ ಅವರಿಗೆ ಪಿಎಚ್.ಡಿ ಪದವಿ ದೊರೆತಿದೆ. ಇವರು ಡಾ.ಎ.ಜಯಕುಮಾರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಮತ್ತು ಅಭಿವೃದ್ಧಿ- ರುಡ್‍ ಸೆಟ್‍ ನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಮಹಾಪ್ರಬಂಧ ರಚಿಸಿ ವಿಶ್ವವಿದ್ಯಾಲಯಕ್ಕೆ ಮಂಡನೆ ಮಾಡಿದ್ದರು. ಪ್ರಸ್ತುತ ಇವರು ಎಸ್.ಡಿ.ಯಂ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ B.voc ವಿಭಾಗದ

ಉಜಿರೆಯ ಎಸ್.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀರ್ ಜೈನ್ ಅವರಿಗೆ ಪಿಎಚ್.ಡಿ. ಪದವಿ Read More »

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ

ಸೋಲು-ಗೆಲುವಿನ ನಡುವೆ ಹೊಯ್ದಾಡುತ್ತಿರುವ ಅರವಿಂದ ಕೇಜ್ರಿವಾಲ್‌ ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಪರಾಭವ ಬಹುತೇಕ ನಿಶ್ಚಿತಗೊಂಡಿರುವಂತೆ ಕಾಂಗ್ರೆಸ್‌ ಮತ್ತು ಆಪ್‌ ವಿರುದ್ಧ ಇಂಡಿ ಮೈತ್ರಿಕೂಟದ ಮಿತ್ರಪಕ್ಷಗಳು ಕೆಂಡ ಕಾರತೊಡಗಿವೆ. ಇಂಡಿ ಭಾಗವಾಗಿರುವ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲ ಆಪ್‌ ಮೇಲೆ ಸೋಲಿನ ಕರಿಮೋಡ ಕವಿಯುತ್ತಿರುವಂತೆಯೇ ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ ಎಂದು ಲೇವಡಿ ಮಾಡಿದ್ದಾರೆ.ದಿಲ್ಲಿ ಚುನಾವಣೆಯಲ್ಲಿ ಇಂಡಿ ಮಿತ್ರಪಕ್ಷಗಳಾದ ಕಾಂಗ್ರೆಸ್‌ ಮತ್ತು ಆಪ್‌ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಾತ್ರವಲ್ಲದೆ ಪ್ರಚಾರದ ವೇಳೆ ಸಾಕಷ್ಟು ಕಿತ್ತಾಡಿಕೊಂಡಿದ್ದವು. ಈ

ನಿಮ್ಮೊಳಗೆ ಕಿತ್ತಾಡಿ ನಾಶವಾಗಿ ಹೋಗಿ : ಇಂಡಿ ಮೈತ್ರಿಕೂಟಕ್ಕೆ ಓಮರ್‌ ಅಬ್ದುಲ್ಲ ಲೇವಡಿ Read More »

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ

ಸುಳ್ಯ : ಸುಳ್ಯದ ವ್ಯಕ್ತಿತ್ವ ವಿಕಸನ ತರಬೇತುದಾರರು, ಹಾಗೂ ಎನ್ನೆಂಸಿಯ ಉಪನ್ಯಾಸಕರೂ  ಆದ  ಡಾ. ಅನುರಾಧಾ ಕುರುಂಜಿ ಯವರು ಕರ್ನಾಟಕ‌ ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುತ್ತಾರೆ. ಕರ್ನಾಟಕ ರಾಜ್ಯ ಎನ್ ಎಸ್ ಎಸ್ ಕೋಶ ಮತ್ತು ಮಂಗಳೂರಿನ ಯೇನೆಪೋಯ ಡೀಮ್ಡ್ ವಿಶ್ವ‌ವಿದ್ಯಾಲಯದ ಸಹಯೋಗದಲ್ಲಿ  ಫೆ 3 ರಿಂದ 7 ರವರೆಗೆ ಏನೇಪೋಯ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ  ರಾಜ್ಯದ  ವಿವಿಧ ಪದವಿ, ಮೆಡಿಕಲ್ , ಪಾಲಿಟೆಕ್ನಿಕ್, ಇಂಜಿನಿಯರಿಂಗ್, ಪದವಿ

ರಾಜ್ಯಮಟ್ಟದ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿಗಳ‌ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ  ಅನುರಾಧಾ ಕುರುಂಜಿ Read More »

error: Content is protected !!
Scroll to Top