ಅಕ್ಷಯ ಕಾಲೇಜಿನಲ್ಲಿ “ಪ್ರಿನ್ಸ್   ಆ್ಯಂಡ್  ಪ್ರಿನ್ಸಸ್” ಗ್ರಾಂಡ್ ಫಿನಾಲೆ

ಪುತ್ತೂರು : ಅಕ್ಷಯ ಕಾಲೇಜು ಪುತ್ತೂರು ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತ ಕಲಾ ಸಂಘದ ವತಿಯಿಂದ ನಡೆದ ”ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್” ಫ್ಯಾಶನ್ ಶೋ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಫೆ. 8 ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಡಿಸೆಂಬರ್ 01 ರಂದು ನಡೆದ ಮೊದಲ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದ 260 ಸ್ಪರ್ಧಾಳುಗಳಲ್ಲಿ ಫಿನಾಲೆಗೆ ಆಯ್ಕೆಯಾದ 80 ಸ್ಪರ್ಧಾಳುಗಳು ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಅಧ್ಯಕ್ಷ  ಜಯಂತ್ ನಡುಬೈಲ್ ನೆರವೇರಿಸಿ“ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು […]

ಅಕ್ಷಯ ಕಾಲೇಜಿನಲ್ಲಿ “ಪ್ರಿನ್ಸ್   ಆ್ಯಂಡ್  ಪ್ರಿನ್ಸಸ್” ಗ್ರಾಂಡ್ ಫಿನಾಲೆ Read More »

108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕರಾದ ಯರ್ಮುಂಜ ಶಂಕರ ಜೋಯಿಸರು ನಿಧನ  

ಪುತ್ತೂರು : ದೃಗ್ಗಣಿತರೀತ್ಯಾ ಪಂಚಾಂಗವನ್ನು ತಯಾರಿಸಿ ಧರ್ಮಕರ್ಮಗಳಿಗೆ ಕಾಲನಿರ್ಣಯವನ್ನು ಮಾಡಿಕೊಂಡು ಬರುತ್ತಿರುವ 108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕರಾದ ಯರ್ಮುಂಜ ಶಂಕರ ಜೋಯಿಸರು  (72) ಅಂಗರಜೆಯ ಸ್ವಗೃಹದಲ್ಲಿ ಶನಿವಾರ ನಿಧನರಾಗಿದ್ದಾರೆ. ಯರ್ಮುಂಜ ಭೀಮ ಜೋಯಿಸರ ಮಗನಾದ ಅವರು ವೈಜಯಂತೀ ಪಂಚಾಂಗದ ಆದ್ಯಪ್ರವರ್ತಕರಾದ ಯರ್ಮುಂಜ ಶಂಕರ ಜೋಯಿಸರ ಮೊಮ್ಮಗ. ಧರ್ಮಶಾಸ್ತ್ರದಲ್ಲಿಯೂ ಇವರ ಪಾಂಡಿತ್ಯವು ಅಗಾಧವಾಗಿತ್ತು. ಹಲವು ಜೌತಿಷ ವಿದ್ವತ್ ಗೋಷ್ಠಿಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ವಾಸ್ತುಪ್ರಕಾರ ಅನೇಕ ಗೃಹನಿರ್ಮಾಣಕ್ಕೆ ಮಾರ್ಗದರ್ಶನವನ್ನು ನೀಡಿರುವರು. ಅವರು ಬೈಲೂರು ಅನಂತಪದ್ಮನಾಭ ತಂತ್ರಿ

108 ವರ್ಷಗಳ ಇತಿಹಾಸವುಳ್ಳ ವೈಜಯಂತೀ ಪಂಚಾಂಗದ ಸಂಪಾದಕರಾದ ಯರ್ಮುಂಜ ಶಂಕರ ಜೋಯಿಸರು ನಿಧನ   Read More »

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಜತ್ತೂರು ಗ್ರಾಮ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಜತ್ತೂರು ಗ್ರಾಮ ಸಮಿತಿ ಮತ್ತು ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಹಾಗೂ ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಈಶ್ವರಂಭ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಉಚಿತ ಕಣ್ಣಿನ ಮತ್ತು ದಂತ ಚಿಕಿತ್ಸಾ ಶಿಬಿರ, ವೈದ್ಯಕೀಯ ಶಿಬಿರ ವಳಾಲು ಶಾಲಾ ವಠಾರದಲ್ಲಿ ಇಂದು ನಡೆಯಿತು. ಬಜತ್ತೂರು ಘಟಕದ ಅಧ್ಯಕ್ಷ ಹರಿಕೃಷ್ಣ ಕಾಂಚನ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಬಜತ್ತೂರು ಗ್ರಾಮ ಸಮಿತಿಯಿಂದ ಉಚಿತ ವೈದ್ಯಕೀಯ ಶಿಬಿರ Read More »

ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಬಿಡುಗಡೆಗೊಳಿಸಲಾಯಿತು. ಶ್ರೀ ದೇವರಿಗೆ ಪ್ರಾರ್ಥನೆ ನಡೆಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಈ ಬಾರಿ ನಡೆಯುವ ಕಂಬಳದ ಮಧ್ಯೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಲಿದೆ. ಕೆಸರುಗದ್ದೆ ಓಟ ಕಂಬಳದ ಒಂದು ಭಾಗವಾಗಿದ್ದು ಮುಂದಿನ ಯುವ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಹಾಗೂ ಇಂತಹ ಕಾರ್ಯಕ್ರಮದಲ್ಲಿ ಯುವಕರು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತಾಗಲು ಕಂಬಳದ ಮಧ್ಯೆ ಬಿಡುವಿನ

ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ Read More »

ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸುಧಾರಾಣಿ ದಿವಾಕರ ಆಯ್ಕೆ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದನೆ

ಸುಳ್ಯ: ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸದಸ್ಯೆ ಸುಧಾರಾಣಿ ದಿವಾಕರ ಗೌಡ ಕಡಿರಮೂಲೆ ಅವರನ್ನು ಕಾಣಿಯೂರು ಶಾಖೆಯ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದಿಸಲಾಯಿತು. ಸಭೆಯಲ್ಲಿ ಮಾತನಾಡಿದ ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಉಪಾಧ್ಯಕ್ಷ ಯು. ಪಿ ರಾಮಕೃಷ್ಣ ಮಾತನಾಡಿ, ಸಹಕಾರ ಸಂಘದಲ್ಲಿ ಇನ್ನಷ್ಟು ಸ್ಥಾನವನ್ನು ಪಡೆದು ಅಭಿವೃದ್ಧಿ ಕೆಲಸವನ್ನು, ಸಾಧನೆಯನ್ನು ಮಾಡಿ

ಮುರುಳ್ಯ – ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಸುಧಾರಾಣಿ ದಿವಾಕರ ಆಯ್ಕೆ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕಾಣಿಯೂರು ಶಾಖೆಯ ಸಲಹಾ ಸಮಿತಿ ಸಭೆಯಲ್ಲಿ ಅಭಿನಂದನೆ Read More »

ಭದ್ರತಾ ಪಡೆ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ

ರಾಯ್‌ಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ 12 ನಕ್ಸಲರು ಹತರಾಗಿದ್ದಾರೆ. ಇದರೊಂದಿಗೆ ನಕ್ಸಲ್‌ ನಿಗ್ರಹ ಹೋರಾಟದಲ್ಲಿ ಭದ್ರತಾ ಪಡೆಗಳಿಗೆ ಮತ್ತೊಂದು ಜಯ ಲಭಿಸಿದೆ. ಕಳೆದ ವಾರವಷ್ಟೇ ಎಂಟು ನಕ್ಸಲರು ಗುಂಡಿಗೆ ಬಲಿಯಾದ ಬೆನ್ನಿಗೆ ಈ ಎನ್‌ಕೌಂಟರ್ ನಡೆದಿದೆ. ಜನವರಿ 31 ರಂದು ಭದ್ರತಾ ಸಿಬ್ಬಂದಿಯ ಜಂಟಿ ತಂಡವು ಕಾರ್ಯಾಚರಣೆಗೆ ಹೊರಟಿದ್ದಾಗ ಗುಂಡಿನ ಚಕಮಕಿ ನಡೆದು ಎಂಟು ಮಾವೋವಾದಿಗಳು ಸಾವನ್ನಪ್ಪಿದ್ದರು.ಪಶ್ಚಿಮ ಬಸ್ತಾರ್​ನಲ್ಲಿ ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶುಕ್ರವಾರ ಕಾರ್ಯಾಚರಣೆ ಆರಂಭಿಸಲಾಗಿತ್ತು. ಜಿಲ್ಲಾ

ಭದ್ರತಾ ಪಡೆ ಎನ್‌ಕೌಂಟರ್‌ಗೆ 12 ನಕ್ಸಲರು ಬಲಿ Read More »

ಕೋಳಿ ಸಾಗಿಸುತ್ತಿದ್ದ ವಾಹನ ಪಲ್ಟಿ

ಬದುಕುಳಿದ ಕೋಳಿಗಳನ್ನು ಎತ್ತಿಕೊಂಡು ಹೋದ ಸ್ಥಳೀಯರು ಬಂಟ್ವಾಳ : ತಾಲೂಕಿನ ಕಾಲೆಜಿಮಲೆ ಮೀಸಲು ಅರಣ್ಯದ ಒಳರಸ್ತೆಯಲ್ಲಿ ಕೋಳಿ ಸಾಗಾಟದ ಪಿಕಪ್ ವಾಹನವೊಂದು ಪಲ್ಟಿಯಾಗಿ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕಿಸುವ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.ತಮಿಳುನಾಡು ನೋಂದಣಿಯ ಪಿಕಪ್ ವಾಹನ ಕನ್ಯಾನ ಜಂಕ್ಷನ್‌ನಿಂದ ಹೊರಟು ಕಾಲೆಜಿಮಲೆ ಮೀಸಲು ಅರಣ್ಯದ ಮೂಲಕ ಕಡಿದಾದ ಗುಡ್ಡಗಾಡು ರಸ್ತೆಯಲ್ಲಿ ಚಲಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಿಕಪ್ ರಸ್ತೆ ಬದಿ ಪಲ್ಟಿಯಾಗಿದೆ.ಅಪಘಾತದಲ್ಲಿ

ಕೋಳಿ ಸಾಗಿಸುತ್ತಿದ್ದ ವಾಹನ ಪಲ್ಟಿ Read More »

ನಾಳೆಯಿಂದ ಬೆಂಗಳೂರಿನಲ್ಲಿ ಏರ್‌ಶೋ

ರೋಮಾಂಚನಕಾರಿ ವೈಮಾನಿಕ ಪ್ರದರ್ಶನ ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ 15ನೇ ಆವೃತ್ತಿಯ ಏರೋ ಇಂಡಿಯಾ ಶೋ ಆರಂಭವಾಗಲಿದೆ. ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಈ ಬಾರಿ ಹಲವು ದಾಖಲೆಗಳ ನಿರೀಕ್ಷೆಗಳನ್ನು ಹುಟ್ಟಿಸಿದೆ.ರನ್ ಟು ಎ ಬಿಲಿಯನ್ ಆಪರ್ಚುನಿಟೀಸ್ ಎಂಬ ಧ್ಯೇಯದೊಂದಿಗೆ 5 ದಿನ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಯಲಹಂಕ ವಾಯುನೆಲೆ ಸಿದ್ಧವಾಗಿದೆ. ಫೆಬ್ರವರಿ 10ರಿಂದ 14ರವರೆಗೆ ನಡೆಯಲಿರುವ ಏರ್ ಶೋಗೆ ದೇಶ, ವಿದೇಶದ ಗಣ್ಯರು ಆಗಮಿಸಲಿದ್ದಾರೆ. ದೇಶ, ವಿದೇಶದ ವಾಯುಪಡೆಯ ವಿಮಾನಗಳು ಬಾನಂಗಳದಲ್ಲಿ ಮೋಡಿ

ನಾಳೆಯಿಂದ ಬೆಂಗಳೂರಿನಲ್ಲಿ ಏರ್‌ಶೋ Read More »

ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕೆಡ್ಡಸ ಹಬ್ಬದ ಪ್ರಾತ್ಯಕ್ಷಿಕೆ

ಪುತ್ತೂರು: ತಾಲೂಕು ಒಕ್ಕಲಿಗ ಗೌಡ ಮಹಿಳಾ ಸಂಘದಿಂದ ಕೆಡ್ಡಸ ಹಬ್ಬದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಈಶ್ವರಮಂಗಲ ವಲಯದ ಕಾವು ಸಂಜೀವ ಗೌಡರ ಮನೆಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜಾ ಬೆಳಿಯಪ್ಪ ಗೌಡ ಮಾತನಾಡಿ, ನೆಲ ಅಗೆಯುವುದು ನಿಷೇಧ ಎಂಬ ಅರ್ಥವನ್ನು ಕೊಡುವ ಕೆಡ್ಡಸ ಮೂರು ದಿನಗಳ ಆಚರಣೆಯ ಹಬ್ಬವಾಗಿದೆ. ಪ್ರಕೃತಿ ಹೆಣ್ಣಾಗಿರುವುದರಿಂದ ಆಕೆ ವರ್ಷಕ್ಕೊಮ್ಮೆ ಬಹಿಷ್ಠೆಯಾಗುವ, ಭೂಮಿತಾಯಿ ರಜಸ್ವಲೆಯಾಗುವ ಹಬ್ಬವೇ ಕೆಡ್ಡಸ, ಈ ಹಬ್ಬ ಫೆನ್ನಿ (ಪೊಯಿಂತೆಲ್‍) 27ನೇ

ಮಹಿಳಾ ಒಕ್ಕಲಿಗ ಗೌಡ ಸೇವಾ ಸಂಘದಿಂದ ಕೆಡ್ಡಸ ಹಬ್ಬದ ಪ್ರಾತ್ಯಕ್ಷಿಕೆ Read More »

ಅಕ್ರಮ ಜುಗಾರಿ ಅಡ್ಡೆಗೆ ಬಂಟ್ವಾಳ ಪೊಲೀಸರಿಂದ ದಾಳಿ | 10 ಮಂದಿ ಬಂಧನ, ನಗದು, ಸೊತ್ತುಗಳು ವಶ

ಬಿ.ಸಿ.ರೋಡ್: ಅಕ್ರಮ ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಿ, ಸಾವಿರಾರು ರೂ.ನಗದು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಬಂಟ್ವಾಳ ತಾಲೂಕು ಕೊಡ್ಮಣು ಗ್ರಾಮದ ಕೆನರಾ ಪಾಯಿಂಟ್ ಕೆಂಪು ಕಲ್ಲು ಕೋರೆಯ ಬಯಲು ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಜುಗಾರಿ  ಆಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಇಬ್ಬರು ಪರಾರಿಯಾಗಿದ್ದು,ಉಳಿದಂತೆ ಆರೋಪಿಗಳಾದ ಲ್ಯಾನ್ಸಿ ರೋಡ್ರಿಗಸ್‌, ಸಂಶುದ್ದೀನ್‌,

ಅಕ್ರಮ ಜುಗಾರಿ ಅಡ್ಡೆಗೆ ಬಂಟ್ವಾಳ ಪೊಲೀಸರಿಂದ ದಾಳಿ | 10 ಮಂದಿ ಬಂಧನ, ನಗದು, ಸೊತ್ತುಗಳು ವಶ Read More »

error: Content is protected !!
Scroll to Top