‘ವಿ ಗ್ರೂಪ್’ ಅಸೋಸಿಯೇಟ್ ಮಿತದರದಲ್ಲಿ ಕನಸಿನ ಮನೆಯನ್ನು ಪಡೆಯಲು ಸುವರ್ಣವಕಾಶ

ಕಾವೂರು, ಫೆ. 9: ಸಂತೃಪ್ತ ಗ್ರಾಹಕರನ್ನು ಹೊಂದಿರುವ ಮಂಗಳೂರಿನ ಕೊಟ್ಟಾರ ಚೌಕಿಯ ‘ವಿ ಗ್ರೂಪ್’ ಅಸೋಸಿಯೇಟ್ ಕಾವೂರಿನ ಗೊಲ್ಲರಬೆಟ್ಟು ಪ್ರಕೃತಿ ರಮಣೀಯ ಪರಿಸರದಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆಯ 15 ಮನೆಗಳನ್ನು ನಿರ್ಮಿಸಿದ್ದು, ಕೇವಲ 60ರಿಂದ 80 ಲಕ್ಷ ರೂ.ಗಳಿಗೆ ಲಭ್ಯವಿವೆ. ನಗರದ ಎಲ್ಲ ಅನುಕೂಲಗಳು ಇರುವ ಈ ವಸತಿ ಪ್ರದೇಶಕ್ಕೆ ಬಹು ಹತ್ತಿರದಲ್ಲಿಯೇ ಹೆಸರಾಂತ ಶಾಲಾ ಕಾಲೇಜುಗಳು, ಮೆಡಿಕಲ್ ಕಾಲೇಜು ಆಸ್ಪತ್ರೆ ಇರುವುದರಿಂದ ಗ್ರಾಹಕರು ಇಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. […]

‘ವಿ ಗ್ರೂಪ್’ ಅಸೋಸಿಯೇಟ್ ಮಿತದರದಲ್ಲಿ ಕನಸಿನ ಮನೆಯನ್ನು ಪಡೆಯಲು ಸುವರ್ಣವಕಾಶ Read More »

ಮಹಾಕುಂಭಮೇಳ : 300 ಕಿ.ಮೀ. ಟ್ರಾಫಿಕ್‌ ಜಾಮ್‌

ಭಕ್ತರ ದಟ್ಟಣೆ ನಿಭಾಯಿಸಲಾಗದೆ ರೈಲು ನಿಲ್ದಾಣವೇ ಬಂದ್‌ ಪ್ರಯಾಗ್‌ರಾಜ್‌ : ಮಹಾಕುಂಭಮೇಳಕ್ಕೆ ನಿರೀಕ್ಷೆಗೂ ಮೀರಿ ಜನ ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್‌ ಜಾಮ್‌ ದಿನನಿತ್ಯ ಉಂಟಾಗುತ್ತಿದೆ. ಭಾನುವಾರ ಸುಮಾರು 300 ಕಿ.ಮೀ. ಟ್ರಾಫಿಕ್‌ ಜಾಮ್‌ ಆಗಿ ಭಕ್ತರು ಇನ್ನಿಲ್ಲದ ಬವಣೆ ಅನುಭವಿಸಿದ್ದಾರೆ. ಅನೇಕರು ಇದನ್ನು ಜಗತ್ತಿನ ಅತಿದೊಡ್ಡ ಟ್ರಾಫಿಕ್‌ ಜಾಮ್‌ ಎಂದು ಬಣ್ಣಿಸಿದ್ದಾರೆ. ಸಂಗಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಿಕ್ಕಿಬಿದ್ದಿದ್ದವು. ಸರತಿ ಸಾಲಿನ ಬಾಲ ಸುಮಾರು 300 ಕಿ.ಮೀ. ದೂರವಿತ್ತು ಎಂದು ಹಲವರು ಅನುಭವ ಹಂಚಿಕೊಂಡಿದ್ದಾರೆ.

ಮಹಾಕುಂಭಮೇಳ : 300 ಕಿ.ಮೀ. ಟ್ರಾಫಿಕ್‌ ಜಾಮ್‌ Read More »

ಕುದ್ರೋಳಿ ಕಸಾಯಿಖಾನೆಗೆ ಮಹಾನಗರ ಪಾಲಿಕೆ ಮೇಯರ್‌ ಮನೋಜ್‌  ದಿಢೀರ್ ದಾಳಿ

ಮಂಗಳೂರು :  ಇಲ್ಲಿನ ಅಕ್ರಮ ಕಸಾಯಿಖಾನೆಗಳ ವಿರುದ್ದ ಮಹಾನಗರ ಪಾಲಿಕೆ ಮೇಯರ್‌ ಮನೋಜ್‌ ಕುಮಾರ್‌ ಸಮರ ಸಾರಿದ್ದು, ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಕಸಾಯಿಖಾನೆ ಪರಿಸರಕ್ಕೆ ದಿಢೀರ್ ದಾಳಿ ಮಾಡಿದ್ದಾರೆ. ಕುದ್ರೋಳಿ ಕಸಾಯಿಖಾನೆ ಈ ಹಿಂದೆ ಅಧಿಕೃತವಾಗಿದ್ದರು ಸಹ ಹಸಿರು ಪೀಠದ ಆದೇಶದ ಹಿನ್ನಲೆಯಲ್ಲಿ ಸ್ಥಗಿತಗೊಳಿಸಿ ನಾಲ್ಕು ವರ್ಷ ಕಳೆದಿದೆ. ಆದರೆ ಈ ಕಸಾಯಿಖಾನೆ ಖಾಸಗಿ ಜಾಗದಲ್ಲಿ ಅಕ್ರಮವಾಗಿ ವ್ಯವಹಾರ ನಡೆಯುತ್ತಿದೆ. ಈ ಬಗ್ಗೆ ಪ್ರತಿನಿತ್ಯ ಗೋವು, ಆಡು, ಕುರಿಗಳ ವಧಿಸುವ ಕುರಿತಾಗಿ ದೂರುಗಳಿದ್ದವು. ಈ ದೂರಿನನ್ವಯ ಮಂಗಳೂರು

ಕುದ್ರೋಳಿ ಕಸಾಯಿಖಾನೆಗೆ ಮಹಾನಗರ ಪಾಲಿಕೆ ಮೇಯರ್‌ ಮನೋಜ್‌  ದಿಢೀರ್ ದಾಳಿ Read More »

ನವೀಕೃತಗೊಂಡು ಶುಭಾರಂಭಗೊಂಡ ‘ಅವೆನ್ಯೂ ಕಂಪ್ಯೂಟರ್ಸ್‍’ ಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು: ದರ್ಬೆಯಲ್ಲಿರುವ ರಿಲಾಯನ್ಸ್ ಡಿಜಿಟಲ್‍ ಎದುರು ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ‘ಅವೆನ್ಯೂ ಕಂಪ್ಯೂಟರ್ಸ್‍’ ನವೀಕರಣಗೊಂಡು ಶುಕ್ರವಾರ ಶುಭಾರಂಭಗೊಂಡಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಅನಿಲ್ ಕುಮಾರ್ ಒತ್ತೆಮುಂಡೂರು ಮಾಜಿ ಶಾಸಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪುರುಷೋತ್ತಮ ಮುಂಗ್ಲಿಮನೆ ಉಪಸ್ಥಿತರಿದ್ದರು.

ನವೀಕೃತಗೊಂಡು ಶುಭಾರಂಭಗೊಂಡ ‘ಅವೆನ್ಯೂ ಕಂಪ್ಯೂಟರ್ಸ್‍’ ಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ Read More »

ಸಮಾಜ ಬೆಳವಣಿಗೆಗೆ ಅದ್ಭುತ ಕೆಲಸ ಮಾಡಿದವರು ಜನಮಾನಸದಲ್ಲಿ ಎಂದೆಂದೂ ಜೀವಂತ : ಡಿ.ವಿ.ಸದಾನಂದ ಗೌಡ | ಸ್ವರ್ಣ ಉದ್ಯಮಿ, ಸಮಾಜ ಸೇವಕರೂ ಆಗಿದ್ದಂತಹ ಜಿ.ಎಲ್. ಆಚಾರ್ಯ ಅವರ ಶತಮಾನದ ಸ್ಮರಣೆ ಕಾರ್ಯಕ್ರಮ

ಕಾಸರಗೋಡು : ಸಮಾಜದಲ್ಲಿ ಹಲವು ಮಂದಿಗೆ ಆಸರೆ ನೀಡಿ ಸಮಾಜದ ಬೆಳವಣಿಗೆಗೆ ಅದ್ಭುತ ಕೆಲಸ ಮಾಡಿದವರು ಜನ ಮಾನಸದಲ್ಲಿ ಎಂದೆಂದೂ ಜೀವಂತವಾಗಿರುತ್ತಾರೆ. ಇದಕ್ಕೆ ಉದಾಹರಣೆ ಜಿ.ಎಲ್. ಆಚಾರ್ಯ ರಂತಹ ಮಹಾನ್ ವ್ಯಕ್ತಿ ಎಂದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು. ಸ್ವರ್ಣ ಉದ್ಯಮಿ, ಸಮಾಜ ಸೇವಕರೂ ಆಗಿದ್ದಂತಹ ಜಿ.ಎಲ್. ಆಚಾರ್ಯ ಅವರ ಶತಮಾನದ ಸ್ಮರಣೆ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಸಾಮಾಜಿಕ

ಸಮಾಜ ಬೆಳವಣಿಗೆಗೆ ಅದ್ಭುತ ಕೆಲಸ ಮಾಡಿದವರು ಜನಮಾನಸದಲ್ಲಿ ಎಂದೆಂದೂ ಜೀವಂತ : ಡಿ.ವಿ.ಸದಾನಂದ ಗೌಡ | ಸ್ವರ್ಣ ಉದ್ಯಮಿ, ಸಮಾಜ ಸೇವಕರೂ ಆಗಿದ್ದಂತಹ ಜಿ.ಎಲ್. ಆಚಾರ್ಯ ಅವರ ಶತಮಾನದ ಸ್ಮರಣೆ ಕಾರ್ಯಕ್ರಮ Read More »

ಹೀರೋಯಿನ್‌ ಮಾಡುತ್ತೇವೆ ಎಂದು ನಂಬಿಸಿ ಮಾಜಿ ಮುಖ್ಯಮಂತ್ರಿ ಮಗಳಿಗೆ 4 ಕೋ.ರೂ ವಂಚನೆ

ಬಾಲಿವುಡ್‌ ಸಿನಿಮಾಗಳಲ್ಲಿ ಅವಕಾಶ ನೀಡುವ ಆಮಿಷವೊಡ್ಡಿ ಮೋಸ ಮುಂಬಯಿ : ಬಾಲಿವುಡ್‌ ಸಿನಿಮಾಗಳಲ್ಲಿ ಹೋರೊಯಿನ್‌ ಮಾಡುತ್ತೇವೆ ಎಂದು ನಂಬಿಸಿ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರ ಪುತ್ರಿ ಆರುಷಿ ನಿಶಾಂಕ್‌ಗೆ ವಂಚಕರು 4 ಕೋಟಿ ರೂ. ಪಂಗನಾಮ ಪ್ರಕರಣ ಬೆಳಕಿಗೆ ಬಂದಿದೆ. ಮುಂಬಯಿಯ ಜುಹು ಪ್ರದೇಶದ ಇಬ್ಬರು ವ್ಯಕ್ತಿಗಳು ಚಲನಚಿತ್ರ ನಿರ್ಮಾಪಕರೆಂದು ಹೇಳಿಕೊಂಡು ಆರುಷಿಯಿಂದ 4 ಕೋಟಿ ರೂ. ಸುಲಿಗೆ ಮಾಡಿದ್ದಾರೆ. ಆರುಷಿಗೆ ಬಾಲ್ಯದಿಂದಲೇ ನಟನೆಯತ್ತ ಆಕರ್ಷಣೆಯಿತ್ತು. ಈಗಾಗಲೇ

ಹೀರೋಯಿನ್‌ ಮಾಡುತ್ತೇವೆ ಎಂದು ನಂಬಿಸಿ ಮಾಜಿ ಮುಖ್ಯಮಂತ್ರಿ ಮಗಳಿಗೆ 4 ಕೋ.ರೂ ವಂಚನೆ Read More »

ಇಂದಿನಿಂದ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ರೋಮಾಂಚಕ ಕಸರತ್ತು

ದೇಶ ವಿದೇಶಗಳನ್ನು ಆಕರ್ಷಿಸುವ ಏರ್‌ ಶೋ ಪ್ರಾರಂಭಕ್ಕೆ ಕ್ಷಣಗಣನೆ ಬೆಂಗಳೂರು: ರೋಮಾಂಚಕಾರಿ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ-2025ʼ ಇಂದಿನಿಂದ ಶುರುವಾಗಲಿದ್ದು, ಇದಕ್ಕಾಗಿ ಬೆಂಗಳೂರು ಸರ್ವಸಜ್ಜಾಗಿದೆ. ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ದೇಶ–ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇಂದಿನಿಂದ ಫೆಬ್ರವರಿ 14ರವರೆಗೆ ನಡೆಯಲಿರುವ ಏರ್ ಶೋನಲ್ಲಿ ಅಮೆರಿಕ, ರಷ್ಯಾ ಸೇರಿದಂತೆ ವಿವಿಧ ದೇಶಗಳ

ಇಂದಿನಿಂದ ಬೆಂಗಳೂರಿನಲ್ಲಿ ಲೋಹದ ಹಕ್ಕಿಗಳ ರೋಮಾಂಚಕ ಕಸರತ್ತು Read More »

ಫೆ.17ರಿಂದ ಹೊಸ ರೂಪದಲ್ಲಿ ಮತ್ಸ್ಯಗಂಧ ರೈಲು : ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ ಅಳವಡಿಕೆ

ಶಬ್ದ ಕಡಿಮೆ, ಅಪಘಾತವಾದರೂ ಪ್ರಯಾಣಿಕರಿಗೆ ಹಾನಿಯಿಲ್ಲ ಮಾ.1ರಿಂದ ಮಂಗಳೂರು ಎಕ್ಸ್‌ಪ್ರೆಸ್‌ ರೈಲಿಗೂ ಅತ್ಯಾಧುನಿಕ ಕೋಚ್‌ ಅಳವಡಿಕೆ ಉಡುಪಿ : ಕರಾವಳಿ ಕರ್ನಾಟಕ ಮತ್ತು ಮುಂಬಯಿ ನಡುವಿನ ಸಂಪರ್ಕ ಕೊಂಡಿಯಾಗಿರುವ ಮತ್ಸ್ಯಗಂಧ ರೈಲಿಗೆ ಫೆ.17ರಿಂದ ಹೊಸ ರೂಪ ಪಡೆದು ಓಡಲಿದೆ. ಜನರ ಬೇಡಿಕೆಯನ್ನು ಪರಿಗಣಿಸಿ ರೈಲ್ವೆ ಇಲಾಖೆ ಮತ್ಸ್ಯಗಂಧ ರೈಲಿಗೆ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ ಕೋಚ್ ಅಳವಡಿಸಲಿದೆ. ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಪ್ರಯಾಣಿಕರು ಯಾವುದೇ ಹಾನಿ ಸಂಭವಿಸದೆ ಸುರಕ್ಷಿತರಾಗಿರುತ್ತಾರೆ. ಎಷ್ಟೇ ತೀವ್ರ

ಫೆ.17ರಿಂದ ಹೊಸ ರೂಪದಲ್ಲಿ ಮತ್ಸ್ಯಗಂಧ ರೈಲು : ಅತ್ಯಾಧುನಿಕ ಎಲ್‌ಎಚ್‌ಬಿ ಕೋಚ್‌ ಅಳವಡಿಕೆ Read More »

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ : ಎಸ್‌ಐಟಿಯಿಂದ ನಾಲ್ವರ ಬಂಧನ

ಪ್ರಸಿದ್ಧ ಡೈರಿಗಳ ಮಾಲೀಕರನ್ನು ಬಂಧಿಸಿ ವಿಚಾರಣೆ ತಿರುಪತಿ: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ನಡೆದಿದೆ ಎನ್ನಲಾದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ತನಿಖೆ ನಡೆಸಿದ್ದ ಹೈದರಾಬಾದ್ ವಿಭಾಗದ ಜಂಟಿ ನಿರ್ದೇಶಕ ವೀರೇಶ್ ಪ್ರಭು, ವಿಶಾಖಪಟ್ಟಣಂ ಸಿಬಿಐ ಎಸ್ಪಿ ಮುರಳೀರಾಂಬ, ವಿಶಾಖಪಟ್ಟಣಂ ಡಿಐಜಿ ಗೋಪಿನಾಥ್ ಜೆಟ್ಟಿ, ಗುಂಟೂರು ಐಜಿ ಸರ್ವಶ್ರೇಷ್ಠಿ ತ್ರಿಪಾಠಿ ಮತ್ತು ಎಫ್‌ಎಸ್‌ಎಸ್‌ಎಐ ಅಧಿಕಾರಿ ಸತ್ಯಕುಮಾರ್ ಪಾಂಡಾ ನೇತೃತ್ವದ ತಂಡ ನಾಲ್ವರು

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಮಿಶ್ರಣ : ಎಸ್‌ಐಟಿಯಿಂದ ನಾಲ್ವರ ಬಂಧನ Read More »

ಮಹಾಭಾರತ ಸರಣಿಯ 64ನೇ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ  ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಕನಕಾಂಗಿ ಕಲ್ಯಾಣ ತಾಳಮದ್ದಳೆ ಜರಗಿತು. ಭಾಗವತರಾಗಿ ಪ್ರಕಾಶ ಅಭ್ಯಂಕರ ಬೆಳ್ತಂಗಡಿ, ಕಿಶೋರ್ ಶೆಟ್ಟಿ ಮೂಡಾಯಿರು ಹಿಮ್ಮೇಳದಲ್ಲಿ ಮುರಳೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅರ್ಜುನ ಅಭ್ಯಂಕರ್ ಬೆಳ್ತಂಗಡಿ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ(ಬಲರಾಮ ), ಶ್ರೀಧರ ಎಸ್ ಪಿ ಸುರತ್ಕಲ್( ಕೌರವ ), ಹರೀಶ ಆಚಾರ್ಯ ಬಾರ್ಯ(ಶ್ರೀಕೃಷ್ಣ),

ಮಹಾಭಾರತ ಸರಣಿಯ 64ನೇ ತಾಳಮದ್ದಳೆ Read More »

error: Content is protected !!
Scroll to Top