ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ತೀರ್ಮಾನ

ನವದೆಹಲಿ : ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ವಕ್ಫ್‌ ತಿದ್ದುಪಡಿ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ನಿರ್ಧರಿಸಿದೆ. ವಕ್ಫ್‌ ಮಸೂದೆ ಬಗ್ಗೆ ದೇಶಾದ್ಯಂತ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಕಾಂಗ್ರೆಸ್‌ ನ್ಯಾಯಾಂಗ ಹೋರಾಟದ ನಿರ್ಧಾರಕ್ಕೆ ಬಂದಿದೆ. ಕೇಂದ್ರದ ಈ ನಿರ್ಧಾರದ ಶೀಘ್ರದಲ್ಲಿ ಸುಪ್ರೀಂ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ. ವಕ್ಫ್ ತಿದ್ದುಪಡಿ ಮಸೂದೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಪಾಸ್‌ ಆಗಿದೆ.ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾಯಿದೆಯಾಗಿ ಜಾರಿಗೆ ಬರಲಿದೆ. ವಕ್ಫ್ ಮಸೂದೆ ಬಗ್ಗೆ […]

ವಕ್ಫ್‌ ಮಸೂದೆ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಕಾಂಗ್ರೆಸ್‌ ತೀರ್ಮಾನ Read More »

ವಂಚನೆ : ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 70 ಲ.ರೂ. ವಂಚನೆ

ಮಂಗಳೂರು: ಕ್ರಿಪ್ಟೊ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುವ ನಂಬಿಕೆ ಹುಟ್ಟಿಸಿ ಸುಮಾರು 70 ಲ.ರೂ. ವಂಚಿಸಿದ ಕುರಿತು ಮಂಗಳೂರಿನ ವ್ಯಕ್ತಿಯೊಬ್ಬರು ಸೆನ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಿತನಾದ ರೈಸೆನ್‌ ಎಂಬ ವ್ಯಕ್ತಿ ದೂರುದಾರರ ವಿಶ್ವಾಸ ಸಂಪಾದಿಸಿ ಕ್ರಿಪ್ಟೊ ಕರೆನ್ಸಿ ಹೂಡಿಕೆಯ ಆಶೆ ಹುಟ್ಟಿಸಿದ್ದಾನೆ. ತಾನು ಕ್ರಿಪ್ಟೊ ಕರೆನ್ಸಿ ಟ್ರೇಡಿಂಗ್‌ ಮಾಡುತ್ತಿದ್ದು, ಅದರಲ್ಲಿ ಶೇ.30ರಷ್ಟು ಲಾಭಾಂಶವಿದೆ ಎಂದು ಹೇಳಿದ್ದ. ಅವನ ಮಾತು ನಂಬಿ ದೂರುದಾರರು ಫೆ.2ರಿಂದ 23ರ ವರೆಗೆ ಪ್ರತಿದಿನ ಹೂಡಿಕೆ ಮಾಡುತ್ತಿದ್ದರು. ಒಟ್ಟಾರೆಯಾಗಿ

ವಂಚನೆ : ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 70 ಲ.ರೂ. ವಂಚನೆ Read More »

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ

2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಇಂತಿದೆ ಬೆಂಗಳೂರು: ಈ ಬೇಸಿಗೆ ರಜೆ ಕಳೆದ ಬಳಿಕ ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಪ್ರಾರಂಭಗೊಳ್ಳಲಿವೆ. ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025- 26ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಮೇ 29ರಿಂದ ಶಾಲೆಗಳನ್ನು ಆರಂಭಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಇದು ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು,

ಮೇ 29ರಿಂದ ಮುಂದಿನ ಶೈಕ್ಷಣಿಕ ವರ್ಷದ ಶಾಲಾರಂಭ Read More »

ಸೌಜನ್ಯಾ ಪ್ರಕರಣ : ನಾಳಿನ ಸಭೆಗೆ ಹೈಕೋರ್ಟ್‌ ತಡೆ

ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಏ.6ರಂದು ನಡೆಯಬೇಕಿದ್ದ ಸಭೆಗೆ ಹೈಕೋರ್ಟ್‌ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ನಾಳೆ ಧರ್ಮಸ್ಥಳದಿಂದ ಉಜಿರೆವರೆಗೆ ಮೆರವಣಿಗೆ ನಡೆಸಿ ಉಜಿರೆಯಲ್ಲಿ ಹಕ್ಕೊತ್ತಾಯ ಸಭೆ ನಡೆಸಲು ನಿರ್ಧರಿಸಲಾಗಿತ್ತು.ಆರಂಭದಲ್ಲಿ ಈ ಪ್ರತಿಭಟನೆಗೆ ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಈ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಪ್‌ ಸೇರಿದಂತೆ ವಿವಿಧ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಸಂದೇಶಗಳನ್ನು ಗಮನಿಸಿದ ಬಳಿಕ ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು

ಸೌಜನ್ಯಾ ಪ್ರಕರಣ : ನಾಳಿನ ಸಭೆಗೆ ಹೈಕೋರ್ಟ್‌ ತಡೆ Read More »

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ನಾಳೆ ಸಂಜೆ 4:30ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಏ.05(ನಾಳೆ) ರಂದು ಸಂಜೆ 4:30 ರ ಸಮಯಕ್ಕೆ  ಶೋ ನೀಡಲು ನಿರ್ಧರಿಸಲಾಗಿದೆ.

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ನಾಳೆ ಸಂಜೆ 4:30ಕ್ಕೆ ಚಿತ್ರ ಪ್ರದರ್ಶನ Read More »

ಏ.1 ರಿಂದ 6 : ಚಾರ್ವಾಕ-ಕಂಡಿಗದ ದೊಡ್ಡಮನೆ ಕಂಡಿಗ ತರವಾಡು ಮನೆ ಟ್ರಸ್ಟ್ ನ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ

ಕಡಬ : ತಾಲೂಕಿನ ಚಾರ್ವಾಕ-ಕಂಡಿಗದ ದೊಡ್ಡಮನೆ ಕಂಡಿಗ ತರವಾಡು ಮನೆ ಟ್ರಸ್ಟ್ ನ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ ಏ.1 ಮಂಗಳವಾರದಿಂದ ಆರಂಭಗೊಂಡಿದ್ದು, ಏ.6 ಭಾನುವಾರದ ತನಕ ನಡೆಯಲಿದೆ. ಏ.1 ರಂದು ಸಂಜೆ 6 ರಿಂದ ನಾಗನಕಟ್ಟೆಯಲ್ಲಿ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಾದಿವಾಸ, ದಿಕ್ಪಾಲಬಲಿ ನಡೆದು ಅನ್ನಸಂತರ್ಪಣೆ ಜರಗಿತು. ಏ.2 ಬುಧವಾರ ಬೆಳಿಗ್ಗೆ 7 ರಿಂದ ಶ್ರೀ ಮಹಾಗಣಪತಿ

ಏ.1 ರಿಂದ 6 : ಚಾರ್ವಾಕ-ಕಂಡಿಗದ ದೊಡ್ಡಮನೆ ಕಂಡಿಗ ತರವಾಡು ಮನೆ ಟ್ರಸ್ಟ್ ನ ಧರ್ಮದೈವ ಶ್ರೀ ರುದ್ರಚಾಮುಂಡಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವ Read More »

ಚಿನ್ನದ ಬೆಲೆ ದಿಢೀರ್‌ ಇಳಿಕೆ : ಒಂದೇ ದಿನದಲ್ಲಿ 1,600 ರೂ. ಕಡಿಮೆ

ನವದೆಹಲಿ: ಕೆಲ ದಿನಗಳಿಂದ ಭಾರಿ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ದರ ಇಂದು ದಿಢೀರ್‌ ಇಳಿಕೆಯಾಗಿದೆ. ಇಂದು 24 ಕ್ಯಾರೆಟ್ ಚಿನ್ನದ ಬೆಲೆ 1,740 ರೂ. ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1,600 ರೂ. ಕಡಿಮೆಯಾಗಿದೆ. ಶುಕ್ರವಾರ ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 91,640 ರೂ. ಆಗಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ 84,000 ರೂ.ಗೆ ಇಳಿಕೆಯಾಗಿದೆ. ಗುರುವಾರ 10 ಗ್ರಾಂ 24 ಕ್ಯಾರೆಟ್ ಬೆಲೆ 93,380 ರೂ. ಆಗಿದ್ದರೆ,

ಚಿನ್ನದ ಬೆಲೆ ದಿಢೀರ್‌ ಇಳಿಕೆ : ಒಂದೇ ದಿನದಲ್ಲಿ 1,600 ರೂ. ಕಡಿಮೆ Read More »

ಕಾಂಗ್ರೆಸ್‌ ಮುಖಂಡನ ಕಿರುಕುಳದಿಂದ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ

ರಾಜಕೀಯ ಪ್ರೇರಿತ ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಆರೋಪ ಬೆಂಗಳೂರು : ಕಾಂಗ್ರೆಸ್‌ ಶಾಸಕರ ಆಪ್ತನ ಕಿರುಕುಳದಿಂದ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಬೆಂಗಳೂರಿನ ನಾಗವಾರದ ಕಚೇರಿಯಲ್ಲೇ ವಿನಯ್ ಸೋಮಯ್ಯ(35) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್​ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ವಿನಯ್​ ವಾಟ್ಸ್​ಆ್ಯಪ್​ ಗ್ರೂಪ್​​ ಒಂದರ ಅಡ್ಮಿನ್ ಆಗಿದ್ದರು. ಆ ಗ್ರೂಪ್​ನಲ್ಲಿ ಇತ್ತೀಚೆಗೆ ಕಾಂಗ್ರೆಸ್​ ಶಾಸಕರೊಬ್ಬರ

ಕಾಂಗ್ರೆಸ್‌ ಮುಖಂಡನ ಕಿರುಕುಳದಿಂದ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ Read More »

ವಕ್ಫ್‌ ಮಸೂದೆ ಪಾಸ್‌ ಆದ ಬಳಿಕ ಅನ್ವರ್‌ ಮಾಣಿಪ್ಪಾಡಿಗೆ ಜೀವ ಬೆದರಿಕೆ

ವಿದೇಶಗಳಿಂದ ಕರೆ ಮಾಡಿ ಬೆದರಿಕೆಯೊಡ್ಡುತ್ತಿರುವ ಕುರಿತು ಪೊಲೀಸ್‌ ಕಮಿಷನರ್‌ಗೆ ದೂರು ಮಂಗಳೂರು: ಸಂಸತ್ತಿನಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ ಪಾಸ್‌ ಆದ ಬೆನ್ನಲ್ಲೇ ಕರ್ನಾಟಕದ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪಾಡಿ ಅವರಿಗೆ ವಿದೇಶದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಈ ವಿಚಾರವಾಗಿ ಅನ್ವರ್ ಮಾಣಿಪ್ಪಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿದ್ದಾರೆ. ಇಂಟರ್‌ನೆಟ್ ಆಧಾರಿತ ಕರೆ ಮೂಲಕ ಬೆದರಿಕೆ ಕರೆ ಬಂದಿದೆ ಎಂದು ಅನ್ವರ್‌ ಮಾಣಿಪ್ಪಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅನ್ವರ್ ಮಾಣಿಪ್ಪಾಡಿ ಮಂಗಳೂರಿನಲ್ಲಿ ವಾಸವಾಗಿದ್ದಾರೆ.

ವಕ್ಫ್‌ ಮಸೂದೆ ಪಾಸ್‌ ಆದ ಬಳಿಕ ಅನ್ವರ್‌ ಮಾಣಿಪ್ಪಾಡಿಗೆ ಜೀವ ಬೆದರಿಕೆ Read More »

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನಕ್ಕೆ ಹಿಂದು ಸಂಘಟನೆಯಿಂದ ತಡೆ

ಬೆಳ್ತಂಗಡಿ: ಮಂಗಳೂರಿಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಕಳಿಯ ನ್ಯಾಯತರ್ಪು ಸಮೀಪದ ಜಾರಿಗೆಬೈಲು ಎಂಬಲ್ಲಿ ತಡೆಹಿಡಿದ ಘಟನೆ ನಡೆದಿದೆ. ತರಕಾರಿ ಸಾಗಾಟದ ವಾಹನದಲ್ಲಿ ಸುಮಾರು 10 ರಿಂದ 15 ಗೋವುಗಳನ್ನು ವಧೆಗೆಂದು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನವನ್ನು ಹಿಂಬಾಲಿಸಿ ತಡೆಹಿಡಿದಿದ್ದಾರೆ. ಘಟನೆಯಲ್ಲಿ ಚಾಲಕರು ವಾಹನ ಬಿಟ್ಟು ಪರಾರಿಯಾಗಿದ್ದ. ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸರು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ವಾಹನ ಮತ್ತು 15 ಕ್ಕೂ ಹೆಚ್ಚು ಜಾನುವಾರುಗಳನ್ನು

ಅಕ್ರಮ ಗೋಸಾಗಾಟ ಮಾಡುತ್ತಿದ್ದ ವಾಹನಕ್ಕೆ ಹಿಂದು ಸಂಘಟನೆಯಿಂದ ತಡೆ Read More »

error: Content is protected !!
Scroll to Top