ಏ. 22-23 : ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಕಾಣಿಯೂರು ವತಿಯಿಂದ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ

ಕಾಣಿಯೂರು : ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಡುಪಿ ಕಾಣಿಯೂರು ಮಠ ಇವರ ಆಶೀರ್ವಾದದೊಂದಿಗೆ ಏ.22 ಮಂಗಳವಾರದಿಂದ ಏ.23 ಬುಧವಾರದವರೆಗೆ ಬೆಳಗ್ಗೆ ವೃಷಭ ಲಗ್ನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನಡೆಯಲಿದೆ. ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ರವರ ಮಾರ್ಗದರ್ಶನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನೆರವೇರಲಿದೆ. ಈ ಸಮಾರಂಭಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏ. 22-23 : ಶ್ರೀ ಅಶ್ವತ್ಥ ಉಪನಯನ ವಿವಾಹ ಸಮಿತಿ ಕಾಣಿಯೂರು ವತಿಯಿಂದ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ Read More »

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ

ಕಾಂಗ್ರೆಸ್‌ ಪಾಲಿಗೆ ವರವಾದ ನಿರ್ಧಾರ ಮಂಗಳೂರು : ಬೆಲೆ ಏರಿಕೆಯನ್ನು ಪ್ರಧಾನ ವಿಷಯವಾಗಿಟ್ಟುಕೊಂಡು ಜನಾಕ್ರೋಶ ಯಾತ್ರೆ ಪ್ರಾರಂಭಿಸಿರುವ ರಾಜ್ಯ ಬಿಜೆಪಿಗೆ ಕೇಂದ್ರ ಸರಕಾರ ನಿನ್ನೆ ಕೈಗೊಂಡ ನಿರ್ಧಾರವೊಂದು ಇಕ್ಕಟ್ಟಿನ ಪರಿಸ್ಥಿತಿ ತಂದೊಡ್ಡಿದೆ. ನಿನ್ನೆ ದಿಢೀರ್‌ ಎಂದು ಕೇಂದ್ರ ಸರಕಾರ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು 50 ರೂ. ಹೆಚ್ಚಿಸಿದೆ. ಇದರ ಜೊತೆಗೆ ಪೆಟ್ರೋಲು ಮತ್ತು ಡೀಸೆಲ್‌ ಮೇಲಿನ ಸುಂಕವನ್ನು ತಲಾ 2 ರೂ.ಯಂತೆ ಹೆಚ್ಚಿಸಿದೆ. ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರದ ವತಿಯಿಂದ ಆಗಿರುವ

ಬಿಜೆಪಿಯನ್ನು ಉಭಯ ಸಂಕಟಕ್ಕೆ ಸಿಲುಕಿಸಿದ ಕೇಂದ್ರದ ನಿರ್ಧಾರ Read More »

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ

ಅನೇಕ ಕಂಪನಿಗಳ ಬಾಟಲಿ ನೀರಿನಲ್ಲಿ ಮಿನರಲ್‌ ಅಂಶ ಇರುವುದಿಲ್ಲ ಬೆಂಗಳೂರು: ಐಸ್‌ಕ್ರೀಮ್‌, ಕೇಕ್‌, ಗೋಬಿಮಂಚೂರಿ… ಹೀಗೆ ನಿತ್ಯ ಸೇವಿಸುವ ಹಲವು ಆಹಾರವಸ್ತುಗಳಲ್ಲಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಕಾರಣವಾಗುವ ರಾಸಾಯನಿಕ ಅಂಶ ಇರುವುದನ್ನು ಪತ್ತೆ ಹಚ್ಚಿ ಜನರಿಗೆ ಎಚ್ಚರಿಕೆ ನೀಡಿರುವ ಆಹಾರ ಇಲಾಖೆ ಈಗ ಬಾಟಲಿಗಳಲ್ಲಿ ಸಿಗುವ ಮಿನರಲ್‌ ವಾಟರ್‌ ಕೂಡ ಸೇವನೆಗೆ ಅಸುರಕ್ಷಿತ ಎಂದು ಹೇಳಿದೆ. ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರಿನ ಪೈಕಿ ಶೇ.50ರಷ್ಟು ಬಾಟಲಿಗಳು ಕಳಪೆಯಾಗಿವೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ.

ಬಾಟಲಿ ನೀರು ಕೂಡ ಅಸುರಕ್ಷಿತ : ಆಹಾರ ಇಲಾಖೆ ವರದಿ Read More »

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್

ಪುತ್ತೂರು : ಸಮಾಜ ಕಲ್ಯಾಣ ಸಂಸ್ಥೆ ಬೆಂಗಳೂರು, ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು  ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಏ.6 ರಂದು ಬೆಂಗಳೂರಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ  ಪುತ್ತೂರು ಬಲ್ನಾಡು ನಿವಾಸಿ ಶ್ರುತಿ ವಿಸ್ಮಿತ್ ರವರಿಗೆ ರಾಷ್ಟ್ರೀಯ ವೀರ ವನಿತೆ ಯಕ್ಷಗಾನ ಕಲಾ ರತ್ನ ರಾಷ್ಟ್ರ ಪ್ರಶಸ್ತಿ  ನೀಡಿ ಗೌರವಿಸಲಾಯಿತು. ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವಾಗ ಕಲಾವಿದ ಪಾತಾಳ ಅಂಬಾ ಪ್ರಸಾದ್ ಅವರಿಂದ

ಯಕ್ಷಗಾನ ನೃತ್ಯ ಕಲಾ ರತ್ನ ಪ್ರಶಸ್ತಿಯನ್ನು ಪಡೆದ ಶ್ರುತಿ ವಿಸ್ಮಿತ್ Read More »

ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಮಹಾಲಿಂಗೇಶ್ವರ ಸಭಾಭವನದಲ್ಲಿ ಅಂಗಡಿ ಮಳಿಗೆಗಳಿಗೆ ಅವಕಾಶ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವ ಪ್ರಪ್ರಥಮ ಬಾರಿಗೆ ಪುತ್ತೂರು ಜಾತ್ರೋತ್ಸವದ ಅಂಗವಾಗಿ ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಅಂಗಡಿ ಮಳಿಗೆಗಳಿಗೆ ಅವಕಾಶವನ್ನು ನೀಡಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ಸಭಾಭವನದ ಮೊದಲ ಮಹಡಿಯಲ್ಲಿ ಎಪ್ರಿಲ್ 10 ರಿಂದ 20ರವರೆಗೆ ಸ್ಪಾಲ್ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಒಟ್ಟು 25 ಮಳಿಗೆಗಳಿಗೆ ಅವಕಾಶವಿದ್ದು, ಸದ್ಯ ಕೆಲವೇ ಕೆಲವು ಸ್ಪಾಲ್ಗಳು ಲಭ್ಯವಿದೆ. ಅಸಕ್ತರು ಈ ಕೆಳಗಿನ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ರೋ. ಕುಸುಮ್ ರಾಜ್ 9945170216 ರೋ. ಸುಹಾಸ್‍ 9480535708, ರೋ. ಸಾಯಿರಾಂ

ಜಾತ್ರೆಯೊಳಗೊಂದು ಜಾತ್ರೆ ಯೋಜನೆಯಡಿ ಮಹಾಲಿಂಗೇಶ್ವರ ಸಭಾಭವನದಲ್ಲಿ ಅಂಗಡಿ ಮಳಿಗೆಗಳಿಗೆ ಅವಕಾಶ Read More »

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ

ಕಳಿಯ ಗ್ರಾಮದ ಗೇರುಕಟ್ಟೆ ಕುಂಟಿನಿಯ ವೈದಿಕ ಮನೆತನದ ಸುಬ್ರಾಯ ಭಟ್ಟರ ಪುತ್ರ ಹರಿಪ್ರಸಾದ್ (68 ವರ್ಷ) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ. ಕಳಿಯ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ನಿವೃತ್ತರಾಗಿದ್ದ ಇವರು ಬಳಿಕ ಉಡುಪಿ ಪುತ್ತಿಗೆ ಮಠದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದು ಕೋಟಿಗೀತಾ ಲೇಖನ ಯಜ್ಞದ ಪ್ರಚಾರಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಉತ್ತಮ ವಾಲಿಬಾಲ್ ಆಟಗಾರರಾಗಿದ್ದ ಇವರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು .ಯಕ್ಷಗಾನ ಕಲಾವಿದನಲ್ಲದಿದ್ದರೂ ತನ್ನ ಗೇರುಕಟ್ಟೆ ಮನೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ

ಕಲಾಪ್ರೇಮಿ ಕೆ.ಹರಿಪ್ರಸಾದ್ ಭಟ್ ನಿಧನ Read More »

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು | ಓರ್ವ ಮಹಿಳೆಗೆ ಗಾಯ

ಬೆಳ್ತಂಗಡಿ : ಮೂಡಿಗೆರೆ ಕಡೆಯಿಂದ ಬೆಳ್ತಂಗಡಿಯ ಕಡೆಗೆ ಬರುತ್ತಿದ್ದ ಅಮ್ಮಿ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಾಲೇಜೊಂದರ ದಾಖಲಾತಿಗೆ ಬರುತ್ತಿದ್ದ ಸಕಲೇಶಪುರ ಕಡೆಯ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.  ಈ ಅಪಘಾತದಲ್ಲಿ ಓರ್ವ ಮಹಿಳೆ ಗಾಯಗೊಂಡಿದ್ದಾರೆ  ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು | ಓರ್ವ ಮಹಿಳೆಗೆ ಗಾಯ Read More »

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು

ಪುತ್ತೂರು:  ಫ್ಲಿಪ್‍ ಕಾರ್ಟ್‍ ಡೆಲಿವರಿ ಸಿಬ್ಬಂದಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ಸೇಡಿಯಾಪು ಕಜೆ ನಿವಾಸಿ ದುರ್ಗಾ ಪ್ರಸಾದ್ (30) ಮೃತಪಟ್ಟವರು. ಮೃತರು ತಂದೆ ತಾಯಿ ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಹೃದಯಾಘಾತದಿಂದ ಡೆಲಿವರಿ ಸಿಬ್ಬಂದಿ ಮೃತ್ಯು Read More »

ಮಧ್ಯಾಹ್ನ 1.30ರ ಬಳಿಕ ವೆಬ್‌ಸೈಟಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ

ಫಲಿತಾಂಶ ಸಿಗುವ ವೆಬ್‌ಸೈಟ್‌ www.karresults.nic.in ಮತ್ತು kseab.karnataka.gov.in ಬೆಂಗಳೂರು: 2025ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ. ಇಂದು ಮಧ್ಯಾಹ್ನ 12:30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಸುದ್ಧಿಗೋಷ್ಠಿಯ ಬಳಿಕ ಮಧ್ಯಾಹ್ನ 1.30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ಅಪ್‌ಲೋಡ್‌ ಅಗಲಿದೆ.ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1ರಿಂದ ಆರಂಭಗೊಂಡು ಮಾರ್ಚ್ 20ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ವ

ಮಧ್ಯಾಹ್ನ 1.30ರ ಬಳಿಕ ವೆಬ್‌ಸೈಟಿನಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ Read More »

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ

ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಐಪಿಎಲ್‌ ಬೆಟ್ಟಿಂಗ್‌ ಪ್ರಸಾರ ಮಾಡಿದ ಆರೋಪ ಬೆಂಗಳೂರು: ಬೆಟ್ಟಿಂಗ್ ಆ್ಯಪ್ ಜಾಹೀರಾತು ಪ್ರಟಿಸಿದ ಆರೋಪದ ಮೇಲೆ ರೀಲ್ಸ್ ಸ್ಟಾರ್ ಸೋನು ಶ್ರೀನಿವಾಸ್‌ಗೌಡ ಸೇರಿದಂತೆ 100ಕ್ಕೂ ಅಧಿಕ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ನೀಡಿ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.ತಮ್ಮ ಇನ್‌ಸ್ಟಾಗ್ರಾಂ ಪೇಜ್‌ಗಳಲ್ಲಿ ಐಪಿಎಲ್ ಬೆಟ್ಟಿಂಗ್ ಸಂಬಂಧ ಜಾಹೀರಾತು ಬಿತ್ತರಿಸಿದ್ದ ರೀಲ್ಸ್ ಸ್ಟಾರ್‌ಗಳಿಗೆ ಶಾಕ್ ಎದುರಾಗಿದೆ. ತಮ್ಮ ಪೇಜ್‌ಗಳಲ್ಲಿ ಬಿತ್ತರಿಸಿದ್ದ ಜಾಹೀರಾತುಗಳು ಜನರಿಗೆ ವಂಚಿಸುವ ಜಾಹೀರಾತುಗಳು ಆಗಿದ್ದವು. ಹಾಗಾಗಿ ವಕೀಲರೊಬ್ಬರು ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ

ಬೆಟ್ಟಿಂಗ್‌ ಆ್ಯಪ್ ಜಾಹೀರಾತು : 100ಕ್ಕೂ ಅಧಿಕ ಯೂಟ್ಯೂಬರ್‌ಗಳ ವಿಚಾರಣೆ Read More »

error: Content is protected !!
Scroll to Top