ಸದ್ಯದಲ್ಲೇ ಏರಲಿದೆ ಖಾಸಗಿ ಬಸ್‌ ಟಿಕೆಟ್‌ ದರ

ಡೀಸೆಲ್‌, ಟೋಲ್‌ ದರ ಏರಿಕೆ ಹಿನ್ನೆಲೆಯಲ್ಲಿ ಟಿಕೆಟ್‌ ದರ ಹೆಚ್ಚಳಕ್ಕೆ ಬಸ್‌ ಮಾಲೀಕರ ನಿರ್ಧಾರ ಮಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಈಗ ಪ್ರಯಾಣ ದರ ಏರಿಕೆಯಾಗುವ ಸಂಕಷ್ಟ ಎದುರಾಗಲಿದೆ. ರಾಜ್ಯಾದ್ಯಂತ ಖಾಸಗಿ ಬಸ್​ಗಳ ಟಿಕೆಟ್ ದರ ಹೆಚ್ಚಳ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಹಾಲು, ಕರೆಂಟ್‌, ಮೆಟ್ರೊ ಟಿಕೆಟ್‌ ದರ, ಸರ್ಕಾರಿ ಬಸ್ ಟಿಕೆಟ್‌ […]

ಸದ್ಯದಲ್ಲೇ ಏರಲಿದೆ ಖಾಸಗಿ ಬಸ್‌ ಟಿಕೆಟ್‌ ದರ Read More »

ಬಿಜೆಪಿಯ ಜನಾಕ್ರೋಶ ಯಾತ್ರೆ ನಾಳೆ ದ.ಕ.ಜಿಲ್ಲೆ ಪ್ರವೇಶ : ಮಂಗಳೂರಿನಲ್ಲಿ ಮೆರವಣಿಗೆ

ಮಂಗಳೂರು: ರಾಜ್ಯದಲ್ಲಿ ಕಳೆದ 20 ತಿಂಗಳಿಂದ ನಡೆಯುತ್ತಿರುವ ನಿರಂತರ ಬೆಲೆ ಏರಿಕೆ, ದಲಿತರ ಹಣ ಲೂಟಿ, ಹಿಂದೂ ವಿರೋಧಿ ನೀತಿ, ಮುಸ್ಲಿಂ ಓಲೈಕೆ, ರೈತರ ನಿರ್ಲಕ್ಷ್ಯದ ವಿರುದ್ಧ ಬಿಜೆಪಿ ಪ್ರಾರಂಭಿಸಿರುವ ಜನಾಕ್ರೋಶ ಯಾತ್ರೆ ಏ.9ರಂದು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಲಿದೆ. ಕಾಂಗ್ರೆಸ್‌ ಸರಕಾರದ ವಿರುದ್ಧ ನಿನ್ನೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಾಗಿದ್ದು, ಏ.9ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ. ಜನತೆಯಲ್ಲಿ ಮಡುಗಟ್ಟಿರುವ ಆಕ್ರೋಶದ ಬಿಸಿಯನ್ನು ಭ್ರಷ್ಟ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮುಟ್ಟಿಸುವ ಸಲುವಾಗಿ ಏ.9ರಂದು ಮಧ್ಯಾಹ್ನ

ಬಿಜೆಪಿಯ ಜನಾಕ್ರೋಶ ಯಾತ್ರೆ ನಾಳೆ ದ.ಕ.ಜಿಲ್ಲೆ ಪ್ರವೇಶ : ಮಂಗಳೂರಿನಲ್ಲಿ ಮೆರವಣಿಗೆ Read More »

ದಲಿತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನಿರೀಕ್ಷಣಾ ಜಾಮೀನು

ಮಂಗಳೂರು: ದಲಿತ ಬಾಲಕಿಗೆ ಕಿರುಕುಳ ನೀಡಿದ ಆರೋಪಕ್ಕೊಳಗಾಗಿರುವ ವಿಟ್ಲ ಮಾಣಿಲದ ಮಹೇಶ್ ಭಟ್‌ಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ವಿಶೇಷ ಪೋಕ್ಸೊ ನ್ಯಾಯಾಲಯ ಸೋಮವಾರ ಶರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.ಕೃತ್ಯ ಬೆಳಕಿಗೆ ಬಂದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಆತನನ್ನು ಬಂಧಿಸುವಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವಂತೆಯೇ ಆರೋಪಿ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.ತೋಟದ ಕೆಲಸಕ್ಕೆ ಬರುತ್ತಿದ್ದ ದಲಿತ ಸಮುದಾಯದ ಕೂಲಿ ಕಾರ್ಮಿಕನ 16ರ ಹರೆಯದ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮಹೇಶ್‌ ಭಟ್‌ ವಿರುದ್ಧ

ದಲಿತ ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ ನಿರೀಕ್ಷಣಾ ಜಾಮೀನು Read More »

ನಾಳೆ (ಏ.8) : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: 2025ನೇ ಸಾಲಿನ  ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ನಾಳೆ (ಏ.8) ಮಂಗಳವಾರ ಪ್ರಕಟವಾಗಲಿದೆ. ಮಂಗಳವಾರ ಮಧ್ಯಾಹ್ನ 12.30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟ ಮಾಡಲಿದ್ದು ಬಳಿಕ ಮಧ್ಯಾಹ್ನ 1.30ರಿಂದ ವೆಬ್ ಸೈಟ್ ನಲ್ಲಿ ಫಲಿತಾಂಶ ನೋಡಬಹುದಾಗಿದೆ. 2025ರ ಮಾರ್ಚ್ 1 ರಿಂದ ಮಾರ್ಚ್ 20 ರವರೆಗೆ ನಡೆದ ಈ ಪರೀಕ್ಷೆಗೆ ರಾಜ್ಯದಿಂದ ಒಟ್ಟು 7,13,862 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ ಗಳಾದ kseab.karnataka.gov.in ಮತ್ತು karresults.nic.in

ನಾಳೆ (ಏ.8) : ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ Read More »

ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿ ಖಂಡಿಸಿ ಏ.9 ರಂದು ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ : ಸಂಜೀವ ಮಠಂದೂರು

ಪುತ್ತೂರು: ರಾಜ್ಯ ಸರಕಾರ ಒಂದೆಡೆ ಗ್ಯಾರಂಟಿ ನೆಪದಲ್ಲಿ ಅಭಿವೃದ್ಧಿ ಮರೆತು, ಇನ್ನೊಂದೆಡೆ ನೆಲ-ಜಲ ಎಲ್ಲವನ್ನೂ ಬಿಡದೆ ದರ ಏರಿಕೆ ಮೂಲಕ ಜನಸಾಮಾನ್ಯರನ್ನು ಲೂಟುತ್ತಿದ್ದು, ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿಯನ್ನು ಖಂಡಿಸಿ ಏ.9 ರಂದು ಮಧ್ಯಾಹ್ನ 1 ಗಂಟೆಗೆ ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು ಮೂರು ಸಾವಿರ ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಬಜೆಟ್

ರಾಜ್ಯ ಸರಕಾರದ ತುಘಲಕ್ ಆಡಳಿತ, ಜನವಿರೋಧಿ ನೀತಿ ಖಂಡಿಸಿ ಏ.9 ರಂದು ಮಂಗಳೂರಿನಲ್ಲಿ ಜನಾಕ್ರೋಶ ಪಾದಯಾತ್ರೆ : ಸಂಜೀವ ಮಠಂದೂರು Read More »

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 7ನೇ ವಾರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ಏ.8 ಮಂಗಳವಾರದಂದು ಸಂಜೆ 4:30ಕ್ಕೆ ಚಿತ್ರ ಪ್ರದರ್ಶನಗೊಳ್ಳಲಿದೆ.

7ನೇ ವಾರಕ್ಕೆ ಕಾಲಿರಿಸಿದ “ಭಾವ ತೀರ ಯಾನ’ ಸಿನಿಮಾ | ನಾಳೆ ಸಂಜೆ 4:30 ಕ್ಕೆ ಚಿತ್ರ ಪ್ರದರ್ಶನ Read More »

ಸವಣೂರು ಗ್ರಾಮ ಬೂತ್ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ

ಸವಣೂರು : ಸುಳ್ಯ ಮಂಡಲ, ಕುಟ್ರುಪ್ಪಾಡಿ ಮಹಾಶಕ್ತಿ ಶಕ್ತಿ ಕೇಂದ್ರದ, ಸವಣೂರು ಗ್ರಾಮ ಬೂತ್ ಸಂಖ್ಯೆ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನವನ್ನು ಬೂತ್ ಅಧ್ಯಕ್ಷರಾದ ತೀರ್ಥರಾಮ ಕೆಡೆಂಜಿಯವರ ಮನೆಯಲ್ಲಿ ಆಚರಿಸಲಾಗಿದೆ. ಪಕ್ಷದ ಧ್ವಜಾರೋಹಣ ಮಾಡುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ರಾಕೇಶ್ ರೈ ಕೆಡೆಂಜಿ, ಸವಣೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಚೇತನ್ ಕುಮಾರ್ ಕೋಡಿಬೈಲು, ಗ್ರಾಮಪಂಚಾಯಿತಿ ಸದಸ್ಯರಾದ ರಾಜೀವಿ ವಿ ಶೆಟ್ಟಿ, ಇಂದಿರಾ ಬೇರಿಕೆ,

ಸವಣೂರು ಗ್ರಾಮ ಬೂತ್ 65 ರಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ Read More »

ಜೀವನ್ ತಾವ್ರೊ ಆತ್ಮಹತ್ಯೆ ಪ್ರಕರಣ | ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಅಮ್ಮಾಡಿ ತನಿಯಮನೆ ನಿವಾಸಿ ಜೀವನ್ ತಾವೊ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆ ಸಿಬ್ಬಂದಿ ಬಂಧಿಸಿದ್ದಾರೆ. ಕುರಿಯಾಳ ಮೂಲದ ಪ್ರವೀಣ್ ಡೆಸಾ ಮತ್ತು ರೋಹನ್ ಪಿಂಟೊ ಈ ಆರೋಪದಲ್ಲಿ ಬಂಧಿಸಲ್ಪಟ್ಟವರು. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜೀವನ್ ತಾವ್ರೊ ಆತ್ಮಹತ್ಯೆ ಪ್ರಕರಣ | ಇಬ್ಬರು ಆರೋಪಿಗಳ ಬಂಧನ Read More »

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದಿಂದ ಸಂಘದ ಸದಸ್ಯೆಯ ಸಾಲ ಮನ್ನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದ ಕೆಮ್ಮಿಂಜೆ ಒಕ್ಕೂಟದ  ಕೊರಗಜ್ಜ ಸ್ವಸಹಾಯ ಸಂಘದ  ಸದಸ್ಯರಾದ ಲಲಿತರವರು ಟೋಟಲ್ ಸಂಘದಿಂದ 4 ಲಕ್ಷ ಸಾಲವನ್ನು ಪಡೆದಿದ್ದು . 3ಲಕ್ಷ ,82 ಸಾವಿರ ಸಾಲದ ಮೊತ್ತ ಬಾಕಿ ಇದ್ದು. ಇವರ ಸಾಲವನ್ನು ಮನ್ನ ಮಾಡಲಾಗಿದೆ. ಇದರ ಮಂಜೂರಾತಿ ಪತ್ರವನ್ನು  ಕೆಮ್ಮಿಂಜೆ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ರಾಮಶೆಟ್ಟಿ ಹಾಗೂ ಸಮಿತಿಯ ಕಾರ್ಯದರ್ಶಿಯಾವರಾದ ಶೇಖರ್ ಆಚಾರ್ಯ. ಹಾಗೂ ಒಕ್ಕೂಟದ ಅಧ್ಯಕ್ಷರಾದ ಚೇತನ್ ಇವರು ಲಲಿತ ಇವರಿಗೆ ಮಂಜೂರಾತಿ ಪತ್ರವನ್ನು  ವಿತರಿಸಿದರು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದಿಂದ ಸಂಘದ ಸದಸ್ಯೆಯ ಸಾಲ ಮನ್ನ Read More »

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ

ಹೂಡಿಕೆದಾರ ಪಾಲಿಗೆ ಇಂದು ಬ್ಲ್ಯಾಕ್‌ ಮಂಡೆ ನವದೆಹಲಿ: ಜಾಗತಿಕ ಷೇರು ಮಾರುಕಟ್ಟೆಗಳ ಪಾಲಿಗೆ ಇಂದಿನ ದಿನ ಅಕ್ಷರಶಃ ಬ್ಲ್ಯಾಕ್‌ ಮಂಡೆಯಾಗಿ ಪರಿಣಮಸಿದೆ. ಮುಂಬಯಿ ಷೇರು ಮಾರುಕಟ್ಟೆಯೂ ಸೇರಿದಂತೆ ಎಲ್ಲ ಮಾರುಕಟ್ಟೆಗಳ ಸೂಚ್ಯಂಕ ಪಾತಾಳಕ್ಕಿಳಿದು ಷೇರು ಮಾರುಕಟ್ಟೆಯಲ್ಲಿ ಅಕ್ಷರಶಃ ರಕ್ತದೋಕುಳಿ ಆಗುತ್ತಿದೆ. ಯದ್ವಾತದ್ವಾ ಕರಡಿ ಕುಣಿತದಿಂದ ಹೂಡಿಕೆದಾರರು ಲಕ್ಷ ಕೋಟಿಗಳಲ್ಲಿ ಹಣ ಕಳೆದುಕೊಂಡು ತಲೆ ಮೇಲೆ ಕೈಹೊತ್ತು ಕೂರುವ ಸ್ಥಿತಿ ನಿರ್ಮಾಣವಾಗಿದೆ.ಭಾರತದಲ್ಲಿ 23,000 ಗಡಿದಾಟಿ ಮುನ್ನುಗ್ಗುವ ಸೂಚನೆ ನೀಡಿದ್ದ ಷೇರು ಗೂಳಿ ಈಗ ಪ್ರಪಾತಕ್ಕೆ ಬೀಳುತ್ತಿದೆ. ಸೆನ್ಸೆಕ್ಸ್​ನಲ್ಲೂ ಕೂಡ

ಷೇರು ಮಾರುಕಟ್ಟೆ ಭಾರಿ ಕುಸಿತ : 19 ಲಕ್ಷ ಕೋಟಿ ರೂಪಾಯಿ ನಷ್ಟ Read More »

error: Content is protected !!
Scroll to Top