ಪ್ರಚೋದನಕಾರಿ ಭಾಷಣ ಆರೋಪ : ಶಾಸಕ ಹರೀಶ್‌ ಪೂಂಜ ವಿರುದ್ಧ ಎಫ್‌ಐಆರ್‌

ತೆಕ್ಕಾರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪ ಉಪ್ಪಿನಂಗಡಿ: ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಕುರಿತು ಎಫ್ಐಆರ್ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದಲ್ಲಿ ಶನಿವಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ಇದರ ಧಾರ್ಮಿಕ ಸಭೆಯಲ್ಲಿ ಹರೀಶ್‌ ಪೂಂಜ ಮುಸ್ಲಿಮರನ್ನು ತೆಗಳಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಹರೀಶ್‌ ಪೂಂಜ ಮಾಡಿದ ಪ್ರಚೋದನಕಾರಿ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ […]

ಪ್ರಚೋದನಕಾರಿ ಭಾಷಣ ಆರೋಪ : ಶಾಸಕ ಹರೀಶ್‌ ಪೂಂಜ ವಿರುದ್ಧ ಎಫ್‌ಐಆರ್‌ Read More »

ಹಿರಿಯ ಸಂತೆ ತರಕಾರಿ ವ್ಯಾಪಾರಿ ಶೀನಪ್ಪ ಮೂಲ್ಯ ನಿಧನ

ಪುತ್ತೂರು: ಸಂತೆಯ ಹಿರಿಯ ತರಕಾರಿ ವ್ಯಾಪಾರಿ ಪ್ರಗತಿಪರ ಕೃಷಿಕ, ಕುಲಾಲ ಸಮಾಜ ಸೇವಾ ಸಂಘದ ಹಿರಿಯ ಕಾರ್ಯಕರ್ತ ವೀರಮಂಗಲ ನಿವಾಸಿ ಶೀನಪ್ಪ ಮೂಲ್ಯ (89) ರವರು ಮೇ.4ರಂದು ನಿಧನರಾದರು. ಶೀನಪ್ಪ ಮೂಲ್ಯ ಅವರು ಕುಲಾಲ ಸಮಾಜದ ಹಿರಿಯ ಚೇತನ. ಪುತ್ತೂರು ಕುಲಾಲ ಸಂಘದ ಹಿರಿಯ ಕಾರ್ಯಕರ್ತ, ಸಮಾಜದ ಅಭಿಮಾನಿ, ಕೊಡುಗೈ ದಾನಿ, ಜನ ಸಂಘದ ಹಿರಿಯ ನಾಯಕ, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿದ್ದರು. ನರಿಮೊಗರು ಗ್ರಾ.ಪಂ ಮಾಜಿ ಸದಸ್ಯರಾಗಿದ್ದರು. ಮೃತರು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ

ಹಿರಿಯ ಸಂತೆ ತರಕಾರಿ ವ್ಯಾಪಾರಿ ಶೀನಪ್ಪ ಮೂಲ್ಯ ನಿಧನ Read More »

ಮೇ 14 : ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ

ಕಡಬ: ತಾಲೂಕಿನ ಸವಣೂರು ಗ್ರಾಮದ ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್‍ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮೇ 14 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮೇ 12 ಸೋಮವಾರ ಬೆಳಿಗ್ಗೆ 9.30 ಕ್ಕೆ ಹಸಿರುಹೊರೆಕಾಣಿಕೆ ಸಮರ್ಪಣೆ, ಉಪಾಹಾರ, ಅಲಂಕಾರ ಸೇವೆ, ಸ್ವಚ್ಛತೆ, ಸಂಜೆ 5 ಕ್ಕೆ ತಂತ್ರಿಗಳ ಆಗಮನ, ರಾತ್ರಿ 7 ಕ್ಕೆ ಸಾರ್ವಜನಿಕ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಪರಿಗ್ರಹ, ಪುಣ್ಯಾಹ ಪ್ರಾಸಾದ ಶುದ್ಧಿ,

ಮೇ 14 : ಅರೇಲ್ತಡಿ ಉಳ್ಳಾಕ್ಲು, ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ Read More »

ಮೇ. 6 : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

ಪುತ್ತೂರು: 34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ  ಪ್ರತಿಷ್ಠಾ ವಾರ್ಷಿಕೋತ್ಸವ ಮೇ. 6 ರಂದು ನಡೆಯಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮೇ.5ರಂದು ಬೆಳಿಗ್ಗೆ 8.35ಕ್ಕೆ ನಿತ್ಯ ಮಹಾಪೂಜೆ, 11.30ಕ್ಕೆ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ಮೆರವಣಿಗೆಯಲ್ಲಿ ಸಾಗಿ ಶ್ರೀ ದೇವಳಕ್ಕೆ ಹೊರೆಕಾಣಿಕೆ ಸಮರ್ಪಣೆ,  ಮಧ್ಯಾಹ್ನ 12.15 ರಿಂದ ತುಲಾಭಾರ ಸೇವೆ, ಮಧ್ಯಾಹ್ನ 1ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ ವಿತರಣೆ ನಡೆಯಲಿದೆ. ಮೇ.6ರಂದು ಬೆಳಿಗ್ಗೆ 8.35ಕ್ಕೆ ನಿತ್ಯ ಮಹಾಪೂಜೆ, ಬೆಳಿಗ್ಗೆ

ಮೇ. 6 : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ Read More »

ಅಕ್ರಮ ಕೂಟ ಸೇರಿ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿ ನಿಷೇಧಾಜ್ಞೆ ಉಲ್ಲಂಘನೆ |  30 ಮಂದಿ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ನಿಷೇದಾಜ್ಞೆ ಜಾರಿಯಲ್ಲಿದ್ದರೂ ಮೇ 2ರಂದು ಪುತ್ತೂರು ಗಾಂಧಿಕಟ್ಟೆಯ ಬಳಿ ಸುಮಾರು 20 ರಿಂದ 30 ಜನ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ಮತ್ತು ಸಮಾನ ಉದ್ದೇಶದಿಂದ ದೊಂಬಿ ಎಬ್ಬಿಸಿ ನಿಷೇದಾಜ್ಞೆ ಉಲ್ಲಂಘನೆ ಮಾಡಿರುವ ನಿಟ್ಟಿನಲ್ಲಿ ಸುಮಾರು 30 ಮಂದಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಎಂಬುವರ ಹತ್ಯೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ

ಅಕ್ರಮ ಕೂಟ ಸೇರಿ ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿ ನಿಷೇಧಾಜ್ಞೆ ಉಲ್ಲಂಘನೆ |  30 ಮಂದಿ ವಿರುದ್ಧ ಪ್ರಕರಣ ದಾಖಲು Read More »

ಶಾಸ್ತ್ರೋಕ್ತವಾದ ಆಚರಣೆ ಇಲ್ಲದ ವಿವಾಹ ವಿವಾಹವೇ ಅಲ್ಲ : ಸುಪ್ರೀಂ ಕೋರ್ಟ್

ನವದೆಹಲಿ: ಹಿಂದೂ ವಿವಾಹವೆಂದರೆ ಅದು ಹಾಡು, ನೃತ್ಯ, ಊಟದ ಕಾರ್ಯಕ್ರಮವಾಗಲೀ ಅಥವಾ ಹಣಕಾಸಿನ ವಹಿವಾಟಿನ ವ್ಯವಹಾರವಲ್ಲ. ಬದಲಾಗಿ ಅದೊಂದು ಸಂಸ್ಕೃತಿ ಎಂದು ಸುಪ್ರೀಂಕೋರ್ಟ್ ಬಣ್ಣಿಸಿದೆ. ಜೊತೆಗೆ ಸಪ್ತಪದಿ ಸೇರಿದಂತೆ ಅಗತ್ಯ ಶಾಸ್ತ್ರಗಳನ್ನು ಪೂರೈಸದೆ ನಡೆಸುವ ಮದುವೆಗೆ ಕಾನೂನಿನ ಮಾನ್ಯತೆಯೇ ಅಲ್ಲದೆ ಇಂಥ ಆಚರಣೆಗಳಿಲ್ಲದೆ ಮಾಡಿಸುವ ಮದುವೆ ನೋಂದಣಿ ಕೂಡಾ ಮದುವೆಗೆ ಮಾನ್ಯತೆ ದೊರಕಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಪೈಲಟ್ ದಂಪತಿಯ ವಿಚ್ಚೇದನ ಪ್ರಕರಣದಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾ.ಅಗಾಸ್ಟಿನ್ ಜಾರ್ಜ್ ಅವರನ್ನೊಳಗೊಂಡ ಪೀಠ ಇತ್ತೀಚೆಗೆ ಈ ಮಹತ್ವದ ತೀರ್ಪು

ಶಾಸ್ತ್ರೋಕ್ತವಾದ ಆಚರಣೆ ಇಲ್ಲದ ವಿವಾಹ ವಿವಾಹವೇ ಅಲ್ಲ : ಸುಪ್ರೀಂ ಕೋರ್ಟ್ Read More »

ಸುಹಾಸ್ ಹತ್ಯೆ ಬೆನ್ನಲ್ಲೇ ಕರಾವಳಿಯ ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍

ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೆ ಮತ್ತೊಬ್ಬ ಹಿಂದೂ ಮುಖಂಡನಿಗೆ ಬೆದರಿಕೆ ಹಾಕಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ ಆಗಿದೆ. ಹಿಂದೂ ಕಾರ್ಯಕರ್ತ ಭರತ್ ಕುಮ್ಮೇಲು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಜೀವ ಬೆದರಿಕೆಯನ್ನು ಹಾಕಲಾಗಿದೆ ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲಿ ಬಂದು ಕೊಲೆ ಮಾಡುತ್ತೇವೆ’ ಎಂದು ಜೀವ ಬೆದರಿಕೆವುಳ್ಳ ಬರಹವನ್ನು ಹಾಕಿ ಪೋಸ್ಟ್ ಮಾಡಲಾಗಿದೆ. ಹನ ಶೆಟ್ಟಿ ಫೋಟೋಗೆ ರೈಟ್ ಮಾರ್ಕ್ ಹಾಕಿ ಪೊನ್ನು

ಸುಹಾಸ್ ಹತ್ಯೆ ಬೆನ್ನಲ್ಲೇ ಕರಾವಳಿಯ ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ | ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‍ Read More »

ಹಿಂದೂ ಕಾರ್ಯಕರ್ತ ಭರತ್‌ ಕುಮ್ಡೇಲುಗೆ ಜೀವ ಬೆದರಿಕೆ

ಮೇ 5ರಂದು ನಿನ್ನ ಸ್ಥಳಕ್ಕೆ ಬಂದು ಸಾಯಿಸುತ್ತೇವೆ ಎಂದು ಟಾರ್ಗೆಟ್‌ ಫಿಕ್ಸ್‌ ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಬೆನ್ನಿಗೇ ಮಂಗಳೂರಲ್ಲಿ ಮತ್ತೊಬ್ಬ ಹಿಂದೂ ಮುಖಂಡನ ಹತ್ಯೆಗೆ ಸಂಚು ರೂಪಿಸಲಾಗಿದೆ. ಹಿಂದೂ ಕಾರ್ಯಕರ್ತ ಭರತ್‌ ಕುಮ್ಡೇಲು ಅವರಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಸಂಗತಿ ಬೆಳಕಿಗೆ ಬಂದಿದೆ. ಮೇ 5ರಂದು ರಾತ್ರಿ 9.30ಕ್ಕೆ ನಿನ್ನ ಸ್ಥಳದಲ್ಲೇ ಬಂದು ಕೊಲೆ ಮಾಡುತ್ತೇವೆ ಎಂದು ಭರತ್‌ ಕುಮ್ಡೇಲು ಫೋಟೊ ಸಹಿತ ಸೋಷಿಯಲ್‌ ಮೀಡಿಯಾದಲಿ ಪೋಸ್ಟ್‌ ಮಾಡಲಾಗಿದೆ. ಸುಹಾಸ್‌ ಶೆಟ್ಟಿ

ಹಿಂದೂ ಕಾರ್ಯಕರ್ತ ಭರತ್‌ ಕುಮ್ಡೇಲುಗೆ ಜೀವ ಬೆದರಿಕೆ Read More »

ಸುಹಾಸ್‌ ಶೆಟ್ಟಿ ಮೇಲೂ ಕೇಸ್‌ಗಳಿರುವುದರಿಂದ ಮನೆಗೆ ಹೋಗಿಲ್ಲ : ಪರಮೇಶ್ವರ್ ಸ್ಪಷ್ಟನೆ

ಮುಸ್ಲಿಂ ಮುಖಂಡರು ಅವರಾಗಿಯೇ ಬಂದು ಭೇಟಿ ಮಾಡಿದರು ಎಂದು ಸಮಜಾಯಿಷಿ ಬೆಂಗಳೂರು: ಶನಿವಾರ ಮಂಗಳೂರಿಗೆ ಬಂದಿದ್ದರೂ ಕೊಲೆಯಾದ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಮನೆಗೆ ಹೋಗಿ ತಂದೆ ತಾಯಿಗೆ ಸಾಂತ್ವನ ಹೇಳದ ಕುರಿತು ಇಂದು ಬೆಂಗಳೂರಿನಲ್ಲಿ ಸ್ಪಷ್ಟೀಕರಣ ನೀಡಿದ ಗೃಹ ಸಚಿವ ಜಿ.ಪರಮೇಶ್ವರ್‌, ಸುಹಾಸ್‌ ಶೆಟ್ಟಿ ಮೇಲೆ ಐದು ಕೇಸುಗಳಿದ್ದ ಕಾರಣ ಮನೆಗೆ ಹೋಗಿಲ್ಲ ಎಂದರು. ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಯಾರೂ ಸಾಂತ್ವನ ಹೇಳದ ವಿಚಾರವಾಗಿ ಮಾತನಾಡಿದ ಅವರು, ಇದು ಒಂದು ಕೊಲೆ ಪ್ರಕರಣ.

ಸುಹಾಸ್‌ ಶೆಟ್ಟಿ ಮೇಲೂ ಕೇಸ್‌ಗಳಿರುವುದರಿಂದ ಮನೆಗೆ ಹೋಗಿಲ್ಲ : ಪರಮೇಶ್ವರ್ ಸ್ಪಷ್ಟನೆ Read More »

ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಸೋಮವಾರ ಚಿಕ್ಕಮಗಳೂರು ಬಂದ್‌

ಚಿಕ್ಕಮಗಳೂರು : ಕಾಶ್ಮೀರದ ಪಹಲ್ಗಾಮ್​​ನಲ್ಲಿ ಹಿಂದುಗಳ ಮಾರಣಹೋಮ ಮತ್ತು ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸೋಮವಾರ ಚಿಕ್ಕಮಗಳೂರು ಬಂದ್‌ಗೆ ಕರೆನೀಡಿದೆ. ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಚಿಕ್ಕಮಗಳೂರು ನಗರ ಸೇರಿದಂತೆ 9 ತಾಲೂಕುಗಳಲ್ಲಿ ಬಂದ್​ ಮಾಡಲು ನಿರ್ಧರಿಸಲಾಗಿದೆ. ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್​ ಮಾಡುವಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಸರ್ಕಾರಿ ಬಸ್ ಸೇರಿದಂತೆ ಸಾರಿಗೆ ಸಂಚಾರಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ. ಸ್ವಯಂ ಪ್ರೇರಿತರಾಗಿ

ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಸೋಮವಾರ ಚಿಕ್ಕಮಗಳೂರು ಬಂದ್‌ Read More »

error: Content is protected !!
Scroll to Top