ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬದ ಪಾತ್ರವಿಲ್ಲ ಎಂದ ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಅರುಣ್‍ ಕುಮಾರ್ ಪುತ್ತಿಲ

ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆಯಾದ ಸಂದರ್ಭ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸ್ಪೀಕರ್ ಸ್ಥಾನದಲ್ಲಿರುವ ಶಾಸಕ ಯು.ಟಿ ಖಾದರ್ ಸುಹಾಸ್ ಕೊಲೆಯಲ್ಲಿ ಫಾಝೀಲ್ ಕುಟುಂಬದವರ ಕೈವಾಡವಿಲ್ಲ, ಅವನ ತಂದೆ ತಮ್ಮಂದಿರು ನನಗೆ ಕರೆ ಮಾಡಿ ನಮಗೆ ಅಂತಹ ಪ್ರತಿಕಾರದ ಭಾವನೆ ಇಲ್ಲ, ನಾವು ಮಾಡಲೂ ಇಲ್ಲ ಎಂದಿದ್ದರು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೆಲವೇ ಹೊತ್ತಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಂಗಳೂರು ಪೊಲೀಸ್ ಕಮಿಷನರ್ ಆರೋಪಿಗಳ ಬಗ್ಗೆ ವಿವರಿಸುತ್ತಾ […]

ಸುಹಾಸ್ ಶೆಟ್ಟಿ ಕೊಲೆಯಲ್ಲಿ ಫಾಝೀಲ್ ಕುಟುಂಬದ ಪಾತ್ರವಿಲ್ಲ ಎಂದ ಖಾದರ್ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಅರುಣ್‍ ಕುಮಾರ್ ಪುತ್ತಿಲ Read More »

ವಿಷ ಸೇವಿಸಿ ಆತ್ಮಹತ್ಯೆ

ಪುತ್ತೂರು: ಇಲ್ಲಿನ ತೆಂಕಿಲ ಕನ್ನೂರು ನಿವಾಸಿ ವೆಂಕಪ್ಪ (58) ಎಂಬವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಪ್ಪ ಅವರು ಮೇ 1ರಂದು ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಹಿಂದಿರುಗಿಲ್ಲ. ಮೇ 2ರಂದು ಅವರು ದರ್ಬೆ ಮಂಗಳ ಬಾರ್ ಬಳಿಯ ಮೈದಾನದಲ್ಲಿ ಮಲಗಿಕೊಂಡಿದ್ದ ಸ್ಥಿತಿಯಲ್ಲಿದ್ದರು. ಮಾಹಿತಿ ತಿಳಿದು ಮನೆಯವರು ಹೋಗಿ ನೋಡುವಾಗ ಮೃತಪಟ್ಟಿರುವುದು ಗೊತ್ತಾಗಿದೆ. ಮಲಗಿದ್ದ ಪಕ್ಕದಲ್ಲೇ ನೀರಿನ ಬಾಟಲಿಗೆ ನೇರಳೆ ಬಣ್ಣದ ಹುಡಿಯನ್ನು ಹಾಕಿದ್ದುದು ಬೆಳಕಿಗೆ ಬಂದಿದೆ. ಅವರು ವಿಷ ಪದಾರ್ಥ ಸೇವಿಸಿ

ವಿಷ ಸೇವಿಸಿ ಆತ್ಮಹತ್ಯೆ Read More »

ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೋರ್ಸ್‌ಗೆ ಬಿಜೆಪಿ ವಿರೋಧ

ಹಿಂದುಗಳನ್ನು ದಮನಿಸುವ ಷಡ್ಯಂತ್ರ ಎಂದು ಆರೋಪ ಮಂಗಳೂರು : ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಮಂಗಳೂರಿಗೆ ಶನಿವಾರ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೋಮು ಹಿಂಸಾಚಾರ ನಿಗ್ರಹಕ್ಕೆ ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೋರ್ಸ್ ಸ್ಥಾಪನೆಯ ಘೋಷಣೆ ಮಾಡಿರುವುದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹಿಂದುಗಳನ್ನು ದಮನಿಸಲು, ಆ ಮೂಲಕ ತನ್ನ ವೋಟ್‌ಬ್ಯಾಂಕ್‌ ಪರವಾಗಿರುವವರನ್ನು ಖುಷಿಪಡಿಸಲು ಕಾಂಗ್ರೆಸ್‌ ಸರಕಾರ ಕೈಗೊಂಡಿರುವ ಕ್ರಮ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಸಂಸದ ಕ್ಯಾ.ಬ್ರಿಜೇಶ್‌ ಚೌಟ,

ಆ್ಯಂಟಿ ಕಮ್ಯೂನಲ್ ಟಾಸ್ಕ್‌ಫೋರ್ಸ್‌ಗೆ ಬಿಜೆಪಿ ವಿರೋಧ Read More »

ಗಾಯಕ ಸೋನು ನಿಗಮ್‌ ವಿರುದ್ಧ ಕೇಸ್‌

ಕನ್ನಡಿಗರ ಅಭಿಮಾನವನ್ನು ಉಗ್ರರ ದಾಳಿಗೆ ಹೋಲಿಸಿ ವಿವಾದ ಸೃಷ್ಟಿಸಿರುವ ಗಾಯಕ ಬೆಂಗಳೂರು: ಕನ್ನಡಿಗರ ಅಭಿಮಾನವನ್ನು ಪಹಲ್ಗಾಮ್ ಉಗ್ರರ ದಾಳಿಗೆ ಹೋಲಿಸಿ ವಿವಾದ ಮೈಮೇಲೆ ಎಳೆದುಕೊಂಡಿರುವ ಜನಪ್ರಿಯ ಹಿನ್ನೆಲೆ ಗಾಯಕ ಸೋನು ನಿಗಮ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಧರ್ಮರಾಜ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹೇಳುವಂತೆ ವಿದ್ಯಾರ್ಥಿಗಳು ಕೋರಿದಾಗ ಕನ್ನಡ…ಕನ್ನಡ… ಈ ರೀತಿಯ

ಗಾಯಕ ಸೋನು ನಿಗಮ್‌ ವಿರುದ್ಧ ಕೇಸ್‌ Read More »

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಖಾದರ್‌ ಹೇಳಿಕೆ ವಿರುದ್ಧ ಬಿಜೆಪಿ ಕೆಂಡಾಮಂಡಲ

ಆರೋಪಿಗಳ ರಕ್ಷಣೆಗೆ ಸ್ಪೀಕರ್‌ ನಿಂತಿದ್ದಾರೆ ಎಂದು ಆರೋಪ; ಹಾಗೇ ಹೇಳಿಲ್ಲ ಎಂದು ಖಾದರ್‌ ಸ್ಪಷ್ಟನೆ ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆಯ ಬಳಿಕ ಸ್ಪೀಕರ್‌ ಯು.ಟಿ.ಖಾದರ್‌ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಕೊಲೆ ಪ್ರಕರಣದ ದಿಕ್ಕು ತಪ್ಪಿಸಲು ಸ್ವತಃ ಸ್ಪೀಕರ್‌ ಮುಂದಾಗಿರುವುದು ದುರದೃಷ್ಟಕರ, ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಸುಹಾಸ್‌ ಶೆಟ್ಟಿ ಹತ್ಯೆಗೂ ಮೂರು ವರ್ಷದ ಹಿಂದೆ ಸುರತ್ಕಲ್‌ನಲ್ಲಿ ಹತ್ಯೆಯಾದ ಫಾಝಿಲ್‌ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ, ಫಾಝಿಲ್‌ ಕುಟುಂಬದವರೊಂದಿಗೆ ನಾನು

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಖಾದರ್‌ ಹೇಳಿಕೆ ವಿರುದ್ಧ ಬಿಜೆಪಿ ಕೆಂಡಾಮಂಡಲ Read More »

ಇಂದು ನೀಟ್‌ ಪರೀಕ್ಷೆ : ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ ನಿಷೇಧ

ರಾಜ್ಯದಲ್ಲಿ 1.49 ಲಕ್ಷ ಅಭ್ಯರ್ಥಿಗಳು; 381 ಪರೀಕ್ಷಾ ಕೇಂದ್ರಗಳು ಬೆಂಗಳೂರು: 2025-26ನೇ ಸಾಲಿನ ವೈದ್ಯಕೀಯ ಪ್ರವೇಶಕ್ಕೆ ಇಂದು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಎನ್‌ಟಿಎ ವತಿಯಿಂದ ನೀಟ್ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದೆ. ದೇಶದಲ್ಲಿ ಏಕಕಾಲಕ್ಕೆ ನಡೆಯುವ ಈ ಪರೀಕ್ಷೆಗೆ ರಾಜ್ಯದಲ್ಲಿ 381 ಪರೀಕ್ಷಾ ಕೇಂದ್ರಗಳಿವೆ. ರಾಜ್ಯದ 1.49 ಲಕ್ಷ ವಿದ್ಯಾರ್ಥಿಗಳು ನೀಟ್​ ಪರೀಕ್ಷೆ ಬರೆಯಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ

ಇಂದು ನೀಟ್‌ ಪರೀಕ್ಷೆ : ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ ನಿಷೇಧ Read More »

ಮಡಿಕೇರಿಯಲ್ಲಿ ನೂತನ ‘ಮುಳಿಯ ಸಿಲ್ವರಿಯ’ ಉದ್ಘಾಟನೆ

ಪುತ್ತೂರು: ಮಡಿಕೇರಿಯ ಮುಳಿಯ ಗೋಲ್ಡನ್ ಅಂಡ್ ಡೈಮಂಡ್ ಇದರ ನೂತನ ಚಿನ್ನ ಮತ್ತು ಬೆಳ್ಳಿ ಆಭರಣಗಳ ವಿಸ್ಕೖತ ಮಳಿಗೆಯಾದ ಸಿಲ್ವರಿಯಾ ಶುಭಾರಂಭಗೊಂಡಿತು. ಸಂಸ್ಥೆಯ ರಾಯಭಾರಿ, ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಸಿಲ್ವರಿಯಾವನ್ನು ಉದ್ಘಾಟಿಸಿ ಮಾತನಾಡಿ, ತಾನಿಂದು ಬ್ರಹ್ಮಗಿರಿ ತಪ್ಪಲಿನ ತಲಕಾವೇರಿಗೆ ತೆರಳಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಆ ಬಳಿಕ ಕಾವೇರಿ ತೀಥ೯ವನ್ನು ಮಡಿಕೇರಿಯ ಮುಳಿಯ ಸಂಸ್ಥೆಗೆ ತಂದು ವಿದ್ಯುಕ್ತವಾಗಿ ಕಾವೇರಿ ತೀಥ೯ವನ್ನು ಮಳಿಗೆಗೆ ಪ್ರೋಕ್ಷಣೆ ಮಾಡಿದೆ. ನಿಜಕ್ಕೂ ಇದೊಂದು ಅಪೂವ೯  ಅನುಭವ ಎಂದು ಬಣ್ಣಿಸಿದರು.

ಮಡಿಕೇರಿಯಲ್ಲಿ ನೂತನ ‘ಮುಳಿಯ ಸಿಲ್ವರಿಯ’ ಉದ್ಘಾಟನೆ Read More »

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ  – 05 ಮೇ  ಸಂಜೆ 6 .00 ಗಂಟೆಗೆ

ರಾಮಾಯಣ ಮಹಾಕಾವ್ಯ ನಮಗೆಲ್ಲರಿಗೂ ಗೌರವದ ಕಲಾಕೃತಿ. ಹಿಂದೂ ಪರಮಪವಿತ್ರ ಗ್ರಂಥವಾದ ಶ್ರೀ ರಾಮಾಯಣವು ನಮಗೆಲ್ಲರಿಗೂ ಸದಾ ಆದರ್ಶ ಪ್ರಾಯವಾಗಿರುವಂತಹ ಪ್ರಭು ಶ್ರೀರಾಮನ ಜೀವನದ ಚಿತ್ರಣ. ಪ್ರತಿಯೊಂದು ಜೀವಿಯೂ ತಾನು ಹೇಗೆ ಬದುಕಬೇಕು ಎಂಬುದರ ದೃಷ್ಟಾಂತರೂಪವನ್ನು  ಶ್ರೀರಾಮಾಯಣ ಮಹಾಕಾವ್ಯದಲ್ಲಿ ಅಳವಡಿಸಲಾಗಿದೆ. ಪಂಚವಟಿಯಲ್ಲಿ ರಾಮ ಲಕ್ಷ್ಮಣ ಸೀತೆಯರು ವನವಾಸ ಮಾಡುತ್ತಿರುವಾಗ ರಾವಣನಿಂದ ಅಪಹೃತಗೊಂಡ ಸೀತೆಯನ್ನು ಅರಸಿ ರಾವಣನ ವಧೆಯ ಬಳಿಕ ಮತ್ತೆ ಎಲ್ಲರೂ ಒಂದಾಗಿ ಅಯೋಧ್ಯೆಗೆ ಹಿಂದಿರುಗಿ ಪಟ್ಟಾಭಿಷೇಕವಾಗುವ ಕಥೆಯನ್ನು ಶ್ರೀರಾಮ ಪುನರಾಗಮನ ರೂಪಕದಲ್ಲಿ ಅಳವಡಿಸಲಾಗಿದೆ. ಮುಳಿಯ ದ  ನವೀಕೃತ

ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಲ್ಲಿ ಶ್ರೀರಾಮ ಪುನರಾಗಮನ ನೃತ್ಯರೂಪಕ  – 05 ಮೇ  ಸಂಜೆ 6 .00 ಗಂಟೆಗೆ Read More »

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮದ ವತಿಯಿಂದ 49ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ನರಸಿಂಹ ಜಯಂತಿ, ವಿಶೇಷ ಪೂಜೆ ಮೇ.11 ಭಾನುವಾರದಂದು ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಮೇ. 6 ಮಂಗಳವಾರದಿಂದ ಪ್ರತಿದಿನ ಸಂಜೆ 6ಗಂಟೆಯಿಂದ 9ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷ ಭಜನಾ ಸೇವೆ, ಶ್ರೀ ರಾಮತೀರ್ಥ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್‍ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮೇ.11 ಭಾನುವಾರ ಬೆಳಗ್ಗೆ

ಕಾಣಿಯೂರು (ಮೇ. 11) : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮ| ಸತ್ಯನಾರಯಣ ಪೂಜೆ Read More »

ಹಿಂದೂ ಕಾರ್ಯಕರ್ತ ಸುಹಾಸ್‍ ಹತ್ಯೆ ಪ್ರಕರಣ | 8 ಮಂದಿ ಆರೋಪಿಗಳ ಬಂಧನ

ಮಂಗಳೂರು: ಹಿಂದೂ ಕಾರ್ಯಕರ್ತ ಹಾಗು ರೌಡಿ ಶೀಟರ್ ಆಗಿದ್ದ ಸುಹಾಸ್‍ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಮಂಗಳೂರು ನಗರ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಹಿಂದೂ ಸಂಘಟನೆಯ ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಸುಹಾಸ್ ಶೆಟ್ಟಿಯ ಕೊಲೆ ದಕ್ಷಿಣಕನ್ನಡದಲ್ಲಿ ಸಂಚಲನ ಮೂಡಿಸಿತ್ತು. ತಡರಾತ್ರಿ ನಡೆದ ಈ ಬರ್ಬರ ಕೃತ್ಯದ ತನಿಖೆ ಚುರುಕುಗೊಳಿಸಿದ್ದ ಪೊಲೀಸರು, ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ವಿವರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತ ಸುಹಾಸ್‍ ಹತ್ಯೆ ಪ್ರಕರಣ | 8 ಮಂದಿ ಆರೋಪಿಗಳ ಬಂಧನ Read More »

error: Content is protected !!
Scroll to Top