ಭಾರತದ ಮೇಲಿನ ಸುಂಕ ಇಳಿಕೆ ಮಾಡಿದ ಟ್ರಂಪ್‌

ಉಭಯ ದೇಶಗಳಿಗೆ ಲಾಭ ಎಂದ ಪ್ರಧಾನಿ ನರೇಂದ್ರ ಮೋದಿ ನವದೆಹಲಿ: ಯುರೋಪಿಯನ್‌ ಒಕ್ಕೂಟದ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತದ ಸಹಿ ಬಿದ್ದ ಬೆನ್ನಲ್ಲೇ ಅಮೆರಿಕ ಭಾರತದ ಸರಕುಗಳ ಮೇಲೆ ವಿಧಿಸಿದ್ದ ಸುಂಕವನ್ನು ಗಣನೀಯವಾಗಿ ಕಡಿತ ಮಾಡಿದೆ. ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಏರಿದ ಬಳಿಕ ಪ್ರತಿ ಅಮೆರಿಕ ತೆರಿಗೆ, ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡ ಸೇರಿದಂತೆ ಭಾರತದ ವಸ್ತುಗಳಿಗೆ ಅಮೆರಿಕ 50% ಸುಂಕವನ್ನು ವಿಧಿಸಿತ್ತು. ಈ ಟ್ರಂಪ್‌ ಈಗ 18% ಮಾತ್ರ ತೆರಿಗೆ […]

ಭಾರತದ ಮೇಲಿನ ಸುಂಕ ಇಳಿಕೆ ಮಾಡಿದ ಟ್ರಂಪ್‌ Read More »

ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ಜಿಲ್ಲಾಧಿಕಾರಿ ಆದೇಶ

ಇಂಗ್ಲಿಷ್‌ ಮೀಡಿಯಂ ಶಾಲೆಗಳ ನಾಮಫಲಕವೂ ಕನ್ನಡದಲ್ಲಿರಬೇಕು ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಅಂಗಡಿ, ಕಂಪನಿ, ಕಚೇರಿಗಳು ಹೋಟೆಲ್ ಸೇರಿದಂತೆ ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿ ಇರಬೇಕು ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಸೂಚಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‍ಗಳು ವಾಣಿಜ್ಯ ಸಂಸ್ಥೆಗಳಿಗೆ ಟ್ರೇಡ್ ಲೈಸೆನ್ಸ್ ಮಂಜೂರು ಮಾಡುವಾಗಲೇ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಎಂಬ ಶರತ್ತು ವಿಧಿಸಬೇಕು. ಈ ಬಗ್ಗೆ ಆಗ್ಗಿಂದಾಗೆ ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ. ರಾಷ್ಟ್ರ್ರೀಯ ಹೆದ್ದಾರಿಗಳಲ್ಲಿ ವಿವಿಧ ಸೂಚನಾ ಫಲಕಗಳಲ್ಲಿ ಕನ್ನಡದಲ್ಲಿ

ವಾಣಿಜ್ಯ ಸಂಸ್ಥಾಪನೆಗಳ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ : ಜಿಲ್ಲಾಧಿಕಾರಿ ಆದೇಶ Read More »

ಆಸ್ತಿ ಜಗಳ : ತಂದೆಯಿಂದಲೇ ಮಗಳ ಹತ್ಯೆ

ಮಂಗಳೂರು: ತಂದೆಯೇ 18 ವರ್ಷದ ಮಗಳನ್ನು ಕಡಿದು ಕೊಲೆಗೈದ ದಾರುಣ ಘಟನೆ ಕೇರಳ-ಕರ್ನಾಟಕ ಗಡಿಭಾಗದ ತಲಪಾಡಿ ಸಮೀಪ ತೂಮಿನಾಡು ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ತೂಮಿನಾಡಿನ ಜುಮೈಲಾ ಕೊಲೆಗೀಡಾದ ಯುವತಿ. ಕೃತ್ಯ ನಡೆಸಿದ ತಂದೆ ಉಮ್ಮರ್ ಫಾರೂಕ್‌ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎನ್ನಲಾಗಿದೆ. ಉಮರ್

ಆಸ್ತಿ ಜಗಳ : ತಂದೆಯಿಂದಲೇ ಮಗಳ ಹತ್ಯೆ Read More »

ಚಾರ್ಮಾಡಿ ಘಾಟಿಯಲ್ಲಿ ಭೀಕರ ಕಾಡ್ಗಿಚ್ಚು

2 ಕಿ.ಮೀ. ತನಕ ವ್ಯಾಪಿಸಿದ ಬೆಂಕಿಗೆ ಹುಲ್ಲುಗಾವಲು ಭಸ್ಮ ಮಂಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿ ಅರಣ್ಯ ವ್ಯಾಪ್ತಿಯಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಸುಮಾರು ಒಂದೂವರೆ-ಎರಡು ಕಿ.ಮೀ. ಪಶ್ಚಿಮ ಘಟ್ಟಗಳ ತಪ್ಪಲಿನ ಅಪರೂಪದ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದೆ. ಮೂಡಿಗೆರೆ ಅರಣ್ಯ ವಲಯದೊಳಗೆ ಕಾಣಿಸಿಕೊಂಡಿರುವ ಬೆಂಕಿಯಿಂದ ಪಶ್ಚಿಮ ಘಟ್ಟಗಳ ಸಾಲಿನ ಸೂಕ್ಷ್ಮ ಹುಲ್ಲುಗಾವಲು ಪ್ರದೇಶ ಧಗಧಗಿಸಿ ಉರಿಯುತ್ತಿದೆ. ಗಾಳಿಯ ವೇಗ ಕೂಡ ಹೆಚ್ಚಿರುವುದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹರಡಿದ್ದು ಅರಣ್ಯ ಸಂಪತ್ತಿಗೆ ತೀವ್ರವಾದ

ಚಾರ್ಮಾಡಿ ಘಾಟಿಯಲ್ಲಿ ಭೀಕರ ಕಾಡ್ಗಿಚ್ಚು Read More »

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ

ಹಾಸನ: ಗಂಡನ ಅನುಮಾನ ಮತ್ತು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದು ಮಹಿಳೆಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಎಚ್. ಎಲ್. ಇಂದ್ರ (24) ಎಂದು ಗುರುತಿಸಲಾಗಿದೆ. ಗಂಡನ ಮನೆಯಲ್ಲಿ ವಿಷ ಸೇವನೆ ಮಾಡಿದ್ದ ಅವರನ್ನು ಹಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಎಂ. ಎಚ್. ಸ್ವಾಮಿ ಜೊತೆಗೆ ಇಂದ್ರ ಅವರ ವಿವಾಹವಾಗಿತ್ತು. ಮದುವೆ ಸಮಯದಲ್ಲಿ ಮಹಿಳೆಯ ಮನೆಯವರು ಚಿನ್ನ,

ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ Read More »

ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ

ಬೆಳ್ತಂಗಡಿ: ಬಡಗುತಿಟ್ಟಿನ ವಿವಿಧ ಮೇಳಗಳಲ್ಲಿ ಆರು ದಶಕಗಳಿಗಿಂತಲೂ ಹೆಚ್ಚಿನ ಕಾಲ ಬಣ್ಣದ ವೇಷದಾರಿಯಾಗಿ ಖ್ಯಾತಿ ಪಡೆದ ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವದ ಸಂಸ್ಮರಣ ಕಾರ್ಯಕ್ರಮ ಬೆಳ್ತಂಗಡಿಯ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ರವಿ ಜೋಯಿಷ್. ಯಂ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ದೇವಸ್ಥಾನದ ಅರ್ಚಕರಾದ ಸುರೇಶ್ ಪುತ್ತೂರಾಯ ವಹಿಸಿದ್ದರು. ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ

ಸಕ್ಕಟ್ಟು ಲಕ್ಷ್ಮೀ ನಾರಾಯಣಯ್ಯ ಜನ್ಮ ಶತಮಾನೋತ್ಸವ ಸಂಸ್ಮರಣೆ, ಸನ್ಮಾನ ಮತ್ತು ತಾಳಮದ್ದಳೆ Read More »

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತನಿಂದ ಮಹಿಳೆಯ ಕರಿಮಣಿ ಎಗರಿಸಿ ಪರಾರಿ

ಬಂಟ್ವಾಳ: ಅಪರಿಚಿತ ವ್ಯಕ್ತಿಯೊಬ್ಬ ನೀರು ಕೇಳುವ ನೆಪದಲ್ಲಿ ಬಂದು ಮಹಿಳೆಯ ಕತ್ತಿನಿಂದ ಕರಿಮಣಿ ಸರ ಎಗರಿಸಿದ ಘಟನೆ ಕಾವಳಪಡೂರಿನ ರಾಜಪಲ್ಕೆಯಲ್ಲಿ ನಡೆದಿದೆ. ಡೋಗ್ರ ಮೂಲ್ಯ ಎಂಬವರ ಪತ್ನಿ ಉಷಾಲಕ್ಷ್ಮಿ ಅವರ ಕತ್ತಿನಿಂದ ‌ಎರಡೂವರೆ ಪವನಿನ ಕರಿಮಣಿ ಎಗರಿಸಿರುವುದಾಗಿದೆ. ಸಂಜೆ ನಾಲ್ಕು ಗಂಟೆ ಸುಮಾರಿಗೆ ಅಪರಿಚಿತನೊಬ್ಬ ಬಂದು ಜಗಲಿಯಲ್ಲಿ ಕುಳಿತು ನೀರು ಕೇಳಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದು ಮಹಿಳೆಯೇ ನೀರು ತರಲು ಒಳ ಹೋಗಿದ್ದಾರೆ. ಈ ವೇಳೆ ಅಪರಿಚಿತ ಮಹಿಳೆಯನ್ನು ಹಿಂಬಾಲಿಸಿ ಹೋಗಿ, ಕೈ ಕಾಲು ಕಟ್ಟಿ

ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ಅಪರಿಚಿತನಿಂದ ಮಹಿಳೆಯ ಕರಿಮಣಿ ಎಗರಿಸಿ ಪರಾರಿ Read More »

ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ಮುದುಕನಿಂದ ಅತ್ಯಾಚಾರ

ಹುಬ್ಬಳ್ಳಿ: ಚಾಕ್ಲೆಟ್ ಆಸೆ ತೋರಿಸಿ, ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ವೃದ್ಧ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಕಾಮುಕ ಆರೋಪಿ ಈಶ್ವರಪ್ಪನನ್ನು ಬಂಧಿಸಲಾಗಿದೆ. ಆರೋಪಿಯು ಡಿ. 30 ರಂದು ಬಾಲಕಿಗೆ ಚಾಕ್ಲೆಟ್ ಕೊಡಿಸುವುದಾಗಿ ಹೇಳಿ, ತನ್ನ ಅಂಗಡಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ.

ಎಂಟು ವರ್ಷದ ಹುಡುಗಿಯ ಮೇಲೆ ಎಪ್ಪತೈದು ವರ್ಷದ ಮುದುಕನಿಂದ ಅತ್ಯಾಚಾರ Read More »

ಪಿಕಪ್ – ಸ್ಕೂಟಿ ಢಿಕ್ಕಿ: ಮಹಿಳೆ ಸಾವು

ಚಿಕ್ಕಮಗಳೂರು: ಪಿಕಪ್ ಮತ್ತು ಸ್ಕೂಟಿ ‌ನಡುವೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅರಶಿನಗುಪ್ಪೆ ಗ್ರಾಮದಲ್ಲಿ ನಡೆದಿದೆ. ಚಂದ್ರಿಕಾ (40) ಎಂಬವರೇ ಮೃತ ದುರ್ದೈವಿ. ಅವರು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭ ಏಕಾಏಕಿ ಅವರ ಮೇಲೆ ಪಿಕಪ್ ಹರಿದು ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಗಮಿಸಿದ್ದು, ಈ ವೇಳೆ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಸದ್ರಿ ಅಪಘಾತ ಸಂಭವಿಸುತ್ತಿರುವ

ಪಿಕಪ್ – ಸ್ಕೂಟಿ ಢಿಕ್ಕಿ: ಮಹಿಳೆ ಸಾವು Read More »

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ

ಇಡೀ ತನಿಖೆಯ ದಿಕ್ಕನ್ನೇ ಬದಲಿಸುವ ಮಾಹಿತಿ ಡೈರಿಯಲ್ಲಿ ಪತ್ತೆ ಬೆಂಗಳೂರು: ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಳ್ಳಲು ಮೊದಲೇ ನಿರ್ಧರಿಸಿದ್ದರೇ? ಅವರ ಡೈರಿಯಲ್ಲಿರುವ ಕೆಲವೊಂದು ಮಾಹಿತಿ ಸಿ.ಜೆ.ರಾಯ್‌ ಆತ್ಮಹತ್ಯೆ ಆ ಕ್ಷಣದ ನಿರ್ಧಾರವಲ್ಲ, ಬದಲಾಗಿ ಅವರು ಮೊದಲೇ ಆತ್ಮಹತ್ಯೆಗೆ ತಯಾರಿ ಮಾಡಿಕೊಂಡಿದ್ದರು ಎಂಬ ಸುಳಿವು ನೀಡುತ್ತಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಆದಾಯಕರ ಇಲಾಖೆಯ ಕಿರುಕುಳದಿಂದ ಐಟಿ ದಾಳಿ ನಡೆಯುತ್ತಿರುವಾಗಲೇ ಸಿ.ಜೆ.ರಾಯ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಡೈರಿಯಲ್ಲಿ ಅವರು ಬರೆದಿಟ್ಟಿರುವ ಕೆಲವು ವಿಚಾರಗಳು ತನಿಖೆಯ

ಉದ್ಯಮಿ ಸಿ.ಜೆ. ರಾಯ್‌ ಆತ್ಮಹತ್ಯೆ ಕೇಸ್‌ : ಡೈರಿಯಲ್ಲಿದೆ ಸ್ಫೊಟಕ ಮಾಹಿತಿ Read More »

error: Content is protected !!
Scroll to Top