ಸ್ನಾನಕ್ಕೆಂದ ತೆರಳಿದ ಇಬ್ಬರು ಯುವಕರು ನೀರಿಗೆ ಬಿದ್ದು ಮೃತ್ಯು

ಮಡಿಕೇರಿ : ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ 8 ಜನ ಯುವಕರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿದ ಘಟನೆ ಮಡಿಕೇರಿ ತಾಲೂಕಿನ ನಾಪೊತ್ತು ಸಮೀಪದ ಎಮ್ಮೆಮಾಡುವಿನ ಕೂರುಳಿಯಲ್ಲಿ ನಡೆದಿದೆ. ಚೇರಂಬಾಣೆ ಮೂಲದ ಗಿರೀಶ್ (16) ಮತ್ತು ಅಯ್ಯಪ್ಪ (18) ಕಾವೇರಿ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದಾರೆ. ಇಬ್ಬರ ಪೈಕಿ ಓರ್ವನ ಮೃತದೇಹ ದೊರಕಿದೆ. ಇನ್ನೋರ್ವನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ನಾಪೊಗ್ಗು ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ನಾನಕ್ಕೆಂದ ತೆರಳಿದ ಇಬ್ಬರು ಯುವಕರು ನೀರಿಗೆ ಬಿದ್ದು ಮೃತ್ಯು Read More »

ಅಮೇರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

ವಾಷಿಂಗ್ಟನ್ : ಅಮೇರಿಕದ ನ್ಯೂಯಾರ್ಕ್ ನ ರಸ್ತೆ ಅಪಘಾತದಲ್ಲಿ ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನಡೆದಿದ್ದು, ಈ ಮಾಹಿತಿಯನ್ನು  ಭಾರತೀಯ ಕಾನ್ಸುಲೇಟ್ ಮಂಗಳವಾರ ತಿಳಿಸಿದೆ. ಮಾನವ್ ಪಟೇಲ್ (20) ಮತ್ತು ಸೌರವ್ ಪ್ರಭಾಕರ್ (23) ಮೃತಪಟ್ಟ ವಿದ್ಯಾರ್ಥಿಗಳೆನ್ನಲಾಗಿದೆ . ಲ್ಯಾಂಕಾಸ್ಟ‌ರ್ ಕೌಂಟಿ ಕರೋನರ್ ಕಚೇರಿಯ ಪ್ರಕಾರ, ಮೇ 10 ರಂದು ಪೂರ್ವ ಕೊಕಾಲಿಕೊ ಟೌನ್‌ಶಿಪ್‌ನಲ್ಲಿ ಅಪಘಾತ ಸಂಭವಿಸಿದಾಗ ಪ್ರಭಾಕರ್ ಕಾರು ಚಾಲನೆ ಮಾಡುತ್ತಿದ್ದರು. ಪ್ರಭಾಕರ್ ಮತ್ತು ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದಿನ

ಅಮೇರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು Read More »

ವಿಜೃಂಭಣೆಯಿಂದ ಜರಗಿದ ಶ್ರೀ ದುರ್ಗಾಮಲ್ಲಿಕಾರ್ಜುನ ದೇವರ ಪ್ರತಿಷ್ಠೆ | ಜಟ್ಟಿಮನೆ ತರವಾಡಿನ ಗೃಹಪ್ರವೇಶ ಹಾಗೂ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ

ಕೊಟ್ಲಂಗಾಡ್‍: ಶ್ರೀ ದುರ್ಗಾಮಲ್ಲಿಕಾರ್ಜುನ (ಜಟ್ಟಿ ಮನೆ) ತರವಾಡು ಟ್ರಸ್ಟ್ ನಿಂದ ಶ್ರೀ ದುರ್ಗಾಮಲ್ಲಿಕಾರ್ಜುನ ದೇವರು, ಜಟ್ಟಿಮನೆ ತರವಾಡಿನ ಗೃಹಪ್ರವೇಶ ಹಾಗೂ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ ಕೇರಳ ರಾಜ್ಯದ ಚಿತ್ತಾರಿ ಕೊಟ್ಲಂಗಾಡ್‍ ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಖೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಿತು. ಮಲ್ಲವ ಸಾಮ್ರಾಜ್ಯದ ಗುರು ಪರಂಪರಾನುಗತ ಮಹಾಮಹತ್ತಿನ ಭುವನಗಿರಿ ಸಂಸ್ಥಾನ ಮಠಾಧ್ಯಕ್ಷರಾದ ಶಕ್ತಿ ವಿಶಿಷ್ಟಾದ್ಯ್ಯೆತ ವೇದಾಂತ ಆಚಾರ್ಯ ಕೆಳದಿ ಸಂಸ್ಥಾನ ರಾಜಗುರು ಶ್ರೀ ಷ. ಬ್ರ ಮರುಳಸಿದ್ಧ ಶಿವಾಚಾರ್ಯ ಮಹಾಸ್ವಾಮಿಗಳ ಶುಭಾಶೀರ್ವಾದಗಳೊಂದಿಗೆ, ಚಿತ್ತಾರಿ ಬಾರಿಕ್ಕಾಡು ಬ್ರಹ್ಮಶ್ರೀ

ವಿಜೃಂಭಣೆಯಿಂದ ಜರಗಿದ ಶ್ರೀ ದುರ್ಗಾಮಲ್ಲಿಕಾರ್ಜುನ ದೇವರ ಪ್ರತಿಷ್ಠೆ | ಜಟ್ಟಿಮನೆ ತರವಾಡಿನ ಗೃಹಪ್ರವೇಶ ಹಾಗೂ ಗುಳಿಗ ದೈವದ ಪ್ರತಿಷ್ಠಾ ಮಹೋತ್ಸವ Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದನ ಕಳ್ಳರು

ಚಿಕ್ಕಮಗಳೂರಿನ ಕಡೂರಿನಲ್ಲಿ ಸಂಭವಿಸಿದ ಕೃತ್ಯಕ್ಕೆ ಭಾರಿ ಆಕ್ರೋಶ ಚಿಕ್ಕಮಗಳೂರು : ಬೆಂಗಳೂರು ಮಾದರಿಯಲ್ಲೇ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ದನದ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಘಟನೆ ಬೆಳಕಿಗೆ ಬಂದಿದ್ದು, ವಿಪರೀತ ರಕ್ತ ಸೋರಿಕೆಯಾಗಿ ದನ ಮೃತಪಟ್ಟಿದೆ. ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಲಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಹಸು ಮೃತಪಟ್ಟಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶೇಖರಪ್ಪ ಎಂಬವರಿಗೆ ಸೇರಿದ ಹಸುವನ್ನು ರಾತ್ರೋರಾತ್ರಿ ಕಳವು ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ ಕಳ್ಳತನ ಯತ್ನ ವಿಫಲವಾದಾಗ ರೋಷದಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದನ ಕಳ್ಳರು Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ

ಉಡುಪಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬಲಾಯಿಪಾದೆ ಜಂಕ್ಷನ್ ಬಳಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಶಾಂತ್ ಹಾಗೂ ಪ್ರವೀಣ್ ಎಂದು ಪತ್ತೆಹಚ್ಚಲಾಗಿದೆ. ಆರೋಪಿಗಳಿಬ್ಬರ ಬಳಿ ಇದ್ದ ವಿವಿಧ ಬ್ಯಾಂಡ್‌ನ ಮದ್ಯದ ಸಾಚೇಟ್, ಬೀಯರ್ ಬಾಟಲ್, ನೀರಿನ ಬಾಟಲ್‌ಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ Read More »

ಟೆಂಪೋ ಟ್ರಾವೆಲರ್ ಮತ್ತು ಮಾರುತಿ-800 ನಡುವೆ ಅಪಘಾತ |  ನಾಲ್ಕು ಮಂದಿಗೆ ಗಾಯ

ಕಡಬ: ಟೆಂಪೋ ಟ್ರಾವೆಲರ್ ಮತ್ತು ಮಾರುತಿ-800 ಕಾರು ಪರಸ್ಪರ ಡಿಕ್ಕಿಯಾದ ಘಟನೆ ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯಲ್ಲಿ ಕೊಯಿಲ ಗ್ರಾಮದ ಗಂಡಿಬಾಗಿಲು ಬಳಿ ನಡೆದಿದೆ. ಘಟನಾನುಸಾರವಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 4 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕಡಬ ತಾಲೂಕು ಆಲಂಕಾರು ನಿವಾಸಿಗಳಾದ ಪದ್ಮನಾಭ, ಸುದರ್ಶನ್, ಚೇತನ್, ಸತೀಶ್ ಎಂದು ಎನ್ನಲಾಗಿದೆ. ಗಾಯಗೊಂಡವರ ಪೈಕಿ ಗಂಭೀರ ಗಾಯಗಳಾಗಿರುವ ಪದ್ಮನಾಭರವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಮೊಗ್ಗ ಮೂಲದ ಯಾತ್ರಿಕರು ಟೆಂಪೋ ಟ್ರಾವೆಲರ್‌ನಲ್ಲಿ ಸುಬ್ರಹ್ಮಣ್ಯ

ಟೆಂಪೋ ಟ್ರಾವೆಲರ್ ಮತ್ತು ಮಾರುತಿ-800 ನಡುವೆ ಅಪಘಾತ |  ನಾಲ್ಕು ಮಂದಿಗೆ ಗಾಯ Read More »

ಭದ್ರತಾ ಪಡೆ ಗುಂಡಿಗೆ ಓರ್ವ ಉಗ್ರ ಬಲಿ

ಶೋಪಿಯಾನ್‌ನಲ್ಲಿ ಭದ್ರತಾ ಪಡೆಗೆ ಮುಖಾಮುಖಿಯಾದ ಉಗ್ರರ ತಂಡ ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಜಿನ್‌ಪತೆರ್‌ ಎಂಬಲ್ಲಿ ಭದ್ರತಾ ಪಡೆಗೆ ಭಯೋತ್ಪಾದಕರು ಇಂದು ಬೆಳಗ್ಗೆ ಮುಖಾಮುಖಿಯಗಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಸತ್ತಿದ್ದಾನೆ. ಇನ್ನೂ ಹಲವು ಉಗ್ರರು ಇಲ್ಲಿದ್ದು, ತೀವ್ರ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಗ್ರರು ಲಷ್ಕರ್‌ ಎ ತೈಬಾ ಸಂಘಟನೆಗೆ ಸೇರಿದವರು. ಇಬ್ಬರು ಉಗ್ರರನ್ನು ಭದ್ರತಾ ಪಡೆ ಸುತ್ತುವರಿದಿದೆ. ಎನ್‌ಕೌಂಟರ್‌ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿವರವಾದ ಮಾಹಿತಿ

ಭದ್ರತಾ ಪಡೆ ಗುಂಡಿಗೆ ಓರ್ವ ಉಗ್ರ ಬಲಿ Read More »

ಕಳ್ಳಭಟ್ಟಿ ಸಾರಾಯಿ ಸೇವಿಸಿ 16 ಮಂದಿ ಸಾವು

ನವದೆಹಲಿ: ಕಳ್ಳಭಟ್ಟಿ ಸಾರಾಯಿ ಸೇವಿಸಿ ಕನಿಷ್ಠ 16 ಮಂದಿ ಸಾವಿಗೀಡಾದ ಘಟನೆ ಪಂಜಾಬಿನ ಅಮೃತಸರ ಜಿಲ್ಲೆಯ ಐದು ಹಳ್ಳಿಗಳಲ್ಲಿ ಸಂಭವಿಸಿದೆ. ಈ ದುರಂತಕ್ಕೆ ಸಂಭವಿಸಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಐದು ಹಳ್ಳಿಗಳ ಜನ ನಿನ್ನೆ ರಾತ್ರಿ ಕಳ್ಳಭಟ್ಟಿ ಸೇವಿಸಿ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕನಿಷ್ಠ 6 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ 9.30ರ ವೇಳೆಗೆ ಜನರು ಕಳ್ಳಭಟ್ಟಿ ಸಾರಾಯಿ ಸೇವಿಸಿ ತೀವ್ರ ಅಸ್ವಸ್ಥರಾಗತೊಡಗಿದರು. ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ

ಕಳ್ಳಭಟ್ಟಿ ಸಾರಾಯಿ ಸೇವಿಸಿ 16 ಮಂದಿ ಸಾವು Read More »

ಮೋದಿ ಮನೆ ಮೇಲೆ ಬಾಂಬ್‌ ಹಾಕಬೇಕು ಎಂದ ಯುವಕ ಸೆರೆ

ಯುದ್ಧಕ್ಕೆ ಮೋದಿಯೇ ಕಾರಣ ಎಂಬ ವೀಡಿಯೊ ಅಪ್‌ಲೋಡ್‌ ಮಾಡಿದ್ದ ಯುವಕ ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಬಾಂಬ್‌ ಹಾಕಬೇಕೆಂದು ಪ್ರಚೋದನಾಕಾರಿ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದ ಯುವಕನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ವೀಡಿಯೊ ವೈರಲ್ ಆಗುತ್ತಿದ್ದಂತೆಯೇ ಆರೋಪಿ ನವಾಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆತನನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧವಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಯಾಕೆ ಪಾಕಿಸ್ತಾನ ಬಾಂಬ್ ಹಾಕಿಲ್ಲ?

ಮೋದಿ ಮನೆ ಮೇಲೆ ಬಾಂಬ್‌ ಹಾಕಬೇಕು ಎಂದ ಯುವಕ ಸೆರೆ Read More »

ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ ತಾಯಿ-ಮಗ | ತಾಯಿ ಮೃತ್ಯು, ಮಗ ಗಂಭೀರ

ಬೆಳ್ತಂಗಡಿ: ಒಂದೆಡೆ ಆರ್ಥಿಕ ಸಮಸ್ಯೆ, ಇನ್ನೊಂದೆಡೆ ಅನಾರೋಗ್ಯದಿಂದಾಗಿ ನಿದ್ರೆ ಮಾತ್ರೆ ಸೇವಿಸಿದ ವೃದ್ಧೆ ತಾಯಿ ಸಾವಿಗೀಡಾಗಿ ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ಮುಂಡಾಜೆಯಲ್ಲಿ ನಡೆದಿದೆ. ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ. ಕುಂಞರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (96) ಮೃತಪಟ್ಟವರು. ಪುತ್ರ ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ, (58) ಅವರು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲ್ಯಾಣಿ ಮತ್ತು ಜಯರಾಂ ಅವರ ಕೂಳೂರಿನ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು

ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ ತಾಯಿ-ಮಗ | ತಾಯಿ ಮೃತ್ಯು, ಮಗ ಗಂಭೀರ Read More »

error: Content is protected !!
Scroll to Top