ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ | ಪಲ್ಲಕಿ ಉತ್ಸವ, ಬಂಡಿ ಉತ್ಸವ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮಂಗಳವಾರ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ ವೇ.ಮೂ ವಸಂತ ಕೆದಿಲಾಯ ಮತ್ತು ವೇ. ಮೂ.ವಿ.ಎಸ್ ಭಟ್ ಅವರ ವೈದಿಕತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಚಂಡಿಕಾ ಹೋಮ, ಶತರುದ್ರಾ ನಡೆಯಿತು.ರಾತ್ರಿ ಶ್ರೀ ದೇವರ ಉತ್ಸವ ಬಲಿ ಹೊರಟು ಹೊರಾಂಗಣದಲ್ಲಿ ಉತ್ಸವ, ಪಲ್ಲಕಿ ಉತ್ಸವ, ಬಂಡಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ […]

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ | ಪಲ್ಲಕಿ ಉತ್ಸವ, ಬಂಡಿ ಉತ್ಸವ Read More »

ಮೇ 21 : ಕುದ್ಮಾರು ಗ್ರಾಮದ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ

ಕಡಬ: ತಾಲೂಕಿನ ಕುದ್ಮಾರು ಗ್ರಾಮದ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಮೇ 21 ಬುಧವಾರ ನಡೆಯಲಿದೆ. ಶ್ರೀ ದೈವಸ್ಥಾನದ ಶ್ರೀ ರಕ್ತೇಶ್ವರಿ, ಕುಪ್ಪೆ ಪಂಜುರ್ಲಿ, ವರ್ಣರ ದೈವಗಳ ಪುನಃ  ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಈ ಕಾರ್ಯಕ್ರಮಗಳಿಗೆ ಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಪದ್ಮಯ್ಯ ಗೌಡ ಕೆಡೆಂಜಿ ತಿಳಿಸಿದ್ದಾರೆ.

ಮೇ 21 : ಕುದ್ಮಾರು ಗ್ರಾಮದ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ Read More »

ಕರ್ನಲ್‌ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹಬ್ಬಿಸಿದ ಕಿಡಿಗೇಡಿ

ಬೆಳಗಾವಿಯ ಬಾಗೇವಾಡಿಯಲ್ಲಿರುವ ಮನೆಗೆ ಪೊಲೀಸರ ಬಿಗು ಭದ್ರತೆ ಬೆಳಗಾವಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿದ್ದ ಸೇನೆಯ ಉನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಗಂಡನ ಮನೆ ಮೇಲೆ ದಾಳಿ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸ್ಪಷ್ಟನೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಅನೀಸ್ ಉದ್ದೀನ್ ಎಂಬ

ಕರ್ನಲ್‌ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹಬ್ಬಿಸಿದ ಕಿಡಿಗೇಡಿ Read More »

ಅನುಮಾನಾಸ್ಪದ ಚಲನವಲನಗಳ ಮೇಲೆ ಕಣ್ಣಿಡಲು ಮೀನುಗಾರರಿಗೆ ಸೂಚನೆ

ಸಮುದ್ರದಲ್ಲಿ ಕಟ್ಟೆಚ್ಚರದಿಂದ ಗುಂಪಾಗಿ ಮೀನುಗಾರಿಕೆ ನಡೆಸಲು ಸಲಹೆ ಉಡುಪಿ: ಯುದ್ಧದ ಕಾರ್ಮೋಡ ಸದ್ಯಕ್ಕೆ ಸರಿದಿದ್ದರೂ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ಕಟ್ಟೆಚ್ಚರದಿಂದಿರಲು ಮೀನುಗಾರರಿಗೆ ಸರಕಾರ ಸೂಚನೆ ನೀಡಿದೆ. ಎರಡು-ಮೂರು ದೋಣಿಗಳು ಗುಂಪಾಗಿ ಮೀನುಗಾರಿಕೆ ನಡೆಸಲು ಸೂಚಿಸಲಾಗಿದೆ ಮತ್ತು ಪ್ರತಿಕ್ಷಣವೂ ಕಟ್ಟೆಚ್ಚರದಿಂದ ಇರಬೇಕೆಂದು ಸೂಚಿಸಲಾಗಿದೆ. ಯಾವುದೇ ಅನುಮಾನಾಸ್ಪದ ದೋಣಿ ಮತ್ತು ಅಪರಿಚಿತ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಡಲು ಮೀನುಗಾರಿಕಾ ಮೀನುಗಾರಿಕೆ ಇಲಖೆಯ ಜಂಟಿ ನಿರ್ದೇಶಕ ವಿವೇಕ್ ಆರ್. ಮೀನುಗಾರರಿಗೆ ಸೂಚಿಸಿದ್ದಾರೆ. ಯಾವುದೇ ಸಂದೇಹ ಅಥವಾ ಅನುಮಾನಾಸ್ಪದ ದೃಶ್ಯ ಕಂಡುಬಂದರೆ

ಅನುಮಾನಾಸ್ಪದ ಚಲನವಲನಗಳ ಮೇಲೆ ಕಣ್ಣಿಡಲು ಮೀನುಗಾರರಿಗೆ ಸೂಚನೆ Read More »

ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ: ಮಗನ ಮದುವೆಗೆಂದು ಖರೀದಿಸಿ ಬ್ಯಾಗಿನಲ್ಲಿಟ್ಟಿದ್ದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಕಳವಾಗಿರುವ ಘಟನೆ ಪೊಳಲಿ ದೇವಸ್ಥಾನ ವಠಾರದಲ್ಲಿ ನಡೆದಿದೆ. ಅಮ್ಮಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ಗೀತಾ (63)  ಮೇ 18 ರಂದು ಮಗನ ಮದುವೆ ಇರುವ ಪ್ರಯುಕ್ತ ಶನಿವಾರ 3,99,500/- ರೂಪಾಯಿ ಮೌಲ್ಯದ 41.800 ಗ್ರಾಂ ತೂಕದ ಪದಕ ಇರುವ ಕರಿಮಣಿ ಸರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 9.820 ಗ್ರಾಂ ತೂಕದ ಚಿನ್ನದ ಬಳೆ ಖರೀದಿಸಿ ಸಂಪ್ರದಾಯದಂತೆ ದೇವರಲ್ಲಿ ಚಿನ್ನ ಇಟ್ಟು

ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

ಆಪರೇಷನ್‌ ಸಿಂಧೂರ ವಿಜಯೋತ್ಸವದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಟೆಕ್ಕಿ

ಬೆಂಗಳೂರು : ಆಪರೇಷನ್‌ ಸಿಂಧೂರ ವಿಜಯೋತ್ಸವ ಆಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್‌ನಲ್ಲಿ ವಿಜಯೋತ್ಸವ ನಡೆಯುತ್ತಿದ್ದಾಗ ಶುಭಾಂಶು ಶುಕ್ಲಾ(26) ಎಂಬ ಯುವಕ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ. ಛತ್ತಿಸ್‌ಗಢ ಮೂಲದ ಶುಕ್ಲಾ ಬೆಂಗಳೂರಿನಲ್ಲಿ ಟೆಕ್ಕಿ ಆಗಿದ್ದು, ವೈಟ್‌ಫೀಲ್ಡ್‌ನ ಪ್ರಶಾಂತ್‌ ಲೇಔಟ್‌ನಲ್ಲಿ ವಾಸಿಸುತ್ತಿದ್ದ. ಮೇ 9ರಂದು ಈ ಬಡಾವಣೆಯಲ್ಲಿ ʻಆಪರೇಷನ್‌ ಸಿಂಧೂರʼ ವಿಜಯೋತ್ಸವ ಆಚರಿಸಲಾಗುತ್ತಿತ್ತು. ಈ ವೇಳೆ ಶುಭಾಂಶು ಶುಕ್ಲಾ

ಆಪರೇಷನ್‌ ಸಿಂಧೂರ ವಿಜಯೋತ್ಸವದಲ್ಲಿ ಪಾಕ್‌ ಪರ ಘೋಷಣೆ ಕೂಗಿದ ಟೆಕ್ಕಿ Read More »

ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸಾವು

ಬಳ್ಳಾರಿ : ಕುರಿ ಮೇಯಿಸಲು ಹೋದ ವೇಳೆ ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದೆ. ಕುರಿ ಮೇಯಿಸಲು ಹೋದಾಗ ಜೋರು ಮಳೆ ಬಂದ ಕಾರಣ ಮರದ ಅಡಿಯಲ್ಲಿ ಆಶ್ರಯ ಪಡೆದಿದ್ದರು. ಈ ಮರಕ್ಕೇ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭೀರಪ್ಪ (45), ಸುನೀಲ್ (26) ಮತ್ತು ವಿನೋದ್ (14) ಮೃತಪಟ್ಟವರು. ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಿಡಿಲು ಬಡಿದು ಒಂದೇ ಕುಟುಂಬದ ಮೂವರು ಸಾವು Read More »

ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗುತ್ತಿರುವ ಅನುಮಾನ

ಕಿರಾನ ಬೆಟ್ಟದಡಿಯಲ್ಲಿರುವ ಅಣ್ವಸ್ತ್ರ ಸಂಗ್ರಹಕ್ಕೆ ಭಾರತದ ಕ್ಷಿಪಣಿಗಳು ಅಪ್ಪಳಿಸಿರುವ ಕುರಿತು ಚರ್ಚೆ ನವದೆಹಲಿ: ಭಾರತದ ಕ್ಷಿಪಣಿಗಳು ಪಾಕಿಸ್ಥಾನದ ಅಣ್ವಸ್ತ್ರಗಳ ಮೇಲೆಯೇ ದಾಳಿ ನಡೆಸಿವೆ ಎಂಬ ದಟ್ಟ ವದಂತಿಯೊಂದು ಹರಿದಾಡುತ್ತಿದೆ. ಭಾರತದ ಸೇನೆ ಪಾಕ್‌ನ ಅಣ್ವಸ್ತ್ರಗಳನ್ನು ಗುರಿ ಮಾಡಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಾಕಿಸ್ಥಾನದಲ್ಲಿ ಪರಮಾಣು ವಿಕಿರಣ ಸೋರಿಕೆ ಆಗುತ್ತಿದ್ಯಾ ಎಂಬ ಅನುಮಾನ ಹುಟ್ಟಿಸಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ತೀವ್ರ ಸಂಘರ್ಷ ನಡೆಯುತ್ತಿದ್ದಾಗ ದಿಢೀರ್‌ ಕದನ ವಿರಾಮ ಘೋಷಣೆಯಾಗಿದ್ದಕ್ಕೆ ಕಾರಣ

ಪಾಕಿಸ್ತಾನದಲ್ಲಿ ವಿಕಿರಣ ಸೋರಿಕೆಯಾಗುತ್ತಿರುವ ಅನುಮಾನ Read More »

ಹಾವು ಕಚ್ಚಿ ಮಹಿಳೆ ಮೃತ್ಯು

ಬೆಳ್ತಂಗಡಿ: ವಿಷಪೂರಿತ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ನಡೆದಿದೆ. ಧರ್ಮಸ್ಥಳ ನಾರ್ಯ ನಿವಾಸಿ ಶಾಂತಾ (68) ಮೃತಪಟ್ಟವರು. ಮನೆಯ ಹಿಂಬದಿಗೆ ಬಟ್ಟೆಯನ್ನು ಒಗೆಯಲು  ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ  ಹಾವು ಎಡಗೈ ಕಿರು ಬೆರಳಿಗೆ ಕಚ್ಚಿತ್ತು..ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.

ಹಾವು ಕಚ್ಚಿ ಮಹಿಳೆ ಮೃತ್ಯು Read More »

ಆರೇಲ್ತಡಿ ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮ | ಸಮಾಜದ ಜನರ ಮನಸ್ಸು ಒಂದಾಗುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಆಗಿದೆ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಆರೇಲ್ತಡಿ ದೈವಗಳು ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರಿಗೆ ಅಭಿವೃದ್ಧಿಯ ಇಚ್ಛೆ ನೀಡಿದೆ : ನಳಿನ್‍ ಕುಮಾರ್ ಕಟೀಲ್‍ | ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕುವವರು ಕರಾವಳಿಗರು : ಭಾರತಿ ಶೆಟ್ಟಿ | ಧರ್ಮದ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ: ಭಾಗೀರಥಿ ಮುರುಳ್ಯ | ಸಾವಿರಾರು ಹೃದಯ, ಮನಸ್ಸುಗಳು ಸೇರಿ ಆರೇಲ್ತಡಿ ದೇವಭೂಮಿಯಾಗಿದೆ : ಸಂಜೀವ ಮಠಂದೂರು

ಕಡಬ: ಮೇ 12 ರಿಂದ 16 ರ ತನಕ ನಡೆಯುವ ತಾಲೂಕಿನ ಆರೇಲ್ತಡಿ ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಮಂಗಳವಾರ ನಡೆಯಿತು. ಸಮಾಜದ ಜನರ ಮನಸ್ಸು ಒಂದಾಗುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಆಗಿದೆ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ತಾಯಿ ಪ್ರೀತಿಯೊಟ್ಟಿಗೆ ಕಾಲ ಕಾಲಕ್ಕೆ ಬರುವ ನಲ್ಮೆ ಗೆಲ್ಮೆ, ಮನಸ್ಸಿಗೆ ತನ್ಮಯ

ಆರೇಲ್ತಡಿ ಕೆಡೆಂಜೊಡಿತ್ತಾಯ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ | ಧಾರ್ಮಿಕ ಸಭಾ ಕಾರ್ಯಕ್ರಮ | ಸಮಾಜದ ಜನರ ಮನಸ್ಸು ಒಂದಾಗುವ ನಿಟ್ಟಿನಲ್ಲಿ ಜೀರ್ಣೋದ್ಧಾರ ಆಗಿದೆ : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಆರೇಲ್ತಡಿ ದೈವಗಳು ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರಿಗೆ ಅಭಿವೃದ್ಧಿಯ ಇಚ್ಛೆ ನೀಡಿದೆ : ನಳಿನ್‍ ಕುಮಾರ್ ಕಟೀಲ್‍ | ಧಾರ್ಮಿಕ ನೆಲೆಗಟ್ಟಿನಲ್ಲಿ ಬದುಕುವವರು ಕರಾವಳಿಗರು : ಭಾರತಿ ಶೆಟ್ಟಿ | ಧರ್ಮದ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ: ಭಾಗೀರಥಿ ಮುರುಳ್ಯ | ಸಾವಿರಾರು ಹೃದಯ, ಮನಸ್ಸುಗಳು ಸೇರಿ ಆರೇಲ್ತಡಿ ದೇವಭೂಮಿಯಾಗಿದೆ : ಸಂಜೀವ ಮಠಂದೂರು Read More »

error: Content is protected !!
Scroll to Top