ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ : 12 ಮಂದಿ ಸಾವು

ಮೆಕ್ಸಿಕೋ : ಮೆಕ್ಸಿಕನ್ ರಾಜ್ಯದ ಗುವಾನಾಜುವಾಟೊದ ಇರಾಪುವಾಟೊ ನಗರದಲ್ಲಿ ಬುಧವಾರ ರಾತ್ರಿ ಸಂಭ್ರಮಾಚರಣೆ ವೇಳೆ ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಗೌರವಾರ್ಥ ಸ್ಥಳೀಯರು ನೃತ್ಯ ಮತ್ತು ಮದ್ಯಪಾನ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಆನ್‌ಲೈನ್‌ನಲ್ಲಿ ವೈರಲ್‌ ಆಗಿರುವ ವೀಡಿಯೊಗಳಲ್ಲಿ ಗುಂಡಿನ ದಾಳಿಯಿಂದ ಭಯಭೀತರಾದ ಜನ ಓಡಿಹೋಗುವುದನ್ನು ಹಾಗೂ ಶವಗಳನ್ನು ಕಾಣಬಹುದು. ಇರಾಪುವಾಟೊ ಅಧಿಕಾರಿ ರೊಡಾಲ್ಫೊ ಗ್ಮೆಜ್ ಸೆರ್ವಾಂಟೆಸ್ ಪತ್ರಿಕಾಗೋಷ್ಠಿಯಲ್ಲಿ ಸಾವಿನ ಸಂಖ್ಯೆ 12ಕ್ಕೆ […]

ಸಂಭ್ರಮಾಚರಣೆ ವೇಳೆ ಗುಂಡಿನ ದಾಳಿ : 12 ಮಂದಿ ಸಾವು Read More »

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ

ಬಹಿರಂಗ ಹೇಳಿಕೆ ನೀಡಿ ಮುಜುಗರವುಂಟು ಮಾಡದಂತೆ ತಾಕೀತು ಬೆಂಗಳೂರು: ವಸತಿ ಇಲಾಖೆಯ ಭ್ರಷ್ಟಾಚಾರ ಮತ್ತು ಅನುದಾನ ಸಿಗದ ಕುರಿತು ಧ್ವನಿಯೆತ್ತಿದ್ದ ಕಾಂಗ್ರೆಸ್‌ನ ಇಬ್ಬರು ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಬುಧವಾರ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಕೂಡಲೇ ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದ ಅಸಮಾಧಾನಿತ ಶಾಸಕ ರಾಜು ಕಾಗೆ ಹಾಗೂ ಭ್ರಷ್ಟಾಚಾರ ಬಾಂಬ್‌ ಸಿಡಿಸಿದ ಶಾಸಕ ಬಿ.ಆರ್‌ ಪಾಟೀಲ್‌ ಅವರನ್ನ ಭೇಟಿಯಾಗಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಆರ್ ಪಾಟೀಲ್‌ಗೆ

ಅಸಮಾಧಾನಿತ ಶಾಸಕರ ಬಾಯಿಗೆ ಬೀಗ ಜಡಿದ ಸಿದ್ದರಾಮಯ್ಯ Read More »

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ

ಚಾರ್ಮಾಡಿ, ಸಂಪಾಜೆ ಮಾರ್ಗದಲ್ಲಿ ಸಂಚರಿಸಲು ಸೂಚನೆ ಮಂಗಳೂರು: ಮಳೆ ಅಬ್ಬರಕ್ಕೆ ಸಕಲೇಶಪುರ ಬಳಿ ಶಿರಾಡಿ ಘಾಟಿಯಲ್ಲಿ ಭೂಕುಸಿತವಾಗಿದ್ದು ಬೆಂಗಳೂರು-ಮಂಗಳೂರು ಸಂಪರ್ಕ ಕಡಿತವಾಗಿದೆ.ಸಕಲೇಶಪುರ ತಾಲ್ಲೂಕಿನ, ಮಾರನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿದ ಪರಿಣಾಮ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ತಡರಾತ್ರಿ ಮರಗಳ ಸಮೇತ ರಸ್ತೆಗೆ ಅಡ್ಡಲಾಗಿ ಗುಡ್ಡ ಕುಸಿದ ಕಾರಣ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಮಂಗಳೂರು ಕಡೆಗೆ ತೆರಳುವ ವಾಹನಗಳಿಗೆ ಬೇಲೂರು ಮೂಲಕ ಚಾರ್ಮಾಡಿ ಘಾಟ್ ರಸ್ತೆ

ಶಿರಾಡಿ ಘಾಟಿಯಲ್ಲಿ ಭೂಕುಸಿತ : ಮಂಗಳೂರು-ಬೆಂಗಳೂರು ಸಂಚಾರ ಕಡಿತ Read More »

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಯುವಕನ ವಿರುದ್ಧಪ್ರಕರಣ ದಾಖಲು

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಯುವತಿಯನ್ನು ಗರ್ಭವತಿಯನ್ನಾಗಿಸಿದ ಹಿನ್ನಲೆ ಯುವತಿ ನೀಡಿದ ದೂರಿನಂತೆ ಬಪ್ಪಳಿಗೆ ನಿವಾಸಿ ಕೃಷ್ಣ ಎಂಬವರ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕೃಷ್ಣ ಹಾಗೂ ಯುವತಿಗೆ ಹೈ ಸ್ಕೂಲ್ ನಿಂದಲೇ ಪರಿಚಯವಿದ್ದು ಬಳಿಕ ಪರಸ್ಪರ ಪ್ರೀತಿಸುತ್ತಿದ್ದು 2024 ರ ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ಬರ ಹೇಳಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಬಳಿಕ 2025 ಜನವರಿಯಲ್ಲಿ ಮನೆಗೆ ಬರಲು ಹೇಳಿ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಯುವಕನ ವಿರುದ್ಧಪ್ರಕರಣ ದಾಖಲು Read More »

ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಕಾವು ನಿವಾಸಿ ಸತೀಶ್‍ ಕುಮಾರ್ ನಿಧನ

ಪುತ್ತೂರು: ಕುಂಬ್ರದ ಕಾವು ನಿವಾಸಿ ಸತೀಶ್ ಕುಮಾರ್ ಹೃದಯಘಾತದಿಂದ ಬೆಂಗಳೂರಿನಲ್ಲಿ ಇಂದು ನಿಧನರಾದರು. ಸತೀಶ್‍ ಕುಮಾರ್ ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಮಾಜಿ ಪಿಸಿಎನ್ ಕೇಬಲ್ ನೆಟ್ವರ್ಕ್ ಪಾಟ್ನರ್, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಮಾಜಿ ಸದಸ್ಯ ಆಗಿದ್ದರು. ಮೃತರು ತಾಯಿ, ಮಕ್ಕಳಾದ ಅನಿರುದ್ಧ, ಅನುರಾಗ್ ಮತ್ತು ಅಣ್ಣ ಬೆಂಗಳೂರಿನ ಹೊಟೇಲ್ ಉದ್ಯಮಿ ಹರೀಶ್, ತಮ್ಮ ರಿಪಬ್ಲಿಕ್ ಟಿ.ವಿ ಚಾನಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜೇಶ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

ಮಲ್ನಾಡ್ ಇನ್ಫೋಟೆಕ್ ಸ್ಟೇಟ್ ಕೋ ಆರ್ಡಿನೇಟ‌ರ್, ಕಾವು ನಿವಾಸಿ ಸತೀಶ್‍ ಕುಮಾರ್ ನಿಧನ Read More »

ಕೆಎಸ್‍ ಆರ್ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ

ಸುಳ್ಯ: ಕೆಎಸ್‍ ಆರ್‍ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ ಹೊಡದುಕೊಂಡ ಪರಿಣಾಮ ಹಲವರು ಗಾಯಗೊಂಡ ಘಟನೆ ಬುಧವಾರ ಸಂಜೆ ಸುಳ್ಯ ತಾಲೂಕಿನ ಅರಂತೋಡು ಶಾಲಾ ಮುಂಭಾಗ ನಡೆದಿದೆ. ಮಡಿಕೇರಿಯಿಂದ ಪುತ್ತೂರು ಕಡೆ ಬರುತ್ತಿದ್ದ ಬಸ್ ಎದುರಿನಿಂದ ಬಂದ ಬಸ್‌ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಗೊಂಡ ಬಸ್ ಗಳ ಪೈಕಿ ಒಂದು ಅಶ್ವಮೇಧ ಬಸ್ ಎಂದು ಹೇಳಲಾಗಿದೆ.

ಕೆಎಸ್‍ ಆರ್ ಟಿಸಿ ಬಸ್‍ ಗಳೆರಡು ಮುಖಾಮುಖಿ ಡಿಕ್ಕಿ : ಹಲವರಿಗೆ ಗಾಯ Read More »

ತುರ್ತು ಪರಿಸ್ಥಿತಿಯ ಕರಾಳತೆಯನ್ನು ಅರಿವಾಗಿಸಲು ಸಂವಿಧಾನ್ ಹತ್ಯಾ ದಿವಸ್ ಆಚರಣೆ : ಅಮಿತ್ ಶಾ

ನವದೆಹಲಿ: ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಜನರಿಗೆ ಅರಿವಾಗಿಸಲು ಪ್ರಧಾನಿ ಮೋದಿ ಸರ್ಕಾರ ‘ಸಂವಿಧಾನ ಹತ್ಯಾ ದಿನ’ವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಇಂದಿಗೆ ದೇಶದಲ್ಲಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿ 50 ವರ್ಷ ಕಳೆದಿದೆ. ಆಳುವವರು ಸರಿವಾಧಿಕಾರಿಗಳಾದರೆ ಅವರನ್ನು ಅಧಿಕಾರದಿಂದ ಉರುಳಿಸುವ ಶಕ್ತಿಯನ್ನು ಜನರು ಹೊಂದಿದ್ದಾರೆ. ಅದನ್ನು ಈ ದಿನ ನೆನಪು ಮಾಡಿಸುತ್ತದೆ

ತುರ್ತು ಪರಿಸ್ಥಿತಿಯ ಕರಾಳತೆಯನ್ನು ಅರಿವಾಗಿಸಲು ಸಂವಿಧಾನ್ ಹತ್ಯಾ ದಿವಸ್ ಆಚರಣೆ : ಅಮಿತ್ ಶಾ Read More »

ಶಿಶಿಲದಲ್ಲಿ ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನ ಜಲಾವೃತ | ಗರ್ಭಗುಡಿಗೆ ನುಗ್ಗಿದ ನೀರು

ಶಿಶಿಲ: ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನ ಜಲಾವೃತವಾಗಿದ್ದು, ಗರ್ಭಗುಡಿಗೆ ನೀರು ನುಗ್ಗಿದೆ. ಶಿಶಿಲೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದ್ದು, ಜನರಲ್ಲಿ ಭೀತಿಯನ್ನು ಉಂಟುಮಾಡಿದೆ. ಭಾರೀ ಮಳೆಯಿಂದಾಗಿ ಕಪಿಲಾ ನದಿಯಲ್ಲಿ ಉಂಟಾದ ಪ್ರವಾಹ ದೇವಸ್ಥಾನದ ಒಳಗೆ ನುಗ್ಗಿ, ಪವಿತ್ರ ಗರ್ಭಗುಡಿಗೂ ಪ್ರವೇಶಿಸಿದೆ ಎನ್ನಲಾಗಿದೆ. ದೇವಳದ ಪಕ್ಕದಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ದೇವಾಲಯದ ಸಂಪರ್ಕಮಾರ್ಗವಾಗಿರುವ ಕಿಂಡಿ ಆಣೆಕಟ್ಟಿನು ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸದ್ಯಕ್ಕೆ ತೂಗುಸೇತುವೆಯವರೆಗೂ ನೀರು ಹರಿಯುತ್ತಿದೆ. ಪ್ರವಾಹದ ವೇಗ ಹಾಗೂ

ಶಿಶಿಲದಲ್ಲಿ ಭಾರೀ ಮಳೆಗೆ ಶಿಶಿಲೇಶ್ವರ ದೇವಸ್ಥಾನ ಜಲಾವೃತ | ಗರ್ಭಗುಡಿಗೆ ನುಗ್ಗಿದ ನೀರು Read More »

ಕ್ರೈಸ್ತ ದಫನ ಭೂಮಿಯ ಸಮಾಧಿ ಹಾನಿಗೊಳಿಸಿದ ದುಷ್ಕರ್ಮಿಗಳು : ಪ್ರಕರಣ ದಾಖಲು

ಪುತ್ತೂರು: ಕ್ರೈಸ್ತ ದಫನ ಭೂಮಿಯ ಸಮಾಧಿಯೊಂದನ್ನು ದುಷ್ಕರ್ಮಿಗಳು ಒಡೆದು ಹಾನಿ ಮಾಡಿದ ಘಟನೆ ಜೂನ್‍ 14 ರಂದು ನಡೆದಿದ್ದು, ಈ ಕುರಿತು ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರಿನ ಆನೆಮಜಲು ಪರಿಸರದಲ್ಲಿ ಜೂನ್ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ರೈಸ್ತ ದಫನ ಭೂಮಿಯ ಸಮಾಧಿ ಹಾನಿಗೊಳಿಸಿದ ದುಷ್ಕರ್ಮಿಗಳು : ಪ್ರಕರಣ ದಾಖಲು Read More »

ನಾಳೆ (ಜೂ.26) : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ

ಪುತ್ತೂರು: ತಾಲೂಕಿನ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಾಳೆ(ಜೂ.26) ಸಂಸ್ಥೆಯ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆಯಲಿದೆ. ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್ ಜಯರಾಮ್ ಕೆದಿಲಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಅಂಬಿಕಾ ವಿದ್ಯಾಸಂಸ್ಥೆ ಸದಸ್ಯ ಕೆ.ಸುರೇಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಾಂದೀಪನಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಸ್ .ಜಿ ಕೃಷ್ಣ ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ತಿಳಿಸಿದ್ದಾರೆ.

ನಾಳೆ (ಜೂ.26) : ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಸಂಸ್ಥಾಪಕರ ದಿನಾಚರಣೆ ಮತ್ತು ಪುಸ್ತಕ ಬಿಡುಗಡೆ Read More »

error: Content is protected !!
Scroll to Top