ತುರ್ತು ಪರಿಸ್ಥಿತಿಯ ವಿರುದ್ಧ ನಿರ್ಣಯ ಮಂಡಿಸಿದ ಕೇಂದ್ರ ಸಚಿವ ಸಂಪುಟ

ನವದೆಹಲಿ: ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಣಯ ಮಂಡನೆ ಮಾಡಿದೆ. ಇದೇ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯಿಂದ ಸಂವಿಧಾನದ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಳೆದುಕೊಂಡ ಮತ್ತು ಊಹಿಸಲಾಗದ ಭಯಾನಕತೆಗಳಿಗೆ‌ ಒಳಗಾದವರಿಗೆ ಗೌರವ ಸಲ್ಲಿಕೆಯ ಸಲುವಾಗಿ 2 ನಿಮಿಷಗಳ ಮೌನಾಚರಣೆಯನ್ನು ಆಚರಿಸಲಾಯಿತು. ಆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾತನಾಡಿದ್ದು, ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಖಂಡನೆ ವ್ಯಕ್ತಪಡಿಸುವ ನಿರ್ಣಯವನ್ನು […]

ತುರ್ತು ಪರಿಸ್ಥಿತಿಯ ವಿರುದ್ಧ ನಿರ್ಣಯ ಮಂಡಿಸಿದ ಕೇಂದ್ರ ಸಚಿವ ಸಂಪುಟ Read More »

ಆಪರೇಷನ್‌ ಸಿಂದೂರ : ಇನ್ನೋರ್ವ ಪಾಕ್‌ ಗೂಢಚಾರ ಸೆರೆ

ನೌಕಾ ನೆಲೆಯ ಮಾಹಿತಿ ರವಾನಿಸಿದ್ದ ಪಾಕ್‌ ಏಜೆಂಟ್‌ ನವದೆಹಲಿ: ಆಪರೇಷನ್‌ ಸಿಂದೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ. ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್ ಸೆರೆಯಾದ ಪಾಕ್‌ ಏಜೆಂಟ್‌. ಈತ ನೌಕಾಪಡೆ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಡಾಕ್‌ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ವಿಶಾಲ್‌ ಯಾದವ್ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ.

ಆಪರೇಷನ್‌ ಸಿಂದೂರ : ಇನ್ನೋರ್ವ ಪಾಕ್‌ ಗೂಢಚಾರ ಸೆರೆ Read More »

ಉಗ್ರವಾದವನ್ನು ಭಾರತ ಸಹಿಸುವುದಿಲ್ಲ: ರಾಜನಾಥ್ ‌ಸಿಂಗ್

ನವದೆಹಲಿ: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉಗ್ರ ಕೃತ್ಯಗಳ ಬಗ್ಗೆ ಎಸ್‌ಸಿ‌ಒ ಸದಸ್ಯ ರಾಷ್ಟ್ರಗಳು ಮಾತನಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಭೆಯಲ್ಲಿ ಪಾಕ್ ನಡೆಸಿದ ಪಹಲ್ಗಾಮ್ ದಾಳಿಯ ಬಗ್ಗೆಯೂ ಮಾತನಾಡಿದ ಅವರು, ಇದಕ್ಕೆ ಪ್ರತ್ಯುತ್ತರ ಎಂಬಂತೆ ಭಾರತ ನಡೆಸಿದ ಕಾರ್ಯಾಚರಣೆ ಆಪರೇಶನ್ ಸಿಂಧೂರ್ ಬಗೆಗೂ ಉಲ್ಲೇಖಿಸಿದರು‌. ಗಡಿಯಾಚೆಗಿನ ಮತ್ತು ಗಡಿಯೊಳಗಿವ ಪಾಕಿಸ್ತಾನದ ಭಯೋತ್ಪಾದಕ ಮೂಲಸೌಕರ್ಯ ನಾಶ ಮಾಡಲು 

ಉಗ್ರವಾದವನ್ನು ಭಾರತ ಸಹಿಸುವುದಿಲ್ಲ: ರಾಜನಾಥ್ ‌ಸಿಂಗ್ Read More »

ಅಸುರಕ್ಷಿತ ಔಷಧಗಳನ್ನು ನಿಷೇಧಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕರ್ನಾಟಕ ಸರ್ಕಾರ ಅಸುರಕ್ಷಿತ ಔಷಧಗಳು ಮತ್ತು ಕಾಂತಿವರ್ಧಕಗಳ ಪಟ್ಟಿಯನ್ನು ಮಾಡಿದೆ. ಮೇ ತಿಂಗಳಿನಲ್ಲಿ ಕಾಂತಿವರ್ಧಕ ಔಷಧಗಳು ಮತ್ತು ಕಾಂತಿವರ್ಧಕಗಳ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಿದ್ದು, ಸದ್ಯ ಅದರ ಫಲಿತಾಂಶಕ್ಕನುಗುಣವಾಗಿ ಅಸುರಕ್ಷಿತ ವಸ್ತುಗಳ ಪಟ್ಟಿ ಮಾಡಿರುವುದಾಗಿದೆ. ರಾಜ್ಯ ಮತ್ತು ಹೊರ ರಾಜ್ಯಗಳ ಕಂಪನಿಗಳ ಔಷಧಿಗಳೂ ಇದರಲ್ಲಿ ಸೇರಿವೆ. ಅವುಗಳನ್ನು ಮಾರಾಟ ಮಾಡದಂತೆಯೂ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇವುಗಳ ಸಾಗಾಟ, ದಾಸ್ತಾನು, ಮಾರಾಟದ ಜೊತೆಗೆ ಬಳಕೆ ಮಾಡುವುದನ್ನೂ ನಿಷೇಧ ಮಾಡಲಾಗಿದೆ. ಅಸುರಕ್ಷಿತ ಔಷಧಗಳ ಪಟ್ಟಿ: ಕಂಪೌಂಡ್ ಸೋಡಿಯಂ ಲ್ಯಾಕ್ಟೇಟ್

ಅಸುರಕ್ಷಿತ ಔಷಧಗಳನ್ನು ನಿಷೇಧಿಸಿದ ಆರೋಗ್ಯ ಇಲಾಖೆ Read More »

ಕರಾಳ ದಿನಗಳು ಮತ್ತೊಮ್ಮೆ ಮರುಕಳಿಸಲು ಅವಕಾಶ ನೀಡಬಾರದು : ರಾಧಾ ಮೋಹನದಾಸ್ ಅಗರ್ವಾಲ್‍ | ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್- ಕರಾಳ ಇತಿಹಾಸಕ್ಕೆ 50 ವರ್ಷ ಗಳು’ ಕಾರ್ಯ ಕ್ರಮ

ಮಂಗಳೂರು: ಜಾಗೃತ ಹಾಗೂ ಸಂಘಟಿತ ಜನತೆಯೇ ಪುಜಾಪ್ರಭುತ್ವದ ನಿಜವಾದ ಶಕ್ತಿ. ನಾಗರಿಕರು ಎಚ್ಚರವಾಗಿರದಿದ್ದರೆ ದೇಶದಲ್ಲಿ ಅಳುಕಿನ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್‍ ಹೇಳಿದರು. ಅವರು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬುಧವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್- ಕರಾಳ ಇತಿಹಾಸಕ್ಕೆ 50 ವರ್ಷ ಗಳು’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‘ಪ್ರಭುತ್ವವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ದೇಶವೂ ಮತ್ತೆ ಪರಕೀಯತೆಯತ್ತ

ಕರಾಳ ದಿನಗಳು ಮತ್ತೊಮ್ಮೆ ಮರುಕಳಿಸಲು ಅವಕಾಶ ನೀಡಬಾರದು : ರಾಧಾ ಮೋಹನದಾಸ್ ಅಗರ್ವಾಲ್‍ | ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್- ಕರಾಳ ಇತಿಹಾಸಕ್ಕೆ 50 ವರ್ಷ ಗಳು’ ಕಾರ್ಯ ಕ್ರಮ Read More »

ಜೆಲ್ಲಿ ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ : ಇಬ್ಬರ ಬಂಧನ

ಬೆಂಗಳೂರು : ಈಗ ಹೊಸ ಮಾದರಿಯ ಜೆಲ್ಲಿ ಗಾಂಜಾ ಎಂಟ್ರಿ ಕೊಟ್ಟಿದೆ. ಜೆಲ್ಲಿ ಚಾಕೊಲೇಟ್​​ನಲ್ಲಿ ಗಾಂಜಾ ಮಿಕ್ಸ್ ಮಾಡಿ ಮಾರಾಟ ಮಾಡಲಾಗುತ್ತಿದ್ದು, ಮೆಡಿಕಲ್ ಹಾಗೂ ಇಂಜಿನಿಯರಿಂಗ್​​ ವಿದ್ಯಾರ್ಥಿಗಳೇ ಇದರ ಗ್ರಾಹಕರು. ಈ ಬಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ಜೆಲ್ಲಿ ಗಾಂಜಾ ಗ್ಯಾಂಗನ್ನು ಬಂಧಿಸಿದ್ದಾರೆ. ಮೊಹಮದ್ ಜಾಹೀದ್ ಹಾಗೂ ಇಸ್ಮಾಯಿಲ್ ಅದ್ನಾನ್ ಬಂಧಿತ ಆರೋಪಿಗಳು. ತಲೆಮರೆಸಿಕೊಂಡ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಬ್ಯಾಟರಾಯನಪುರ ಇನ್ಸ್‌ಪೆಕ್ಟರ್ ಕೆ.ಜೀವನ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಮಾಡಿದ್ದು, ಒಟ್ಟು

ಜೆಲ್ಲಿ ಚಾಕೊಲೇಟ್‌ ರೂಪದಲ್ಲಿ ಗಾಂಜಾ ಮಾರಾಟ : ಇಬ್ಬರ ಬಂಧನ Read More »

ಮಣ್ಣಗುಡ್ಡೆಯಲ್ಲಿ ಮತ್ತೆ ಭೂ ಕುಸಿತ | ರಸ್ತೆ ಮೇಲೆ ಮಣ್ಣಿನ ರಾಶಿ; ಸಂಚಾರಕ್ಕೆ ತಡೆ

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿತದ ಪರಿಣಾಮ ರಸ್ತೆಯಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸುಗಮ ಸಂಚಾರಕ್ಕೆ ತಡೆ ಉಂಟಾಗಿದೆ. ಮಂಗಳವಾರ ರಾತ್ರಿ ಕುಸಿತ ಸಂಭವಿಸಿದ ಸ್ಥಳದ ಸಮೀಪವೇ ಮತ್ತಷ್ಟು ಭೂಕುಸಿತವಾಗಿದೆ. ಮಂಗಳವಾರ ಸಂಭವಿಸಿದ ಭೂಕುಸಿತದಿಂದ ಭಾರಿ ಪ್ರಮಾಣದ ಮಣ್ಣು ಮತ್ತು ಕಲ್ಲುಬಂಡೆಗಳು ರಸ್ತೆಗೆ ಉರುಳಿದ್ದು, ನಿನ್ನೆಯಷ್ಟೇ ಅದನ್ನು ತೆರವುಗೊಳಿಸುವ ಕಾರ್ಯಾಚರಣೆ ಪೂರ್ತಿಯಾಗಿತ್ತು. ಅದರ ಬೆನ್ನಿಗೆ ಇಂದು ಮತ್ತೆ ಕುಸಿದಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ

ಮಣ್ಣಗುಡ್ಡೆಯಲ್ಲಿ ಮತ್ತೆ ಭೂ ಕುಸಿತ | ರಸ್ತೆ ಮೇಲೆ ಮಣ್ಣಿನ ರಾಶಿ; ಸಂಚಾರಕ್ಕೆ ತಡೆ Read More »

ಜಾನುವಾರು ರಕ್ಷಣೆ ನೆಪದಲ್ಲಿ ಹಣ ವಸೂಲಿ : ಮಹಿಳೆ ಸಹಿತ ಏಳು ಮಂದಿ ಸೆರೆ

ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರಿಂದ ಹಣ ವಸೂಲಿ ದಂಧೆ ಮೈಸೂರು: ಜಾನುವಾರು ರಕ್ಷಣೆ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಮಹಿಳೆ ಸೇರಿ ಏಳು ಮಂದಿಯನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರೆಲ್ಲ ಹಿಂದೂ ರಾಷ್ಟ್ರ ರಕ್ಷಣಾ ಪಡೆಯ ಕಾರ್ಯಕರ್ತರು ಎನ್ನಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸಹಿತ ಏಳು ಮಂದಿಯನ್ನು ಮೈಸೂರಿನ ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಈ ಘಟನೆ ನಡೆದಿದೆ. ಹಿಂದೂ ಸಂಘಟನೆ ಹೆಸರಿನಲ್ಲಿ

ಜಾನುವಾರು ರಕ್ಷಣೆ ನೆಪದಲ್ಲಿ ಹಣ ವಸೂಲಿ : ಮಹಿಳೆ ಸಹಿತ ಏಳು ಮಂದಿ ಸೆರೆ Read More »

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ : ತಪ್ಪಿದಲ್ಲಿ ‌ಕಠಿಣ ಕ್ರಮ

ಬೆಂಗಳೂರು: ಆಡಳಿತದಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡುವಂತೆ ರಾಜ್ಯದ ಎಲ್ಲಾ ಇಲಾಖೆಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ 60% ಕನ್ನಡ ಕಡ್ಡಾಯ ಎಂಬ ಆದೇಶ ಈಗಾಗಲೇ ಚಾಲ್ತಿಯಲ್ಲಿದೆ. ಇದು ಸಮರ್ಪಕವಾಗಿ ಇನ್ನೂ ಜಾರಿಯಾಗಿಲ್ಲ. ಹೀಗಿರುವಾಗಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಇಲಾಖೆಗಳಲ್ಲಿಯೂ ಕನ್ನಡ ಕಡ್ಡಾಯ ಎಂಬ ಸುತ್ತೋಲೆ ಹೊರಡಿಸಿರುವುದಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ‌ಸರ್ಕಾರ ನೀಡಿದೆ. ಈ ನಿಯಮಾನುಸಾರ ಕನ್ನಡದಲ್ಲಿ ಬರುವ

ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಕಡ್ಡಾಯ : ತಪ್ಪಿದಲ್ಲಿ ‌ಕಠಿಣ ಕ್ರಮ Read More »

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ : ವಿಟ್ಲ ಎಂಎಸ್‍ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಆಯ್ಕೆ

ಪುತ್ತೂರು: ವಿಟ್ಲ ಎಂಎಸ್‍ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ತುಮಕೂರು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜು.26 ರಿಂದ 30 ರ ತನಕ ನಡೆಯುವ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಬುಧವಾರ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಕುಮಾರಿ ಕೀರ್ತಿ ವಿಟ್ಲ ಪಡ್ನೂರು ಗ್ರಾಮ ಕುಕ್ಕಿಲ ಮನೆ ವನಿತಾ ಹಾಗೂ ಲಕ್ಷ್ಮಣ ಗೌಡ ದಂಪತಿ ಪುತ್ರಿಯಾಗಿದ್ದಾರೆ. ಇವರ ಕ್ರೀಡಾ ಸಾಧನೆಯು ಯಶಸ್ವಿಯಾಗಿ ಪ್ರಜ್ವಲಿಸುವಂತೆ  ಶ್ರೀ ದೇವರು ಕರುಣಿಸಲಿ.

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟ : ವಿಟ್ಲ ಎಂಎಸ್‍ ಎ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಆಯ್ಕೆ Read More »

error: Content is protected !!
Scroll to Top