‘ಅಪ್ಪನ ಬಳಿಗೆ ಓಡುವುದು ಬಿಟ್ಟು ಬೇರೆ ದಾರಿ ಇಲ್ಲ’ : ಇಸ್ರೇಲ್ ವಿರುದ್ಧ ಇರಾನ್ ಸಚಿವನ ಹೇಳಿಕೆ

ಟೆಹ್ರಾನ್: ಇರಾನ್ – ಇಸ್ರೇಲ್ ನಡುವೆ ಕದನ ವಿರಾಮದಲ್ಲಿದ್ದರೂ ಉಭಯ ರಾಷ್ಟ್ರಗಳ ಕೆಸರೆರಚಾಟ ಮಾತ್ರ ನಿಂತಿಲ್ಲ. ಇಸ್ರೇಲ್ ವಿರುದ್ಧ ಮಾತಿನ ಚಾಟಿ ಬೀಸಿರುವ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಖ್ಚಿ, ಇರಾನಿನ ಕ್ಷಿಪಣಿಗಳಿಂದ ನಾಶವಾಗುವುದನ್ನು ತಪ್ಪಿಸಲು ಇಸ್ರೇಲ್‌ಗೆ ‘ಅಪ್ಪನ ಬಳಿಗೆ ಓಡುವುದು ಬಿಟ್ಟು ಬೇರೆ ದಾರಿ ಇಲ್ಲ’ ಎಂದು ಅಮೇರಿಕಾ‌ವನ್ನು ಉದ್ದೇಶಿಸಿ ಹೇಳಿದ್ದಾರೆ. ಹಾಗೆಯೇ ಇರಾನ್ ಜೊತೆಗೆ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುವ ಬಗ್ಗೆ ಅಮೆರಿಕಾ ಗಂಭೀರವಾಗಿದ್ದರೆ, ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಮೇಲೆ ಅಗೌರವದ ಸ್ವರ ಬಳಕೆ […]

‘ಅಪ್ಪನ ಬಳಿಗೆ ಓಡುವುದು ಬಿಟ್ಟು ಬೇರೆ ದಾರಿ ಇಲ್ಲ’ : ಇಸ್ರೇಲ್ ವಿರುದ್ಧ ಇರಾನ್ ಸಚಿವನ ಹೇಳಿಕೆ Read More »

ಸಾಮೆತ್ತಡ್ಕ ನಿವಾಸಿ ಭರತ್ ಬಿ.ಜೆ. ನಿಧನ

ಪುತ್ತೂರು: ಸಾಮೆತ್ತಡ್ಕ ನಿವಾಸಿ ಭರತ್ ಬಿ.ಜೆ. (36ವ) ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸಾಮೆತ್ತಡ್ಕ ನಿವಾಸಿ ಜಯಂತ್ ಬಿ. ಅವರ ಪುತ್ರರಾಗಿರುವ ಅವರು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಒಂದೂವರೆ ವರ್ಷದ ಮಗು, ಸಹೋದರನನ್ನು ಅಗಲಿದ್ದಾರೆ.

ಸಾಮೆತ್ತಡ್ಕ ನಿವಾಸಿ ಭರತ್ ಬಿ.ಜೆ. ನಿಧನ Read More »

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಾಗಾರ

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಪುತ್ತೂರು ನಗರಠಾಣೆ ಸಬ್‍ ಇನ್‍ ಸ್ಪೆಕ್ಟರ್ ಆಂಜನೇಯ ರೆಡ್ಡಿ ಕಾರ್ಯಾಗರ ಉದ್ಘಾಟಿಸಿ, ಮಕ್ಕಳು ಅತೀ ವೇಗವಾಗಿ ಮಾದಕವಸ್ತುಗಳಿಗೆ ಬಲಿಪಶುವಾಗುತ್ತಿದ್ದಾರೆ. ಆದ್ದರಿಂದ ಮಕ್ಕಳು ಆದಷ್ಟು ಮಾದಕ ವಸ್ತುಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸಾಮಾಜಿಕ ಜಾಲತಾಣಗಳಿಂದ ದೂರವಾಗಿರಬೇಕು. ಮಕ್ಕಳು ದುಷ್ಚಟಗಳಿಂದ ದೂರವಿರಲು ಏಕಾಗ್ರತೆ ಮತ್ತು ಒಳ್ಳೆಯ ವಿಷಯಗಳನ್ನು ಗ್ರಹಿಸಿ, ಪಾಠದ ಬಗ್ಗೆ ಹೆಚ್ಚು ಗಮನಹರಿಸಿಬೇಕು ಎಂದು

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ಕಾರ್ಯಾಗಾರ Read More »

ಬಾಂಗ್ಲಾ ದೇಶದಲ್ಲಿ ಹಿಂದೂ ಧರ್ಮೀಯರ ದುರ್ಗಾ ದೇವಾಲಯ ಧ್ವಂಸ : ಆಕ್ರೋಶ‌ ವ್ಯಕ್ತಪಡಿಸಿದ ಭಾರತ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ಮುಂದುವರೆದಿದ್ದು, ಢಾಕಾದ ಖಿಲ್ಖೇತ್ ಪ್ರದೇಶದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದುರ್ಗಾ ದೇವಾಲಯವನ್ನು ಧ್ವಂಸ ಮಾಡಲಾಗಿದೆ. ಈ ಘಟನೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಸಿಂಗ್ ಜೈ ಸ್ ವಾಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೃತ್ಯ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಘಾಸಿ ‌ಮಾಡಿದೆ. ಇದನ್ನು ಸಾಮಾನ್ಯ ಘಟನೆ ಎಂದು ಹಗುರವಾಗಿ ಪರಿಗಣಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ಭೂ ಕಬಳಿಕೆಯ ವಿಷಯವಲ್ಲ. ಬದಲಾಗಿ

ಬಾಂಗ್ಲಾ ದೇಶದಲ್ಲಿ ಹಿಂದೂ ಧರ್ಮೀಯರ ದುರ್ಗಾ ದೇವಾಲಯ ಧ್ವಂಸ : ಆಕ್ರೋಶ‌ ವ್ಯಕ್ತಪಡಿಸಿದ ಭಾರತ Read More »

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 5.5 ಕೋಟಿ ಭಕ್ತರ ಭೇಟಿ

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಿ ಲೋಕಾರ್ಪಣೆಯಾದ ಬಳಿಕ ಅಲ್ಲಿಗೆ ದೇಶ ವಿದೇಶಗಳಿಂದ ಯಾತ್ರಿಕರ ದಂಡು ಹರಿದು ಬಂದಿದೆ. ಈವರೆಗೆ ಶ್ರೀರಾಮನ ದರ್ಶನಕ್ಕೆ ಸುಮಾರು 5.5 ಕೋಟಿಗೂ ಅಧಿಕ ಜನರು ಭೇಟಿ ನೀಡಿದ್ದಾಗಿ ಉತ್ತರ ಪ್ರದೇಶದ ಸರ್ಕಾರ ಮಾಹಿತಿ ನೀಡಿದೆ. ಸುಮಾರು 4.5 ಲಕ್ಷಕ್ಕೂ ಅಧಿಕ ಗಣ್ಯರು ಶ್ರೀರಾಮ ಮಂದಿರಕ್ಕೆ ಬಂದು ಹೋಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯಾವುದೇ ಭಕ್ತರಿಗೂ ‌ಸಮಸ್ಯೆಯಾಗದ ನೆಲೆಯಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿದ್ದು, ಅಲ್ಲಿನ ವ್ಯವಸ್ಥೆಗಳ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ 5.5 ಕೋಟಿ ಭಕ್ತರ ಭೇಟಿ Read More »

ತಾಸೆ ಬಳಗದಲ್ಲಿ ಗುರುತಿಸಿಕೊಂಡ ರಕ್ಷಿತ್ ಜೋಗಿ ನಿಧನ

ಪುತ್ತೂರು: ಅನಾರೋಗ್ಯದಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ ಕೀರ್ತಿ ಯಾನೆ ರಕ್ಷಿತ್ ಜೋಗಿ (30) ಮೃತಪಟ್ಟ ಯುವಕ. ಕೆಮ್ಮಿಂಜೆ ಬಾಡಿಗೆ ಮನೆಯಲ್ಲಿ ವಾಸವಿದ್ದ ರಕ್ಷಿತ್ ರವರು ಹುಲಿ ವೇಷದ ಸಂದರ್ಭ ತಾಸೆಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಿದ್ದರು ಮತ್ತು ನೇಮ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯಾಂಡ್ ನಲ್ಲಿ ಡೋಲು ಬಾರಿಸುತ್ತಿದ್ದರು. ಆರೋಗ್ಯದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರು ತಾಯಿ, ಅಜ್ಜಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.

ತಾಸೆ ಬಳಗದಲ್ಲಿ ಗುರುತಿಸಿಕೊಂಡ ರಕ್ಷಿತ್ ಜೋಗಿ ನಿಧನ Read More »

ಸಾಮಾಜಿಕ ಶಾಂತಿ ಕದಡುವವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಲು ಪೊಲೀಸರಿಗೆ ಸಿಎಂ ‌ಸಿದ್ದರಾಮಯ್ಯ ಸೂಚನೆ

ಬೆಂಗಳೂರು: ದ್ವೇಷ ಭಾಷಣದ ಮೂಲಕ ಸಾಮಾಜಿಕ ಶಾಂತಿ, ಸಾಮರಸ್ಯ ಕದಡುವವರ ವಿರುದ್ಧ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸುವಂತೆ ಸಿಎಂ ‌ಸಿದ್ದರಾಮಯ್ಯ ಆಜ್ಞಾಪಿಸಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು. ಸಾರ್ವಜನಿಕ ವಲಯದಲ್ಲಿ ಶಾಂತಿ ಭಂಗ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕೋಮು ಸಾಮರಸ್ಯ ಕದಡುವವರ ವಿರುದ್ಧ, ದ್ವೇಷ ಹರಡುವವರ ವಿರುದ್ದ ದೂರುಗಳು ಬಂದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಂತಹ

ಸಾಮಾಜಿಕ ಶಾಂತಿ ಕದಡುವವರ ವಿರುದ್ಧ ಸುಮೊಟೋ ಕೇಸ್ ದಾಖಲಿಸಲು ಪೊಲೀಸರಿಗೆ ಸಿಎಂ ‌ಸಿದ್ದರಾಮಯ್ಯ ಸೂಚನೆ Read More »

ಕೋಡಿಮಠದ ಸ್ವಾಮೀಜಿಯ ಸರ, ಉಂಗುರ ಕದ್ದ ಕಳ್ಳ ಸೆರೆ

ರೈಲಿನಲ್ಲಿ ಪ್ರಯಾಣಿಸುವಾಗ ಬ್ಯಾಗಿನಿಂದ ಕಳವಾಗಿದ್ದ ಆಭರಣ ಹಾಸನ : ದೇಶ-ಕಾಲದ ಬಗ್ಗೆ ಭವಿಷ್ಯ ನುಡಿದು ಖ್ಯಾತರಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷಗಳ ಹಿಂದೆ ಈತ ಕಳ್ಳತನ ನಡೆದಿತ್ತು. ಉತ್ತರಾಖಂಡದ ನೈನಿತಾಲ್ ಮೂಲದ ಜಿತೇಂದ್ರ ಕುಮಾರ್ ಎಂಬಾತ ಆರೋಪಿ. 2018ರಲ್ಲಿ ಸ್ವಾಮೀಜಿ ಬಾಗಲಕೋಟೆಯಿಂದ ಅರಸೀಕೆರೆಗೆ ರೈಲಿನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಲೆದರ್ ಬ್ಯಾಗ್‌ನಲ್ಲಿ 250

ಕೋಡಿಮಠದ ಸ್ವಾಮೀಜಿಯ ಸರ, ಉಂಗುರ ಕದ್ದ ಕಳ್ಳ ಸೆರೆ Read More »

ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಯುವಕ | ಗಂಡು ಮಗುವಿಗೆ ಜನ್ಮವಿತ್ತ ಯುವತಿ

ಪುತ್ತೂರು: ಯುವತಿಯನ್ನು ವಂಚಿಸಿ ಗರ್ಭಿಣಿಯಾಗಿಸಿ ವಂಚಿಸಿದ ಯುವಕನ ಶೋಧ ಕಾರ್ಯ ಮುಂದುವರಿದಿದ್ದು, ಈ ನಡಿಗೆ ಯುವತಿ ನಿನ್ನೆ ರಾತ್ರಿ ಗಂಡು ಮಗಿವಿಗೆ ಜನ್ಮ ನೀಡಿದ್ದಾರೆ. ಸಂತ್ರಸ್ತೆಯೂ ಜೂ 24 ರಂದು ರಾತ್ರಿ ಬಪ್ಪಳಿಗೆ ನಿವಾಸಿ ಇಂಜಿನಿಯರಿಂಗ್‍ ವಿದ್ಯಾರ್ಥಿಯೋರ್ವ ತನಗೆ ಮದುವೆಯಾಗುವುದಾಗಿ ನಂಬಿಸಿ ಇದೀಗ ಮದುವೆಯಾಗಲು ನಿರಾಕರಿಸಿರುವುದಾಗಿ ದೂರು ನೀಡಿದಂತೆ ನಗರ ಠಾಣೆಯಲ್ಲಿ ಅತ್ಯಾಚಾರ ಹಾಗೂ ನಂಬಿಕೆ ದ್ರೋಹದ ಪ್ರಕರಣ ದಾಖಲಿಸಿದ್ದರು. ಸಂತ್ರಸ್ತ ಯುವತಿಯ ತಾಯಿ ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿ ನಿಗದಿ ಮಾಡಿದ್ದರು. ಆದರೇ ನಿಗದಿತ ಸಮಯಕ್ಕೆ ಮಹಿಳೆ

ಯುವತಿಯನ್ನು ಗರ್ಭವತಿಯನ್ನಾಗಿ ಮಾಡಿ ವಂಚಿಸಿದ ಯುವಕ | ಗಂಡು ಮಗುವಿಗೆ ಜನ್ಮವಿತ್ತ ಯುವತಿ Read More »

ಮದುವೆ ಮಾಡಿಸದ ದ್ವೇಷದಲ್ಲಿ ತಾಯಿಯ ಕೊಲೆ : ಪೊಲೀಸರ ಬಳಿ ಬಾಯಿಬಿಟ್ಟ ಆರೋಪಿ

ಮಂಜೇಶ್ವರ ವರ್ಕಾಡಿಯಲ್ಲಿ ತಾಯಿಯನ್ನು ದಹಿಸಿ ಕೊಂದ ಪ್ರಕರಣ ಕಾಸರಗೋಡು : ತನಗೆ ಮದುವೆ ಮಾಡದ್ದಕ್ಕಾಗಿ ಮತ್ತು ಆಸ್ತಿಗಾಗಿ ತಾಯಿಯನ್ನು ಕೊಂದಿರುವುದಾಗಿ ವರ್ಕಾಡಿ ಕೊಲೆ ಪ್ರಕರಣದ ಆರೋಪಿ ಮೆಲ್ವಿನ್‌ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ವರ್ಕಾಡಿ ನಲ್ಲೆಂಗಿಯ ಹಿಲ್ಡಾ ಮೊಂತೇರೋ (59) ಅವರನ್ನು ಪುತ್ರನೇ ಬೆಂಕಿ ಹಚ್ಚಿ ಜಿಂವಂತ ಸುಟ್ಟುಕೊಂದ ಪ್ರಕರಣ ಭಾರಿ ಸಂಚಲನಕ್ಕೆ ಕಾರಣವಾಗಿತ್ತು. ಆರೋಪಿ ತನ್ನ ಸೋದರತ್ತೆಯನ್ನೂ ಇದೇ ಮಾದರಿ ಸಾಯಿಸಲು ಯತ್ನಿಸಿದ್ದ. ಅವರು ತಪ್ಪಿಸಿಕೊಂಡಿದ್ದರು. ಆರೋಪಿಯನ್ನು ಪೊಲೀಸರು ಬೈಂದೂರಿನಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಮಾಹಿತಿ

ಮದುವೆ ಮಾಡಿಸದ ದ್ವೇಷದಲ್ಲಿ ತಾಯಿಯ ಕೊಲೆ : ಪೊಲೀಸರ ಬಳಿ ಬಾಯಿಬಿಟ್ಟ ಆರೋಪಿ Read More »

error: Content is protected !!
Scroll to Top