ಚಾಮರಾಜನಗರದಲ್ಲಿ ಇನ್ನೊಂದು ಹುಲಿ ಸಾವು

4-5 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ ಬೆಂಗಳೂರು: ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಹುಲಿಗಳ ಹತ್ಯಾಕಾಂಡ ಹಸಿರಾಗಿರುವಾಗಲೇ ರಾಜ್ಯದಲ್ಲಿ ಇನ್ನೊಂದು ಹುಲಿ ಸಾವನ್ನಪ್ಪಿದೆ. ಚಾಮರಾಜನಗರ ಜಿಲ್ಲೆಯ ಬಂಡೀಪುರದ ಗುಂಡ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ. 4-5 ವರ್ಷದ ಹೆಣ್ಣು ಹುಲಿ ಸಹಜವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶುಕ್ರವಾರ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಕಳೇಬರ ಪತ್ತೆ ಆಗಿದೆ. ಇಂದು ವೈದ್ಯರು ಹುಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಐದು ಹುಲಿಗಳನ್ನು ವಿಷವಿಕ್ಕಿ ಸಾಯಿಸಿದ ಪ್ರಕರಣ […]

ಚಾಮರಾಜನಗರದಲ್ಲಿ ಇನ್ನೊಂದು ಹುಲಿ ಸಾವು Read More »

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸುಳ್ಳು ಮಾಹಿತಿ ನೀಡಿದರೆ ಶೇ.200 ದಂಡ

ಆದಾಯ ತೆರಿಗೆ ಸಲ್ಲಿಕೆಗೆ ಹೊಸ ನಿಯಮ ಜಾರಿ ನವದೆಹಲಿ : ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಹೊಸ ನಿಯಮ ಜಾರಿಯಾಗಿದ್ದು, ಇನ್ನು ಮುಂದೆ ರಿಟರ್ನ್ಸ್‌ ಸಲ್ಲಿಸುವಾಗ ತಪ್ಪು ಮಾಹಿತಿ ನೀಡುವ ಅಥವಾ ಆದಾಯವನ್ನು ಮರೆಮಾಚುವ ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಕಠಿಣ ಎಚ್ಚರಿಕೆ ನೀಡಿದೆ. ತೆರಿಗೆದಾರರು ಸುಳ್ಳು ಮಾಹಿತಿಗಳನ್ನು ತೋರಿಸಿದರೆ ಅಥವಾ ಆದಾಯ ಮರೆಮಾಚಿದರೆ ಶೇ. 200ರವರೆಗೆ ದಂಡ, ವಾರ್ಷಿಕ ಶೇ. 24ವರೆಗೆ ಬಡ್ಡಿ ವಿಧಿಸಲಾಗುತ್ತದೆ. ಅಲ್ಲದೇ ಸೆಕ್ಷನ್ 276ಸಿ ಅಡಿಯಲ್ಲಿ ಜೈಲು ಶಿಕ್ಷೆ ವಿಧಿಸುವ ಅವಕಾಶವೂ

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ಸುಳ್ಳು ಮಾಹಿತಿ ನೀಡಿದರೆ ಶೇ.200 ದಂಡ Read More »

ಪಹಲ್ಗಾಮ್ ದಾಳಿಯ ಉಲ್ಲೇಖವಿಲ್ಲದ ಕಾರಣ SCO ಜಂಟಿ ಘೋಷಣೆಗಳಿಗೆ ಭಾರತ ಸಹಿ ಹಾಕಿಲ್ಲ

ನವದೆಹಲಿ: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆಯ ರಕ್ಷಣಾ ಸಚಿವರ ಸಭೆಯಲ್ಲಿ ಜಂಟಿ ಘೋಷಣೆಗೆ ಸಹಿ ಮಾಡಲು ಭಾರತ ನಿರಾಕರಿಸಿತ್ತು. ಈ ಬಗೆ ಕೆಲವು ವರದಿಗಳು ಇದರಲ್ಲಿ ಬಲೂಚಿಸ್ತಾನ್ ಬಿಕ್ಕಟ್ಟಿನ ಉಲ್ಲೇಖ ಇರುವುದಾಗಿ ಹೇಳಿದ್ದವು. ಇದಕ್ಕೆ ಸ್ಪಷ್ಚನೆ ನೀಡಿರುವ ಮೂಲಗಳು, ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸುವಾಗ ವಿಫಲವಾದ ಕಾರಣ ಭಾರತ ಇದಕ್ಕೆ ಸಹಿ ಹಾಕಿಲ್ಲ ಎಂದಿವೆ. ಇದರಲ್ಲಿ ಪಹಲ್ಗಾಮ್, ಬಲೂಚಿಸ್ತಾನ್ ಅಥವಾ ಉಗ್ರವಾದದ ಬಗ್ಗೆ ಯಾವುದೇ ಉಲ್ಲೇಖವಿರಲಿಲ್ಲ. ಇದು ಭಾರತವು ಸಹಿ ಹಾಕುವುದಕ್ಕೆ ಹಿಂದೆ ಸರಿಯುವ ಹಾಗೆ

ಪಹಲ್ಗಾಮ್ ದಾಳಿಯ ಉಲ್ಲೇಖವಿಲ್ಲದ ಕಾರಣ SCO ಜಂಟಿ ಘೋಷಣೆಗಳಿಗೆ ಭಾರತ ಸಹಿ ಹಾಕಿಲ್ಲ Read More »

ವಿದ್ಯಾರ್ಥಿನಿಗೆ ವಂಚಿಸಿದ ವಿದ್ಯಾರ್ಥಿ : ವಿದ್ಯಾರ್ಥಿಗಾಗಿ ಪೊಲೀಸರಿಂದ ಶೋಧಕಾರ್ಯ

ಪುತ್ತೂರು: ಪುತ್ತೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ತನ್ನ ಸಹಪಾಠಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿದ ಬಳಿಕ ವಂಚಿಸಿ ಪರಾರಿಯಾಗಿರುವ ಘಟನೆಗೆ ಸಂಬಂಧಿಸಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ದಿಢೀರ್ ರದ್ದಾದ ಘಟನೆ ಶುಕ್ರವಾರ ನಡೆದಿದೆ. ಪುತ್ತೂರಿನ ಬಪ್ಪಳಿಗೆ ನಿವಾಸಿಯಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವನಿಂದ ವಂಚನೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿರುವ ವಿದ್ಯಾರ್ಥಿನಿಯ ತಾಯಿ ಪುತ್ತೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಿಗದಿ ಪಡಿಸಿದ್ದರು. ಇದರ ಮಾಹಿತಿ ತಿಳಿದ ಪತ್ರಕರ್ತರು ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಆದರೆ ಕೊನೇಯ ಘಳಿಗೆಯಲ್ಲಿ ಪತ್ರಿಕಾಗೋಷ್ಠಿ ರದ್ದು ಪಡಿಸಲಾಗಿದೆ. ರಾಜಕೀಯ ಒತ್ತಡದಿಂದ ಪತ್ರಿಕಾಗೋಷ್ಠಿ

ವಿದ್ಯಾರ್ಥಿನಿಗೆ ವಂಚಿಸಿದ ವಿದ್ಯಾರ್ಥಿ : ವಿದ್ಯಾರ್ಥಿಗಾಗಿ ಪೊಲೀಸರಿಂದ ಶೋಧಕಾರ್ಯ Read More »

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ

ತಾಳಧ್ವಜ ರಥ ರಥ ಎಳೆಯಲು ತಳ್ಳಾಟ ನಡೆದಾಗ ಅವಘಡ ಭುವನೇಶ್ವರ : ಒಡಿಶಾದ ಪುರಿಯ ಜಗತ್ಪ್ರಸಿದ್ಧ ವಾರ್ಷಿಕ ರಥಯಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಓರ್ವ ಮೃತಪಟ್ಟು 500ಕ್ಕೂ ಅಧಿಕ ಭಕ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದಾಗ ಕಾಲ್ತುಳಿದಂಥ ಪರಿಸ್ಥಿತಿ ತಲೆದೋರಿದೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತದ ರೀತಿಯ ಘಟನೆ ಸಂಭವಿಸಿದೆ. ಲಕ್ಷಾಂತರ ಭಕ್ತರನ್ನು

ಜಗತ್ಪ್ರಸಿದ್ಧ ಪುರಿ ರಥಯಾತ್ರೆಯಲ್ಲಿ ಕಾಲ್ತುಳಿತ : ಓರ್ವ ಮೃತ, 500 ಮಂದಿಗೆ ಗಾಯ Read More »

ಕೆನರಾ ಬ್ಯಾಂಕ್‌ ಶಾಖೆಯಿಂದ 59 ಕೆಜಿ ಚಿನ್ನ ಕದ್ದ ಆರೋಪಿಗಳು ಅರೆಸ್ಟ್‌

ಬ್ಯಾಂಕ್‌ ಮ್ಯಾನೇಜರ್‌ ಕಳ್ಳರ ಗ್ಯಾಂಗಿನ ಲೀಡರ್‌ ; ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್‌ ಬೆಂಗಳೂರು : ವಿಜಯಪುರ ಜಿಲ್ಲೆಯ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮೇ 25ರಂದು ನಸುಕಿನ ಹೊತ್ತು ನಡೆದ 59 ಕೆಜಿ ಬಂಗಾರ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಆಘಾತಕಾರಿ ವಿಚಾರವೆಂದರೆ ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಈ ಕಳ್ಳತನದ ರೂವಾರಿ. ಬ್ಯಾಂಕಿನಿಂದ ಮೇ 25ರಂದು ನಸುಕಿನ ಹೊತ್ತು 58.975.94 ಕೆಜಿ ಚಿನ್ನಾಭರಣಗಳು ಮತ್ತು 5.20 ಲಕ್ಷ ನಗದು ಕಳ್ಳತನವಾಗಿತ್ತು.

ಕೆನರಾ ಬ್ಯಾಂಕ್‌ ಶಾಖೆಯಿಂದ 59 ಕೆಜಿ ಚಿನ್ನ ಕದ್ದ ಆರೋಪಿಗಳು ಅರೆಸ್ಟ್‌ Read More »

ಕಾಂಟಾ ಲಗಾ…ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಪುನೀತ್‌ ರಾಜ್‌ಕುಮಾರ್‌ ಚಿತ್ರಗಳಲ್ಲೂ ನಟಿಸಿದ್ದ ನಟಿ ಮುಂಬಯಿ: ಕಾಂಟಾ ಲಗಾ… ಹಾಡಿಗೆ ಮಾದಕವಾಗಿ ಕುಣಿದು ಆಲ್ಬಂ ಸಾಂಗ್‌ ಜಮಾನದಲ್ಲಿ ಪಡ್ಡೆಹುಡುಗರ ಕನಸಿನ ರಾಣಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಪುನೀತ್ ರಾಜ್​ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿನಲ್ಲೂ ಮಸ್ತ್‌ ಆಗಿ ಕುಣಿದಿದ್ದರು. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು. ಅವರಿಗೆ ಎದೆನೋವು

ಕಾಂಟಾ ಲಗಾ…ಖ್ಯಾತಿಯ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ Read More »

ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಕೆಂಪೇಗೌಡರು : ಸಿ.ಎಂ. ಸಿದ್ದರಾಮಯ್ಯ

ಬೆಂಗಳೂರು: ಆಧುನಿಕ ಬೆಂಗಳೂರಿನ ನಿರ್ಮಾತೃಗಳಾದ ಕೆಂಪೇಗೌಡರು ದಕ್ಷ, ದೂರದೃಷ್ಚಿಯಿದ್ದ ಒಬ್ಬ ಆಡಳಿತಗಾರ ಎಂದು ಸಿ.ಎಂ. ಸಿದ್ದರಾಮಯ್ಯ ಹೇಳಿದ್ದಾರೆ. ನಾಡಪ್ರಭು ಕೆಂಪೇಗೌಡರ ಜಯಂತಿಯ ಹಿನ್ನೆಲೆ ವಿಧಾನಸೌಧದ ಪೂರ್ವದಿಕ್ಕಿನಲ್ಲಿರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದ್ದಾರೆ. ಕೆಂಪೇಗೌಡ ಜಯಂತಿಯನ್ನು ಸರ್ಕಾರವು ಕೆಂಪೇಗೌಡ ಪ್ರಾಧಿಕಾರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಆಚರಣೆ ಮಾಡುತ್ತಿದೆ. ಇಂದು ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ಅಡಿಪಾಯ ಹಾಕಿಕೊಟ್ಟವರು ಕೆಂಪೇಗೌಡರು ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಕೆಂಪೇಗೌಡರು : ಸಿ.ಎಂ. ಸಿದ್ದರಾಮಯ್ಯ Read More »

ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ ಯಶಸ್ವಿ 6ನೇ ವರ್ಷಕ್ಕೆ ಪಾದಾರ್ಪಣೆ : ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ

ಪುತ್ತೂರು: ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ ಯಶಸ್ವಿ 6ನೇ ವರ್ಷಕ್ಕೆ ಶುಕ್ರವಾರ ಪಾದಾರ್ಪಣೆ ಮಾಡಿತು. ಕಾರ್ಯಕ್ರಮದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಗಣಹೋಮ ಹಾಗೂ ಲಕ್ಷ್ಮೀಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಪ್ರವೀಣ್‍ ಕುಂಟ್ಯಾನ, ಸತೀಶ್‍ ಪಾಂಬಾರು, ಶಾಖಾ ಅಧ್ಯಕ್ಷರಾದ ತೇಜಸ್ವಿನಿ ಕಟ್ಟಪುಣಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ, ಶಾಖಾ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.

ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖೆ ಯಶಸ್ವಿ 6ನೇ ವರ್ಷಕ್ಕೆ ಪಾದಾರ್ಪಣೆ : ಶಾಖಾ ಕಚೇರಿಯಲ್ಲಿ ಗಣಹೋಮ, ಲಕ್ಷ್ಮೀಪೂಜೆ Read More »

ಕೆಆರ್‌ಎಸ್ ‌ಸಮೀಪ ಮನರಂಜನಾ ಪಾರ್ಕ್, ಕಾವೇರಿ ಪ್ರತಿಮೆ : ಸರ್ಕಾರಕ್ಕೆ ನೊಟೀಸ್ ನೀಡಿದ ಹೈಕೋರ್ಟ್

ಬೆಂಗಳೂರು: ಕೆಆರ್‌ಎಸ್ ಸಮೀಪದಲ್ಲಿ ಮನರಂಜನಾ ಪಾರ್ಕ್ ಮತ್ತು ಕಾವೇರಿ ಆರತಿ ನಿರ್ಮಾಣ ಕಾಮಗಾರಿಗೆ. ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ನೊಟೀಸ್ ‌ಜಾರಿ ಮಾಡಿ ವಿವರಣೆ ಕೇಳಿದೆ. ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ್ ರಾವ್, ಸಿ.ಎಂ. ಜೋಶಿ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು, ವಿವರಣೆ ಕೋರಿ ಕರ್ನಾಟಕ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೊಟೀಸ್ ನೀಡಿರುವುದಾಗಿದೆ. ಈ ಅರ್ಜಿಯಲ್ಲಿ ಅಣೆಕಟ್ಟಿನ ಸಮೀಪ 120 ಅಡಿಯ ಕಾವೇರಿ ಮೂರ್ತಿ

ಕೆಆರ್‌ಎಸ್ ‌ಸಮೀಪ ಮನರಂಜನಾ ಪಾರ್ಕ್, ಕಾವೇರಿ ಪ್ರತಿಮೆ : ಸರ್ಕಾರಕ್ಕೆ ನೊಟೀಸ್ ನೀಡಿದ ಹೈಕೋರ್ಟ್ Read More »

error: Content is protected !!
Scroll to Top