ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಶೂಟ್‌ ಮಾಡಿದ ಕಾಮುಕ ಅರೆಸ್ಟ್‌

ಬೆಂಗಳೂರು: ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಮಾಡುತ್ತಿದ್ದ ವಿಕೃತ ಕಾಮುಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಾಜ ಮೊಯಿನುದ್ದಿನ್ ಸೆರೆಯಾಗಿರುವ ಆರೋಪಿ. ಇಲೆಕ್ಟ್ರಿಕಲ್ ಕೆಲಸ ಮಾಡಿಕೊಂಡಿದ್ದ ಚನ್ನಸಂದ್ರ ಮೂಲದ ಮೊಯಿನುದ್ದಿನ್ ಮಹಿಳೆಯರು ಸ್ನಾನ ಮಾಡುವುದನ್ನು ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ. ಕಳೆದ ಮಂಗಳವಾರ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರಲ್ಲಿ ತಾಯಿ-ಮಗಳು ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದರು. ಇದನ್ನು ಗಮನಿಸಿದ ಕಾಮುಕ ಮೊಯಿನುದ್ದಿನ್ ಕಿಟಕಿ ಮೂಲಕ ಕದ್ದು ಮುಚ್ಚಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ. ಈ ವೇಳೆ ಈತ ವಿಡಿಯೋ […]

ಮಹಿಳೆಯರು ಸ್ನಾನ ಮಾಡುವುದನ್ನು ವಿಡಿಯೋ ಶೂಟ್‌ ಮಾಡಿದ ಕಾಮುಕ ಅರೆಸ್ಟ್‌ Read More »

ಏಕದಿನ ತಂಡದ ನಾಯಕತ್ವ ಹೊಣೆಯೂ ಶುಭಮನ್‌ ಗಿಲ್‌ ಹೆಗಲಿಗೆ

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಕ್ರಿಕೆಟ್‌ ಬದುಕು ಅಂತಿಮ ಘಟ್ಟಕ್ಕೆ ನವದೆಹಲಿ: ಮೊದಲ ಬಾರಿ ಟೆಸ್ಟ್‌ ತಂಡದ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಶುಭ್‌ಮನ್‌ ಗಿಲ್‌ ಹೆಗಲಿಗೆ ಸದ್ಯದಲ್ಲೇ ಏಕದಿನ ತಂಡದ ನಾಯಕತ್ವದ ಹೊಣೆಯೂ ಬೀಳಲಿದೆ. ಸದ್ಯದಲ್ಲೇ ಭಾರತ ಏಕದಿನ ತಂಡದ ನಾಯಕತ್ವವನ್ನೂ ಶುಭಮನ್‌ ಗಿಲ್‌ ವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರೊಂದಿಗೆ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಕ್ರಿಕೆಟ್‌ ಬದುಕು ಬಹುತೇಕ ಕೊನೆಯ ಘಟ್ಟಕ್ಕೆ ತಲುಪಿದಂತಾಗಿದೆ ಎನ್ನಲಾಗುತ್ತಿದೆ. ಶರ್ಮಾ ಮತ್ತು ಕೊಹ್ಲಿ ಇಲ್ಲದ ಟೆಸ್ಟ್‌

ಏಕದಿನ ತಂಡದ ನಾಯಕತ್ವ ಹೊಣೆಯೂ ಶುಭಮನ್‌ ಗಿಲ್‌ ಹೆಗಲಿಗೆ Read More »

ಬೆಳಾಲು ಯುವತಿಯ ಶವ ಕೆರೆಯಲ್ಲಿ ಪತ್ತೆ

ಬೆಳಾಲು: ಗ್ರಾಮದ ಕುಕ್ಕೊಟ್ಟು ನಿವಾಸಿ ಯುವತಿಯ ಶವ ಅನುಮಾನಾಸ್ಪದವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ. ಕುಕ್ಕೊಟ್ಟು ನಾಗೇಶ್ ಎಂಬವರ ಮಗಳು ವೀಣಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ವೀಣಾರವರ ಶರೀರ ಕೆರೆಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ವೀಣಾ ಮೇ 10 ರಂದು ನಾಪತ್ತೆಯಾಗಿದ್ದಾರೆಂಬ ದೂರಿನ ಹಿನ್ನಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು. ಆ ನಂತರ ಆಕೆ ಪತ್ತೆಯಾಗಿದ್ದರು. ಜೂ.11ರಂದು ಆಕೆಯ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಬೆಳಾಲು ಯುವತಿಯ ಶವ ಕೆರೆಯಲ್ಲಿ ಪತ್ತೆ Read More »

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದಿಂದ ಏಮಾಜೆ ಶಾಲೆಯಲ್ಲಿ ಪರಿಸರ  ಜಾಗೃತಿ ದಿನ ಆಚರಣೆ

ಮಾಣಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ವತಿಯಿಂದ ನೆಟ್ಲಮುಡ್ನೂರು ಗ್ರಾಮದ ಏಮಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಣಿ ವಲಯದ ಮೇಲ್ವಿಚಾರಕಿ ಆಶಾ ಪಾರ್ವತಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ,  ಶ್ರೀಕ್ಷೇತ್ರದ ವತಿಯಿಂದ  ನಡೆಸುವ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಶಾಲಾಭಿವೃದ್ಧಿ ಸಮಿತಿ  ಉಪಾಧ್ಯಕ್ಷ  ಹರೀಶ್  ಅಧ್ಯಕ್ಷತೆ ವಹಿಸಿ ಮಾತನಾಡಿ, ಪರಿಸರ ಸಂರಕ್ಷಣೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದಿಂದ ಏಮಾಜೆ ಶಾಲೆಯಲ್ಲಿ ಪರಿಸರ  ಜಾಗೃತಿ ದಿನ ಆಚರಣೆ Read More »

ಸಿಹಿತಿಂಡಿಯಲ್ಲಿ ಕೈದಿಗೆ ಡ್ರಗ್ಸ್‌ ಕೊಡಲು ಯತ್ನಿಸಿದ ಮಹಿಳೆ ವಶ

ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಮುಹಮ್ಮದ್ ಅಸ್ಕರ್ ಎಂಬಾತನಿಗೆ ಮಾದಕ ವಸ್ತು ಎಂಡಿಎಂಎ ಪೂರೈಕೆ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜು.10ರಂದು ಮಧ್ಯಾಹ್ನ ಸಂದರ್ಶಕಿಯಾಗಿ ರಮ್ಸೂನಾ ಎಂಬಾಕೆ ಬಂದಿದ್ದು, ಆಕೆ ಮುಹಮ್ಮದ್ ಅಸ್ಕರ್‌ಗೆ ನೀಡಲು ಬೇಕರಿ ತಿಂಡಿಗಳನ್ನು ಕೊಂಡೊಯ್ದಿದ್ದಳು. ಇದನ್ನು ಸಿಬ್ಬಂದಿ ಪರಿಶೀಲಿಸಿದಾಗ 5 ಸಣ್ಣ ಪೊಟ್ಟಣಗಳು ಕಂಡು ಬಂದಿವೆ. ಈ ಬಗ್ಗೆ ಸಿಬ್ಬಂದಿ ಆಕೆಯನ್ನು ವಿಚಾರಿಸಿದಾಗ ಹೊಸಂಗಡಿಯ ಹುಸೇನ್ ಎಂಬಾತ ಕೆಲವು ಪೊಟ್ಟಣಗಳನ್ನು ಕೊಟ್ಟಿದ್ದಾನೆ. ಅದನ್ನು ತಂದು

ಸಿಹಿತಿಂಡಿಯಲ್ಲಿ ಕೈದಿಗೆ ಡ್ರಗ್ಸ್‌ ಕೊಡಲು ಯತ್ನಿಸಿದ ಮಹಿಳೆ ವಶ Read More »

ಸುಳ್ಯ: 13 ವರ್ಷದ ಬಾಲಕಿ ಗರ್ಭಿಣಿ ಎಂದು ವರದಿ ಕೊಟ್ಟು ಎಡವಟ್ಟು ಮಾಡಿಕೊಂಡ ವೈದ್ಯ

ಗಂಭೀರ ಲೋಪ ಮಾಡಿದ ಡಾಕ್ಟರ್‌ ಕೂಡಲೇ ವರ್ಗಾವಣೆ, ತನಿಖೆಗೆ ಆದೇಶ ಸುಳ್ಯ: ತೀವ್ರ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಶಾಲಾ ಬಾಲಕಿಗೆ ವೈದ್ಯಾಧಿಕಾರಿಯೊಬ್ಬರು ಗರ್ಭಿಣಿ ಎಂದು ವರದಿ ನೀಡಿ ಎಡವಟ್ಟು ಮಾಡಿಕೊಂಡ ಆಘಾತಕಾರಿ ಘಟನೆ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದೂರಿನ ಬೆನ್ನಲ್ಲೇ ಈ ವೈದ್ಯಾಧಿಕಾರಿಯನ್ನು ಇಲ್ಲಿಂದ ವರ್ಗಾಯಿಸಲಾಗಿದ್ದು, ಇಡೀ ಘಟನೆಯ ತನಿಖೆಗೆ ಆದೇಶಿಸಲಾಗಿದೆ. ವೈದ್ಯಾಧಿಕಾರಿ ಎಡವಟ್ಟು ಮಾಡಿದ ವಿಚಾರವನ್ನು ಆಶಾ ಕಾರ್ಯಕರ್ತರು, ಆಸ್ಪತ್ರೆಯ ಸಿಬ್ಬಂದಿ ಹಾಗೂ ಇತರರಿಗೆ ಹೇಳಿದ್ದು, ಈ ಸುಳ್ಳು ಮಾಹಿತಿ

ಸುಳ್ಯ: 13 ವರ್ಷದ ಬಾಲಕಿ ಗರ್ಭಿಣಿ ಎಂದು ವರದಿ ಕೊಟ್ಟು ಎಡವಟ್ಟು ಮಾಡಿಕೊಂಡ ವೈದ್ಯ Read More »

ಅಹಮದಾಬಾದ್‌ ವಿಮಾನ ದುರಂತದ ಕಾರಣ ಪತ್ತೆ

ಪ್ರಾಥಮಿಕ ತನಿಖಾ ವರದಿಯಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ ನವದೆಹಲಿ : ಅಹಮದಾಬಾದ್‌ನಲ್ಲಿ ಕಳೆದ ಜೂನ್ 12ರಂದು ಏರ್ ಇಂಡಿಯಾ ವಿಮಾನ ಪತನಗೊಂಡ ಕಾರಣ ಬಹಿರಂಗವಾಗಿದೆ. ಈ ಭೀಕರ ಅಪಘಾತದ ಪ್ರಾಥಮಿಕ ತನಿಖಾ ವರದಿಯಲ್ಲಿ ವಿಮಾನ ಪತನವಗಾಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಲ್ಲಿಸಿರುವ 15 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಹಲವು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನದ ಎರಡೂ ಇಂಜಿನ್‌ಗಳು ಸ್ಥಗಿತಗೊಂಡವು. ಆ

ಅಹಮದಾಬಾದ್‌ ವಿಮಾನ ದುರಂತದ ಕಾರಣ ಪತ್ತೆ Read More »

ಬೌದ್ಧ ಮಠದ ಮೇಲೆ ಬಾಂಬ್‌ ದಾಳಿ : 30 ಮಂದಿ ಸಾವು

ಜನರು ಆಶ್ರಯಪಡೆದಿದ್ದ ಮಠದ ಮೇಲೆ ಬಾಂಬ್‌ ದಾಳಿ ನೇಪಿಡಾವ್: ಮ್ಯಾನ್ಮಾರ್‌ನ ಮಧ್ಯ ಸಾಗೈಂಗ್ ಪ್ರದೇಶದ ಬೌದ್ಧ ಮಠವೊಂದರ ಮೇಲೆ ನಡೆದ ವೈಮಾನಿಕ ಬಾಂಬ್‌ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 10 ಜನರ ಸ್ಥಿತಿ ಗಂಭೀರವಾಗಿದೆ ಎಂದು ಪ್ರತಿರೋಧ ಗುಂಪಿನ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದ ಹತ್ತಿರದ ಹಳ್ಳಿಗಳ 150ಕ್ಕೂ ಹೆಚ್ಚು ಜನರು ಆಶ್ರಯ ಪಡೆಯುತ್ತಿದ್ದ ಗ್ರಾಮದ ಮಠದ ಕಟ್ಟಡದ ಮೇಲೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಜೆಟ್

ಬೌದ್ಧ ಮಠದ ಮೇಲೆ ಬಾಂಬ್‌ ದಾಳಿ : 30 ಮಂದಿ ಸಾವು Read More »

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಅಭಾವ ಎನ್ನುವ ನೆಪದಲ್ಲಿ ಕಾಂಗ್ರೆಸ್‍ ಅಭಿವೃದ್ಧಿಯಲ್ಲಿ ಜನವಿರೋಧಿಸಿ ನೀತಿ ಮಾಡುತ್ತಿದೆ : ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಶೆಟ್ಟಿ ಉಜಿರೆಮಾರು | ಜು.14 ರಂದು ಪುತ್ತೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮರಳು, ಕೆಂಪು ಕಲ್ಲು ಅಭಾವವಿದೆ. ಕರ್ನಾಟಕ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಜನ ವಿರೋಧಿ ನೀತಿ ಮಾಡುತ್ತಿದೆ ಎಂದು ಆರೋಪಿಸಿ ಜು.14 ರಂದು ಪುತ್ತೂರು ಬಿಜೆಪಿಯಿಂದ ಪುತ್ತೂರಿನ ಕಿಲ್ಲೆ ಮೈದಾನದ ಆವರಣದ ಅಮ‌ರ್ ಜವಾನ್ ಸ್ಮಾರಕದ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ತಿಳಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಜನ ವಿರೋಧಿ ನೀತಿಗಳಿಂದಾಗಿ

ಜಿಲ್ಲೆಯಲ್ಲಿ ಮರಳು, ಕೆಂಪುಕಲ್ಲು ಅಭಾವ ಎನ್ನುವ ನೆಪದಲ್ಲಿ ಕಾಂಗ್ರೆಸ್‍ ಅಭಿವೃದ್ಧಿಯಲ್ಲಿ ಜನವಿರೋಧಿಸಿ ನೀತಿ ಮಾಡುತ್ತಿದೆ : ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಶೆಟ್ಟಿ ಉಜಿರೆಮಾರು | ಜು.14 ರಂದು ಪುತ್ತೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ Read More »

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ | ಗುರುಗಳ ಆಶೀರ್ವಾದದಿಂದ ಮಾತ್ರ ಕರ್ಮ ಬಂಧನದಿಂದ ಮುಕ್ತಿ : ಶ್ರೀಕೃಷ್ಣ ಉಪಾಧ್ಯಾಯ

ಪುತ್ತೂರು: ನಾವು ಮಾಡುವ ಪ್ರತಿ ಕೆಲಸಕ್ಕೆ ಪ್ರತಿಫಲವಿದೆ. ಜನ್ಮಜನ್ಮಾಂತರದ ಕರ್ಮಫಲ ನಮ್ಮ ಬದುಕನ್ನು ರೂಪಿಸುತ್ತದೆ. ಕರ್ಮ ಬಂಧನದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಗುರುಗಳ ಆಶೀರ್ವಾದಕ್ಕೆ ಮಾತ್ರ ಕರ್ಮ ಬಂಧನವನ್ನು ತಪ್ಪಿಸುವ ಶಕ್ತಿ ಇದೆ. ಶಿವ ಪಥವರಿಯಲು ಗುರು ಪಥವೇ ಮೊದಲು. ಅಜ್ಞಾನಾಂಧಕಾರವನ್ನು ಹೊಡೆದೋಡಿಸುವವನು ಗುರು ಎಂದು ವೇ.ಮೂ. ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು. ಅವರು ನಗರದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುವಾರ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೇದಗಳ ವಿಂಗಡಣೆ ಮಾಡಿದ, ಅಷ್ಟದಶ ಪುರಾಣ ಮುಂತಾದ ಕೃತಿಗಳನ್ನು,

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಗುರುಪೂರ್ಣಿಮೆ ಆಚರಣೆ | ಗುರುಗಳ ಆಶೀರ್ವಾದದಿಂದ ಮಾತ್ರ ಕರ್ಮ ಬಂಧನದಿಂದ ಮುಕ್ತಿ : ಶ್ರೀಕೃಷ್ಣ ಉಪಾಧ್ಯಾಯ Read More »

error: Content is protected !!
Scroll to Top