ಕೊಕ್ಕಡ ಆನೆ ದಾಳಿಗೆ  ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

ಬೆಳ್ತಂಗಡಿ: ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕದ ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ಭೇಟಿ ನೀಡಿದ ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಮೃತರ ಕುಟುಂಬಕ್ಕೆ ಸಾಂತ್ವಾನ  ಹೇಳಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರೊಂದಿಗೆ ಸಮಾಲೋಚಿಸಿ, ಮೃತರ ಕುಟುಂಬಕ್ಕೆ  ಗರಿಷ್ಠ ಪರಿಹಾರವನ್ನು ಒದಗಿಸುವ ಬಗ್ಗೆ  ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು ಹಾಗೂ ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಅರಣ್ಯ ಇಲಾಖೆಯ ವತಿಯಿಂದ ಪರಿಹಾರ ಸೌಲಭ್ಯಗಳನ್ನು ತುರ್ತಾಗಿ […]

ಕೊಕ್ಕಡ ಆನೆ ದಾಳಿಗೆ  ವ್ಯಕ್ತಿ ಮೃತ್ಯು : ಶಾಸಕಿ ಭಾಗೀರಥಿ ಮುರುಳ್ಯ ಭೇಟಿ Read More »

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ

ಬಂಗಲೆಯಲ್ಲಿದ್ದ ವಿದೇಶಿ ಯುವತಿಯೂ ಪೊಲೀಸರ ವಶ ಯಾವುದೇ ಬಾಲಿವುಡ್‌ ಸಿನೆಮಾ ಸೆಟ್‌ಗಿಂತಲೂ ಅದ್ದೂರಿಯಾಗಿದೆ ಮಂಗಳೂರಿನ ಈ ವಂಚಕನ ಬಂಗಲೆ ಮಂಗಳೂರು : ಮನೆಯೆಂದರೆ ಅದು ಮನೆಯಲ್ಲ ಭವ್ಯವಾದ ಬಂಗಲೆ. ಒಳಗಿದೆ ಯಾವುದೇ ಫೈವ್‌ಸ್ಟಾರ್‌ ಹೋಟೆಲನ್ನು ನಾಚಿಸುವಂಥ ಐಷಾರಾಮಿ ವ್ಯವಸ್ಥೆ. ಎರಡು ಮೂರು ಅಡಗುತಾಣಗಳು, ಅಲ್ಲಲ್ಲಿ ಸಿಸಿ ಕ್ಯಾಮೆರಗಳು. ರೂಮ್‌ಗಳಲ್ಲಿ ಗೋಡೆಗಳಿದ್ದರೂ ಅವುಗಳು ಕೆಲವೊಮ್ಮೆ ರಹಸ್ಯ ಕೋಣೆಗಳ ಬಾಗಿಲುಗಳೂ ಆಗುತ್ತವೆ.ಕಬೋರ್ಡ್‌ಗಳ ರೀತಿ ಕಾಣುವುದನ್ನು ತಟ್ಟಿದರೆ ಅದು ಇನ್ನೊಂದು ನಿಗೂಢ ಕೋಣೆಯತ್ತ ಸಾಗುವ ಮೆಟ್ಟಿಲುಗಳನ್ನು ತೋರಿಸುತ್ತವೆ. ಮನೆಯ ಗೇಟ್‌ ತೆರೆದುಕೊಳ್ಳುವ

ಮಂಗಳೂರು : ಉದ್ಯಮಿಗಳಿಗೆ 200 ಕೋಟಿ ರೂ.ಗೂ ಅಧಿಕ ಮೊತ್ತ ವಂಚಿಸಿದಾತ ಸೆರೆ Read More »

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ…

ಅಗಲಿದ ತಂದೆಯನ್ನು ಸ್ಮರಿಸಿಕೊಂಡು ಭಾವುಕ ಲೇಖನ ಬರೆದ ಸುನಿಲ್‌ ಕುಮಾರ್‌ ಉಡುಪಿ: ಅಗಲಿದ ತಂದೆಯ ಬಗ್ಗೆ ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಅವರು ಭಾವುಕ ಪತ್ರವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ಪತ್ರಕ್ಕೆ ಪ್ರತಿಕ್ರಿಯಿಸಿದ್ದು, ತಂದೆಗೆ ಸಲ್ಲಿಸಿದ ಅತ್ಯುತ್ತಮ ಶ್ರದ್ದಾಂಜಲಿ ಎಂದು ಪ್ರತಿಕ್ರಿಯಿಸಿದ್ದಾರೆ. ಪತ್ರದಲ್ಲೇನಿದೆ? ಅಪ್ಪ…! ಅವರಿನ್ನು ನನಗೆ ನೆನಪು ಮಾತ್ರ. ಅಪ್ಪ ನನಗೆ ಕೊಟ್ಟಿದ್ದೇನು? ಅವರು ನನಗೆ ಎಲ್ಲವನ್ನೂ ಕೊಟ್ಟರು. ಅವರು ಶಿಕ್ಷಣವನ್ನು ಕೊಟ್ಟರು, ಸಂಸ್ಕಾರವನ್ನು ಕೊಟ್ಟರು, ಬದುಕಿಗೊಂದು ಆದರ್ಶವನ್ನು ಕೊಟ್ಟರು. ಅವರ

ಅವರನ್ನು ನೋಡಲು ಹೋದಾಗಲೆಲ್ಲ ಐದು ನಿಮಿಷದ ಮೇಲೆ ಇರಲು ಬಿಡುತ್ತಿರಲಿಲ್ಲ… Read More »

ಹಿಂದುಳಿದ ವರ್ಗದ ಅಭಿವೃದ್ಧಿ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ : ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಾಯಿ ಮಾತಿನ ಅಭಿವೃದ್ಧಿಯ ಘೋಷಣೆಯಿಂದ ದಲಿತರು, ಹಿಂದುಳಿದ ವರ್ಗದವರ ಹೊಟ್ಟೆ ತುಂಬುವುದಿಲ್ಲ. ಆದರೆ ಸಿಎಂ ‌ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರೆ ಅಭಿವೃದ್ಧಿ ಆಗುತ್ತದೆ ಎಂದು ತಿಳಿದುಕೊಂಡಿದ್ದಾರೆಂದು ‌ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಸುದ್ದಿಗಾರರ ‌ಜೊತೆಗೆ ಮಾತನಾಡಿದ ಅವರು, ಸಿಎಂ ದಲಿತರ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಮೊದಲು ಅವರಿಗೆ ಮೀಸಲಿಟ್ಟ ಹಣವನ್ನು ನೀಡುವತ್ತ ಗಮನ ನೀಡಲಿ. ಹಿಂದುಳಿದ ವರ್ಗದವರನ್ನು ಅಭಿವೃದ್ಧಿ ಮಾಡುವುದಾಗಿ ಹೇಳುತ್ತಾರೆ. ಆದರೆ ಅವುಗಳ ಅಭಿವೃದ್ಧಿಗೆ ಮೀಸಲಿಟ್ಟ ಯೋಜನೆಗಳಿಗೆ ಹಣ ನೀಡುವುದಿಲ್ಲ ಎಂದು

ಹಿಂದುಳಿದ ವರ್ಗದ ಅಭಿವೃದ್ಧಿ ಬಾಯಿ ಮಾತಿನ ಘೋಷಣೆಯಿಂದ ಆಗುವುದಿಲ್ಲ : ಬಸವರಾಜ ಬೊಮ್ಮಾಯಿ Read More »

ಬೆಳ್ಳಂಬೆಳಗ್ಗೆ ಆನೆ ದಾಳಿ : ವ್ಯಕ್ತಿ ಮೃತ್ಯು

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸೌತಡ್ಕ ಬಳಿಯ ಮುರತ್ತಮೇಲ್‍ ಎಂಬಲ್ಲಿ ಆನೆಯೊಂದು ವ್ಯಕ್ತಿ ಮೇಲೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮುರತ್ತಮೇಲ್  ನಿವಾಸಿ ಬಾಲಕೃಷ್ಣ ಶೆಟ್ಟಿ (60) ಮೃತಪಟ್ಟವರು ಎಂದು ಗುರುತಿಸಲಾಗಿದೆ.  ಎರಡು ಆನೆಗಳು ಜತೆಯಾಗಿ ಸಾಗಿ ಬರುತ್ತಿದ್ದ ಸಂದರ್ಭ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸೌತಡ್ಕ ದೇವಸ್ಥಾನದಿಂದ ಕೇವಲ ಒಂದು ಕಿ.ಮೀ.ನಷ್ಟು ದೂರದಲ್ಲಿ  ಈ ದುರ್ಘಟನೆ ಸಂಭವಿಸಿದೆ. ಬಾಲಕೃಷ್ಣ ಶೆಟ್ಟಿ ಅವರು ಸೌತಡ್ಕ

ಬೆಳ್ಳಂಬೆಳಗ್ಗೆ ಆನೆ ದಾಳಿ : ವ್ಯಕ್ತಿ ಮೃತ್ಯು Read More »

ಪತ್ನಿಯನ್ನು ಹತ್ಯೆ ಮಾಡಿದ ಪಾಪಿ ಪತಿ | ಆರೋಪಿ ಬಂಧನ

ಉಪ್ಪಿನಂಗಡಿ : ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಜಾರು ಎಂಬಲ್ಲಿ ಗುರುವಾರ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿದಾತ ಬಾಜಾರು ನಿವಾಸಿ ರಫೀಕ್(45) ಎಂದು ಗುರುತಿಸಲಾಗಿದ್ದು, ಕೊಲೆಯಾದ ಮಹಿಳೆ ಝೀನತ್ ಎಂದು ಗುರುತಿಸಲಸಲಾಗಿದೆ. ಮನೆಯಲ್ಲೇ ಮಾತಿಗೆ ಮಾತು ಬೆಳದು ಗಂಡ ರಫೀಕ್ ತನ್ನ ಪತ್ನಿ ಝೀನತ್ ರವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಧಾವಿಸಿಪರಿಶೀಲನೆ ನಡೆಸಿದ್ದಾರೆ ಆರೋಪಿಯನ್ನು

ಪತ್ನಿಯನ್ನು ಹತ್ಯೆ ಮಾಡಿದ ಪಾಪಿ ಪತಿ | ಆರೋಪಿ ಬಂಧನ Read More »

ಸಹೋದರಿಬ್ಬರಿಂದ ಹಲ್ಲೆ | ಪ್ರಕರಣ ದಾಖಲು

ಉಪ್ಪಿನಂಗಡಿ: ಸಹೋದರರ ನಡುವೆ ಜಗಳ ನಡೆದು ಕತ್ತಿಯಿಂದ ಮಾಡಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಅಲಂಪಾಡಿ ಎಂಬಲ್ಲಿ ನಡೆದಿದೆ. ರಾಜಶೇಖರ್ ಹಲ್ಲೆಗೊಳಗಾದ ವ್ಯಕ್ತಿ. ಅವರು ನೀಡಿದ ದೂರಿನ ಮೇಲೆ ಸಹೋದರರಾದ ಮನೋಜ್ ಮತ್ತು ಜಯರಾಜ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ರಾಜಶೇಖರ್ ರವರು ಮನೆಯಲ್ಲಿದ್ದ ಸಂದರ್ಭ ಸಹೋದರ ಮನೋಜ್ ಕುಮಾರ್ ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ಯುತೊಡಗಿದ ಇನ್ನೊಬ್ಬ ಸಹೋದರ ಜಯರಾಜ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ

ಸಹೋದರಿಬ್ಬರಿಂದ ಹಲ್ಲೆ | ಪ್ರಕರಣ ದಾಖಲು Read More »

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ

ಕಾರ್ಕಳ: ಮೃತನ ಕಿಡ್ನಿ, ಹೃದಯ, ಕಣ್ಣುಗಳನ್ನು ದಾನ ಮಾಡುವ ಮೂಲಕ ನಂದಳಿಕೆಯ ಕುಟುಂಬವೊಂದು ಸಾವಿನ ನೋವಿನಲ್ಲೂ ಮತ್ತೊಂದಷ್ಟು ಜನರಿಗೆ ಸಾಂತ್ವನವಾಗುವ ಮೂಲಕ ಮಾದರಿಯಾಗಿದ್ದಾರೆ. ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಬಾಂಗ್ಲಾದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ಮಣ್ಣಿನ ನಂದಳಿಕೆಯ ನಿತೀಶ್ ಎನ್(46) ಮೃತಪಟ್ಚಿದ್ದರು. ಇವರ ಪತ್ನಿ ಮತ್ತು ತಾಯಿ ಮೃತರ ಕಣ್ಣು, ಕಿಡ್ನಿ, ಹೃದಯವನ್ನು ದಾನ ಮಾಡುವಂತೆ ವಿನಂತಿಸಿಕೊಂಡಿದ್ದಾರೆ. ನಿತೀಶ್ ಅವರು ಒಂದು ಕಣ್ಣಿನ ದೃಷ್ಟಿಯ ತೊಂದರೆ ಅನುಭವಿ ಸುತ್ತ ಬಿದ್ದು, ತಪಾಸಣೆಗಾಗಿ ಬೆಂಗಳೂರಿಗೆ ಬಂದಿದ್ದರು. ತಪಾಸಣೆಯ ಸಂದರ್ಭದಲ್ಲಿ ತೊಂದರೆಯಾಗಿ ಆ್ಯಂಜಿಯೋಪ್ಲಾಸ್ಟ್

ಮೃತ ವ್ಯಕ್ತಿಯ ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ Read More »

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ

ನವದೆಹಲಿ: ಸಂಸತ್ ಭವನದಲ್ಲಿ ಆರೋಗ್ಯಕರ ಆಹಾರ ವಿತರಿಸುವ ನಿಟ್ಟಿನಲ್ಲಿ ರಾಗಿ ಇಡ್ಲಿ, ಗ್ರಿಲ್ ಫಿಶ್ ಜೊತೆಗೆ ತರಕಾರಿ, ಜೋಳದ ಉಪ್ಪಿಟ್ಟು ಮೊದಲಾದ ಆಹಾರಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಸಂಸದರು ಮತ್ತು ಅಧಿಕಾರಿಗಳಿಗೆ ಆಹಾರ ನೀಡಲಾಗುವ ಸಂಸತ್ತಿನ ಕ್ಯಾಂಟೀನಿನ ಊಟದ ಮೆನು ಪರಿಷ್ಕರಿಸಲಾಗಿದ್ದು, ರುಚಿಯಲ್ಲಿ ಮತ್ತು ಆರೋಗ್ಯದ ವಿಚಾರದಲ್ಲಿ ರಾಜಿಯಾಗದಂತೆ ಎಚ್ಚರ ವಹಿಸಲಾಗಿದೆ. ಪರಿಷ್ಕೃತ ಮೆನು‌ವಿನಲ್ಲಿ ಸಿರಿಧಾನ್ಯಗಳಿಂದ ತಯಾರಿಸಲಾದ ಊಟ, ನಾರುಯುಕ್ತ ‌ಸಲಾಡ್, ಪ್ರೊಟೀನ್ ಉಳ್ಳ ಸೂಪ್ ನೀಡಲು ನಿರ್ಧರಿಸಲಾಗಿದೆ. ಪ್ರತಿ ಆಹಾರ ಒಳಗೊಂಡ ಕ್ಯಾಲರಿ

ಸಂಸತ್ ಕ್ಯಾಂಟೀನ್‌ನಲ್ಲಿ ಸಂಸದರಿಗಿನ್ನು ಆರೋಗ್ಯಪೂರ್ಣ ಆಹಾರ ವಿತರಣೆ Read More »

ಮಾಲ್‌ನಲ್ಲಿ ಭೀಕರ ಬೆಂಕಿ ಅವಘಡ : 50 ಮಂದಿ ಸಾವು

ಧಗಧಗಿಸಿ ಉರಿದ 5 ಮಹಡಿಯ ವಾಣಿಜ್ಯ ಕಟ್ಟಡ ಬಾಗ್ದಾದ್: ಇರಾಕ್‌ನ ಪೂರ್ವಕ್ಕಿರುವ ಕುಟ್ ನಗರದ ಹೈಪರ್‌ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಐದು ಮಹಡಿಯ ಕಟ್ಟಡ ಹೊತ್ತಿ ಉರಿಯುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಲ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಸಿಟ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ. ಪ್ರಾಂತ್ಯದಲ್ಲಿ

ಮಾಲ್‌ನಲ್ಲಿ ಭೀಕರ ಬೆಂಕಿ ಅವಘಡ : 50 ಮಂದಿ ಸಾವು Read More »

error: Content is protected !!
Scroll to Top