ಭಾರತದ ಸೇನಾ ಬತ್ತಳಿಕೆಗೆ ‘ಶೇರ್’ ಶಕ್ತಿ

ಲಕ್ನೋ: ಭಾರತೀಯ ಸಶಸ್ತ್ರ ಪಡೆಗಳಿಗೆ ಬಲ ತುಂಬುವ ನಿಟ್ಟಿನಲ್ಲಿ ಕಲಾಶ್ನಿಕೋವ್ ಸರಣಿಯ ಅತ್ಯಾಧುನಿಕ ಆವೃತ್ತಿಯ ನೂತನ ರೈಫಲ್ ಎಕೆ-203 ಸೇರಲಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶದ ಅಮೇತಿಯಲ್ಲಿರುವ ರೈಫಲ್ ತಯಾರಿಸುವ ಸಂಸ್ಥೆ ಇಂಡೋ – ರಷ್ಯನ್ ಪ್ರೈ.ಲಿ. ಯು ದೇಶೀಯವಾಗಿ ಇದನ್ನು ಸಿದ್ಧಪಡಿಸಿದ್ದು, ಇದಕ್ಕೆ ‘ಶೇರ್’ ಎಂದು ಹೆಸರನ್ನಿರಿಸಲಾಗಿದೆ. ಇದನ್ನು ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡಲು ಕಂಪನಿ ಸಿದ್ಧವಾಗಿದೆ. ಈ ರೈಫಲ್‌ನಲ್ಲಿ ನಿಮಿಷಕ್ಕೆ 700 ಗುಂಡುಗಳನ್ನು ಹಾರಿಸಬಹುದಾಗಿದ್ದು, ಇದಕ್ಕೆ ಗುಂಡುಗಳನ್ನು 800 ಮೀ. ವರೆಗೆ ಕ್ರಮಿಸುವ ಶಕ್ತಿ […]

ಭಾರತದ ಸೇನಾ ಬತ್ತಳಿಕೆಗೆ ‘ಶೇರ್’ ಶಕ್ತಿ Read More »

ಕಾಂಗ್ರೆಸ್ ಹೈಕಮಾಂಡ್ ಅನ್ನು ಹೆದರಿಸಲು ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಾರೆ: ಬಿ.ವೈ. ವಿಜಯೇಂದ್ರ

ಸಿಎಂ ಕುರ್ಚಿ ಅಲ್ಲಾಡುವಾಗ ಸಮಾವೇಶ ಮಾಡುವ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ ಮೈಸೂರು: ತಮ್ಮ ಕುರ್ಚಿ ಅಲ್ಲಾಡುತ್ತಿದೆ ಎಂದು ತಿಳಿದ ತಕ್ಷಣವೇ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ಅನ್ನು ಬೆದರಿಸಲು ಸಮಾವೇಶಗಳ ಮೊರೆ ಹೋಗುತ್ತಾರೆ. ಅಂತಹ ಕಲೆ ಸಿದ್ದರಾಮಯ್ಯ ಅವರಿಗೆ ಕರಗತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ‌ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿಎಂ ‌ಸಿದ್ದುಗೆ ದೆಹಲಿಯಲ್ಲಿ ರಾಹುಲ್ ಗಾಂಧಿಯನ್ನು ಭೇಟಿಯಾಗಲು ಸಮಯ ಕೊಟ್ಟಿಲ್ಲ. ಆದ್ದರಿಂದ ಕೈ ಹೈಕಮಾಂಡ್ ಅನ್ನು ಬೆದರಿಸಲು ಸಾಧನಾ

ಕಾಂಗ್ರೆಸ್ ಹೈಕಮಾಂಡ್ ಅನ್ನು ಹೆದರಿಸಲು ಸಿಎಂ ಸಿದ್ದರಾಮಯ್ಯ ಸಮಾವೇಶ ಮಾಡುತ್ತಾರೆ: ಬಿ.ವೈ. ವಿಜಯೇಂದ್ರ Read More »

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ

ಮಂಗಳೂರು ನಗರದೊಳಗೆ ನಡೆಯುತ್ತಿತ್ತು ಪ್ರಾಣಿಗಳ ಅಕ್ರಮ ದಂಧೆ ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಭೇದಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಅಪ್ರಾಪ್ತ ವಯಸ್ಸಿನ ಓರ್ವ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಉಳ್ಳಾಲ ಮುನ್ನೂರಿನ ಸಾಕುಪ್ರಾಣಿ ಅಂಗಡಿ ಮಾಲೀಕ ಇಬ್ರಾಹಿಂ ಶಕೀಲ್ ಇಸ್ಮಾಯಿಲ್ (35), ಉಳ್ಳಾಲ ಹರೇಕಳ ಅಂಗಡಿಯ ಉದ್ಯೋಗಿ ಮೊಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ವಿದ್ಯಾರ್ಥಿ 16 ವರ್ಷದ ಬಾಲಕ

ಹೆಬ್ಬಾವು ಮಾರಾಟ ಜಾಲ ಪತ್ತೆ : ಕಾಲೇಜು ವಿದ್ಯಾರ್ಥಿ ಸೇರಿ ನಾಲ್ವರು ಸೆರೆ Read More »

ಸವಣೂರು-ಪುಣ್ಚತ್ತಾರು ರಸ್ತೆ ಬದಿ ಗಿಡ ನೆಡುವ ಯೋಜನೆ | ವಿದ್ಯುತ್‍ ತಂತಿ ಹಾದು ಹೋಗುವ ಕೆಳಭಾಗದಲ್ಲೇ ಗಿಡ ನಾಟಿ | ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರ ಆಗ್ರಹ

ಕಾಣಿಯೂರು: ಸುಬ್ರಹ್ಮಣ್ಯ-ಕಾಣಿಯೂರು ರಾಜ್ಯ ಹೆದ್ದಾರಿಯ ಸವಣೂರಿನಿಂದ ಪುಣ್ಯತ್ತಾರುವರೆಗೆ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಗಿಡ ನೆಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಗಿಡಗಳನ್ನು ನೆಡಲಾಗಿದೆ. ಆದರೆ ರಸ್ತೆಗೆ ಸಮೀಪ, ವಿದ್ಯುತ್ ತಂತಿ ಹಾದು ಹೋಗುವ ಜಾಗದ ಕೆಳ ಭಾಗದಲ್ಲೇ ಗಿಡಗಳನ್ನು ನೆಡಲಾಗಿದ್ದು, ಅವೈಜ್ಞಾನಿಕವಾಗಿ ಗಿಡನೆಡಲಾಗಿದೆ. ಮುಂದೆ ಗಿಡ ಬೆಳೆದು ಮರವಾದಾಗ ಅಪಾಯ ಸಂಭವ ಗ್ಯಾರಂಟಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಜೊತೆಗೆ ಜೆ ಜೆ ಎಂ

ಸವಣೂರು-ಪುಣ್ಚತ್ತಾರು ರಸ್ತೆ ಬದಿ ಗಿಡ ನೆಡುವ ಯೋಜನೆ | ವಿದ್ಯುತ್‍ ತಂತಿ ಹಾದು ಹೋಗುವ ಕೆಳಭಾಗದಲ್ಲೇ ಗಿಡ ನಾಟಿ | ಸಂಬಂಧಪಟ್ಟವರು ಪರಿಶೀಲನೆ ನಡೆಸಬೇಕೆಂದು ಸ್ಥಳೀಯರ ಆಗ್ರಹ Read More »

ಪತಿ – ಪತ್ನಿ ಕಲಹ: ಡಿಸೇಲ್ ಹಚ್ಚಿಕೊಂಡ ಪತ್ನಿ ಚಿಕಿತ್ಸೆ ಫಲಿಸದೆ ಸಾವು

ಪತಿ ಪೊಲೀಸ್ ವಶಕ್ಕೆ ಶಿವಮೊಗ್ಗ: ಪತಿ ಮತ್ತು ಪತ್ನಿ ನಡುವೆ ನಡೆದ ಕಲಹದಿಂದ ಪತ್ನಿ ಡಿಸೇಲ್ ಸುರಿದು ಬೆಂಕಿ ಹಂಚಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಪತಿಯನ್ನು ಬಂಧಿಸಲಾಗಿದೆ. ಮೃತ ಮಹಿಳೆಯನ್ನು ಲಕ್ಕವಳ್ಳಿ ಗ್ರಾಮದ ಗಿರಿಜಾ(38) ಎಂದು ಗುರುತಿಸಲಾಗಿದೆ. ಪತಿ ಶ್ರೀಕಾಂತ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕಳೆದ 20 ದಿನಗಳ ಹಿಂದೆ ದಂಪತಿ ನಡುವೆ ಗಲಾಟೆ ನಡೆದಿದೆ. ಈ ಸಂದರ್ಭದಲ್ಲಿ ಪತ್ನಿ ಗಿರಿಜಾ ಮೈಮೇಲೆ ಡಿಸೇಲ್ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾರೆ.

ಪತಿ – ಪತ್ನಿ ಕಲಹ: ಡಿಸೇಲ್ ಹಚ್ಚಿಕೊಂಡ ಪತ್ನಿ ಚಿಕಿತ್ಸೆ ಫಲಿಸದೆ ಸಾವು Read More »

ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ

ಶ್ರೀನಗರ: ವಿಪರೀತ ಮಳೆ, ಭೂಕುಸಿತದ ಭೀತಿಯಿಂದ ‌ಸ್ಥಗಿತ ಮಾಡಲಾಗಿದ್ದು ಅಮರನಾಥ ಯಾತ್ರೆ ಒಂದು ದಿನದ ಬಳಿಕ ಮತ್ತೆ ಪ್ರಾರಂಭವಾಗಿದೆ. ಜಮ್ಮುವಿನಿಂದ ಕಾಶ್ಮೀರದ ಕಡೆಗೆ ಶುಕ್ರವಾರ 7,908 ಯಾತ್ರಿಕರ ತಂಡ ತೆರಳಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಳೆದ ಜುಲೈ 3 ರಂದು ಆರಂಭವಾಗಿದ್ದು ಅಮರನಾಥ ಯಾತ್ರೆ 2.52 ಲಕ್ಷಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಇಂದಿನ ಯಾತ್ರಿಕರ ಮೊದಲ‌ ತಂಡದ 2,879 ಯಾತ್ರಿಕರು 92 ವಾಹನಗಳ ಮೂಲಕ ಬೆಳಗ್ಗೆ 3.30 ರ ವೇಳೆಗೆ ಪ್ರಯಾಣ

ಸ್ಥಗಿತವಾಗಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ Read More »

ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಯೋಗೀ ಸರ್ಕಾರದ ಮಾದರಿ ಕ್ರಮ

15,000 ಎನ್‌ಕೌಂಟರ್, 30,000ಕ್ಕೂ ಅಧಿಕ ಅಪರಾಧಿಗಳು ಅಂದರ್ ಲಕ್ನೋ: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಖಡಕ್ ಕ್ರಮಗಳನ್ನು ತೆಗೆದುಕೊಂಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಈ ವರೆಗೆ 15 ಸಾವಿರ ಎನ್‌ಕೌಂಟರ್ ನಡೆಸಿದ್ದು, ಇದರಲ್ಲಿ 238 ಮಂದಿ ಹತರಾಗಿದ್ದಾರೆ ಎಂದು ಮೂಲಗಳು ಹೇಳಿವೆ. 2017 ರಿಂದೀಚೆಗೆ 30 ಸಾವಿರಕ್ಕೂ ಅಧಿಕ ಅಪರಾಧಿಗಳನ್ನು ಜೈಲಿಗಟ್ಟಲಾಗಿದೆ. 9 ಸಾವಿರಕ್ಕೂ ಅಧಿಕ ಆರೋಪಿಗಳಿಗೆ ಗುಂಡೇಟು ತಗುಲಿದೆ. ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದವರ ಮೇಲೆ ನಡೆಸಲಾದ ಎನ್‌ಕೌಂಟರ್‌ನಲ್ಲಿ

ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಯೋಗೀ ಸರ್ಕಾರದ ಮಾದರಿ ಕ್ರಮ Read More »

ವಾಹನಗಳ ಮೇಲೆ ರಾಷ್ಟ್ರ ಧ್ವಜ, ಇನ್ನಿತರ ಚಿಹ್ನೆಗಳ ದುರ್ಬಳಕೆ ತಡೆಯಲು ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ವಾಹನಗಳ ಮೇಲೆ ಅನಧಿಕೃತವಾಗಿ ರಾಷ್ಟ್ರಧ್ವಜ ಅಥವಾ ಚಿಹ್ನೆಗಳನ್ನು ಬಳಕೆ ಮಾಡಿದಲ್ಲಿ ತಕ್ಷಣವೇ ಜಪ್ತಿ ಮಾಡಿ, ದಂಡ ವಸೂಲಿ ಮಾಡುವಂತೆ ಸರ್ಕಾರ ಆದೇಶ ನೀಡಿದೆ. ಹೈಕೋರ್ಟ್ ನೀಡಿರುವ ತೀರ್ಪಿಗೆ ಅನುಗುಣವಾಗಿ ಮಹತ್ವವಾದ ಚಿಹ್ನೆಗಳು, ಧ್ವಜಗಳು, ಹೆಸರು, ಲೊಗೋ, ಲಾಂಛನ, ಮೊಹರು‌ಗಳನ್ನು ಅನಧಿಕೃತವಾಗಿ ದುರ್ಬಳಕೆ ಮಾಡುವುದನ್ನು ತಡೆಯಲು ಈ ಆದೇಶ ಹೊರಡಿಸಲಾಗಿದೆ. ಕೇಂದ್ರ ಸರ್ಕಾರ ಈ ಹಿಂದೆಯೇ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದು, ಸರ್ಕಾರದ ಅಧಾನದಲ್ಲಿರುವ ಎಲ್ಲಾ ಇಲಾಖೆಗಳು, ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು,

ವಾಹನಗಳ ಮೇಲೆ ರಾಷ್ಟ್ರ ಧ್ವಜ, ಇನ್ನಿತರ ಚಿಹ್ನೆಗಳ ದುರ್ಬಳಕೆ ತಡೆಯಲು ರಾಜ್ಯ ಸರ್ಕಾರದಿಂದ ಖಡಕ್ ಸೂಚನೆ Read More »

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ

ದಿ ರೆಸಿಸ್ಟೆನ್ಸ್ ಫ್ರಂಟ್ ಜಾಗತಿಕ ಉಗ್ರ ಸಂಘಟನೆ ಅಮೆರಿಕದಿಂದ ಪಟ್ಟಿಗೆ ಸೇರ್ಪಡೆ ನವದೆಹಲಿ: ಏಪ್ರಿಲ್ 22ರ ಪಹಲ್ಗಾಮ್ ಉಗ್ರ ದಾಳಿ ಎಸಗಿದ ಪಾಕಿಸ್ತಾನ ಮೂಲದ ದಿ ರೆಸಿಸ್ಟೆನ್ಸ್ ಫ್ರಂಟ್ ಉಗ್ರ ಸಂಘಟನೆಯನ್ನು ಅಮೆರಿಕದ ವಿದೇಶಾಂಗ ಇಲಾಖೆ ಭಯೋತ್ಪಾದಕ ಸಂಘಟನೆ ಪಟ್ಟಿಗೆ ಸೇರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಪ್ರಾಣ ಬಲಿ ಪಡೆದ ಘಟನೆಯ ಹೊಣೆಗಾರಿಕೆಯನ್ನು ಈ ಸಂಘಟನೆ ವಹಿಸಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ

ಪಹಲ್ಗಾಮ್‌ ದಾಳಿ ನಡೆಸಿದ ಉಗ್ರ ಸಂಘಟನೆ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ Read More »

ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದಿಂದ ತಡೆ : ಎಸ್ಮಾ ಜಾರಿ

ಜುಲೈ 1ರಿಂದ ಡಿಸೆಂಬರ್​ 12ರವರೆಗೆ ಮುಷ್ಕರ ನಿರ್ಬಂಧಿಸಿ ಕೆಎಸ್ಆರ್​ಟಿಸಿ ಅಧಿಸೂಚನೆ ಬೆಂಗಳೂರು : ಆಗಸ್ಟ್​ 5ರಂದು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ಕೆಎಸ್ಆರ್​​ಟಿಸಿ ಸಾರಿಗೆ ನೌಕರರ ವಿರುದ್ಧ ಸರ್ಕಾರ ಕರ್ನಾಟಕ ಅಗತ್ಯ ಸೇವಾ ನಿರ್ವಹಣಾ ಕಾಯಿದೆ 2013 ಅಡಿ (ಎಸ್ಮಾ) ಕಾಯಿದೆ ಜಾರಿ ಮಾಡಿ ಎಚ್ಚರಿಕೆ ನೀಡಿದೆ. ಈ ಕಾಯಿದೆಯಡಿ ಆರು ತಿಂಗಳು ನೌಕರರು ಯಾವುದೇ ಮುಷ್ಕರದಲ್ಲಿ ಭಾಗಿಯಾಗುವಂತಿಲ್ಲ. ಜುಲೈ 1ರಿಂದ ಡಿಸೆಂಬರ್​ 12ರವರೆಗೆ ನಿಗಮದಲ್ಲಿ‌ ಮುಷ್ಕರ ನಿರ್ಬಂಧಿಸಿ ಕೆಎಸ್ಆರ್​ಟಿಸಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ. ತಮ್ಮ ಬೇಡಿಕೆ

ಸಾರಿಗೆ ನೌಕರರ ಮುಷ್ಕರಕ್ಕೆ ಸರ್ಕಾರದಿಂದ ತಡೆ : ಎಸ್ಮಾ ಜಾರಿ Read More »

error: Content is protected !!
Scroll to Top