ಮಳೆ ಮುನ್ಸೂಚನೆ: ಅಮರನಾಥ ಯಾತ್ರೆ ತಾತ್ಕಾಲಿಕ ಮುಂದೂಡಿಕೆ

ಶ್ರೀನಗರ: ಕಣಿವೊ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ‌ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದ ವರೆಗೆ ಮುಂದೂಡಲಾಗಿದೆ. ಗಂಡೇರ್ಬಲ್ ಜಿಲ್ಲೆಯ ಬಲ್ಟಾನ್ ಮಾರ್ಗದಲ್ಲಿ ಬುಧವಾರ ಸಂಭವಿಸಿದ ಭೂ ಕುಸಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದು, ಅನೇಕರಿಗೆ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆ ಮೇರೆಗೆ ಅಮರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದು, ಅಮರನಾಥ ಯಾತ್ರಿಗಳ ‌ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಗಮನ […]

ಮಳೆ ಮುನ್ಸೂಚನೆ: ಅಮರನಾಥ ಯಾತ್ರೆ ತಾತ್ಕಾಲಿಕ ಮುಂದೂಡಿಕೆ Read More »

ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣ: ಭೈರತಿ ಬಸವರಾಜ್ ವಿರುದ್ದ ಕೇಸ್ ದಾಖಲು

ಆರೋಪಕ್ಕೆ ಭೈರತಿ ಬಸವರಾಜ್ ಪ್ರತಿಕ್ರಿಯೆ ಏನು? ಬೆಂಗಳೂರು: ಶಾಸಕ ಭೈರತಿ ಬಸವರಾಜ್ ಸೇರಿದಂತೆ ಐದು ಜನರ ವಿರುದ್ಧ ಭಾರತೀ ನಗರ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳ ಹಿಂದೆ ನಡೆದ ರೌಡಿಶೀಟರ್ ‌ಶಿಪಪ್ರಕಾಶ್ ಯಾನೆ ಬಿಕ್ಲು ಶಿವು ಹತ್ಯೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಕೇಸು ದಾಖಲಾಗಿರುವುದಾಗಿದೆ. ಅನುಮಾನದ ಮೇಲೆ ಮೂವರು ಆರೋಪಿಗಳನ್ನು ಈ ಮೊದಲೇ ಬಂಧಿಸಿ ವಿಚಾರಣೆ‌ಯನ್ನೂ ‌ನಡೆಸಲಾಗುತ್ತಿದೆ. ಶಿವಪ್ರಕಾಶ್ ಅವರ ತಾಯಿ ‌ವಿಜಯಲಕ್ಷ್ಮೀ ಅವರು ಭೈರತಿ ಬಸವರಾಜ್, ಜಗದೀಶ್, ಕಿರಣ್, ವಿಮಲ್, ಅನಿಲ್

ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣ: ಭೈರತಿ ಬಸವರಾಜ್ ವಿರುದ್ದ ಕೇಸ್ ದಾಖಲು Read More »

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ

ಶಾಸಕರು ಈಗ ಕ್ಷೇತ್ರದ ಅಭಿವೃದ್ಧಿಗೆ ಸುರ್ಜೇವಾಲ ಅವರನ್ನು ಸುತ್ತುತ್ತಿದ್ದಾರೆ ಎಂದು ವ್ಯಂಗ್ಯ ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಪದೇ ಪದೆ ಬಂದು ಶಾಸಕರ, ಸಚಿವರ ಸಭೆ ನಡೆಸುತ್ತಿರುವುದನ್ನು ಬಿಜೆಪಿ ಮತ್ತು ಜೆಡಿಎಸ್‌ ಟೀಕಿಸಿವೆ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಸುರ್ಜೆವಾಲಾ ಸೂಪರ್‌ ಸಿಎಂ ಆಗಿ ಆಡಳಿತ ನಡೆಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಶ್ರೀ @rssurjewala ಅವರಿಗೆ ಅಭಿನಂದನೆಗಳು, ಚುನಾಯಿತ ಮುಖ್ಯಮಂತ್ರಿಗಳು ಸರ್ಕಾರ ನಡೆಸಲು

ಸುರ್ಜೆವಾಲಾ ಕರ್ನಾಟಕದ ಸೂಪರ್‌ ಸಿಎಂ: ಬಿಜೆಪಿ-ಜೆಡಿಎಸ್‌ ಟೀಕೆ Read More »

ಸರ್ಕಾರದ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ: ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

ಬೆಂಗಳೂರು: ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ಸುಪರ್ದಿಗೆ ಸರ್ಕಾರ ಒಪ್ಪಿಸಿದ್ದು, ಇದಕ್ಕೆ ತಡೆಯಾಜ್ಞೆ ‌ನೀಡಲು ಹೈಕೋರ್ಟ್ ನಿರಾಕರಿಸಿದೆ. ದೇವಸ್ಥಾನದ ಆಡಳಿತದಲ್ಲಿ ಅವ್ಯವಹಾರ ನಡೆದಿರುವುದು ಸಾಕ್ಷಿ ಸಮೇತ ಬಯಲಾಗಿದ್ದು, ಈ‌ ನಿಟ್ಟಿನಲ್ಲಿ‌ ಸರ್ಕಾರ ಇಂತಹ ಕ್ರಮ ಕೈಗೊಂಡಿತ್ತು. ಈ ಆದೇಶವನ್ನು ರದ್ದು ಮಾಡುವಂತೆ ಸರ್ಕಾರಕ್ಕೆ ಸೂಚಿಸಲು ದೇಗುಲದ ಟ್ರಸ್ಟಿ ಹಾಗೂ ಸಂಚಾಲಕ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ‌‌ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾರ

ಸರ್ಕಾರದ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ: ಸರ್ಕಾರದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ Read More »

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ

ಬ್ಲಡ್ ಮನಿ, ಕ್ಷಮಾದಾನ ‌ನಿರಾಕರಿಸಿದ ತಲಾಲ್ ಮೆಹದಿ ಕುಟುಂಬ ಸನಾ: ಯೆಮನ್ ನಾಗರಿಕ ತಲಾಲ್ ಮೆಹದಿ ಹತ್ಯೆಗೆ ಸಂಬಂಧಿಸಿದ ಹಾಗೆ ಆರೋಪಿ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತವಾಗಿದೆ. ಮೃತ ತಲಾಲ್ ಕುಟುಂಬಸ್ಥರು ಬ್ಲಡ್ ಮನಿ ನಿರಾಕರಿಸಿದ್ದು, ಆರೋಪಿ ನಿಮಿಷಾಗೆ ಶರಿಯಾ ಕಾನೂನಿನ ಅನ್ವಯ ಕಿಸಾಸ್ ಬೇಡಿಕೆಯನ್ನು ಪುನರುಚ್ಛರಿಸಿದ್ದಾರೆ. ತಲಾಲ್ ಮೆಹದಿಯನ್ನು ಹತ್ಯೆ ಮಾಡಿದ ನಿಮಿಷಾಳಿಂದ ಕ್ಷಮೆ ಅಥವಾ ಪರಿಹಾರವನ್ನು ಸ್ವೀಕರಿಸುವ ಮಾತೇ ಇಲ್ಲ ಎಂದು ಮೃತನ ಕುಟುಂಬಸ್ಥರು ತೀರ್ಮಾನ ತಿಳಿಸಿದ್ದಾರೆ.

ನಿಮಿಷಾ‌ ಪ್ರಿಯಾ ಗಲ್ಲು ಶಿಕ್ಷೆ ಬಹುತೇಕ ಖಚಿತ Read More »

ಭಾರಿ ಮಳೆ : ಮಂಗಳೂರಲ್ಲಿ ಗುಡ್ಡ, ಗೋಡೆ ಕುಸಿತ

ಎರಡು ದಿನ ಸುರಿದ ಮಳೆಗೆ ನಗರದಲ್ಲಿ ಹಲವು ಅವಾಂತರ ಮಂಗಳೂರು : ಕಳೆದೆರಡು ದಿನಗಳಿಂದ ಮಂಗಳೂರು ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು ನಗರದಲ್ಲೂ ಹಲವು ಅವಾಂತರಗಳು ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸರ್ಕ್ಯೂಟ್ ಹೌಸ್-ಬಿಜೈ ಬಳಿ ತಡರಾತ್ರಿ ಗುಡ್ಡ ಕುಸಿದು ರಸ್ತೆಗೆ ಬಿದ್ದು ಸಂಚಾರ ವ್ಯವಸ್ಥೆಗೆ ತೊಂದರೆ ಆಗಿದೆ. ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬ್ಯಾರಿಕೇಡ್ ಅಳವಡಿಸಿ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಬಿಜೈ ಬಟ್ಟಗುಡ್ಡ, ಆರ್ಯ ಸಮಾಜ ರಸ್ತೆ, ಪಂಪ್ವೆಲ್, ಮಾಲೆಮಾರ್, ಕಾವೂರು ಉಲ್ಲಾಸ

ಭಾರಿ ಮಳೆ : ಮಂಗಳೂರಲ್ಲಿ ಗುಡ್ಡ, ಗೋಡೆ ಕುಸಿತ Read More »

ಇನ್ನುಮುಂದೆ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

ಡ್ರಗ್ಸ್‌, ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಧಾರ ಬೆಂಗಳೂರು: ಕಾಲೇಜುಗಳಲ್ಲಿ ಡ್ರಗ್ಸ್‌, ರ‍್ಯಾಗಿಂಗ್ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯಡಿ ಬರುವ ಎಲ್ಲ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಕ್ಯಾಂಪಸ್‌ಗಳಲ್ಲಿ ಸಿಸಿಟಿವಿ ಅಳವಡಿಸಲು ಸರ್ಕಾರ ಆದೇಶ ಮಾಡಿದೆ. ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಅನುದಾನಿತ, ಖಾಸಗಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಕೆ ಮಾಡುವಂತೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕಾಲೇಜು, ವಿವಿ ಕ್ಯಾಂಪಸ್‌ಗಳಲ್ಲಿ ರ‍್ಯಾಗಿಂಗ್,

ಇನ್ನುಮುಂದೆ ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ Read More »

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ

ಮತ್ಸ್ಯ ಸಂಪತ್ತು ಉಳಿಸುವ ಸಲುವಾಗಿ ಹೊಸ ನಿಯಮ ಮಂಗಳೂರು: ಕಡಲಲ್ಲಿ ಮತ್ಸ್ಯ ಸಂಪತ್ತು ಬರಿದಾಗುತ್ತಿದೆ ಎನ್ನುವುದು ಇತ್ತೀಚೆಗೆ ವ್ಯಾಪಕವಾಗಿ ಕೇಳಿ ಬರುತ್ತಿರುವ ಆತಂಕ. ಹೀಗಾಗಿ ಮೀನು ಸಂತಾನೋತ್ಪತ್ತಿ ಕಾಲದಲ್ಲಿ ಯಾಂತ್ರೀಕೃತ ಬೋಟ್‌ಗಳು ಕಡಲಿಗೆ ಇಳಿಯದಿದ್ದರೆ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗಲಿದೆ ಎಂಬುದು ಲೆಕ್ಕಚಾರ. ಈ ಕಾರಣಕ್ಕೆ ಮಳೆಗಾಲದಲ್ಲಿ ಎರಡು ತಿಂಗಳು ಮೀನಿಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಅವಧಿಯಲ್ಲಿ ನಿಷೇಧ ಜಾರಿಗೆ ಬರುವುದರಿಂದ ನಿಷೇಧದ ನೈಜ ಉದ್ದೇಶ ಈಡೇರುತ್ತಿಲ್ಲ. ಹೀಗಾಗಿ ಇಡೀ

ಮೂರು ತಿಂಗಳು ಮೀನುಗಾರಿಕೆ ನಿಷೇಧಕ್ಕೆ ಚಿಂತನೆ Read More »

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ

ಕಾಂಬೋಡಿಯಾದ ಸೈಬರ್‌ ವಂಚಕರ ಹೊಸ ತಂತ್ರ ಬೆಂಗಳೂರು: ಮುಂಬಯಿಯ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ಪೊಲೀಸ್‌ ಅಧಿಕಾರಿ ಕನ್ನಡಿಗ ದಯಾ ನಾಯಕ್ಹೆಸರು ಹೇಳಿ ಚಿಕ್ಕಬಳ್ಳಾಪುರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಭೂ ವಿಜ್ಞಾನಿಗೆ ಸೈಬರ್​ ವಂಚಕರು ಲಕ್ಷಾಂತರ ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ಭೂ ವಿಜ್ಞಾನಿ ಬಿ.ಕೆ. ರಾಮಚಂದ್ರಪ್ಪ ಹಾಗೂ ಇವರ ಪತ್ನಿ ಸುಜಾತ ಅವರಿಗೆ ದಯಾ ನಾಯಕ್ ಹೆಸರಿನಲ್ಲಿ ಸೈಬರ್ ವಂಚಕರು ಕರೆ ಮಾಡಿದ್ದಾರೆ. ಮುಂಬೈಯ ಕೆನರಾ ಬ್ಯಾಂಕ್​ನಲ್ಲಿ

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ ಹೆಸರಿನಲ್ಲಿ ಕರೆ ಮಾಡಿ ನಿವೃತ್ತ ವಿಜ್ಞಾನಿಗೆ ವಂಚನೆ Read More »

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಣ್ಣಗುಂಡಿಯಲ್ಲಿ ಗುಡ್ಡ ಕುಸಿತ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ

ಮಂಗಳೂರು: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75 ರ ಕಡಬ  ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ, ಗುಡ್ಡ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.  ಈಗಾಗಲೇ ಮಣ್ಣು ತೆಗೆಯುವ ಕಾರ್ಯ ಆರಂಭವಾಗಿರುತ್ತದೆ. ಇನ್ನಷ್ಟು ಮಣ್ಣು  ಕುಸಿಯುತ್ತಿರುವುದರಿಂದ  ಮಣ್ಣು ತೆಗೆಯುವ ಕಾರ್ಯ ಮಧ್ಯಾಹ್ನದವರೆಗೆ ನಡೆಯಲಿದೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಪ್ರಕಟಣೆ ತಿಳಿಸಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಣ್ಣಗುಂಡಿಯಲ್ಲಿ ಗುಡ್ಡ ಕುಸಿತ | ವಾಹನ ಸಂಚಾರದಲ್ಲಿ ಬದಲಿ ವ್ಯವಸ್ಥೆ Read More »

error: Content is protected !!
Scroll to Top