ಅನ್ಯಕೋಮಿನ ಯುವಕನ ಜೊತೆ ವಿದ್ಯಾರ್ಥಿನಿ ಪರಾರಿ : ಪೋಷಕರಿಂದ ದೂರು

ವಯನಾಡಿಗೆ ಹೋಗಿ ರಿಜಿಸ್ಟ್ರರ್‌ ಮದುವೆಯಾದ ಮಾಹಿತಿ ಮಂಗಳೂರು : ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿಯಾಗಿರುವ ಘಟನೆ ಮಂಗಳೂರಿನ ಸುರತ್ಕಲ್​​ನಲ್ಲಿ ನಡೆದಿದೆ. ಸುರತ್ಕಲ್​ನ ಮುಕ್ಕ ಕಾಲೇಜಿನಲ್ಲಿ ಓದುತ್ತಿದ್ದ ಕಾಸರಗೋಡು ಆರ್.ಡಿ‌.ನಗರದ ಮೀಪುಗುರಿ ನಿವಾಸಿಯಾದ ವೈಶಾಲಿ ಪರಾರಿಯಾಗಿದ್ದು, ಜನವರಿ 31ರಂದು ಮಿದ್ಲಾಜ್ ಜತೆ ರಿಜಿಸ್ಟ್ರರ್​ ಮದುವೆ ಆಗಿರುವ ಮಾಹಿತಿ ತಿಳಿದುಬಂದಿದೆ. ಮಗಳು ಸಂಪರ್ಕಕ್ಕೆ ಸಿಗದಿದ್ದರಿಂದ ಕಂಗಾಲಾಗಿರುವ ಪೋಷಕರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮನೆಯವರೆಗೆ ತಿಳಿಸದೆ ಜನವರಿ 31ರಂದು ಕೇರಳದ ವಯನಾಡು ನೋಂದಣಾಧಿಕಾರಿ ಕಚೇರಿಯಲ್ಲಿ ವೈಶಾಲಿ ಹಾಗೂ […]

ಅನ್ಯಕೋಮಿನ ಯುವಕನ ಜೊತೆ ವಿದ್ಯಾರ್ಥಿನಿ ಪರಾರಿ : ಪೋಷಕರಿಂದ ದೂರು Read More »

ಧುರಂದರ್‌ ಖ್ಯಾತಿಯ ನಟ ರಣವೀರ್‌ ಸಿಂಗ್‌ಗೆ ಬೆದರಿಕೆ

ಕೋಟ್ಯಾಂತರ ರೂಪಾಯಿ ಕೇಳಿ ವಾಟ್ಸಪ್‌ ಮೂಲಕ ಬೆದರಿಕೆ ಸಂದೇಶ ರವಾನೆ ಮುಂಬೈ: ಸೂಪರ್‌ ಹಿಟ್‌ ಸಿನೆಮಾ ಧುರಂದರ್‌ ಖ್ಯಾತಿಯ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಹಾಕಲಾಗಿದೆ. ವಾಟ್ಸಪ್ ಮೂಲಕ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ದಂಪತಿಯ ನಿವಾಸಕ್ಕೆ ಭದ್ರತೆ ಒದಗಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಮೊದಲು ಬಾಲಿವುಡ್​​ನ ಹಲವು ಸೆಲೆಬ್ರಿಟಿಗಳಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನವರು ಬೆದರಿಕೆ ಹಾಕಿದ್ದರು. ಈಗಲೂ ರಣವೀರ್ ಸಿಂಗ್ ಅವರಿಗೆ ಲಾರೆನ್ಸ್

ಧುರಂದರ್‌ ಖ್ಯಾತಿಯ ನಟ ರಣವೀರ್‌ ಸಿಂಗ್‌ಗೆ ಬೆದರಿಕೆ Read More »

ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚನೆ : ನಕಲಿ ಅಳಿಯ-ಮಾವ ಸೆರೆ

ಮಂಗಳೂರು, ಉಡುಪಿ, ಕಾರ್ಕಳದ 9 ಯುವತಿಯರಿಗೆ ವಂಚಿಸಿರುವ ಆರೋಪಿಗಳು ಮಂಗಳೂರು : ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ಆರೋಪಿ ಹಾಗೂ ಅವನಿಗೆ ಸಹಾಯ ಮಾಡುತ್ತಿದ್ದವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಇವರಿಬ್ಬರ ಬಂಧನದಿಂದ ಬೆಳಕಿಗೆ ಬಂದಿದೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮೂಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಹಣ ಪಡೆದು ವಂಚನೆ : ನಕಲಿ ಅಳಿಯ-ಮಾವ ಸೆರೆ Read More »

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ

ಯಾದಗಿರಿ: ಮದ್ಯ ಸೇವನೆ ನಿಲ್ಲಿಸುವಂತೆ ಬೇಡಿಕೊಂಡ ಪುತ್ತಿಯನ್ನೇ ನಿರ್ದಯವಾಗಿ ಹೆತ್ತಮ್ಮನೇ ಕೊಂದು ಹಾಕಿದ ಘಟನೆ ರಾಜೀವ್ ನಗರದಲ್ಲಿ ನಡೆದಿದೆ. ಪ್ರತಿಭಾ (11) ಮೃತ ದುರ್ದೈವಿ‌. ಆರೋಪಿ ಕ್ರೂರಿ‌ ತಾಯಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. ನಿರ್ಮಲಾಳಿಗೆ ಕುಡಿತದ ಚಟ ಇದ್ದು, ಅದನ್ನು ಬಿಟ್ಟುಬಿಡುವಂತೆ ಪುಟ್ಟ ಮಗು ಅಮ್ಮನಿಗೆ ಹೇಳಿದ್ದಳು. ಇದರಿಂದ ಕೋಪಗೊಂಡ ನಿರ್ಮಲಾ ಅವಳ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಬಳಿಕ ಆಕೆ ಜ್ಯೂಸ್ ಕುಡಿಯಲು ಹಣ ಕೇಳಿದಾಗ ನೀಡದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಕಥೆ ಕಟ್ಟಿದ್ದಾಳೆ.

ತಾಯಿಯ ಕುಡಿತದ ಚಟಕ್ಕೆ ಬಲಿಯಾಯ್ತು ಮುಗ್ಧ ಮಗಳ ಜೀವ Read More »

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಬೆಂಗಳೂರು: ನವಜಾತ ಶಿಶುವಿನ ಶವ ಕಸದ ತೊಟ್ಟಿಯಲ್ಲಿ ಪತ್ತೆಯಾಗಿದ್ದು, ಶೇಷಾದ್ರಿಪುರಂ ರೈಲ್ವೆ ಪಾರ್ಲರ್‌ನಲ್ಲಿ ಈ ಘಟನೆ ನಡೆದಿದೆ. ಮಗು ಹುಟ್ಟಿದ ಒಂದೇ ದಿನದಲ್ಲಿ ಯಾರೋ‌ ತಂದು ಕಸದ ತೊಟ್ಟಿಗೆ ‌ಎಸೆದಿದ್ದು, ಆ ರಭಸಕ್ಕೆ ಮಗು ಮೃತಪಟ್ಟಿರುವಂತಿದೆ. ಮೃತದೇಹವನ್ನು ‌ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಕ್ರೂರಿಗಳನ್ನು ಹಿಡಿಯಲು ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ.

ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ Read More »

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ

ತುಮಕೂರು: ದ್ವಿಚಕ್ರ ವಾಹನ ಮತ್ತು ಖಾಸಗಿ ಬಸ್ ಒಂದರ ನಡುವೆ ಅಪಘಾತ‌ ಸಂಭವಿಸಿದ್ದು, ದ್ವಿಚಕ್ರ ಸವಾರ ಮೃತಪಟ್ಟ‌ ಘಟನೆ ಸಾತಟ್ಟದಲ್ಲಿ ‌ನಡೆದಿದೆ. ಮಿಟ್ರಳ್ಳಿಯ ಗಂಗಯ್ಯ (60) ಎಂಬವರೇ ಮೃತ ದುರ್ದೈವಿ. ಸಹಸವಾರ ಲಿಂಗಣ್ಣ ಎಂಬವರಿಗೆ ‌ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ‌ದಾಖಲು ಮಾಡಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಗುದ್ದಿ ಬೈಕ್ ಸವಾರ ಸಾವು, ಸಹಸವಾರನಿಗೆ ಗಾಯ Read More »

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು

ವೀರಕಂಭ: ಶಾರ್ಟ್ ಸರ್ಕ್ಯೂಟ್ ಕಾರಣದಿಂದ ಬೆಂಕಿ ಕಾಣಿಸಿಕೊಂಡು ಮನೆಯಲ್ಲಿರುವ ವಸ್ತುಗಳೆಲ್ಲಾ ಆಹುತಿಯಾದ ಘಟನೆ ಗಣೇಶ್ ಕೋಡಿಯಲ್ಲಿ ನಡೆದಿದೆ. ರಾಜೇಶ್ವರಿ ಎಂಬವರ ‌ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದಾಗಿದೆ. ಇದರಿಂದಾಗಿ ಮನೆಯಲ್ಲಿದ್ದ ಬಟ್ಟೆ ಬರೆ ಸೇರಿದಂತೆ ಇತರ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದೇ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯಲ್ಲಿ ಕಾಣಿಸಿಕೊಂಡ ಬೆಂಕಿ: ಸುಟ್ಟು ಕರಕಲಾದ ವಸ್ತುಗಳು Read More »

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು

ಕಬಕ: ಕೊಡಿಪ್ಪಾಡಿ ಹಾಗೂ ಕುಳ ಗ್ರಾಮದಲ್ಲಿರುವ ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ , ಇದರ ಸದಸ್ಯರಿಂದ ಕಬಕ-ಕುಂಡಡ್ಕ ಸಂಪರ್ಕ ರಸ್ತೆಯ ಗುಂಡಿ ಹಾಗೂ ಬದಿಗಳಿಗೆ ಮಣ್ಣು ಹಾಕುವ ಮೂಲಕ ಊರಿನ ವಾಹನ ಸವಾರರಿಗೆ ಹಾಗೂ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಗೆ ಸಹಾಯಕವಾಗುವಂತೆ ಉತ್ತಮ ಕಾರ್ಯವನ್ನು ನಡೆಸಿದ್ದಾರೆ. ವಾಸುಕಿ ಸ್ಪೋರ್ಟ್ಸ್ ಕ್ಲಬ್ (ರಿ) ಟ್ರಸ್ಟ್ ಓಜಾಲ ಇದರ ಅಧ್ಯಕ್ಷ ಮಿಥುನ್ ಓಜಾಲ, ಉಪಾಧ್ಯಕ್ಷ ಕಿರಣ್ ಓಜಾಲ, ಮಾಜಿ ಅಧ್ಯಕ್ಷ ಮುರಳೀಧರ ಕೊರ್ಜೆ ಹಾಗೂ ಎಲ್ಲಾ ಸದಸ್ಯರ ಸಹಕಾರದಿಂದ

ರಸ್ತೆ ದುರಸ್ಥಿ ಮಾಡಿದ ಸ್ಪೋರ್ಟ್ಸ್ ಕ್ಲಬ್ ಯುವಕರು Read More »

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿಧನ

ವಿಟ್ಲ: ಅಪಘಾತವೊಂದರಲ್ಲಿ ‌ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಪುರುಷೋತ್ತಮ ಆಚಾರ್ಯ ಕೈಂತಿಲ(68) ಎಂದು ಗುರುತಿಸಲಾಗಿದೆ. ಅವರಿಗೆ ಕೆಲ ದಿನಗಳ ಹಿಂದೆ ಮಂಗಿಲಪದವು ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿತ್ತು. ಮೃತರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ನಿಧನ Read More »

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್

ದಾವಣಗೆರೆ: ಮಗಳು ಶಾಲೆಗೆ ಹೋಗದಂತೆ ತಡೆಯಲು ಕುಡುಕ ತಂದೆಯೊಬ್ಬ ಅವಳ ಪುಸ್ತಕಗಳನ್ನೆಲ್ಲಾ ‌ಸುಟ್ಟು ಹಾಕಿದ್ದು,‌ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ ಘಟನೆ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ‌ನಡೆದಿದೆ. ಹುಡುಗಿ 10 ನೇ ತರಗತಿಯಲ್ಲಿ ಕಲಿಯುತ್ತಿದ್ದು ಶಾಲೆಗೆ ಹೋಗದಂತೆ ಆಕೆಗೆ ತಂದೆಯೇ ಗದರಿದ್ದಾನೆ. ಜೊತೆಗೆ ಆಕೆಯ ಶಾಲೆಯ ಬ್ಯಾಗ್‌ನಲ್ಲಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದಾನೆ. ಈ ವೇಳೆ ಶಾಲೆಗೆ ಹೋಗಲೇ ಬೇಕು ಎಂದು ಹಠ ಹಿಡಿದ ಮಗಳು ಪೊಲೀಸರಿಗೆ ಕರೆ ಮಾಡಿ ದೂರು ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ಬಂದ

ಮಗಳ ವಿದ್ಯಾಭ್ಯಾಸಕ್ಕೆ ತೊಂದರೆ ಕೊಟ್ಟ ಕುಡುಕ ತಂದೆಗೆ ಪೊಲೀಸರಿಂದ ಕ್ಲಾಸ್ Read More »

error: Content is protected !!
Scroll to Top