ಯಕ್ಷರಂಗದ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ

ಬಂಟ್ವಾಳ: ತಾಲೂಕಿನ ಮಂಚಕಲ್ಲು ‌ನಿವಾಸಿ, ಹಿರಿಯ ಯಕ್ಷಗಾನ ಕಲಾವಿದ, ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಅವರು ಇಂದು ಮದ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಹನುಮಗಿರಿ ಮೇಳದಲ್ಲಿ ಇತ್ತೀಚೆಗಿನ ವರೆಗೆ ಬಣ್ಣದ ವೇಷಧಾರಿಯಾಗಿ ಪಾತ್ರ ನಿರ್ವಹಿಸುತ್ತಿದ್ದ ಸದಾಶಿವ ಶೆಟ್ಟಿಗಾರರು, ಸುಮಾರು ಮೂರು ದಶಕಗಳಿಗೂ ಹೆಚ್ಚಿನ ಕಾಲ ಯಕ್ಷಗಾನ ರಂಗಕ್ಕೆ ಸೇವೆ ಸಲ್ಲಿಸಿದವರು. ರೆಂಜಾಳ ರಾಮಕೃಷ್ಣ ರಾವ್, ಬಣ್ಣದ ಮಾಲಿಂಗ ಮೊದಲಾದ ದಿಗ್ಗಜರಲ್ಲಿ ಯಕ್ಷಗಾನ ನಾಟ್ಯಾಭ್ಯಾಸ ಮಾಡಿದವರು. ಕಟೀಲು, ಧರ್ಮಸ್ಥಳ, ಹೊಸನಗರ, ಎಡನೀರು, ಹನುಮಗಿರಿ ಮೇಳಗಳಲ್ಲಿ ಸುಮಾರು […]

ಯಕ್ಷರಂಗದ ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಇನ್ನಿಲ್ಲ Read More »

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ…

ಬಲು ರೋಚಕ ಬಹುಕೋಟಿ ಉದ್ಯಮಿ ರೋಷನ್‌ ಸಲ್ಡಾನನ ನಿಗೂಢ ಐಷಾರಾಮಿ ಬದುಕು ಮಂಗಳೂರು : ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಮಂಗಳೂರು ಜಪ್ಪಿನಮೊಗರಿನ ರೋಷನ್ ಸಲ್ಡಾನನ ಐಷಾರಾಮಿ ಜೀವನದ ಒಂದೊಂದೇ ರೋಚಕ ಮಾಹಿತಿ ಪೊಲೀಸ್‌ ವಿಚಾರಣೆ ಮುಂದುವರಿದಂತೆಲ್ಲ ಬಯಲಾಗಿ ಜನರನ್ನು ಬೆಚ್ಚಿಬೀಳಿಸುತ್ತಿದೆ. ಮಂಗಳೂರು ನಗರದಲ್ಲೂ ಈ ರೀತಿಯ ಒಬ್ಬ ವಂಚಕ ಇರಲು ಸಾಧ್ಯವೇ ಎಂದು ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ರೋಷನ್ ಸಲ್ಡಾನ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಸ್ವತಹ ಮಂಗಳೂರು ಪೊಲೀಸರೇ ದಂಗಾಗಿದ್ದಾರೆ. ರೋಷನ್

2.75 ಕೋಟಿ ರೂ. ಬೆಲೆಯ ವಜ್ರದುಂಗುರ, ಸುಸಜ್ಜಿತ ಗ್ರಂಥಾಲಯ… Read More »

ಬೀರಮಲೆ ಬೆಟ್ಟದಲ್ಲಿ ಸಾರ್ವಜನಿಕ ಅನುಚಿತ ವರ್ತನೆ :  ಪ್ರಕರಣದ ಆರೋಪಿಗಳಿಗೆ ಜಾಮೀನು

ಪುತ್ತೂರು: ಇತ್ತೀಚೆಗೆ ಬೀರಮಲೆ ಬೆಟ್ಟದ ಗಾಂಧಿ ಮಂಟಪದಲ್ಲಿ ಯುವಕ-ಯುವತಿ ಜೋಡಿಯೊಂದು ಬೈಕ್ ಒಂದರಲ್ಲಿ ಬಂದು ಮಾತುಕತೆ ನಡೆಸುತ್ತಿದ್ದ ಸಂದರ್ಭ ಸಾರ್ವಜನಿಕವಾಗಿ ಅನುಚಿತ ವರ್ತನೆ ತೋರಿದರು ಎಂಬ ಕಾರಣಕ್ಕಾಗಿ ಅವರನ್ನು ಅಸಮರ್ಪಕವಾಗಿ ವಿಚಾರಿಸಿ, ನಿಂದಿಸಿ ಅವರಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿಯಬಿಡುವುದಾಗಿ ಬೆದರಿಸಿದ ಪ್ರಕರಣ ನಡೆದಿತ್ತು. ಈ ಸಂಬಂಧ ಆರೋಪಿಗಳಾದ ರಾಮಚಂದ್ರ ಹಾಗೂ ಪುರುಷೋತ್ತಮ ಎಂಬವರನ್ನು ಬಂಧಿಸಿದ್ದರ ವಿರುದ್ಧ ದಾವೆ ಹೂಡಲಾಗಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಬೀರಮಲೆ ಬೆಟ್ಟದಲ್ಲಿ ಸಾರ್ವಜನಿಕ ಅನುಚಿತ ವರ್ತನೆ :  ಪ್ರಕರಣದ ಆರೋಪಿಗಳಿಗೆ ಜಾಮೀನು Read More »

ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಬೇಕು : ಡಾ.ಕೆ.ನಾರಾಯಣ್ ಶೆಣೈ

ಪುತ್ತೂರು: ಇಂದಿನ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಮುಖ್ಯ ಕಾರಣ ಶಾಲೆಗಳಲ್ಲಿ  ಅಂಕಗಳಿಗೋಸ್ಕರ ಇರುವಂತ ಪೈಪೋಟಿ. ಮಕ್ಕಳಲ್ಲಿ ಜೀವನ ಮೌಲ್ಯವನ್ನು ಕಲಿಸಿಕೊಡುವಲ್ಲಿ ಹಿಂದೆ ಬೀಳತ್ತಿದ್ದೇವೆ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಬೇಕು. ಶಿಕ್ಷಣದ ಮುಖ್ಯ ತತ್ವ ವ್ಯಕ್ತಿತ್ವದ ನಿರ್ಮಾಣ , ದೇಶಭಕ್ತಿಯ ನಿರ್ಮಾಣ ಎಂದು ಪಟ್ಲ ರೂರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ, ಶಾಲಾ ಸಂಚಾಲಕ ಡಾ.ಕೆ. ನಾರಾಯಣ್ ಶೆಣೈ ಹೇಳಿದರು . ಯು .ಎಸ್ . ನಾಯಕ್ ಪ್ರೌಢಶಾಲೆ ಪಟ್ಲ ಆಶ್ರಯದಲ್ಲಿ ನಡೆದ ಸಮಾಜ ವಿಜ್ಞಾನ

ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ ಸಂಸ್ಕೃತಿಯ ಮಹತ್ವವನ್ನು ಅರಿತುಕೊಳ್ಳಬೇಕು : ಡಾ.ಕೆ.ನಾರಾಯಣ್ ಶೆಣೈ Read More »

ಪಾಕಿಸ್ತಾನ ವಿರುದ್ಧ ಆಡುವುದಿಲ್ಲ ಎಂದ ಭಾರತೀಯರು : ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೇ ರದ್ದು

ಇರ್ಫಾನ್ ಪಠಾಣ್, ಹರ್ಭಜನ್ ಸಿಂಗ್, ಯೂಸುಫ್ ಪಠಾಣ್, ಸುರೇಶ್ ರೈನಾ, ಶಿಖರ್ ಧವನ್ ನಿರ್ಧಾರಕ್ಕೆ ಭಾರಿ ಮೆಚ್ಚುಗೆ ಲಂಡನ್‌ : ಭಾರತದ ತಂಡದ ಐವರು ಪ್ರಮುಖ ಆಟಗಾರರು ಪಾಕಿಸ್ತಾನ ವಿರುದ್ಧ ಯಾವ ಕಾರಣಕ್ಕೂ ಆಡುವುದಿಲ್ಲ ಎಂಬ ಗಟ್ಟಿ ನಿರ್ಧಾರ ತಳೆದ ಪರಿಣಾಮಬಾಗಿ ಕ್ರಿಕೆಟ್‌ ಪಂದ್ಯವೇ ರದ್ದಾಗಿದೆ. ವರ್ಲ್ಡ್​ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಇಂದು ನಡೆಯಬೇಕಿದ್ದ ಇಂಡಿಯಾ ಚಾಂಪಿಯನ್ಸ್ ಹಾಗೂ ಪಾಕಿಸ್ತಾನ್ ಚಾಂಪಿಯನ್ಸ್ ತಂಡಗಳ ನಡುವಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪಾಕಿಸ್ತಾನ್ ವಿರುದ್ಧದ ಈ ಪಂದ್ಯದಿಂದ ಭಾರತೀಯ ಆಟಗಾರರು

ಪಾಕಿಸ್ತಾನ ವಿರುದ್ಧ ಆಡುವುದಿಲ್ಲ ಎಂದ ಭಾರತೀಯರು : ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯವೇ ರದ್ದು Read More »

ತೀವ್ರಗೊಂಡ ಸಿದ್ದರಾಮಯ್ಯ-ಡಿಕೆಶಿ ತಿಕ್ಕಾಟ : ಹೈಕಮಾಂಡ್‌ ತೇಪೆ ವ್ಯರ್ಥ

ಸಾಧನಾ ಸಮಾವೇಶದಲ್ಲಿ ಡಿಸಿಎಂಗೆ ಸಿಎಂ ನೇರ ಟಕ್ಕರ್‌ ಬೆಂಗಳೂರು: ಹೈಕಮಾಂಡ್‌ ಎಷ್ಟೇ ತೇಪೆ ಹಾಕಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಮೂಡಿರುವ ಬಿರುಕು ಮುಚ್ಚಿಕೊಳ್ಳುತ್ತಿಲ್ಲ ಎನ್ನುವುದು ನಿನ್ನೆ ಮೈಸೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಜಗಜ್ಜಾಹೀರಾಗಿದೆ. ಈ ಸಮಾವೇಶದಲ್ಲಿ ಡಿಕೆಶಿಗೆ ಸ್ವಾಗತ ಕೋರಲು ಸಿದ್ದರಾಮಯ್ಯ ನಿರಾಕರಿಸಿರುವುದು ಇದಕ್ಕೂ ಮೊದಲು ಡಿಕೆಶಿ ತನ್ನ ಭಾಷಣ ಮುಗಿಸಿ ಅರ್ಧದಲ್ಲೇ ನಿರ್ಗಮಿಸಿರುವುದು ಕಾಂಗ್ರೆಸ್‌ನೊಳಗೆ ಮತ್ತೊಂದು ಸುತ್ತಿನ ಒಳಜಗಳಕ್ಕೆ ದಾರಿ ಮಾಡಿಕೊಟ್ಟಿದೆ. ಮೈಸೂರಿನಲ್ಲಿ ನಡೆಯುತ್ತಿದ್ದ ಸಮಾವೇಶದಿಂದ ದಿಢೀರ್ ನಿರ್ಗಮಿಸಿದ ಡಿ.ಕೆ ಶಿವಕುಮಾರ್

ತೀವ್ರಗೊಂಡ ಸಿದ್ದರಾಮಯ್ಯ-ಡಿಕೆಶಿ ತಿಕ್ಕಾಟ : ಹೈಕಮಾಂಡ್‌ ತೇಪೆ ವ್ಯರ್ಥ Read More »

ಮತಾಂತರದ ಬೃಹತ್‌ ಜಾಲ ಭೇದಿಸಿದ ಪೊಲೀಸರು : 6 ರಾಜ್ಯಗಳಲ್ಲಿ ಹತ್ತು ಮಂದಿ ಬಂಧನ

ಮತಾಂತರಕ್ಕೆ ಬರುತ್ತಿತ್ತು ಅಮೆರಿಕ, ಕೆನಡದಿಂದ ಫಂಡಿಂಗ್‌ ಲಖನೌ: ಉತ್ತರ ಪ್ರದೇಶದ ಸ್ವಯಂಘೋಷಿತ ದೇವಮಾನವ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತಾಂತರದ ಸೀಕ್ರೆಟ್‌ ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶದ ಪೊಲೀಸರು ಮತ್ತೊಂದು ಮತಾಂತರದ ಬೃಹತ್‌ ಜಾಲವನ್ನ ಭೇದಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನೆರವು ಪಡೆದು ಐಸಿಸ್‌ ಮಾದರಿಯಲ್ಲಿ ಮತಾಂತರ ದಂಧೆ ನಡೆಸುತ್ತಿದ್ದ ಬೃಹತ್‌ ಜಾಲ ಭೇದಿಸಿರುವ ಪೊಲೀಸರು 6 ರಾಜ್ಯಗಳಲ್ಲಿ 10 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರನ್ನು ಗೋವಾದ ಆಯೇಷಾ (ಅಲಿಯಾಸ್ ಎಸ್.ಬಿ. ಕೃಷ್ಣ), ಕೋಲ್ಕತ್ತಾದ ಅಲಿ ಹಸನ್ (ಅಲಿಯಾಸ್ ಶೇಖರ್

ಮತಾಂತರದ ಬೃಹತ್‌ ಜಾಲ ಭೇದಿಸಿದ ಪೊಲೀಸರು : 6 ರಾಜ್ಯಗಳಲ್ಲಿ ಹತ್ತು ಮಂದಿ ಬಂಧನ Read More »

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಸಂಘದಿಂದ ಪತ್ರಿಕಾ ದಿನಾಚರಣೆ | ಎಸ್‍ ಎಸ್‍ ಎಲ್‍ ಸಿ, ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ

ಪುತ್ತೂರು: ಬ್ರ್ಯಾಂಡ್ ಮಂಗಳೂರು ಕಾರ್ಯರೂಪಕ್ಕೆ ಬರುವಲ್ಲಿ ಜಿಲ್ಲೆಯ ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ಅದೇ ರೀತಿ ಜಿಲ್ಲೆಯ ಎರಡನೇ ಅತಿದೊಡ್ಡ ನಗರವಾದ ಪುತ್ತೂರನ್ನು ಕೇಂದ್ರೀಕರಿಸಿಕೊಂಡು ಬ್ರ್ಯಾಂಡ್ ಪುತ್ತೂರು ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಮುಂದೆ ನಿಂತು ಮಹತ್ವದ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್. ಮನೋಹರ್ ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪುತ್ತೂರು

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಸಂಘದಿಂದ ಪತ್ರಿಕಾ ದಿನಾಚರಣೆ | ಎಸ್‍ ಎಸ್‍ ಎಲ್‍ ಸಿ, ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ Read More »

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಸ್ತ್ರ ಸಂಹಿತೆ | ಭಕ್ತರೊಂದಿಗೆ ಚರ್ಚಿಸಿ ತೀರ್ಮಾನ : ಶಾಸಕ ಅಶೋಕ್ ರೈ

ಪುತ್ತೂರು; ಇತಿಹಾಸ ಪ್ರಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವ ಬಗ್ಗೆ ಭಕ್ತರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅವರು, ದೇವರ ದರ್ಶನಕ್ಕೆ ಬರುವ ಸ್ತ್ರೀ ಅಥವಾ ಪುರುಷರು ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು, ಧರಿಸಬಾರದು ಎಂಬುದರ ಬಗ್ಗೆ ನಾನು ಏಕಾಂಗಿಯಾಗಿ ತೀರ್ಮಾನ ಮಾಡುವಂತಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರು ಮಹಾಲಿಂಗೇಶ್ವರನ ಭಕ್ತರೇ ಆಗಿದ್ದಾರೆ, ದೇವರ ದರ್ಶನಕ್ಕೆ ಬರುತ್ತಾರೆ. ದೇವರ ದರ್ಶನಕ್ಕೆ ಬರುವ ಭಕ್ತರು

ಪುತ್ತೂರು ಮಹಾಲಿಂಗೇಶ್ವರ ದೇವಳದಲ್ಲಿ ವಸ್ತ್ರ ಸಂಹಿತೆ | ಭಕ್ತರೊಂದಿಗೆ ಚರ್ಚಿಸಿ ತೀರ್ಮಾನ : ಶಾಸಕ ಅಶೋಕ್ ರೈ Read More »

ಡಿ ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ

ಸಾಧನಾ ಸಮಾವೇಶದಿಂದ ಮರಳುತ್ತಿದ್ದಾಗ ಡಿವೈಡರ್‌ಗೆ ಡಿಕ್ಕಿ ಹೊಡೆದ ವಾಹನ ಮೈಸೂರು: ನಗರದಲ್ಲಿ ನಡೆಯುತ್ತಿದ್ದ ಸಾಧನಾ ಸಮಾವೇಶ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ‌ನಲ್ಲಿ ಈ ಘಟನೆ ಸಂಭವಿಸಿದೆ. ಶ್ರೀರಂಗಪಟ್ಟಣದ ಗೌಡಹಳ್ಳಿ ಟಿಎಂ ಹೊಸೂರು ಸಮೀಪದ ಎಕ್ಸ್‌ಪ್ರೆಸ್ ವೇ ನಲ್ಲಿ ಈ ದುರಂತ ಸಂಭವಿಸಿದೆ. ಡಿವೈಡರ್‌ಗೆ ‌ಢಿಕ್ಕಿಯಾದ ಪರಿಣಾಮ ಆ ಅಪಘಾತ

ಡಿ ಕೆ ಶಿವಕುಮಾರ್ ಬೆಂಗಾವಲು ವಾಹನ ಅಪಘಾತ Read More »

error: Content is protected !!
Scroll to Top