ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್‍ ಇನ್‍ ಸ್ಪೆಕ್ಟರ್ ಆತ್ಮಹತ್ಯೆ

ಬಂಟ್ವಾಳ: ಗ್ರಾಮಾಂತರ ಪೊಲೀಸ್‌ ಠಾಣೆಯ ಸಬ್ ಇನ್‍ ಸ್ಪೆಕ್ಟರ್ ರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಉತ್ತರಕನ್ನಡದ ನಿವಾಸಿ ಕೀರಪ್ಪ (54) ಎಂದು ಆತ್ಮಹತ್ಯೆ ಮಾಡಿಕೊಂಡವರು. ಅವರು ಶಿರಸಿ ಠಾಣೆಯಿಂದ ಸುಮಾರು 5 ತಿಂಗಳ ಹಿಂದೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದರು. ಅವರ ಕುಟುಂಬ ಉತ್ತರ ಕನ್ನಡದಲ್ಲಿಯೇ ವಾಸವಿದ್ದು, ಕೀರಪ್ಪ ಬಂಟ್ವಾಳ ಪೇಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಶನಿವಾರ ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗದೇ, ಫೋನ್ ಕರೆಗಳಿಗೆ ಪ್ರತಿಕ್ರಿಯೆ ನೀಡದೇ ಇದ್ದ ಕಾರಣದಂತೆ ಸಹೋದ್ಯೋಗಿ […]

ಬಂಟ್ವಾಳ ಗ್ರಾಮಾಂತರ ಠಾಣೆಯ ಸಬ್‍ ಇನ್‍ ಸ್ಪೆಕ್ಟರ್ ಆತ್ಮಹತ್ಯೆ Read More »

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ

ಬಿರುಗಾಳಿ ಎಬ್ಬಿಸಲಿದೆ ಆಪರೇಷನ್‌ ಸಿಂದೂರ, ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ನವದೆಹಲಿ : ಸಂಸತ್‌ನ ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು, ವಿಪಕ್ಷ ಇಂಡಿ ಮೈತ್ರಿಕೂಟ ಪಹಲ್ಗಾಮ್‌ ದಾಳಿ, ಆಪರೇಷನ್‌ ಸಿಂದೂರ, ಭಾರತದ ವಿದೇಶಾಂಗ ನೀತಿ, ಬುಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಇತ್ಯಾದಿ ವಿಚಾರಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡು ಸರ್ಕಾರದ ಮೇಲೆ ದಾಳಿಗೆ ಸಿದ್ಧವಾಗಿದೆ. ಆಪರೇಷನ್‌ ಸಿಂದೂರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೀಡುತ್ತಿರುವ ದಿನಕ್ಕೊಂದು ಹೇಳಿಕೆಗಳ ಕುರಿತು ಸ್ವತಹ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿಪಕ್ಷ ಪಟ್ಟು

ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ Read More »

ನಮ್ಮ ಬೆಂಗಳೂರಿನ ‘ ನಮ್ಮ ಮೆಟ್ರೋ ‘ ರೈಲಿಗೆ ಚಾಲಕ ರಹಿತ ಅಂತಾರಾಷ್ಟ್ರೀಯ ಐಎಸ್‌ಎ (Independent Safety Assessment – ISA) ಗ್ರೀನ್ ಸಿಗ್ನಲ್ ವ್ಯವಸ್ಥೆ | ಬೆಂಗಳೂರಿನ ಹಳಿಗಳಿಗೆ ಮತ್ತೊಂದು ಹೈಟೆಕ್ ಕೊಡುಗೆ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿರ್ಮಿಸುತ್ತಿರುವ ಚಾಲಕ ರಹಿತ ಮೆಟ್ರೋ ವ್ಯವಸ್ಥೆಗೆ ಅಂತರರಾಷ್ಟ್ರೀಯ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕ ಸಂಸ್ಥೆಯಿಂದ ಹಸಿರು ನಿಶಾನೆ ದೊರೆತಿದೆ. ಇದು ಬೆಂಗಳೂರಿನ ಮೆಟ್ರೋ ಜಾಲದಲ್ಲಿ ಚಾಲಕ ರಹಿತ ರೈಲುಗಳ ಸುಗಮ-ಸುರಕ್ಷ-ಸ್ವತಂತ್ರ ಸಂಚಾರಕ್ಕೆ ನಾಂದಿ ಹಾಡಲಿದೆ. ಮೊದಲಿಗೆ ವಿಮಾನ ನಿಲ್ದಾಣ ಮಾರ್ಗ (ಬ್ಲೂ ಲೈನ್) ಮತ್ತು ನಂತರದಲ್ಲಿ ಇತರ ಮಾರ್ಗಗಳಲ್ಲಿ ಈ ವ್ಯವಸ್ಥೆಯಡಿಯಲ್ಲಿ ಸಂಚಾರವನ್ನು ಯೋಜಿಸಲಾಗಿದೆ. ಇದು ಅತ್ಯಾಧುನಿಕ ಸಿಗ್ನಲಿಂಗ್ ಮತ್ತು ರೈಲು ನಿಯಂತ್ರಣ ತಂತ್ರಜ್ಞಾನವನ್ನು ಅವಲಂಬಿಸಿದ್ದು, ಮಾನವನ ಹಸ್ತಕ್ಷೇಪವಿಲ್ಲದೆ ರೈಲುಗಳು

ನಮ್ಮ ಬೆಂಗಳೂರಿನ ‘ ನಮ್ಮ ಮೆಟ್ರೋ ‘ ರೈಲಿಗೆ ಚಾಲಕ ರಹಿತ ಅಂತಾರಾಷ್ಟ್ರೀಯ ಐಎಸ್‌ಎ (Independent Safety Assessment – ISA) ಗ್ರೀನ್ ಸಿಗ್ನಲ್ ವ್ಯವಸ್ಥೆ | ಬೆಂಗಳೂರಿನ ಹಳಿಗಳಿಗೆ ಮತ್ತೊಂದು ಹೈಟೆಕ್ ಕೊಡುಗೆ Read More »

ಹಮಾಸ್‌ನನ್ನು ಇನ್ನೋರ್ವ ಕಮಾಂಡರ್‌ನನ್ನು ಸಾಯಿಸಿದ ಇಸ್ರೇಲ್‌

ಉಗ್ರರ 75ಕ್ಕೂ ಹೆಚ್ಚು ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ಟೆಲ್ ಅವಿವ್ : ಹಮಾಸ್‌ನ ಇನ್ನೋರ್ವ ಉನ್ನತ ಕಮಾಂಡರ್ ಬಾಶರ್ ಥಾಬೆಟ್​​ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ಹೇಳಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಭಯೋತ್ಪಾದಕರ 75 ಅಡಗುತಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಐಡಿಎಫ್​ ಹೇಳಿದೆ. ಭಯೋತ್ಪಾದಕ ಮೂಲಸೌಕರ್ಯ, ಭಯೋತ್ಪಾದಕರು ಮತ್ತು ಸುರಂಗಗಳನ್ನು ಪತ್ತೆಹಚ್ಚಿ ನಾಶಪಡಿಸಲಾಗಿದೆ ಎಂದು ಐಡಿಎಫ್ ಹೇಳಿದೆ. ಬಶರ್ ಥಾಬೆಟ್ ಹಮಾಸ್‌ನ ಶಸ್ತ್ರಾಸ್ತ್ರ ಉತ್ಪಾದನಾ ಪ್ರಧಾನ ಕಚೇರಿಯಲ್ಲಿ ಅಭಿವೃದ್ಧಿ ಮತ್ತು ಯೋಜನೆಗಳ ವಿಭಾಗದ ಕಮಾಂಡರ್ ಆಗಿದ್ದ.

ಹಮಾಸ್‌ನನ್ನು ಇನ್ನೋರ್ವ ಕಮಾಂಡರ್‌ನನ್ನು ಸಾಯಿಸಿದ ಇಸ್ರೇಲ್‌ Read More »

ಸುಳ್ಯದ ಯುವಕ ಕಣ್ಣೂರಿನಲ್ಲಿ ಕೆರೆಗೆ ಬಿದ್ದು ಸಾವು

ಸಹಪಾಠಿಯ ಮನೆಗೆ ಹೋದ ವೇಳೆ ಸಂಭವಿಸಿದ ದುರಂತ ಸುಳ್ಯ: ಸುಳ್ಯದ ಯುವಕ ಹದಿಹರೆಯದ ಯುವಕನೊಬ್ಬ ಕೇರಳದ ಕಣ್ಣೂರಿನಲ್ಲಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ಸಂಭವಿಸಿದೆ. ಈತ ಮಂಗಳೂರಿನಲ್ಲಿ ಕಲಿಯುತ್ತಿದ್ದರು. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಬಾಳಿಕಲ ನಿವಾಸಿ, ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಅವರ ಪುತ್ರ, ಮಂಗಳೂರಿನ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ (19) ಮೃತಪಟ್ಟಿರುವ ದುರ್ದೈವಿ. ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ. ಆಸ್ತಿಕ್ ರಾಘವ್

ಸುಳ್ಯದ ಯುವಕ ಕಣ್ಣೂರಿನಲ್ಲಿ ಕೆರೆಗೆ ಬಿದ್ದು ಸಾವು Read More »

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿ ಯುವಕ ಸಾವು

ಬೆಂಗಳೂರಿನಿಂದ ಪ್ರವಾಸ ಬಂದು ಅಪಾಯ ಲೆಕ್ಕಿಸದೆ ಜಲಪಾತಕ್ಕಿಳಿದಿದ್ದ ಯುವಕ ಶಿವಮೊಗ್ಗ: ಹೊಸನಗರ ತಾಲೂಕಿನ ಅಬ್ಬಿ ಫಾಲ್ಸ್‌ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯೊಂದರ ಮ್ಯಾನೇಜರ್ ರಮೇಶ್ (35) ಎಂದು ಗುರುತಿಸಲಾಗಿದೆ. ಐವರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಅಬ್ಬಿ ಫಾಲ್ಸ್‌ನಲ್ಲಿ ಫೋಟೊ ತೆಗೆಯಲು ಫೋಸ್‌ ಕೊಡಲು ಫಾಲ್ಸ್‌ಗೆ ಇಳಿದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಫಾಲ್ಸ್‌ನಲ್ಲಿ ರಮೇಶ್‌ ಕಣ್ಮರೆಯಾಗುವ 20 ಸೆಕೆಂಡ್‌ನ ವಿಡಿಯೋ

ಅಬ್ಬಿ ಫಾಲ್ಸ್‌ನಲ್ಲಿ ಕೊಚ್ಚಿ ಹೋಗಿ ಯುವಕ ಸಾವು Read More »

ತನಿಖೆಗೆ ಎಸ್‌ಐಟಿ ರಚನೆ : ಧರ್ಮಸ್ಥಳದ ವಕ್ತಾರ ಸ್ವಾಗತ

ತನಿಖೆಯಿಂದ ಹಿಂದೆ ಸರಿಯಲಿದ್ದಾರಾ ಇಬ್ಬರು ಐಪಿಎಸ್‌ ಅಧಿಕಾರಿಗಳು? ಧರ್ಮಸ್ಥಳ: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ.ಪಾರ್ಶ್ವನಾಥ್ ಜೈನ್ ಸ್ವಾಗತಿಸಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ‘ಹಲವಾರು ಶವಗಳನ್ನು ಹೂತಿದ್ದೆ’ ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ

ತನಿಖೆಗೆ ಎಸ್‌ಐಟಿ ರಚನೆ : ಧರ್ಮಸ್ಥಳದ ವಕ್ತಾರ ಸ್ವಾಗತ Read More »

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಜಿರುಪಾದೆ ಮಾದರಿ ಗ್ರಾಮ ಸಮಿತಿಯಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಪುತ್ತೂರು ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್, ಮಾದರಿ ಗ್ರಾಮ ಸಮಿತಿ ಬಲ್ನಾಡು ಇದರ ಆಶ್ರಯದಲ್ಲಿ ಆಟಿ ಆಚರಣೆ ಹಾಗೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಭಾನುವಾರ ಬಲ್ನಾಡಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ಸಾಧಕ ವಿದ್ಯಾರ್ಥಿಗಳಿಗೆ  ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾಮದ ಸ್ಥಳೀಯರು ನೀಡಿದ ಸೇವೆಗಾಗಿ ಸಮುದಾಯದ ಸತೀಶ್ ಗೌಡ ಒಳಗುಡ್ಡೆ, ಸೀತಾರಾಮ ಗೌಡ ಕಾಂತಿಲ, ತೀರ್ಥ ಪ್ರಸಾದ್ ಕಾಂತಿಲ, ಅಚ್ಚುತ ಗೌಡ ಕೋಡಿಯಡ್ಕ ಲೋಕೇಶ್ ಗೌಡ ಪಟ್ಟೆ ಅವರನ್ನು ಸನ್ಮಾನಿಸಲಾಯಿತ. 1ನೇ ತರಗತಿಯಿಂದ 10ನೇ ತರಗತಿಯ 

ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಉಜಿರುಪಾದೆ ಮಾದರಿ ಗ್ರಾಮ ಸಮಿತಿಯಿಂದ ಆಟಿ ಆಚರಣೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ Read More »

ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣ: SIT ರಚಿಸಿದ ರಾಜ್ಯ ಸರ್ಕಾರ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ. ಸಂಬಂಧಿಸಿದ ಹಾಗೆ ತನಿಖೆ ನಡೆಸಲು ರಾಜ್ಯ ಸರ್ಕಾರ SIT (ವಿಶೇಷ ತನಿಖಾ ತಂಡ) ವನ್ನು ರಚಿಸಿದೆ. ಡಾ. ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ಒಟ್ಟು ನಾಲ್ಕು ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಎಂ. ಎನ್. ಅನುಚೇತ್ ಮತ್ತು ಸೌಮ್ಯಲತಾ ಇದ್ದಾರೆ. ತನ್ನನ್ನು ಬಳಸಿಕೊಂಡು ಧರ್ಮಸ್ಥಳದ ಸುತ್ತ ಹಲವಾರು ಹೆಣಗಳನ್ನು ಹೂಳಲಾಗಿದೆ ಎಂದು ಕೆಲ ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ

ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣ: SIT ರಚಿಸಿದ ರಾಜ್ಯ ಸರ್ಕಾರ Read More »

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ

ಪುತ್ತೂರು: ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಮೃತದೇಹದ ಜೊತೆ ಪತ್ತೆಯಾದ ಆಧಾರ್ ಕಾರ್ಡ್ ನಿಂದ ಮೃತರನ್ನು ಶಾಜು (52) ಎಂದು ಗುರುತಿಸಲಾಗಿದೆ. ಸದ್ಯ ವರಿಸುದಾರರ ಮಾಹಿತಿಯ ಕೊರತೆಯ ಹಿನ್ನಲೆ ಮೃತದೇಹವನ್ನು ವೆನ್ನಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಮೂಲದ ವ್ಯಕ್ತಿಯ ಮೃತದೇಹ ಮಂಗಳೂರಿನಲ್ಲಿ ಪತ್ತೆ Read More »

error: Content is protected !!
Scroll to Top