ಧರ್ಮಸ್ಥಳ ಪ್ರಕರಣ: ದೂರುದಾರ ವ್ಯಕ್ತಿ SIT ಮುಂದೆ ಹಾಜರ್

ಮಂಗಳೂರು: ದೇಶ ವಿದೇಶಗಳಲ್ಲಿ ಸುದ್ದಿ ಮಾಡುತ್ತಿರುವ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂಬ ಪ್ರಕರಣಕ್ಕೆ ‌ಸಂಬಂಧಿಸಿದಂತೆ SIT ಅಧಿಕಾರಿಗಳು ದೂರುದಾರ ವ್ಯಕ್ತಿಯ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಲ್ಲಿಕಟ್ಟೆಯಲ್ಲಿರುವ ‌SIT ಕಚೇರಿಗೆ ತನ್ನ ವಕೀಲರ ಜೊತೆಗೆ ದೂರುದಾರ ಅನಾಮಧೇಯ ಇಂದು ಆಗಮಿಸಿದ್ದಾಗಿ ತಿಳಿದು ಬಂದಿದೆ. ಆತನನ್ನು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಕ್ಕೆ ಸಂಬಂಧಿಸಿದ ಹಾಗೆ SIT ಅಧಿಕಾರಿಗಳು ಈಗಾಗಲೇ ಸಂಬಂಧಪಟ್ಟ ಠಾಣೆಗೆ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ ಎಂದು ಮಾಹಿತಿ ಇದೆ.

ಧರ್ಮಸ್ಥಳ ಪ್ರಕರಣ: ದೂರುದಾರ ವ್ಯಕ್ತಿ SIT ಮುಂದೆ ಹಾಜರ್ Read More »

ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ಬಂಟ್ವಾಳ : ತಾಲೂಕಿನ ಕೂರಿಯಾಳ ಗ್ರಾಮದ ಇರಾಕೋಡಿಯಲ್ಲಿ ಮೇ 27ರಂದು ನಡೆದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಖಲಂದರ್ ಶಾಫಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12ನೇ ಆರೋಪಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಪುದು ಗ್ರಾಮದ ರೊಟಿ ಗುಡ್ಡೆ ನಿವಾಸಿ ಸಚಿನ್ ಯಾನೆ ಸಚ್ಚು ರೊಟ್ಟಿಗುಡ್ಡೆ (32) ಬಂಧಿತ ಆರೋಪಿ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆ ನಡೆಸಲು ನ್ಯಾಯಾಲಯ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ

ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಹಿಂದೂ ಮಠದಲ್ಲಿ ಮುಸ್ಲಿಂ ಮಹಿಳೆಯ ಧ್ಯಾನ

ಮಾನಸಿಕ ನೆಮ್ಮದಿಗಾಗಿ 11 ದಿನಗಳ ಧ್ಯಾನ ವ್ರತ ಬೆಂಗಳೂರು: ಕೊಪ್ಪಳದ ಪ್ರಸಿದ್ಧ ಗವಿಮಠದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಕಳೆದ ಎಂಟು ದಿನಗಳಿಂದ ಧ್ಯಾನಕ್ಕೆ ಮಾಡುತ್ತಿವುದು ಈ ಭಾಗದಲ್ಲಿ ಅಚ್ಚರಿಗೆ ಕಾರಣವಾಗಿದೆ. ಎಂಟು ದಿಗಳಿಂದ ನಿತ್ಯ ಮಠಕ್ಕೆ ಬರುತ್ತಿರುವ ಮಹಿಳೆ ನಾಗದೇವರ ಮುಂದೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕುದರಿಮೋತಿ ಎಂಬಲ್ಲಿನ ನಿವಾಸಿ ಹಸೀನಾ ಬೇಗಂ ಎಂಬ ಮಹಿಳೆ ಗವಿ ಮಠದಲ್ಲಿ ನಿತ್ಯ ಒಂದು ಗಂಟೆಗಳ ಕಾಲ ಧ್ಯಾನ ಮಾಡುತ್ತಿದ್ದಾರೆ. ಮಠಕ್ಕೆ ಬರುವವರಲ್ಲಿ ಮುಸ್ಲಿಂ ಭಕ್ತರೂ ಇದ್ದಾರೆ.

ಹಿಂದೂ ಮಠದಲ್ಲಿ ಮುಸ್ಲಿಂ ಮಹಿಳೆಯ ಧ್ಯಾನ Read More »

ಕಾರ್ಗಿಲ್ ವಿಜಯ ದಿವಸ್: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರಿಂದ ಯೋಧರಿಗೆ ಗೌರವ ನಮನ

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧರ ಶೌರ್ಯ ಎಲ್ಲರಿಗೂ ಸ್ಪೂರ್ತಿ ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಈ ಯುದ್ಧದಲ್ಲಿ ಹೋರಾಡಿದ ಧೀರ ಯೋಧರಿಗೆ, ಹುತಾತ್ಮರಾದ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರು ಗೌರವ ನಮನಗಳನ್ನು ‌ಸಲ್ಲಿಸಿದ್ದಾರೆ. ರಾಷ್ಟ್ರಪತಿ ಮುರ್ಮು ಅವರು ಯೋಧರ ತ್ಯಾಗವನ್ನು ಸ್ಮರಿಸಿ ಟ್ವೀಟ್ ಮಾಡಿದ್ದು, ಕಾರ್ಗಿಲ್ ವಿಜಯ ದಿವಸ್‌ ಸಂದರ್ಭದಲ್ಲಿ ಮಾತೃಭೂಮಿಗಾಗಿ ‌ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ತೇನೆ. ಈ ದಿನವು ನಮ್ಮ ಯೋಧರ

ಕಾರ್ಗಿಲ್ ವಿಜಯ ದಿವಸ್: ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರಿಂದ ಯೋಧರಿಗೆ ಗೌರವ ನಮನ Read More »

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಕುಂಕುಮಾರ್ಚನೆ ‌ಸಂಪನ್ನ

ಕಡಬ: ತಾಲೂಕಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ಇಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ಮತ್ತು ಕುಂಕುಮಾರ್ಚನೆ ‌ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಕುಡುಪು ನರಸಿಂಹ ತಂತ್ರಗಳ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಭಕ್ತರು ಭಾಗವಹಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ದೇವಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು. ಹಾಗೆಯೇ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಶರವೂರಿನಲ್ಲಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ, ಕುಂಕುಮಾರ್ಚನೆ ‌ಸಂಪನ್ನ Read More »

ಇಂದು ಕಾರ್ಗಿಲ್‌ ವಿಜಯ ದಿವಸ : ಭಾರತದ ಸೈನಿಕರ ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನ

ಜಗತ್ತಿನ ಅತ್ಯಂತ ದುರ್ಗಮ ಪ್ರದೇಶದಲ್ಲಿ ನಡೆದ ಯುದ್ಧವನ್ನು ಗೆದ್ದು ಬೀಗಿದ ನಮ್ಮ ಸೈನಿಕರು ಪುತ್ತೂರು : ಕುತಂತ್ರದಿಂದ ಭಾರತದ ಭೂಭಾಗವನ್ನು ಕಬಳಿಸಲು ಹೊಂಚು ಹಾಕಿದ್ದ ಪಾಕಿಸ್ತಾನವನ್ನು ನಮ್ಮ ಧೀರ ಸೈನಿಕರು ಜಗತ್ತಿನ ಅತ್ಯಂತ ದುರ್ಗಮ ಪ್ರದೇಶದ ಯುದ್ಧದಲ್ಲಿ ಸೋಲಿಸಿ ಹೆಡೆಮುರಿ ಕಟ್ಟಿ ಅದ್ಭುತ ಪರಾಕ್ರಮ ಮೆರೆದ ಕಾರ್ಗಿಲ್‌ ವಿಜಯ ದಿವಸ ಇಂದು. 1999ರ ಜುಲೈ 26ರಂದು ಕೊನೆಗೊಂದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಮೇಲೆ ಭಾರತದ ಸೇನೆ ಸಾಧಿಸಿದ ಗೆಲುವನ್ನು ಸ್ಮರಿಸಲು ಪ್ರತಿವರ್ಷ ಆಪರೇಷನ್ ಕಾರ್ಗಿಲ್‌ ವಿಜಯೋತ್ಸವ ಆಚರಿಸಲಾಗುತ್ತದೆ.

ಇಂದು ಕಾರ್ಗಿಲ್‌ ವಿಜಯ ದಿವಸ : ಭಾರತದ ಸೈನಿಕರ ಪರಾಕ್ರಮಕ್ಕೆ ಗೌರವ ಸಲ್ಲಿಸುವ ದಿನ Read More »

ಧರ್ಮಸ್ಥಳ ಪ್ರಕರಣ : ತನಿಖೆ ಅಧಿಕೃತವಾಗಿ ಆರಂಭ

ಧರ್ಮಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ : ಧರ್ಮಸ್ಥಳ ವ್ಯಾಪ್ತಿಯಲ್ಲಿ ಶವ ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ತಂಡದ ಅಧಿಕಾರಿಗಳು ಶುಕ್ರವಾರ ಧರ್ಮಸ್ಥಳ ಠಾಣೆಯಿಂದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಈ ಪ್ರಕರಣದ ಎಸ್‌ಐಟಿ ತನಿಖೆ ಅಧಿಕೃತವಾಗಿ ಪ್ರಾರಂಭವಾದಂತಾಗಿದೆ. ಎಸ್‌ಐಟಿ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಇತರ ಅಧಿಕಾರಿಗಳು ಧರ್ಮಸ್ಥಳ ಠಾಣೆಗೆ ಆಗಮಿಸಿದ್ದರು.ಧರ್ಮಸ್ಥಳ ಠಾಣೆಯ ಪಿ.ಎಸ್.ಐ ಸಮರ್ಥ್

ಧರ್ಮಸ್ಥಳ ಪ್ರಕರಣ : ತನಿಖೆ ಅಧಿಕೃತವಾಗಿ ಆರಂಭ Read More »

50 ಅಡಿಗಳ ಕೇಸರಿ ಧ್ವಜ ಅಳವಡಿಸಿ 44 ನೇ ವರ್ಷದ ಗಣೇಶೋತ್ಸವಕ್ಕೆ ಪೂರ್ವತಯಾರಿ ಆರಂಭಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ 44 ನೇ ವರ್ಷದ ಗಣೇಶ ಚತುರ್ಥಿಯ ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ ವಿವೇಕಾನಂದ ಪ್ರತಿಮೆಯ ಬಳಿ 50 ಅಡಿ ಇರುವ ಭಗವಾಧ್ವಜವನ್ನು ಅಳವಡಿಸಲಾಯಿತು. RSS ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷ ರವೀಂದ್ರ ಪಿ, ಯುವ ನಾಯಕ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಪುತ್ತೂರು ನಗರ ಮಂಡಲದ ಅಧ್ಯಕ್ಷ ನಿತೇಶ್ ಕಲ್ಲೇಗ ತೆಂಗಿನಕಾಯಿ ಒಡೆಯುವ ಮೂಲಕ ಗಣೇಶೋತ್ಸವದ ಪೂರ್ವ ತಯಾರಿಗೆ ಚಾಲನೆ

50 ಅಡಿಗಳ ಕೇಸರಿ ಧ್ವಜ ಅಳವಡಿಸಿ 44 ನೇ ವರ್ಷದ ಗಣೇಶೋತ್ಸವಕ್ಕೆ ಪೂರ್ವತಯಾರಿ ಆರಂಭಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ Read More »

ಕೊಯನಾಡಿನಲ್ಲಿ ಲಾರಿ – ಕಾರು ಮಧ್ಯೆ ಭೀಕರ ಅಪಘಾತ: ನಾಲ್ವರು ಯುವಕರ ಸಾವು

ಮಡಿಕೇರಿ: ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ‌ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಮೃತರನ್ನು ಗೋಣಿಕೊಪ್ಪದ ನಿಹಾದ್, ರಿಝಾನ್, ಹುಣಸೂರಿನ ರಾಖಿಬ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಮಂಗಳೂರಿನ ಹೊರವಲಯದಲ್ಲಿರುವ ಉಳ್ಳಾಲಕ್ಕೆ ತೆರಳಿ ಅಲ್ಲಿಂದ ತಮ್ಮೂರುಗಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮಡಿಕೇರಿಯಿಂದ ‌ಸುಳ್ಯದ ಕಡೆಗೆ ಬರುತ್ತಿದ್ದ ಲಾರಿ

ಕೊಯನಾಡಿನಲ್ಲಿ ಲಾರಿ – ಕಾರು ಮಧ್ಯೆ ಭೀಕರ ಅಪಘಾತ: ನಾಲ್ವರು ಯುವಕರ ಸಾವು Read More »

ಪುತ್ತೂರು – ಉಪ್ಪಿನಂಗಡಿ ರಸ್ತೆ ದುರಸ್ತಿ ತಕ್ಷಣ ಮಾಡದಿದ್ದಲ್ಲಿ ಬಿಜೆಪಿಯಿಂದ ಪ್ರತಿಭಟನೆ: ಸಂಜೀವ ಮಠಂದೂರ್

ಪುತ್ತೂರು: ನಗರದಿಂದ ಉಪ್ಪಿನಂಗಡಿಗೆ ಸಂಪರ್ಕಿಸುವ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಮಾಡಿ ರಾಜ್ಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಆ ರಸ್ತೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುತ್ತೂರಿನಿಂದ ‌ಸೇಡಿಯಾಪುವಿನ ವರೆಗೆ ರಸ್ತೆ ನಿರ್ವಹಣೆ ಇಲ್ಲದೆ ಜನರು ನಿತ್ಯ ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ಸರಿಪಡಿಸುವತ್ತ ತಕ್ಷಣವೇ ಗಮನ ಹರಿಸದೇ ಹೋದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಮಠಂದೂರ್ ಎಚ್ಚರಿಕೆ ನೀಡಿದ್ದಾರೆ.

ಪುತ್ತೂರು – ಉಪ್ಪಿನಂಗಡಿ ರಸ್ತೆ ದುರಸ್ತಿ ತಕ್ಷಣ ಮಾಡದಿದ್ದಲ್ಲಿ ಬಿಜೆಪಿಯಿಂದ ಪ್ರತಿಭಟನೆ: ಸಂಜೀವ ಮಠಂದೂರ್ Read More »

error: Content is protected !!
Scroll to Top