ಮಂಗಳೂರು ಸೆಂಟ್ರಲ್ – ಶ್ರೀ ಮಾತಾ ವೈಷ್ಣೋದೇವಿ ಕತ್ರಾಗೆ ನೇರ ರೈಲು ಸೇವೆ: ಸಚಿವ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ ಕಿಶೋರ್ ಕುಮಾರ್ ಪುತ್ತೂರು
ಪುತ್ತೂರು: ಕರಾವಳಿ ಕರ್ನಾಟಕ ಪ್ರದೇಶದ ದೀರ್ಘಕಾಲದ ಬೇಡಿಕೆಯಾದ ಮಂಗಳೂರು ಸೆಂಟ್ರಲ್ (MAQ) ನಿಂದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ (SVDK) ಗೆ ನೇರ ಮತ್ತು ಸಮಯ ದಕ್ಷ ರೈಲು ಸೇವೆಯನ್ನು ಒದಗಿಸಲು ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಮನವಿ ಮಾಡಿದ್ದಾರೆ. ಕೆಲ ವಾರಗಳ ಹಿಂದೆ ಹಲವರು ನವಯುಗ ಎಕ್ಸ್‌ಪ್ರೆಸ್ ಪುನರಾರಂಭ ಮಾಡಿ, ಇದನ್ನು ಹಾಸನ, ಹುಬ್ಬಳ್ಳಿ – ಮೀರಜ್ ಮಾರ್ಗವಾಗಿ ದೆಹಲಿಗೆ ಸಂಪರ್ಕಿಸುವಂತೆ ಕೋರಿ […]










