ಪ್ರಧಾನಿ ಅವರಿಗೆ ನೀಡಿದ ಬೆಳ್ಳಿ ಗಣೇಶನ ಪ್ರತಿಮೆ ಸ್ವಂತ ಹಣದಲ್ಲಿ ತಂದದ್ದು: ಡಿ.ಕೆ. ಶಿವಕುಮಾರ್

ಬೆಂಗಳೂರು: ಮೆಟ್ರೋ ಉದ್ಘಾಟನಾ ಸಂದರ್ಭದಲ್ಲಿ ಡಿಸಿಎಂ ‌ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿ ಅವರಿಗೆ ನೀಡಿದ ಬೆಳ್ಳಿ ವಿಗ್ರಹದ ಬಗ್ಗೆ ಸ್ಪಷ್ಟ ನೆ ನೀಡಿದ್ದು, ಬೇರೆಯವರ ಉಡುಗೊರೆಯನ್ನು ಇನ್ನೊಬ್ಬರಿಗೆ ನೀಡುವ ದುಸ್ಥಿತಿ ‌ತಮಗೆ ಬಂದಿಲ್ಲ ಎಂದು ಹೇಳಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಅವರಿಗೆ ನೀಡಿದ ಬೆಳ್ಳಿ ಗಣಪತಿ ಸ್ವಂತದ್ದು ಎಂದು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರಿಗೆ ನೀಡಿದ ಗಣೇಶನನ್ನು ಬಿಜೆಪಿಯವರೊಬ್ಬರು ತಂದಿದ್ದು ಎಂಬ ವರದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಈ ವಿಷಯಕ್ಕೆ ಡಿಕೆಶಿ ‌ಸ್ಪಷ್ಟನೆ ನೀಡಿರುವುದಾಗಿದೆ. […]

ಪ್ರಧಾನಿ ಅವರಿಗೆ ನೀಡಿದ ಬೆಳ್ಳಿ ಗಣೇಶನ ಪ್ರತಿಮೆ ಸ್ವಂತ ಹಣದಲ್ಲಿ ತಂದದ್ದು: ಡಿ.ಕೆ. ಶಿವಕುಮಾರ್ Read More »

ಗೋ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ: ಸಂಚಾರ ಅಸ್ತವ್ಯಸ್ತ

ಬೆಳ್ತಂಗಡಿ: ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಗುರುವಾಯನಕೆರೆಯಲ್ಲಿ ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ಇದರಲ್ಲಿ ಗೋ ಸಾಗಾಟ ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ. ಇನ್ನೋವಾ ‌ಕಾರಿನಲ್ಲಿ ಆರೋಪಿಗಳು ಗೋವುಗಳನ್ನು ‌ಸಾಗಾಟ ಮಾಡುತ್ತಿದ್ದು, ಎರಡು ನಂಬರ್ ಪ್ಲೇಟ್‌ಗಳನ್ನು ಬಳಸಿ ಈ ಕೃತ್ಯ ನಡೆಸಲಾಗಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಸಂಚಾರ ಅಸ್ತವ್ಯಸ್ತವಾಗಿತ್ತು. ಅಪಘಾತದಿಂದ ಕಾರಿನಲ್ಲಿದ್ದ ಹಸು ರಸ್ತೆಗೆ ಬಿದ್ದಿದ್ದು, ಇದರಿಂದಾಗಿ ಅಕ್ರಮ

ಗೋ ಸಾಗಾಟ ಮಾಡುತ್ತಿದ್ದ ಕಾರು ಢಿಕ್ಕಿ: ಸಂಚಾರ ಅಸ್ತವ್ಯಸ್ತ Read More »

ಸ್ವಾತಂತ್ರ್ಯ ಸಂಭ್ರಮ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಅಮಿತ್ ಶಾ

ನವದೆಹಲಿ: ದೇಶದ ಸ್ವಾತಂತ್ರ್ಯ ಸಂಭ್ರಮದ ಹಿನ್ನೆಲೆಯಲ್ಲಿ ದೇಶದ ತುಂಬೆಲ್ಲಾ ‌ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ. ಶಾ ಅವರು ತಮ್ಮ ಪತ್ನಿಯ ಜೊತೆ‌ ನವದೆಹಲಿಯ ತಮ್ಮ ಮನೆಯಲ್ಲಿ ತಿರಂಗಾ ಹಾರಿಸಿದ್ದು, ಈ‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಭಿಯಾನ ಅಝಾದಿ ಕಾ ಅಮೃತ ಮಹೋತ್ಸವದ ಕಾಲದಲ್ಲಿ ಆರಂಭವಾಗಿದ್ದು, ಇದನ್ನು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ಘೋಷಿಸಿತು. ಭಾರತೀಯರೆಲ್ಲರೂ ತಿರಂಗಾವನ್ನು ತಮ್ಮ ಮನೆಗಳ ಮೇಲೆ

ಸ್ವಾತಂತ್ರ್ಯ ಸಂಭ್ರಮ: ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಅಮಿತ್ ಶಾ Read More »

ಧರ್ಮಸ್ಥಳ ತನಿಖೆ ಮುಗಿಯುವ ಮೊದಲೇ ತೀರ್ಪು ಕೊಡುವುದು ಬೇಡ : ಸ್ಪೀಕರ್‌ ಖಾದರ್‌ ಮನವಿ

ಸದನದಲ್ಲಿ ಇನ್ನಷ್ಟು ಚರ್ಚೆಗೆ ಅವಕಾಶ ಕೊಡುವ ಭರವಸೆ ಕೊಟ್ಟ ಸ್ಪೀಕರ್‌ ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಮುಗಿಯುವವರೆಗೆ ಧಾರ್ಮಿಕ ಸ್ಥಳದ ಪಾವಿತ್ರ್ಯವನ್ನು ಎಲ್ಲರೂ ಕಾಪಾಡಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮನವಿ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ವಿಧಾನಸೌಧಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ಬಗ್ಗೆ ಈಗಾಗಲೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಮಂಗಳವಾರ ವಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿದ್ದವು. ಶೂನ್ಯವೇಳೆಯಲ್ಲಿ ಅವಕಾಶ ಕೊಟ್ಟಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ಕೊಟ್ಟಿದೆ. ಮತ್ತಷ್ಟು ಚರ್ಚೆಗೆ ಅವಕಾಶ ಬೇಕು

ಧರ್ಮಸ್ಥಳ ತನಿಖೆ ಮುಗಿಯುವ ಮೊದಲೇ ತೀರ್ಪು ಕೊಡುವುದು ಬೇಡ : ಸ್ಪೀಕರ್‌ ಖಾದರ್‌ ಮನವಿ Read More »

ವಿಜಯಪುರ-ಮಂಗಳೂರು ರೈಲು ಇನ್ನು ಕಾಯಂ ಸಂಚಾರ

ಸೆ.1ರಿಂದ ಕಾಯಂಗೊಳಿಸಿ ನೈಋತ್ಯ ರೈಲ್ವೆ ಆದೇಶ ಮಂಗಳೂರು: ವಿಜಯಪುರ–ಮಂಗಳೂರು ನಡುವಿನ ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377/78 ವಿಶೇಷ ರೈಲು) ಇನ್ನು ಮುಂದೆ ಕಾಯಂ ಆಗಿ ಓಡಲಿದೆ. ಇಷ್ಟರ ತನಕ ತಾತ್ಕಾಲಿಕ ನೆಲೆಯಲ್ಲಿ ಸಂಚಾರ ನಡೆಸುತ್ತಿದ್ದ ಈ ರೈಲಿನ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿತ್ತು. ಇದೀಗ ನೈರುತ್ಯ ರೈಲ್ವೆ ವಲಯ ರೈಲು ಸೇವೆಯನ್ನು ಕಾಯಂಗೊಳಿಸಿ ಆದೇಶ ಹೊರಡಿಸಿದೆ. ವಿಜಯಪುರದಿಂದ ಸೆಪ್ಟೆಂಬರ್ 1 ಹಾಗೂ ಮಂಗಳೂರು ಸೆಂಟ್ರಲಿನಿಂದ ಸೆಪ್ಟೆಂಬರ್ 2ರಿಂದ ಈ ರೈಲು ಕಾಯಂ ರೈಲಾಗಿ ಓಡಲಿದೆ. ಈ ರೈಲನ್ನು

ವಿಜಯಪುರ-ಮಂಗಳೂರು ರೈಲು ಇನ್ನು ಕಾಯಂ ಸಂಚಾರ Read More »

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ 3 ಕಿ.ಮೀ. ವ್ಯಾಪ್ತಿಯಲ್ಲಿ ಆ.15ರಿಂದ ಪ್ಲಾಸ್ಟಿಕ್‌ ನಿಷೇಧ

ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ; ಬಳಸಿದರೆ ಕಠಿಣ ದಂಡನೆ ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.15ರಿಂದ ಏಕಬಳಕೆಯ ಪ್ಲಾಸ್ಟಿಕ್‌ ಚೀಲಗಳ ಬಳಕೆ ಸಂಪೂರ್ಣವಾಗಿ ರದ್ದಾಗಲಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್‌ ಉತ್ಪಾದನೆ, ಸಂಗ್ರಹ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದ್ದು, ಈ ಪ್ರಕಾರ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಪ್ಲಾಸ್ಟಿಕ್‌ ಬಳಕೆ ನಿಷೇಧವಾಗಲಿದೆ. ಪ್ಲಾಸ್ಟಿಕ್‌ನ ನೀರಿನ ಬಾಟಲಿ ಅಂತೆಯೇ ಏಕಬಳಕೆಯ ತೆಳು ಪ್ಲಾಸ್ಟಿಕ್‌ ಚೀಲಗಳು ಸೇರಿದಂತೆ ಎಲ್ಲ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ 3 ಕಿ.ಮೀ. ವ್ಯಾಪ್ತಿಯಲ್ಲಿ ಆ.15ರಿಂದ ಪ್ಲಾಸ್ಟಿಕ್‌ ನಿಷೇಧ Read More »

ನಿಲ್ಲಿಸಿದ್ದ ಬಸ್ಸಿನ ಒಳಗೆ ಬೆಂಕಿ ಅವಘಡ : ಅಪರಿಚಿತ ವ್ಯಕ್ತಿ ಸಜೀವ ದಹನ

ಮೂರು ತಿಂಗಳಿಂದ ರಸ್ತೆ ಬದಿ ಅನಾಥ ಸ್ಥಿತಿಯಲ್ಲಿದ್ದ ಬಸ್‌ ಬೆಂಗಳೂರು: ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಬಳಿಯೇ ಶಾಲಾ ವಾಹನವೊಂದರ ಒಳಗೆ ಬೆಂಕಿ ಅವಘಡ ಸಂಭವಿಸಿ ಅದರೊಳಗಿದ್ದ ವ್ಯಕ್ತಿ ಸಜೀವ ದಹನ ಆದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಒಎಂಬಿಆರ್‌ ಲೇಔಟ್‌ನಲ್ಲಿ ರಾತ್ರಿ 10 ಗಂಟೆ ವೇಳೆಗೆ ಬಸ್ಸಿನ ಒಳಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕದಳ ವಾಹನ ದೌಡಾಯಿಸಿ ಬೆಂಕಿ‌ ನಂದಿಸಿದೆ. ಆದರೆ ಬಸ್ಸಿನ ಒಳಗೆ ಇದ್ದ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಿಲ್ಲ. ಬಸ್‌ನ ಒಳಗೆ ಸಂಪೂರ್ಣ ಸುಟ್ಟು ಕರಕಲಾದ

ನಿಲ್ಲಿಸಿದ್ದ ಬಸ್ಸಿನ ಒಳಗೆ ಬೆಂಕಿ ಅವಘಡ : ಅಪರಿಚಿತ ವ್ಯಕ್ತಿ ಸಜೀವ ದಹನ Read More »

ನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವು

ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಸಂಭವಿಸಿದ ಭೀಕರ ಅಪಘಾತ ಜೈಪುರ: ಪಿಕ್​​ಅಪ್ ವ್ಯಾನ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಕ್ಕಳು ಸೇರಿ 10 ಮಂದಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ದೌಸಾ ಎಂಬಲ್ಲಿ ಇಂದು ನಸುಕಿನ ಹೊತ್ತು ನಡೆದಿದೆ. ಪಿಕ್‌ಅಪ್‌ ವ್ಯಾನಿನಲ್ಲಿದ್ದವರು ಖತುಶ್ಯಾಮ್​ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರಂತ ನಸುಕಿನ 3.30ರ ವೇಳೆಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 7-8 ಜನರನ್ನು ಜೈಪುರದ ಎಸ್​ಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿಂತಿದ್ದ ಲಾರಿಗೆ ವ್ಯಾನ್‌ ಡಿಕ್ಕಿ : 7 ಮಕ್ಕಳ ಸಹಿತ 10 ಮಂದಿ ಸಾವು Read More »

ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ

ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿರುವ ಬಿಜೆಪಿ ಶಾಸಕರು ಬೆಂಗಳೂರು: ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿ ಹಿಂದುಗಳ ಪುಣ್ಯಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಅಪಪ್ರಚಾರ ಹಾಗೂ ತೇಜೋವಧೆಯ ವಿರುದ್ಧ ಬಿಜೆಪಿ ಅಖಾಡಕ್ಕಿಳಿದಿದೆ. ತಲೆಬುರುಡೆ ಶೋಧಕ್ಕಾಗಿ ಧರ್ಮಸ್ಥಳದಲ್ಲಿ ಕಳೆದ ಸುಮಾರು 14 ದಿನಗಳಿಂದ ನಡೆಯುತ್ತಿರುವ ಅಗೆತ ಕಾರ್ಯಾಚರಣೆ ಹಾಗೂ ಇದರ ಸುತ್ತಮುತ್ತ ನಡೆಯುತ್ತಿರುವ ಬೆಳವಣಿಗೆಗಳಿಂದ ಧರ್ಮಸ್ಥಳದ ಪಾವಿತ್ರ್ಯಕ್ಕೆ ಅಪಚಾರವಾಗುತ್ತಿದೆ ಎಂದು ಬಿಜೆಪಿ ಶಾಸಕರು ಸದನದಲ್ಲೂ ಮಾತನಾಡಿದ್ದಾರೆ. ಇದರ ಬೆನ್ನಿಗೆ ಬಿಜೆಪಿ ಧರ್ಮಸ್ಥಳ ಚಲೋ

ಆ.17ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ Read More »

ಕೆಂಪುಕಲ್ಲು ಗಣಿಗಾರಿಕೆಗೆ ಶೀಘ್ರ ಸರಳ ನಿಯಮ ರಚನೆ

ಹೋರಾಟಕ್ಕೆ ಮಣಿದ ಸರ್ಕಾರ; ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಹೊಸ ನಿಯಮ ರಚಿಸುವ ತೀರ್ಮಾನ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಇತ್ತೀಚೆಗೆ ತಲೆದೋರಿರುವ ಕೆಂಪುಕಲ್ಲು ಅಭಾವದ ವಿರುದ್ಧ ನಡೆಸಿದ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದ್ದು, ಸರ್ಕಾರ ಶೀಘ್ರದಲ್ಲೇ ಕೆಂಪುಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ಹೊಸ ನಿಯಮ ರಚಿಸಲು ನಿರ್ಧರಿಸಿದೆ. ಕರಾವಳಿ ಭಾಗದಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ವಿಚಾರದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಕೆಲ

ಕೆಂಪುಕಲ್ಲು ಗಣಿಗಾರಿಕೆಗೆ ಶೀಘ್ರ ಸರಳ ನಿಯಮ ರಚನೆ Read More »

error: Content is protected !!
Scroll to Top