ಆ.16: ಪುತ್ತೂರಿನಲ್ಲಿ ಶ್ರೀಕೃಷ್ಣ ಲೋಕ

ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ 27ನೇ ವರ್ಷದ ಶ್ರೀಕೃಷ್ಣ ಲೋಕ ಆ.16 ಶನಿವಾರ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮೋಹನ್ ಕೆ. ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅವರು, ಅಂದು ಬೆಳಗ್ಗೆ 9 ಗಂಟೆಗೆ ವಿವೇಕಾನಂದ ಶಿಶು ಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. 9.30ಕ್ಕೆ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಪರ್ಲಡ್ಕ ರಸ್ತೆಯಿಂದ ಮುಖ್ಯ ರಸ್ತೆಗೆ ಬಂದು ಶ್ರೀ ಮಹಾಲಿಂಗೇಶ್ವರ ದೇವಳದ […]

ಆ.16: ಪುತ್ತೂರಿನಲ್ಲಿ ಶ್ರೀಕೃಷ್ಣ ಲೋಕ Read More »

ದೇವಾಂಗ ಸಮಾಜದಿಂದ ಆಟಿಕೂಟ

ಪುತ್ತೂರು: ಕೌಟುಂಬಿಕ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಆಟಿಕೂಟದಂಥ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಇಲ್ಲಿ ಒಟ್ಟಾಗಿ ಕಳೆಯುವ ಮೂಲಕ ನಾವು ನಮ್ಮೊಳಗಿನ ಐಕ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲೂ ಇದೇ ಮಾದರಿಯಲ್ಲಿ ಏಕತೆ ಮತ್ತು ಸಂತೋಷಕ್ಕಾಗಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪುತ್ತೂರು ದೇವಾಂಗ ಸೇವಾ ಸಮಾಜದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಕುಂಬ್ರ ಹೇಳಿದರು. ಸಂಘದ ವತಿಯಿಂದ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಆಟಿ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಘದ

ದೇವಾಂಗ ಸಮಾಜದಿಂದ ಆಟಿಕೂಟ Read More »

ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ತಿರಂಗಾ ಯಾತ್ರೆ

ಪುತ್ತೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ಪುತ್ತೂರು ಮಂಡಲದ ವತಿಯಿಂದ ನಗರದಲ್ಲಿ ಮಂಗಳವಾರ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಯಿತು. ಪಕ್ಷದ ಕಚೇರಿಯಿಂದ ಹೊರಟು ನಗರದ ಮುಖ್ಯ ರಸ್ತೆಗಳಲ್ಲಿ ಸಾಗಿ ಮರಳಿ ಕಚೇರಿ ಮುಂಭಾಗದಲ್ಲಿ ಯಾತ್ರೆ ಸಮಾಪನಗೊಂಡಿತು. ರಾಷ್ಟಧ್ವಜವನ್ನು ಹಿಡಿದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್ ಸೇರಿದಂತೆ ಪಕ್ಷದ ಹಿರಿಯ ಮುಖಂಡರು,

ಪುತ್ತೂರು ಬಿಜೆಪಿ ಮಂಡಲದ ವತಿಯಿಂದ ತಿರಂಗಾ ಯಾತ್ರೆ Read More »

ಆ.27 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚೌತಿ : ಮೋದಕ ಹೋಮದ ಸೇವಾ ರಶೀದಿ ಬಿಡುಗಡೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಸಂದರ್ಭ ಗಣೇಶನಿಗೆ ಪ್ರಿಯವಾದ ಮೋದಕ ಹೋಮ ಆ.27ರಂದು ನಡೆಯಲಿದ್ದು, ಇದರ ಮೋದಕ ಸೇವಾ ರಶೀದಿಯನ್ನು ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು. ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಪ್ರಾರ್ಥನೆ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಪ್ರತೀ ವರ್ಷ ಗಣೇಶ ಚತುರ್ಥಿಯಂದು 108 ಕಾಯಿ ಗಣಪತಿ ಹೋಮ ನಡೆಯುತ್ತದೆ. ಈ ಬಾರಿ ವಿಶೇಷವಾಗಿ ಗಣಪತಿಗೆ ಅತಿ ಪ್ರಿಯವಾದ ಮೋದಕ ಹೋಮ ಮಾಡುತ್ತಿದ್ದೇವೆ. ಯಾವ

ಆ.27 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಗಣೇಶ ಚೌತಿ : ಮೋದಕ ಹೋಮದ ಸೇವಾ ರಶೀದಿ ಬಿಡುಗಡೆ Read More »

ಜಿಪಿಆರ್ ಸಿಗ್ನಲ್ ಅಸ್ಪಷ್ಟ: ಅನಾಮಿಕನ ಸೂಚನೆಯಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳು ದೂರುದಾರ ಮಾಸ್ಕ್‌ಮ್ಯಾನ್ ಗುರುತಿಸಿದ 13 ನೇ ಸ್ಥಳದಲ್ಲಿ ಕಾರ್ಯಾಚರಣೆ ಆರಂಭ ಮಾಡಿದೆ. ಜಿಪಿಆರ್ ಸಿಗ್ನಲ್ ಸ್ಪಷ್ಚವಿಲ್ಲದಿದ್ದರೂ ಅನಾಮಿಕ ದೂರುದಾರನ ಸೂಚನೆಯಂತೆ ಈ ಸ್ಥಳದಲ್ಲಿ ಶವದ ಕಳೇಬರದ ಹುಡುಕಾಟ ನಡೆಸಲಾಗುತ್ತಿದೆ. ಧರ್ಮಸ್ಥಳ ಸ್ನಾನಘಟ್ಟದ ಕಿಂಡಿ ಅಣೆಕಟ್ಟಿನ ಸಮೀಪ ಈ ಕಾರ್ಯಾಚರಣೆ ನಡೆಸಲಾಗಿದೆ. ಎಸಿ ಸ್ಟೆಲ್ಲಾ ವರ್ಗೀಸ್, SIT ಅಧಿಕಾರಿಗಳು ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜಿಪಿಆರ್ ಸಿಗ್ನಲ್ ಅಸ್ಪಷ್ಟ: ಅನಾಮಿಕನ ಸೂಚನೆಯಂತೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು Read More »

ಸೋನಿಯಾ ಗಾಂಧಿ ಆಪ್ತನ ಪುತ್ರನಿಂದ ಪ್ರಧಾನಿ ಮೋದಿ ಅವರಿಗೆ ಬಹುಪರಾಕ್

ಕಾಂಗ್ರೆಸ್ ಬಗ್ಗೆ ಫೈಸಲ್ ‌ಪಟೇಲ್ ಹೇಳಿದ್ದೇನು ಗೊತ್ತಾ? ನವದೆಹಲಿ: ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಆಪ್ತ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಜೈ ಎಂದಿದ್ದು, ಅವರ ಕೈಯಲ್ಲಿ ದೇಶ‌ ಸುರಕ್ಷಿತವಾಗಿದೆ ಎಂದು ಕೊಂಡಾಡಿದ್ದಾರೆ. ಹಾಗೆಯೇ ತನಗೆ ಕಾಂಗ್ರೆಸ್ ಪಕ್ಷದ ಮೇಲೆ ಯಾವ ಅಸಮಾಧಾನ ಸಹ ಇಲ್ಲ. ಆದರೆ ಸಾರ್ವಜನಿಕ ಜೀವನದಿಂದ ಕೆಲಕಾಲ ದೂರವಿರುವುದಾಗಿ ಹೇಳಿದ್ದಾರೆ. ಜೊತೆಗೆ ತಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವುದನ್ನು ನಿಲ್ಲಿಸಿದ್ದು, ತಮ್ಮ ತಂದೆಯ

ಸೋನಿಯಾ ಗಾಂಧಿ ಆಪ್ತನ ಪುತ್ರನಿಂದ ಪ್ರಧಾನಿ ಮೋದಿ ಅವರಿಗೆ ಬಹುಪರಾಕ್ Read More »

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳುವವರಿಗೆ ಜಾಗವಿಲ್ಲ: ಅರವಿಂದ ಬೆಲ್ಲದ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಕಲಹಕ್ಕೆ ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ ತಲೆದಂಡವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸತ್ಯ ಹೇಳುವವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವಿಲ್ಲ. ಸ್ವತಃ ರಾಜಣ್ಣ ಅವರೇ ತಮ್ಮ ಉಚ್ಛಾಟನೆಯ ಹಿಂದೆ ಷಡ್ಯಂತ್ರ ಇರುವುದಾಗಿ ಹೇಳಿಕೊಂಡಿದ್ದಾರೆ. ಅವರು ಮಾಡಿರುವ ಆರೋಪ ನೂರಕ್ಕೆ ನೂರು ಸತ್ಯ ಎಂದು ಬೆಲ್ಲದ್ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕಿವಿಗೆ ರಾಜಣ್ಣ ಎಲ್ಲೋ

ಕಾಂಗ್ರೆಸ್ ಪಕ್ಷದಲ್ಲಿ ಸತ್ಯ ಹೇಳುವವರಿಗೆ ಜಾಗವಿಲ್ಲ: ಅರವಿಂದ ಬೆಲ್ಲದ್ Read More »

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್‌ನಲ್ಲಿ ಜಿಪಿಆರ್ ಕಾರ್ಯಾಚರಣೆಯಲ್ಲೂ ಸಿಕ್ಕಿಲ್ಲ ಯಾವುದೇ ಸುಳಿವು

ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ 13 ನೇ ಪಾಯಿಂಟ್ ನಲ್ಲಿ ಜಿಪಿಆರ್ ಬಳಸಿ ಶೋಧ ಮಾಡಲಾಗಿದ್ದು, ಸುತ್ತಮುತ್ತಲ 200 ಮೀ. ಸ್ಥಳದಲ್ಲಿ ಕಳೇಬರದ ಯಾವುದೇ ಕುರುಹುಗಳ ಸಿಗ್ನಲ್ ಸಿಕ್ಕಿಲ್ಲ ಎಂದು ಹೇಳಲಾಗಿದೆ. ಸಿಗ್ನಲ್ ಸಿಕ್ಕಲ್ಲಿ ‌ಆ ಪ್ರದೇಶವನ್ನು ಅಗೆಯಲು ಹಿಟಾಚಿಯ ವ್ಯವಸ್ಥೆ ಸಹ ಮಾಡಲಾಗಿತ್ತು. ಆದರೆ ಗುರುತಿಸಲಾದ ಪ್ರದೇಶದಲ್ಲಿ ಮತ್ತು ಅಜಿಕುರಿ ರಸ್ತೆಯಲ್ಲಿಯೂ ಜಿಪಿಆರ್ ಬಳಸಿ ಸಿಗ್ನಲ್ ಸಿಗುವುದೋ ಎಂದು ಪರಿಶೀಲನೆ ನಡೆಸಲಾಗಿದ್ದು, ಕಳೇಬರದ ಕುರುಹುಗಳಿರುವ ಯಾವುದೇ ಸಿಗ್ನಲ್ ದೊರೆತಿಲ್ಲ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್‌ನಲ್ಲಿ ಜಿಪಿಆರ್ ಕಾರ್ಯಾಚರಣೆಯಲ್ಲೂ ಸಿಕ್ಕಿಲ್ಲ ಯಾವುದೇ ಸುಳಿವು Read More »

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ಆರಂಭ

ಧರ್ಮಸ್ಥಳ: ನೂರಾರು ಶವಗಳನ್ನು ‌ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಅನಾಮಿಕ ದೂರುದಾರ ಗುರುತು ಮಾಡಿದ 13 ನೇ ಸ್ಥಳದಲ್ಲಿ ಜಿಪಿಆರ್ ಯಂತ್ರ ಬಳಸಿ ಕಾರ್ಯಾಚರಣೆಯನ್ನು SIT ತಂಡ ಆರಂಭ ಮಾಡಿದೆ. ಈ ಕಾರ್ಯಾಚರಣೆಯ ಹಿನ್ನಲೆಯಲ್ಲಿ ಆ. 11 ರಂದು ಜಿಪಿಆರ್ ಯಂತ್ರದ ಪ್ರಾಯೋಗಿಕ ಕಾರ್ಯಾಚರಣೆ ನಡೆದಿತ್ತು. ಇಂದು ಬೆಳಗ್ಗೆ 11.15 ರ ಸುಮಾರಿಗೆ ಈ ಕಾರ್ಯಾಚರಣೆಯನ್ನು ಅಧಿಕಾರಿಗಳು ಆರಂಭ ಮಾಡಿದ್ದು, ಇಲ್ಲೇನು ‌ಸಿಗುತ್ತದೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್‌ನಲ್ಲಿ ಕಾರ್ಯಾಚರಣೆ ಆರಂಭ Read More »

ರೇಣುಕಾಸ್ವಾಮಿ ಹತ್ಯೆ: ದರ್ಶನ್, ಪವಿತ್ರಾ ಸೇರಿದಂತೆ ಇತರ ಆರೋಪಿಗಳು ಕೋರ್ಟ್‌ಗೆ ಹಾಜರು

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿಗಳಾಗ ನಟ ದರ್ಶನ್ ತೂಗುದೀಪ್, ಪವಿತ್ರಾ ಸೇರಿದಂತೆ ಇತರರು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸಿಸಿಎಚ್ 63 ರ ನ್ಯಾಯಾಧೀಶ ಮುಂದೆ ಆರೋಪಿಗಳು ಹಾಜರಾಗಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 9 ಕ್ಕೆ ಮುಂದೂಡಿ ಆದೇಶ ಹೊರಡಿಸಲಾಗಿದೆ. ದರ್ಶನ್ ಮತ್ತು ಪವಿತ್ರಾ ಇಬ್ಬರೂ ಕೋರ್ಟ್ ಆವರಣದಲ್ಲೇ ಇದ್ದರೂ ಪರಸ್ಪರ ಮಾತನಾಡಿಲ್ಲ ಎಂದು ತಿಳಿದು ಬಂದಿದೆ. ದರ್ಶನ್, ಪವಿತ್ರಾ ಸೇರಿದಂತೆ ಇತರ ಆರೋಪಿಗಳಿಗೆ ನೀಡಿದ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ

ರೇಣುಕಾಸ್ವಾಮಿ ಹತ್ಯೆ: ದರ್ಶನ್, ಪವಿತ್ರಾ ಸೇರಿದಂತೆ ಇತರ ಆರೋಪಿಗಳು ಕೋರ್ಟ್‌ಗೆ ಹಾಜರು Read More »

error: Content is protected !!
Scroll to Top