ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಂಟ್ವಾಳ ಉಪತಹಶೀಲ್ದಾರ್‌, ಮತ್ತಿಬ್ಬರು

ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್‌ಹ್ಯಾಂಡ್‌ ಆಗಿ ಹಿಡಿದ ಪೊಲೀಸರು ಬಂಟ್ವಾಳ : ಜಮೀನಿಗೆ ಪೌತಿ ಖಾತೆ ಮಾಡಿಕೊಡಲು 20 ರೂ. ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಟ್ವಾಳ ಉಪತಹಶೀಲ್ದಾರ್‌ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ರೆಡ್‌ಹ್ಯಾಂಡ್‌ ಅಗಿ ಹಿಡಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಲಂಚ ಪಡೆಯುತ್ತಿರುವಾಗಲೇ ಉಪತಹಶೀಲ್ದಾರ್ ಸೇರಿದಂತೆ ಮೂವರು ವ್ಯಕ್ತಿಗಳನ್ನು ಹಿಡಿದು ಪ್ರಕರಣ ದಾಖಲಸಿಕೊಂಡಿದ್ದಾರೆ. ಆರೋಪಿಗಳನ್ನು ಉಪತಹಶೀಲ್ದಾರ್ ರಾಜೇಶ್ ನಾಯಕ್, […]

ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬಂಟ್ವಾಳ ಉಪತಹಶೀಲ್ದಾರ್‌, ಮತ್ತಿಬ್ಬರು Read More »

ಅನಾಮಿಕ ದೂರುದಾರನನ್ನು ಒದ್ದು ಒಳಗೆ ಹಾಕಿ: ಈರಣ್ಣ ಕಡಾಡಿ

ಬೆಳಗಾವಿ: ಧಾರ್ಮಿಕ ಶ್ರದ್ಧಾ ಕೇಂದ್ರ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುತ್ತಿರು‌ವವರ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ದೂರುದಾರನನ್ನು ಬಂಧಿಸಿ ಈ ನಾಟಕಕ್ಕೆ ಮಂಗಳ ಹಾಡುವಂತೆ ಅವರು ರಾಜ್ಯ ಸರ್ಕಾರ, SIT ತಂಡಕ್ಕೆ ಒತ್ತಾಯಿಸಿದ್ದಾರೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನೂರಾರು ಹೆಣಗಳನ್ನು ಹೂತಿದ್ದಾಗಿ ದೂರುದಾರನ ದೂರಿನನ್ವಯ, ಹಲವು ಕಡೆಗಳಲ್ಲಿ ಈಗಾಗಲೇ SIT ಅಧಿಕಾರಿಗಳು ಹಲವಾರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಈ

ಅನಾಮಿಕ ದೂರುದಾರನನ್ನು ಒದ್ದು ಒಳಗೆ ಹಾಕಿ: ಈರಣ್ಣ ಕಡಾಡಿ Read More »

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ವಚ್ಛತೆ, ಗೌರವಾರ್ಪಣೆ

ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾ ವತಿಯಿಂದ ಕಾರ್ಯಕ್ರಮ ಮಂಗಳೂರು: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯ ಸ್ವಚ್ಛತಾ ಮತ್ತು ಗೌರವಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಸ್ವಾತಂತ್ರ್ಯ ಹೋರಾಟಗಾರ ಜ ಕೆದಂಬಾಡಿ ರಾಮಯ್ಯಗೌಡರ ಸ್ವಾತಂತ್ರ

ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಸ್ವಚ್ಛತೆ, ಗೌರವಾರ್ಪಣೆ Read More »

ಬಾವಿಗೆ ಹಾರಿ ಪ್ರಸಿದ್ಧ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ಆತ್ಮಹತ್ಯೆ

ವಿಟ್ಲ: ಯಕ್ಷಗಾನ ಲೋಕದಲ್ಲಿ ರಸಿಕ ‘ರತ್ನ ಬಿರುದು’ ಪಡೆದ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ರವಿ ಜೋಶಿ (68) ಬುಧವಾರ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.ಇವರು ಕರ್ನಾಟಕ ಬ್ಯಾಂಕ್‌ ನ ನಿವೃತ್ತ ಉದ್ಯೋಗಿಯಾಗಿದ್ದರು. ಮನೆ ಮುಂದಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ ಜೋಶಿ ಆವರ ಶವವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಸ್ಥಿಳಕ್ಕೆ ವಿಟ್ಲ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಹಿರಿಯ ಪುತ್ರಿಯ ಅಕಾಲಿಕ ಮರಣದಿಂದ ಮನೋವೈಕಲ್ಯಕ್ಕೊಳಗಾಗಿ

ಬಾವಿಗೆ ಹಾರಿ ಪ್ರಸಿದ್ಧ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ಆತ್ಮಹತ್ಯೆ Read More »

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಆಶಾದೀಪ

ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ 2025 ವಿದ್ಯಾರ್ಥಿಗಳ ಪರೀಕ್ಷಾ ಕನಸುಗಳನ್ನು ನನಸುಗೊಳಿಸಲು. “ವಿದತ್ ಲರ್ನಿಂಗ್ ಸೆಂಟರ್ ” ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಗಸ್ಟ್ 17, 2025ರಂದು ವಿದತ್ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. 11 ಮತ್ತು 12 ನೇ ತರಗತಿಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ JEE, KCET, NEET ತಯಾರಿ ನಡೆಸಲು ವಿಶೇಷ ಪ್ರವೇಶ ಪರೀಕ್ಷೆಯನ್ನು ಆಯೋಜಿಸಿದೆ. ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್ ಫೀಸ್’ನಲ್ಲಿ 90%ರಷ್ಟು ರಿಯಾಯಿತಿ ಪಡೆಯುವ ಸುವರ್ಣಾವಕಾಶ ಲಭ್ಯವಿದೆ. KCET,

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಜ್ಜೆ ಇಡುವ ವಿದ್ಯಾರ್ಥಿಗಳಿಗೆ ಆಶಾದೀಪ Read More »

ಮಹಿಳೆಯರ ಸುರಕ್ಷತೆಗೆ ರಾಜ್ಯದಲ್ಲಿ ಅಕ್ಕ ಪಡೆ ಜಾರಿ?

ಈ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು ಗೊತ್ತಾ? ಬೆಂಗಳೂರು: ಶಾಲೆ, ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಮಹಿಳಾ ಪೊಲೀಸರನ್ನೊಳಗೊಂಡ ಅಕ್ಕ ಪಡೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಈಗಾಗಲೇ ಬೀದರ್ ಜಿಲ್ಲೆಯಲ್ಲಿ ಅಕ್ಕ ಕಾರ್ಯ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆಗಸ್ಟ್ 15 ರಿಂದ ಬೆಳಗಾವಿ, ಮೈಸೂರು ಮತ್ತು ಮಂಗಳೂರಿನಲ್ಲಿ ಅಕ್ಕ ಪಡೆ ಆರಂಭ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಳೆಗಾಲದ ಅಧಿವೇಶನದ ಮೂರನೇ ದಿನ ಚಿಕ್ಕನಾಯಕನಹಳ್ಳಿ ಕ್ಷೇತ್ರದ

ಮಹಿಳೆಯರ ಸುರಕ್ಷತೆಗೆ ರಾಜ್ಯದಲ್ಲಿ ಅಕ್ಕ ಪಡೆ ಜಾರಿ? Read More »

ಹಬ್ಬಗಳ ಹಿನ್ನೆಲೆ ಡಿಜೆ ನಿಷೇಧಕ್ಕೆ ‌ಸರ್ಕಾರ ಆದೇಶ

ಬೆಂಗಳೂರು: ಗಣೇಶ ಚತುರ್ಥಿ ಮತ್ತು ಈದ್ ಹಬ್ಬದ ಆಚರಣೆಗಳು ಮುಗಿಯುವ ವರೆಗೆ ಡಿಜೆ ಸಿಸ್ಟಂ ಬಳಕೆಯನ್ನು ನಿಷೇಧಿಸುವಂತೆ ರಾಜ್ಯದ ಜಿಲ್ಲಾಧಿಕಾರಿಗಳಿಗೆ ‌ಸರ್ಕಾರ ಆದೇಶ ನೀಡಿದೆ. ದಿನಾಂಕ ಆ. 27 ರಂದು ಗಣೇಶ ಹಬ್ಬದ ಪ್ರಯಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ, ನಂತರ ವಿವಿಧ ದಿನಗಳಂದು ವಿಸರ್ಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಹೀಗಾಗಿ ಆ.27 ರಿಂದ ಸೆ.15 ರವರೆಗೆ ಒಟ್ಟು 20 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಪ್ರಮುಖ, ಅತಿಸೂಕ್ಷ್ಮ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. ಹಾಗೂ ಸೆ.

ಹಬ್ಬಗಳ ಹಿನ್ನೆಲೆ ಡಿಜೆ ನಿಷೇಧಕ್ಕೆ ‌ಸರ್ಕಾರ ಆದೇಶ Read More »

ಬೈಕ್ ಸ್ಕಿಡ್: ಗಂಭೀರ ಗಾಯಗೊಂಡ‌ ಸವಾರ ಸಾವು

ಮಂಗಳೂರು: ಉಳ್ಳಾಲದ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆಯಲ್ಲಿ ಸ್ಕಿಡ್ ಆದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಯ ಕಾಂಪೌಂಡ್ ಗೋಡೆಯೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಮೃತಪಟ್ಚ ಘಟನೆ ನಡೆದಿದೆ. ಪಿಲಾರು ‌ಮಹಾಲಕ್ಷ್ಮೀ ಮಂದಿರದ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ ಅವರೇ ಮೃತ ದುರ್ದೈವಿ. ಮೃತರು ಖಾಸಗಿ ಕಂಪೆನಿಯೊಂದರ ಎಲೆಕ್ಟ್ರಿಕ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಕೆಲಸ‌ ಮುಗಿಸಿ ಮನೆಗೆ ಮರಳಿನ ವೇಳೆ ಈ ದುರಂತ ನಡೆದಿದೆ. ರಾಘವೇಂದ್ರ ಅವರ

ಬೈಕ್ ಸ್ಕಿಡ್: ಗಂಭೀರ ಗಾಯಗೊಂಡ‌ ಸವಾರ ಸಾವು Read More »

ಶಬರಿಮಲೆ ಯಾತ್ರೆಗೆ ಸರ್ಕಾರದಿಂದ ಮಾನ್ಯತೆ ನೀಡಿದ ಶ್ರೀಲಂಕಾ

ಕೊಲಂಬೊ: ಶ್ರೀಲಂಕಾದ ಅಯ್ಯಪ್ಪ ಭಕ್ತರು ವಾರ್ಷಿಕ ತೀರ್ಥಯಾತ್ರೆಯನ್ನು ‌ಶಬರಿಮಲೆಗೆ ಕೈಗೊಳ್ಳಬಹುದು ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಶ್ರೀಲಂಕಾದ ಭಕ್ತರು ಸಹ ಅಯ್ಯಪ್ಪನನ್ನು ಆರಾಧಿಸುತ್ತಾರೆ. ಹಾಗೆಯೇ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಅಯ್ಯಪ್ಪ ಭಕ್ತರು ಪ್ರತಿ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಶಬರಿಮಲೆ ಯಾತ್ರೆಗೆ ಸರ್ಕಾರದ ಮಾನ್ಯತೆಯನ್ನು ಅಲ್ಲಿನ ಸರ್ಕಾರ ನೀಡಿರುವುದಾಗಿದೆ. ವರ್ಷದ ಪ್ರತಿ ನವೆಂಬರ್ ತಿಂಗಳಿನಿಂದ ಡಿಸೆಂಬರ್‌ ವರೆಗೆ ಮಂಡಲ ಪೂಜೆ ಮತ್ತು ಜನವರಿಯಲ್ಲಿ ಮರಕ ಸಂಕ್ರಮಣ ಶಬರಿಮಲೆಯಲ್ಲಿ ನಡೆಯುತ್ತದೆ.

ಶಬರಿಮಲೆ ಯಾತ್ರೆಗೆ ಸರ್ಕಾರದಿಂದ ಮಾನ್ಯತೆ ನೀಡಿದ ಶ್ರೀಲಂಕಾ Read More »

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯ ಮಂಪರು ಪರೀಕ್ಷೆ ಆಗಲಿದೆಯಾ?

ಗುಂಡಿಗಳಲ್ಲಿ ಹೆಣಗಳ ಕುರುಹು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿದೆ ಅನುಮಾನ ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟೆದ್ದೇನೆ ಎಂದು ಆರೋಪಿಸಿದ ಮುಸುಕುಧಾರಿ ವ್ಯಕ್ತಿ ತೋರಿಸಿದ 16ಕಿಇಂತಲೂ ಹೆಚ್ಚು ಸ್ಥಳಗಳಲ್ಲಿ ಅಗೆದರೂ ಶವದ ಯಾವುದೇ ಕುರುಹುಗಳು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನೇ ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮುಸುಕುಧಾರಿ ತೋರಿಸಿದ ಬಹುಮುಖ್ಯ ಸ್ಥಳ ಎನ್ನಲಾಗುತ್ತಿದ್ದ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಜಿಪಿಆರ್‌

ಧರ್ಮಸ್ಥಳ ಪ್ರಕರಣ : ಮುಸುಕುಧಾರಿಯ ಮಂಪರು ಪರೀಕ್ಷೆ ಆಗಲಿದೆಯಾ? Read More »

error: Content is protected !!
Scroll to Top