ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡು, ನೃತ್ಯಗಳಿಗೆ ಬ್ರೇಕ್‌

ಖಾಸಗಿ ಶಾಲೆಗಳೂ ಸೇರಿ ಎಲ್ಲ ಶಾಲೆಗಳಿಗೆ ನಿಯಮ ಅನ್ವಯ ಬೆಂಗಳೂರು : ಶಾಲೆಗಳ ವಾರ್ಷಿಕೋತ್ಸವ ಸೇರಿದಂತೆ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳು ನೃತ್ಯ ಮಾಡುವುದನ್ನು ಶಿಕ್ಷಣ ಇಲಾಖೆ ನಿಷೇಧಿಸಿದೆ. ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಹೊರಡಿಸಿರುವ ಸುತ್ತೋಲೆಯಲ್ಲಿ ರಾಜ್ಯದ ಎಲ್ಲ ಶಾಲೆಗಳು (ಖಾಸಗಿ ಶಾಲೆಗಳೂ ಸೇರಿ) ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ. ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸಿದರೆ ಸಂಬಂಧಿತ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಾಲೆ ನಿರ್ವಹಣೆ ಮಾಡುವವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂಬ […]

ಶಾಲೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಸಭ್ಯ ಹಾಡು, ನೃತ್ಯಗಳಿಗೆ ಬ್ರೇಕ್‌ Read More »

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅಮೈ ಮಾಡದಾರು ದೈವಸ್ಥಾನ ಕಡೇಶಿವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೆರ್ನೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರೀ ವ್ಯಾಘ್ರ ಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಅಮೈ ಮಾಡದಾರು ಕಡೇಶಿವಾಲಯದ ವಾರ್ಷಿಕ ಜಾತ್ರೋತ್ಸವದ ಗೊನೆ ಮುಹೂರ್ತದ ದಿನದಂದು ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ದೈವಸ್ಥಾನದ ಆಡಳಿತ ಸಮಿತಿಯವರು ಶ್ರಮದಾನ ಸೇವೆಯಲ್ಲಿ ಭಾಗವಹಿಸಿದ್ದರು.

ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅಮೈ ಮಾಡದಾರು ದೈವಸ್ಥಾನ ಕಡೇಶಿವಾಲಯದಲ್ಲಿ ಸ್ವಚ್ಛತಾ ಕಾರ್ಯಕ್ರಮ Read More »

ಗುರುವಾಯನಕೆರೆಯಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಲಿಕಾ ಶಿಬಿರ

ಬೆಳ್ತಂಗಡಿ: ಶ್ರೀ ಶಾರದಾಂಬ ಯಕ್ಷಗಾನ ಕಲಾ ಬಳಗದ ವತಿಯಿಂದ ಯಕ್ಷಗಾನ ಬಣ್ಣಗಾರಿಕೆ ಕಲಿಕಾ ಶಿಬಿರವು ಗುರುವಾಯನಕೆರೆ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ಜರಗಿತು. ಭಾಗವತ ದೇವಿಪ್ರಸಾದ್, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಶ್ರೇಯಸ್ ವಾಮದಪದವು, ಕೇಶವ ಹಿಮ್ಮೇಳದಲ್ಲಿ ಚೌಕಿ ಪೂಜೆ ನಡೆಸಿ, ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಂದ ಪೂರ್ವರಂಗದ ಪ್ರಾತ್ಯಕ್ಷಿಕೆ ನಡೆಯಿತು. ಕೊಡಮಣಿತ್ತಾಯ ದೈವಸ್ಥಾನ ಅರಮಲೆ ಬೆಟ್ಟ ಅನುವಂಶಿಕ ಮೊಕ್ತೇಸರ ಸುಕೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಾ ಬಳಗದಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ಉತ್ತಮ ಕಲಾವಿದರಾಗಿ ರೂಪುಗೊಳ್ಳುವಂತಾಗಲು ಶಿಬಿರವು

ಗುರುವಾಯನಕೆರೆಯಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಲಿಕಾ ಶಿಬಿರ Read More »

ಉಡುಪಿಯಲ್ಲಿ 32 ಅಕ್ರಮ ಹೋಂ ಸ್ಟೇ‌ಗಳು ಪತ್ತೆ

ಉಡುಪಿ: ಕೊಡಗಿನ ಹೋಂ‌ಸ್ಚೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ಅತ್ಯಾಚಾರ ನಡೆದ ಘಟನೆಯ ಬಳಿಕ ರಾಜ್ಯದ ಪೊಲೀಸ್ ಇಲಾಖೆ ಹೋಂ ಸ್ಟೇ‌ಗಳ ಮೇಲೆ ಹದ್ದಿನ ಕಣ್ಣಿರಿಸಲು ಆರಂಭಿಸಿದೆ. ಮಾನ್ಯ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ನಿರ್ದೇಶನದಂತೆ ಉಡುಪಿ ಜಿಲ್ಲೆಯಲ್ಲಿ ನಡೆಸಲಾದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 32 ಅಕ್ರಮ ಹೋಂಸ್ಟೇಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ 32 ಅಕ್ರಮ ಹೋಂಸ್ಟೇಗಳ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ

ಉಡುಪಿಯಲ್ಲಿ 32 ಅಕ್ರಮ ಹೋಂ ಸ್ಟೇ‌ಗಳು ಪತ್ತೆ Read More »

ಸ್ಕೂಟಿಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು

ಕಾರ್ಕಳ: ಬೈಕ್ ಮತ್ತು ಸ್ಕೂಟಿ ಡಿಕ್ಕಿಯಾಗಿ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಚ ಘಟನೆ ಮಿಯ್ಯಾರು ಕುಂಟಿಬೈಲ್ ರಸ್ತೆಯ ನೀರಿನ ಟ್ಯಾಂಕ್ ಎದುರು ಸಂಭವಿಸಿದೆ. ಕೆರ್ವಾಶೆಯ ಸುಖೇಶ್ ಬಂಗಾರ ಎಂಬವರೇ ಮೃತ ದುರ್ದೈವಿ. ಕುಂಟಿಬೈಲ್ ‌ಮಾರ್ಗದಿಂದ ಕಾರ್ಕಳಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತ ನಡೆದ ತಕ್ಷಣವೇ ಸುಖೇಶ್ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಚಿದ್ದರು. ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಅವರು ಕೆಲವು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮೃತರು ಪತ್ನಿ,

ಸ್ಕೂಟಿಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು Read More »

ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಯಜಮಾನ ಹೃದಯಾಘಾತಕ್ಕೆ ಬಲಿ

ಬಂಟ್ವಾಳ: ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಮನೆಯ ಯಜಮಾನ, ಮುಸ್ಲಿಂ ವಿದ್ವಾಂಸರೊಬ್ಬರು ಮೃತಪಟ್ಚ ಘಟನೆ ಸಜೀಪಮುನ್ನೂರಿನ ಆಲಾಡಿ ಕೊಪ್ಪಳದಲ್ಲಿ ‌ನಡೆದಿದೆ. ಅಮೀರ್ ಅರ್ಶದಿ (36) ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ವ್ಯಕ್ತಿ. ಇವರು ಕಾಸರಗೋಡು ತಾಳಿಪಡ್ಪು ಮಸ್ಟಿದುಲ್ ಹುದಾ ಮಸೀದಿಯಲ್ಲಿ ಐದು ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದರಿ. ಇತ್ತೀಚೆಗಷ್ಟೆ ಕಿಡ್ನಿ ಸಂಬಂಧಿ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಮಧ್ಯರಾತ್ರಿ ಹಠಾತ್ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಅವರನ್ನು ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರ

ಹೊಸ ಮನೆಯ ಗೃಹ ಪ್ರವೇಶದ ಸಂತಸದಲ್ಲಿದ್ದ ಯಜಮಾನ ಹೃದಯಾಘಾತಕ್ಕೆ ಬಲಿ Read More »

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್

ಬೆಂಗಳೂರು: ವೇಶ್ಯಾವಾಟಿಕೆಗೆ ಪ್ರಚೋದನೆ ನೀಡುತ್ತಿದ್ದ ಆರು ಮಂದಿ ವಿದೇಶಿ ಮಹಿಳೆಯರನ್ನು ಕೋರಮಂಗಲ ಚೆಕ್ ಪೋಸ್ಟ್ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಸ್ತೆ ಬದಿಯಲ್ಲಿ ನಿಂತುಕೊಂಡು ಗಂಡಸರನ್ನು ಪ್ರಚೋದನೆ ಮಾಡುತ್ತಿದ್ದ ವಿದೇಶಿ ಮಹಿಳೆಯರ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ರೈಡ್ ನಡೆಸಿರುವುದಾಗಿದೆ. ಈ ಪ್ರಕರಣದಲ್ಲಿ ಆರು ಮಂದಿ ವಿದೇಶಿ ಮಹಿಳೆಯರು ಪೊಲೀಸರ ವಶವಾಗಿದ್ದಾರೆ. ಪಾಸ್‌ಪೋರ್ಟ್, ವಿಸಾ ಮೊದಲಾದ ಎಲ್ಲಾ ದಾಖಲೆಗಳನ್ನು ಬಂಧಿತ‌ ಮಹಿಳೆಯರು ಹೊಂದಿದ್ದು, ಅವರು ಇಲ್ಲಿಗೆ ಬಂದು ಯಾತಕ್ಕಾಗಿ ಇಂತಹ ಕೆಲಸಕ್ಕೆ ಇಳಿದಿದ್ದರು ಎನ್ನುವ ಬಗ್ಗೆ

ವೇಶ್ಯಾವಾಟಿಕೆಗೆ ಪ್ರಚೋದನೆ: 6 ಮಂದಿ ವಿದೇಶಿ ಮಹಿಳೆಯರು ಅರೆಸ್ಟ್ Read More »

ಅಕ್ರಮ ಕಾಂಪೌಂಡ್ ನಿರ್ಮಾಣ ಪ್ರಶ್ನೆ ಮಾಡಿದ್ದಕ್ಕೆ ಆರೋಪಿಯಿಂದ ಹಲ್ಲೆ: ದೂರು ದಾಖಲು

ಪುತ್ತೂರು: ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಲು ಹೋಗಿದ್ದಕ್ಕೆ ಹಲ್ಲೆ ನಡೆಸಿದ್ದಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರಮಂಗಲದ ಸರೋಳಿಮೂಲೆಯ ಅಬ್ದುಲ್ ರಹಿಮಾನ್ ಕೆ. ಎಂ. ಎನ್ನುವವರು ದೂರು ನೀಡಿರುವುದಾಗಿದೆ. ಪಡುವನ್ನೂರಿನ ಸಸಿಹಿತ್ತಿಲು ಎಂಬಲ್ಲಿ ತಾನು ಖರೀದಿ ಮಾಡಿದ ಜಾಗದಲ್ಲಿನ ತಡೆ ಗೋಡೆಯ ಮೇಲೆ ಪಿ. ಮಹಮ್ಮದ್ ಎನ್ನುವವರು ಅಕ್ರಮವಾಗಿ ತನ್ನ ಕೆಲಸದಾಳುಗಳಿಂದ ಕಾಂಪೌಂಡ್ ಗೋಡೆ ಕಟ್ಟಿಸುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ರಹಿಮಾನ್ ಮತ್ತು ಅವರ ತಾಯಿಯ ಮೇಲೆ ಮಹಮ್ಮದ್ ಕಲ್ಲುಗಳಿಂದ ದಾಳಿ

ಅಕ್ರಮ ಕಾಂಪೌಂಡ್ ನಿರ್ಮಾಣ ಪ್ರಶ್ನೆ ಮಾಡಿದ್ದಕ್ಕೆ ಆರೋಪಿಯಿಂದ ಹಲ್ಲೆ: ದೂರು ದಾಖಲು Read More »

ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಿಸಿ ಹಂಚಿದ ಆರೋಪಿಗ‌ಳ ವಿರುದ್ಧ ದೂರು ದಾಖಲು

ಕಡಬ: ಅನುಮತಿ ಪಡೆಯದೆ ವ್ಯಕ್ತಿಯೊಬ್ಬರ ಖಾಸಗಿ ವಿಚಾರಗಳನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿ ಅವಮಾನಿಸಿದ ಇಬ್ಬರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೂರು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಪೂರ್ಣಜ್ಯೋತಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಪೂರ್ಣಜ್ಯೋತಿ ಅವರ ಮಗ ಪ್ರಭಾಕರ್ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ. 3 ರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಗಂಗಾಪ್ರಸನ್ನ ಎಂಬವರು ಪೂರ್ಣಜ್ಯೋತಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜಗಳ

ಅನುಮತಿ ಇಲ್ಲದೆ ವಿಡಿಯೋ ಚಿತ್ರೀಕರಿಸಿ ಹಂಚಿದ ಆರೋಪಿಗ‌ಳ ವಿರುದ್ಧ ದೂರು ದಾಖಲು Read More »

ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ

ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ನಡೆದಿದ್ದ ಕೊಲೆ ಮಂಗಳೂರು : ಉಳ್ಳಾಲದ ಮುಕ್ಕಚ್ಚೇರಿಯಲ್ಲಿ 2017ರ ಅಕ್ಟೋಬರ್ 4ರಂದು ನಡೆದಿದ್ದ ಝಬೇರ್ ಎಂಬವರ ಕೊಲೆ ಮತ್ತು ಇಲ್ಯಾಸ್ ಎಂಬವರ ಕೊಲೆಯತ್ನ ಪ್ರಕರಣ ಅಪರಾಧಿ ಅಬ್ದುಲ್ ರಹ್ಮಾನ್ ಸುಹೇಲ್‌ಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2017ರ ಅಕ್ಟೋಬರ್ 4ರಂದು ರಾತ್ರಿ ಜುಬೇರ್ ಮತ್ತು ಇಲ್ಯಾಸ್ ಮಾತನಾಡುತ್ತಿದ್ದಾಗ ಮಾರಕಾಸ್ತ್ರಗಳೊಂದಿಗೆ ಬಂದ ತಂಡವೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಜುಬೇರ್ ಕೊಲೆಯಾಗಿದ್ದರು. ಮಧ್ಯಪ್ರವೇಶಿಸಲು

ಕೊಲೆ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ Read More »

error: Content is protected !!
Scroll to Top