ಮದುವೆಯಾಗುವುದಾಗಿ ವಂಚನೆ : ಆರೋಪಿಯ ತಂದೆಯನ್ನು ದೇವಸ್ಥಾನ, ಶಾರದಾ ಭಜನಾ ಮಂದಿರದಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ನಿಯೋಗ ಮನವಿ

ಪುತ್ತೂರು:ಮದುವೆಯಾಗುವುದಾಗಿ ನಂಬಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯ ತಂದೆಯನ್ನು ದೇವಸ್ಥಾನದಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ನಿಯೋಗ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಶಾರದಾ ಭಜನಾ ಮಂದಿರಕ್ಕೆ ಮನವಿ ನೀಡಲಾಗಿದೆ. ಪ್ರಕರಣದ ಆರೋಪಿ ಶ್ರೀಕೃಷ್ಣಾ ಜೆ. ರಾವ್ ಅವರ ತಂದೆ ಪಿ.ಜಿ. ಜಗನ್ನಿವಾಸ ರಾವ್ ಅವರು ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ತನ್ನ ಮಗನೊಂದಿಗೆ ಮದುವೆ ಮಾಡಿಸುವುದಾಗಿ ನೀಡಿದ ಒಪ್ಪಿಗೆ ಪತ್ರ ನೀಡಿ ಬಳಿಕ ನನ್ನ ಮಗನ ಆರೋಪ ಸಾಬೀತಾಗಿಲ್ಲ […]

ಮದುವೆಯಾಗುವುದಾಗಿ ವಂಚನೆ : ಆರೋಪಿಯ ತಂದೆಯನ್ನು ದೇವಸ್ಥಾನ, ಶಾರದಾ ಭಜನಾ ಮಂದಿರದಿಂದ ವಜಾಗೊಳಿಸುವಂತೆ ವಿಶ್ವಕರ್ಮ ಯುವ ಮಿಲನ್ ನಿಯೋಗ ಮನವಿ Read More »

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ರಾಜೀನಾಮೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಧನ್ಕರ್ ರಾಜೀನಾಮೆ ನೀಡಿದ ಬಳಿಕ ಕೆ.ಸಿ.‌ ವೇಣುಗೋಪಾಲ್ ಅವರು ತನಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. ಅವರ ರಾಜೀನಾಮೆಯ ಹಿಂದೆ ದೊಡ್ಡ ಕಥೆ ಇದೆ. ಆ‌ಕಥೆ ಏನು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿರಬಹುದು ಎಂದಿದ್ದಾರೆ. ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.‌ ಸುದರ್ಶನ್

ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ Read More »

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್

ಮತ್ತೆ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ತರೂರ್ ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮಜುಗರವಾಗುವಂತೆ ಈ ಹಿಂದೆಯೂ ಹಲವಾರು ಬಾರಿ ನಡೆದುಕೊಂಡಿರುವ ಶಶಿ ತರೂರ್ ಈಗ ಮತ್ತೊಮ್ಮೆ ಸ್ವಪಕ್ಷದ ‌ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೇಂದ್ರದ ಪ್ರಧಾನಿ ಮೋದಿ ಸರ್ಕಾರ ಮಂಡನೆ ಮಾಡಿದ ಕ್ರಿಮಿನಲ್ ಪ್ರಕರಣಗಳಲ್ಲಿ ಸತತ ಮೂವತ್ತು ದಿನಗಳ ವರೆಗೆ ಬಂಧನಕ್ಕೆ ಒಳಗಾಗುವ ಪ್ರಧಾನಿ, ಮುಖ್ಯಮಂತ್ರಿಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯಗಳ ಸಚಿವರನ್ನು ಸಾಂವಿಧಾನಿಕ ಸ್ಥಾನದಿಂದ ಪದಚ್ಯುತಿ ಮಾಡುವ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಇತರ ವಿರೋಧ ಪಕ್ಷಗಳು ವಿರೋಧಿಸಿವೆ. ಆದರೆ ಕಾಂಗ್ರೆಸ್

ಪ್ರಧಾನಿ ಮೋದಿ ಸರ್ಕಾರದ ಮಸೂದೆಗೆ ಬೆಂಬಲ ಸೂಚಿಸಿದ ಶಶಿ ತರೂರ್ Read More »

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು

ಬಿ.ಎಲ್‌. ಸಂತೋಷ್‌ ಅವರನ್ನು ನಿಂದಿಸಿದ ಪ್ರಕರಣ ಉಜಿರೆ ಮನೆಯಲ್ಲಿ ತಿಮರೋಡಿ ಬೆಂಬಲಿಗರಿಂದ ಪ್ರತಿರೋಧ- ಪೊಲೀಸರ ಜೊತೆ ವಾಗ್ವಾದ ಮಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಇಂದು ಮನೆಯಿಂದ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತಿಮರೋಡಿ, ಬಿಎಲ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್‌ ಕುಲಾಲ್‌ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು Read More »

ಗಣೇಶೋತ್ಸವಕ್ಕೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು

ಜನರಿಗೆ ಹಬ್ಬ ಆಚರಣೆಗೆ ಅನುಕೂಲವಾಗಲು ರೈಲ್ವೆಯಿಂದ ವ್ಯವಸ್ಥೆ ಮಂಗಳೂರು: ಮುಂಬರುವ ಗಣೇಶೋತ್ಸವದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಲಿದ್ದು, ಈ ಹಿನ್ನೆಲೆಯಲ್ಲಿ ಜನರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದ್ದಾರೆ. ತಮ್ಮ ಮನವಿ ಮೇರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಘೋಷಿಸಲಾಗಿದ್ದು, ಚೌತಿಯ ಮುನ್ನಾ ದಿನದಂದು ಊರಿಗೆ ವಾಪಸಾಗಲು ಅನುಕೂಲವಾಗುವಂತೆ ಪ್ರಯಾಣಿಕರಿಗಾಗಿ ಎರಡು ವಿಶೇಷ ರೈಲುಗಳ ವ್ಯವಸ್ಥೆ

ಗಣೇಶೋತ್ಸವಕ್ಕೆ ಬೆಂಗಳೂರು-ಮಂಗಳೂರು ನಡುವೆ ಎರಡು ವಿಶೇಷ ರೈಲು Read More »

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನಾಚರಣೆಯ ಪ್ರಯುಕ್ತ ಆಚರಿಸಲ್ಪಡುವ ರಾಷ್ಟ್ರೀಯ ಸದ್ಭಾವನಾ ದಿನಾಚರಣೆಯನ್ನು ಆಯೋಜಿಸಲಾಯಿತು. ಕಾಲೇಜಿನ ಉಪಪ್ರಾಚಾರ್ಯ ಡಾ.ವಿಜಯಕುಮಾರ್ ಮೊಳೆಯಾರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಸ್ಪರ ಸೌಹಾರ್ದತೆಯಿಂದ ರಾಷ್ಟ್ರ ಸದೃಢವಾಗುತ್ತದೆ. ವಿದ್ಯಾರ್ಥಿಗಳು ಧರ್ಮ, ಭಾಷೆ ಹಾಗೂ ಮತೀಯ ಕಲ್ಪನೆಗಳನ್ನು ಮೀರಿ ಪರಸ್ಪರ ಸೌಹಾರ್ದತೆಯನ್ನು ಕಾಪಾಡಿಕೊಂಡು ಸದ್ಭಾವನೆಯನ್ನು ಮೂಡಿಸಬೇಕೆಂದು ಹೇಳಿ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪರೀಕ್ಷಾಂಗ ಕುಲಸಚಿವ ಡಾ.ವಿನಯಚಂದ್ರ ಸ್ವಾಗತಿಸಿ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ ವಂದಿಸಿದರು.

ಸಂತ ಫಿಲೋಮಿನಾ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ Read More »

ಗ್ಯಾರಂಟಿಗೆ ಪರಿಶಿಷ್ಟರ ನಿಧಿಯಿಂದ 13,433 ಕೋ.ರೂ. ಬಳಕೆ

ಉಪಯೋಜನೆ ಮೀಸಲು ಅನುದಾನ ಬಳಸಿರುವುದನ್ನು ಒಪ್ಪಿಕೊಂಡ ಸರ್ಕಾರ ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗಾಗಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅನುದಾನದಲ್ಲಿ 13,433 ಕೋಟಿ ರೂಪಾಯಿ ಬಳಕೆ ಮಾಡಲಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಕುರಿತು ಸದನದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಸಿ ಮಹದೇವಪ್ಪ ಬುಧವಾರ ಹೇಳಿಕೆ ನೀಡಿದ್ದಾರೆ. ಪರಿಶಿಷ್ಟರ ಕಲ್ಯಾಣಕ್ಕೆ ಉಪಯೋಜನೆಯ ಸೆಕ್ಷನ್ 7ಸಿ ಅಡಿ ಸಮುದಾಯದ ಕಾರ್ಯಕ್ರಮಗಳನ್ನು ರೂಪಿಸುವ ವೇಳೆ ಜನಸಂಖ್ಯೆಗೆ ಅನುಗುಣವಾಗಿ ಹಣ ಬಳಕೆಗೆ ಅವಕಾಶವಿದೆ. ಅದರಂತೆ ಗ್ಯಾರಂಟಿ ಯೋಜನೆಗಳಿಗೆ

ಗ್ಯಾರಂಟಿಗೆ ಪರಿಶಿಷ್ಟರ ನಿಧಿಯಿಂದ 13,433 ಕೋ.ರೂ. ಬಳಕೆ Read More »

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಆಗ್ರಹ ನವದೆಹಲಿ: ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್‌ನ ಮಹದೇವಪುರ ವಿಧಾನಸಭಾ ಕ್ಷೇತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪ ಸಂಬಂಧ ತನಿಖೆ ನಡೆಸಲು ಮಾಜಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆಂದು ಕೋರಿ ವಕೀಲ ಮತ್ತು ಕಾಂಗ್ರೆಸ್ ಸದಸ್ಯ ರೋಹಿತ್ ಪಾಂಡೆ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು

ಮತಕಳ್ಳತನ ಸಿಐಟಿ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ Read More »

ವಿಟ್ಲ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯಿಂದ ಧನ ಸಹಾಯ ಹಸ್ತಾಂತರ

ವಿಟ್ಲ: ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ವತಿಯಿಂದ ಆರ್ಥಿಕ ಧನಸಹಾಯವನ್ನು ಕೊಲ್ಯ ನಿವಾಸಿ ನಾಗೇಶ್‍ ಕುಲಾಲ್‍ ಅವರಿಗೆ ನೀಡಲಾಯಿತು. ವಿಟ್ಲ ಸಮೀಪದ ಕೊಲ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಾಗೇಶ್ ಕುಲಾಲ್ ಕೊಲ್ಯರವರು ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಹಾಗೂ ವಿದ್ಯಾಭ್ಯಾಸ ಮಾಡುವ 1 ನೇ ತರಗತಿಯ ಹೆಣ್ಣು ಮಗಳೊಂದಿಗೆ ಜೀವನ ಸಾಗಿಸುತ್ತಿದ್ದರು. ಕೆಲವು ತಿಂಗಳ ಹಿಂದೆ ಚಂದಳಿಕೆ ಸಮೀಪದ ಕಲ್ಲಕಟ್ಟದಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ

ವಿಟ್ಲ ಚಂದಳಿಕೆ ಕಾರ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿಯಿಂದ ಧನ ಸಹಾಯ ಹಸ್ತಾಂತರ Read More »

ಸುಳ್ಯ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ನಿಂದ ಗುರುವಂದನಾ ಕಾರ್ಯಕ್ರಮ

ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್  (ಎನ್. ಎಸ್.ಎಸ್. ಹಿರಿಯ ಸ್ವಯಂ ಸೇವಕರ ಸಂಘ ಕೆ.ವಿ‌.ಜಿ ಪಾಲಿಟೆಕ್ನಿಕ್ ಸುಳ್ಯ) ವತಿಯಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸಂಘದ ಪ್ರಥಮ ತೈಮಾಸಿಕ  ಸಭೆಯನ್ನು ಅರಂಬೂರಿನ  “ವಿಕಸನ”ಮನೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ, ಕೆ ವಿ ಜಿ ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಗೌಡ ಬೊಳ್ಳೂರು, ಗೌರವ ಸಲಹೆಗಾರ,  ಕೆ. ವಿ. ಜಿ. ಪಾಲಿಟೆಕ್ನಿಕ್ ನ  ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ್ ಸಿ. ಬಿಳಿನೆಲೆ,  ವ್ಯಕ್ತಿತ್ವ ವಿಕಸನ ತರಬೇತುದಾರೆ, ಎನ್ನೆಂಸಿಯ

ಸುಳ್ಯ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ ನಿಂದ ಗುರುವಂದನಾ ಕಾರ್ಯಕ್ರಮ Read More »

error: Content is protected !!
Scroll to Top