ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

ಕ್ರಿಕೆಟ್‌ ಆಡುವಾಗ ಕೇರಳದ ವ್ಯಕ್ತಿಯನ್ನು ಗುಂಪುಕೂಡಿ ಥಳಿಸಿ ಕೊಂದ ಪ್ರಕರಣ ಮಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕಳೆದ ಏ.27ರಂದು ಕೇರಳ ಮೂಲದ ಆಶ್ರಫ್ ಎಂಬವರನ್ನು ಗುಂಡು ಹತ್ಯೆ ಮಾಡಿದ ಪ್ರಕರಣದ 10 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಆರೋಪಿಗಳಾದ ಅನಿಲ್ ಕುಮಾರ್, ಸಾಯಿದೀಪ್, ಅನಿಲ್ ಕುಮಾರ್, ಯತಿರಾಜ್, ಮನೀಶ್ ಶೆಟ್ಟಿ, ಪ್ರದೀಪ್, ವಿವಿಯನ್ ಆಲ್ವರಿಸ್, ಶ್ರೀದತ್ತ, ಧನುಷ್, ಕಿಶೋರ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಏ.27ರರಂದು ಸಂಜೆ 5.30ರ […]

ಕುಡುಪು ಗುಂಪು ಹತ್ಯೆ ಪ್ರಕರಣ : ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌ Read More »

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು

ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರದ ಅವಹೇಳನ ಮಾಡಿದ ಆರೋಪ ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಡಿಯೋ ಮಾಡಿ ಸದ್ಯ ಜಾಮೀನು ಪಡೆದು ಬಂಧನದಿಂದ ಪಾರಾಗಿರುವ ಯೂಟ್ಯೂಬರ್ ಮೊಹಮ್ಮದ್‌ ಸಮೀರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ಸದಸ್ಯ ಮಂಜು ಜೈನ್ ಎಂಬವರು ಚಿಕ್ಕಮಗಳೂರಿನ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ. ಅವರ

ಸಮೀರ್‌ ವಿರುದ್ಧ ಇನ್ನೊಂದು ಕೇಸ್‌ ದಾಖಲು Read More »

ಬಂಧನದ ಭೀತಿಯಲ್ಲಿದ್ದ ಸಮೀರನಿಗೆ ನಿರೀಕ್ಷಣಾ ಜಾಮೀನು

ಬೆಂಗಳೂರು: ಧರ್ಮಸ್ಥಳ ಪ್ರಕರಣದ ಬಗ್ಗೆ AI ವಿಡಿಯೋ ಮಾಡಿ ಸಮಾಜದ ದಾರಿ ತಪ್ಪಿಸಿದ ಆರೋಪದಲ್ಲಿ ಪೊಲೀಸರ ಬಂಧನದ ಭೀತಿಯಲ್ಲಿದ್ದ ದೂತ ಸಮೀರನಿಗೆ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಧರ್ಮಸ್ಥಳದ ವಿರುದ್ಧ ಸಮೀರ್ ಮಾಡಿದ್ದ AI ವಿಡಿಯೋ ಸಮಾಜದಲ್ಲಿ ಸಾಕಷ್ಟು ಕೋಲಾಹಲ ಸೃಷ್ಟಿಸಿತ್ತು. ಈ ಹಿನ್ನೆಲೆ ಆತನ ವಿರುದ್ಧ ಸುಮೋಟೋ ಪ್ರಕರಣವನ್ನು ಪೊಲೀಸರು ದಾಖಲು ಮಾಡಿದ್ದರು. ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರು ಬನ್ನೇರುಘಟ್ಟದ ಆತನ ಬಾಡಿಗೆ ಮನೆಯ ಬಳಿಗೂ ತೆರಳಿದ್ದರು. ಬಂಧನದ ಭೀತಿ

ಬಂಧನದ ಭೀತಿಯಲ್ಲಿದ್ದ ಸಮೀರನಿಗೆ ನಿರೀಕ್ಷಣಾ ಜಾಮೀನು Read More »

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ತಾಲೂಕು ಸಂಚಾರಿ ಪೀಠ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ತಿಮರೋಡಿಗೆ ಎರಡು ಬಾರಿ ನೊಟೀಸ್ ‌ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಉತ್ತರ ನೀಡದ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದರು. ತಿಮರೋಡಿ ಬಂಧನದ ಸಮಯದಲ್ಲಿ ಅವರ ನಿವಾಸದ ಸಮೀಪ ಹೈಡ್ರಾಮಾ ನಡೆದಿದ್ದು, ಕೊನೆಗೆ ಅವರ ಖಾಸಗಿ ವಾಹನದಲ್ಲಿ

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ Read More »

ಕರಾವಳಿಯಲ್ಲಿ ಅಗ್ನಿಶಾಮಕ ದಳ ಬಲವರ್ಧನೆ ಅಗತ್ಯ – ಶಾಸಕ ಕಿಶೋರ್ ಕುಮಾರ್ ಪುತ್ತೂರು

ಬೆಂಗಳೂರು: ಇಂದು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕರ್ನಾಟಕ ಅಗ್ನಿಶಾಮಕ ದಳ ತಿದ್ದುಪಡಿ ವಿಧೇಯಕ 2025 ಕುರಿತು ನಡೆದ ಚರ್ಚೆಯಲ್ಲಿ ಶಾಸಕ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು. ಅವರು, “ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾನ್ಸೂನ್ ಮಳೆಯ ಸಮಯದಲ್ಲಿ ಭಾರೀ ಹಾನಿ ಸಂಭವಿಸುತ್ತಿದೆ. ಆದರೆ ಅಲ್ಲಿ ಕಾರ್ಯನಿರ್ವಹಿಸುವ ಅಗ್ನಿಶಾಮಕ ದಳವು ಫಸ್ಟ್ ರೆಸ್ಪಾಂಡರ್ ಆಗಿ ಸೂಕ್ತವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು. ಈ ವೇಳೆ ಮೊದಲು ಮಾತನಾಡಿದ ಕಾಂಗ್ರೆಸ್ ಶಾಸಕ ಐವನ್ ಡಿಸೋಜಾ “ಅಗ್ನಿಶಾಮಕ ದಳದ

ಕರಾವಳಿಯಲ್ಲಿ ಅಗ್ನಿಶಾಮಕ ದಳ ಬಲವರ್ಧನೆ ಅಗತ್ಯ – ಶಾಸಕ ಕಿಶೋರ್ ಕುಮಾರ್ ಪುತ್ತೂರು Read More »

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬಂಧನ ವಿಚಾರಕ್ಕೆ ಸಂಬಂಧಿಸಿದ ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ತಿಮರೋಡಿ ಬಂಧನದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆಯನ್ನು ನಾವು ನೀಡುವುದಿಲ್ಲ. ಸರ್ಕಾರ ಕಾನೂನಿನನ್ವಯ ಕ್ರಮ ಕೈಗೊಂಡಿದ್ದು, ಇದರಲ್ಲಿ ನಾವು ಮಧ್ಯಪ್ರವೇಶ ಮಾಡುವ ಮಾತಿಲ್ಲ ಎಂದು ಹೇಳಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ತಿಮರೋಡಿಯನ್ನು ಬ್ರಹ್ಮಾವರದ ಪೊಲೀಸರು ಬಂಧಿಸಿರುವುದಾಗಿದೆ‌.

ತಿಮರೋಡಿ ಬಂಧನದ ಬಗ್ಗೆ ಬಿ.ವೈ. ವಿಜಯೇಂದ್ರ ಹೇಳಿದ್ದೇನು? Read More »

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಾನ್ವಿತ ಯುವ ನಾಯಕರ ಉಪಸ್ಥಿತಿ ರಾಹುಲ್ ಗಾಂಧಿಗೆ ಅಸುರಕ್ಷಿತ ಮತ್ತು ಆತಂಕ ಸೃಷ್ಟಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ವ್ಯಂಗ್ಯ ಮಾಡಿದ್ದಾರೆ. ಎನ್‌ಡಿಎ ಸದಸ್ಯರ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷದಲ್ಲಿ ಹಲವಾರು ಪ್ರತಿಭಾನ್ವಿತ ನಾಯಕರಿದ್ದರೂ ಅವರಿಗೆ ಕೌಟುಂಬಿಕ ಅಭದ್ರತೆಯ ಕಾರಣಕ್ಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಹಾಗೆಯೇ, ಇತ್ತೀಚೆಗೆ ಅಂತ್ಯವಾದ ಸಂಸತ್ ಅಧಿವೇಶನ ಉತ್ತಮವಾಗಿತ್ತು. ಅದರಲ್ಲಿ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡಿವೆ ಎಂದರು. ಹಾಗೆಯೇ‌ ಪ್ರಮುಖ ಮಸೂದೆಗಳ ‌ಮೇಲಿನ ಚರ್ಚೆಯಿಂದ ಹೊರಗುಳಿದ

ವಿಪಕ್ಷಗಳ ಪ್ರತಿಭಾನ್ವಿತ ನಾಯಕರ ಉಪಸ್ಥಿತಿಯಿಂದ ರಾಹುಲ್ ಗಾಂಧಿ ಕಂಗಾಲಾಗಿದ್ದಾರೆ: ಪ್ರಧಾನಿ ಮೋದಿ Read More »

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ AI ವಿಡಿಯೋ ಮೂಲಕ ವಿವಾದ ಸೃಷ್ಟಿ ಮಾಡಿದ್ದ ಯೂಟ್ಯೂಬರ್ ಸಮೀರ್ ಬಂಧನಕ್ಕೆ ಧರ್ಮಸ್ಥಳ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಸಮೀರ್‌ಗೆ ನೊ ಟೀ ಸ್ ನೀಡಲಾಗಿದ್ದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್‌ನ ಬಾಡಿಗೆ ಮನೆಯನ್ನು ಸುತ್ತುವರೆದಿದೆ ಒಂದು ಮೂಲಗಳು ತಿಳಿಸಿವೆ. ಆತನನ್ನು ಬಂಧಿಸಿ ಧರ್ಮಸ್ಥಳಕ್ಕೆ ಕರೆದು ತರುವ ಸಾಧ್ಯತೆ ಇದೆ.

ಧರ್ಮಸ್ಥಳ ಪ್ರಕರಣ: AI ವಿಡಿಯೋ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡಿದ ಯೂಟ್ಯೂಬರ್ ಬಂಧನ ಸಾಧ್ಯತೆ Read More »

ಆ.24 : ನಿಂತಿಕಲ್ಲಿನಲ್ಲಿರುವ ಸಾಧನಾ ಸಹಕಾರ ಸೌಧದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಜಂಟಿ ಆಶ್ರಯ | ದೇರಳಕಟ್ಟೆ ಜಸ್ಟೀಸ್‍ ಕೆ.ಎಸ್‍.ಹೆಗ್ಡೆ ಚಾರಿಟೇಬಲ್‍ ಆಸ್ಪತ್ರೆ ಸಹಯೋಗ

ಎಣ್ಮೂರು: ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಜಸ್ಟೀಸ್‍ ಕೆ.ಎಸ್‍.ಹೆಗ್ಡೆ ಚಾರಿಟೇಬಲ್‍ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.24 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ನಿಂತಿಕಲ್ಲಿನಲ್ಲಿರುವ ಸಾಧನಾ ಸಹಕಾರ ಸೌಧದ ಆವರಣದಲ್ಲಿ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಬಿರ ಉದ್ಘಾಟಿಸಲಿದ್ದು, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ

ಆ.24 : ನಿಂತಿಕಲ್ಲಿನಲ್ಲಿರುವ ಸಾಧನಾ ಸಹಕಾರ ಸೌಧದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಜಂಟಿ ಆಶ್ರಯ | ದೇರಳಕಟ್ಟೆ ಜಸ್ಟೀಸ್‍ ಕೆ.ಎಸ್‍.ಹೆಗ್ಡೆ ಚಾರಿಟೇಬಲ್‍ ಆಸ್ಪತ್ರೆ ಸಹಯೋಗ Read More »

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ

ನವದೆಹಲಿ: ಮುಂಗಾರು ಅಧಿವೇಶನವು ವಿರೋಧ ಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗ ಮೊದಲಾದ ಘಟನೆಗಳ ಜೊತೆಗೆ ಮುಕ್ತಾಯವಾಗಿದ್ದು, ಲೋಕಸಭಾ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ವಿಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿದ್ದು, ಇದರಿಂದಾಗಿ ಮಧ್ಯಾಹ್ನ 12 ರ ವರೆಗೆ ಕಲಾಪವನ್ನು ‌ಸ್ಪೀಕರ್ ಮುಂದೂಡಿ ಆದೇಶ ನೀಡಿದ್ದರು. ಇಂದು ಅಧಿವೇಶನದ ಕೊನೆಯ ದಿನವಾಗಿದ್ದು ಈ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಕದನದಲ್ಲಿ ಗದ್ದಲ ಎಬ್ಬಿಸುವವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ತಿರುಗೇಟು ನೀಡಿದ್ದಾರೆ. ವಿಪಕ್ಷಗಳ ಗದ್ದಲದ ನಡುವೆಯೂ

ಕದನದಲ್ಲಿ ವಿಪಕ್ಷಗಳ ಕೋಲಾಹಲ: ಅನಿರ್ಧಿಷ್ಟಾವಧಿಗೆ ಕಲಾಪ ‌ಮುಂದೂಡಿಕೆ Read More »

error: Content is protected !!
Scroll to Top