ಟಿ20 ವಿಶ್ವಕಪ್‌ : ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ

ಬದ್ಧ ಎದುರಾಳಿಗಳನ್ನು ಸೋಲಿಸಲು ಸಜ್ಜಾಗಿರುವ ಉಭಯ ತಂಡ ಕೊಲಂಬೊ : ಟಿ20 ವಿಶ್ವಕಪ್‌ನಲ್ಲಿ ಇಂದಿನ ಹೈ ವೋಲ್ಟೇಜ್‌ ಪಾಕಿಸ್ತಾನ ವಿರುದ್ಧದ ನಿರ್ಣಾಯಕ ಹಣಾಹಣಿಗೆ ಭಾರತ ತಂಡ ಸಿದ್ಧವಾಗಿದೆ. ಈ ಪಂದ್ಯ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಮೈದಾನದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಪ್ಲೇಯಿಂಗ್​ 11ನಲ್ಲಿ ಬದಲಾವಣೆಯಾಗುವುದು ಖಚಿತ. ಭಾರತ ತಂಡದಲ್ಲಿ ನಾಲ್ವರು ಸ್ಪಿನ್ನರ್‌ಗಳು ಆಡುವ ಸಾಧ್ಯತೆ ಇದೆ. ಇತ್ತ ಪಾಕಿಸ್ತಾನ ಕೂಡ ಕಳೆದೆರಡು ಪಂದ್ಯಗಳಲ್ಲಿ ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತ್ತು. […]

ಟಿ20 ವಿಶ್ವಕಪ್‌ : ಇಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಪಂದ್ಯ Read More »

ಬಸ್‌ಗೆ ಡಿಕ್ಕಿ ಹೊಡೆದ ಕಾರು : ಐವರು ಯುವಕರು ಸಾವು

ಡಿವೈಡರ್‌ ಹಾರಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಕಾರು ಬೆಂಗಳೂರು: ನೆಲಮಂಗಲದ ನವಯುಗ ಟೋಲ್ ಸಮೀಪದ ಫ್ಲೈಓವರ್ ಬಳಿ ಡಿವೈಡರ್‌ಗೆ ಹಾರಿ ಕೆಎಸ್‌ಆರ್‌ಟಿಸಿ ಬಸ್‌ಗೆ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಯುವಕರು ಮೃತಪಟ್ಟಿದ್ದಾರೆ. ನಡುರಾತ್ರಿ 12 ಗಂಟೆ ಸುಮಾರಿಗೆ ಈ ಅಪಘಾತ ನಡೆದಿದ್ದು, ಬಸ್ ಡ್ರೈವರ್, ಕಂಡೆಕ್ಟರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತರನ್ನು ದೊಡ್ಡಬಳ್ಳಾಪುರದ ದುರ್ಗಾ ಪ್ರಸಾದ್ (20), ಕೇಶವ್ (19), ಲಲಿತ್ (22), ಹರ್ಷಿತ್ (20) ಎಂದು ಗುರುತಿಸಲಾಗಿದೆ. ತುಮಕೂರು

ಬಸ್‌ಗೆ ಡಿಕ್ಕಿ ಹೊಡೆದ ಕಾರು : ಐವರು ಯುವಕರು ಸಾವು Read More »

ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಸರ್ಕಾರ ಆಡಳಿತಕ್ಕೆ ಬರಬೇಕು: HD ಕುಮಾರಸ್ವಾಮಿ

ಬೆಂಗಳೂರು: ರಾಜ್ಯದಲ್ಲಿರುವ ಜನ ವಿರೋಧಿ, ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿವ ಗುರಿ ನಮ್ಮದು. ಸಿ ಎಂ ಸ್ಥಾನದ ಬಗ್ಗೆ ಚರ್ಚಿಸುವುದಕ್ಕಿಂತ ಜನಸ್ನೇಹಿ ಆಡಳಿತ ಅಧಿಕಾರಕ್ಕೆ ಬರಬೇಕು ಎನ್ನುವುದೇ ಮುಖ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಮೈತ್ರಿ ಮಾಡಿಕೊಂಡು 113 ಸ್ಥಾನ ಗಳಿಸಿದರೆ ಸಿ ಎಂ ಆಗಬಹುದು ಎನ್ನುವುದಕ್ಕೆ ಉತ್ತರ ನೀಡಿದ ಅವರು, ಅದರ ಕುರಿತು ಈಗಲೇ ಮಾತನಾಡುವ ಅಗತ್ಯ ಇಲ್ಲ. ಇನ್ನೂ 2 ವರ್ಷ ಸಮಯ ಇದೆ. ನಮ್ಮ

ರಾಜ್ಯದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಸರ್ಕಾರ ಆಡಳಿತಕ್ಕೆ ಬರಬೇಕು: HD ಕುಮಾರಸ್ವಾಮಿ Read More »

ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ‌ ಈಗ ಮತ್ತೆ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಬಂಧಿತ ಆರೋಪಿಯನ್ನು ಪುತ್ತೂರು ಕಸಬಾ ಗ್ರಾಮದ ಅಬ್ಬಾಸ್ ಆಲಿ ಅಲ್ತಾಫ್(55) ಎಂದು ಗುರುತಿಸಲಾಗಿದೆ. ಪ್ರಸ್ತುತ ಈತ ಮಂಗಳೂರಿನ ಪದವು ಎಂಬಲ್ಲಿ ವಾಸ್ತವ್ಯ ಇದ್ದ. ಈತನನ್ನು ಮಂಗಳೂರಿನ ಬಿಕರ್ನಕಟ್ಟೆ‌ ಕುಲಶೇಖರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಲ್ತಾಫ್ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.: 18/2026, ಕಲಂ: 269 ಬಿಎನ್‌ಎಸ್

ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್ ವಶಕ್ಕೆ Read More »

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ: ಬಿ. ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರದ ಸಾಧನಾ ಸಮಾವೇಶಕ್ಕೆ ಸಂಬಂಧಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾತನಾಡಿದ್ದು, ಕಾಂಗ್ರೆಸ್ ತನ್ನ ಯೋಜನೆಗಳನ್ನು ಸಾಧನೆ ಎಂದು ಹೇಳಿಕೊಳ್ಳುತ್ತಿದ್ದರೂ ಜನರಿಗೆ ತಲುಪುತ್ತಿರುವ ಪ್ರಯೋಜನ ಮಾತ್ರ ಕಡೆಮೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿರುವ ಅವರು ಆ ಗ್ಯಾರಂಟಿಗಳು ಈಗಾಗಲೇ ಪಂಚರ್ ಆಗಿವೆ. ಸರ್ಕಾರದ ಗ್ಯಾರಂಟಿಗಳು ಕೇವಲ ಪ್ರಚಾರಕ್ಕೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದು 1000 ದಿನಗಳಾಗಿದ್ದರೂ ಜನರನ್ನು ಕಾಯಿಸುವುದೇ ಕೈಲಾಸ ಎಂಬಂತೆ ವರ್ತಿಸುತ್ತಿದೆ ಎಂದು

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಪಂಚರ್ ಆಗಿವೆ: ಬಿ. ವೈ. ವಿಜಯೇಂದ್ರ Read More »

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೆೊಂಡ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು

ತಿರುವನಂತಪುರಂ: ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ 10 ತಿಂಗಳ ಮಗು ಅಲಿನ್‌ ಮೃತಪಟ್ಟಿದ್ದು, ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಗುವಿನ ಪೋಷಕರು 5 ಜೀವಗಳನ್ನು ಉಳಿಸುವ ಮಹತ್ಕಾರ್ಯವನ್ನು ‌ತಮ್ಮ ನೋವಿನಲ್ಲೂ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಅಲಿನ್ ಪೋಷಕರಾದ ಅರುಣ್ ಮತ್ತು ಶೆರಿನ್ ತಮ್ಮ ಮೃತ ಪುತ್ರಿಯ ಅಂಗಾಂಗಗಳನ್ನು ಕೇರಳದ ವಿವಿಧ ಆಸ್ಪತ್ರೆಗಳಿಗೆ ದಾನ ಮಾಡಿದ್ದು, ಆ ಮೂಲಕ ಐದು ಜೀವಗಳನ್ನು ಉಳಿಸುವ ಮೂಲಕ ಅಲಿನ್‌ನ ನೆನಪುಗಳನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆ ಮೂಲಕ ಅಲಿನ್ ಅತ್ಯಂತ ಕಿರಿಯ

ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೆೊಂಡ ಹತ್ತು ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು Read More »

ಕರ್ನಾಟಕದ ವಿದ್ಯಾರ್ಥಿ ಅಮೆರಿಕದಲ್ಲಿ ನಾಪತ್ತೆ

ಕ್ಯಾಲಿಫೋರ್ನಿಯಾದಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವ ಸಾಕೇತ್ ಶ್ರೀನಿವಾಸಯ್ಯ ನವದೆಹಲಿ: ಕರ್ನಾಟಕ ಮೂಲದ ವಿದ್ಯಾರ್ಥಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದು, ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಆತಂಕ ವ್ಯಕ್ತಪಡಿಸಿದೆ. 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಮತ್ತು ಭಾರತೀಯ ದೂತಾವಾಸ ಕಚೇರಿ ತುರ್ತು ಕ್ರಮ ಕೈಗೊಂಡಿವೆ. ಮಾಸ್ಟರ್ಸ್ ವಿದ್ಯಾರ್ಥಿಯಾಗಿರುವ ಸಾಕೇತ್ ಶ್ರೀನಿವಾಸಯ್ಯ ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೆಯಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಫೆ.10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೆ ನಗರದ ಡ್ವೈಟ್ ವೇ

ಕರ್ನಾಟಕದ ವಿದ್ಯಾರ್ಥಿ ಅಮೆರಿಕದಲ್ಲಿ ನಾಪತ್ತೆ Read More »

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ

ತುಮಕೂರು: ಬಿಸಿಯೂಟ ಸೇವಿಸಲು ಸರತಿ‌ ಸಾಲಿನಲ್ಲಿ ನಿಂತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳ ನಡುವೆ ನೂಕುನುಗ್ಗಲು ಸಂಭವಿಸಿದ್ದು, ಇದರಿಂದಾಗಿ ಒಂದನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಕೈ ಬೆರಳುಗಳು ಕಬ್ಬಿಣದ ಬಾಗಿಲಿಗೆ ಸಿಲುಕಿ ತುಂಡಾದ ಘಟನೆ ಗೂಳೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಚಿನ್ಮಯಿದೇವಿ ಎಂಬ ಮಗು ಈ ಘಟನೆಯಲ್ಲಿ ತನ್ನ ಕೈಯ ಎರಡು ಬೆರಳುಗಳನ್ನು ಕಳೆದುಕೊಂಡಿದೆ. ತಳ್ಳಾಟ ನೂಕಾಟದ ನಡುವೆ ತಾನು ಬೀಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕಿ ಕಬ್ಬಿಣದ ಬಾಗಿಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾಳೆ. ಈ ವೇಳೆ ಹಿಂದಿದ್ದ ವಿದ್ಯಾರ್ಥಿಗಳು ಬಾಗಿಲನ್ನು ನೂಕಿದ್ದು,

ಬಿಸಿಯೂಟಕ್ಕಾಗಿ ನೂಕುನುಗ್ಗಲು: ಬೆರಳು ಕಳೆದುಕೊಂಡ ಬಾಲಕಿ Read More »

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ

ಬೆಂಗಳೂರು: ಮಹಾ ಶಿವರಾತ್ರಿಯ ಪ್ರಯುಕ್ತ ಫೆ. 15 ರಂದು ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನ, H.A.L. ಮೂರನೇ ಹಂತ, ಹೊಸ ತಿಪ್ಪೆಸಂದ್ರದಲ್ಲಿ ಭಾನುವಾರ ಬೆಳಗ್ಗಿನಿಂದ ಸೋಮವಾರ ಬೆಳಗ್ಗಿನ ವರೆಗೆ 6 ನೇ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದೆ. ಫೆ. 14 ರಂದು 10.30 ಕ್ಕೆ ಉತ್ಸವ ಸ್ಥಳಕ್ಕೆ ಶಿವಲಿಂಗವನ್ನು ಮೆರವಣಿಗೆ ಮೂಲಕ ತರಲಾಗುತ್ತದೆ. ಫೆ. 15 ರ ಶಿವರಾತ್ರಿಯಂದು ಬೆಳಗ್ಗೆ 8 ಗಂಟೆಗೆ ದೇವತಾ ಪ್ರಾರ್ಥನೆ ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಮಹಾಸಂಕಲ್ಪ, ಮಹತೋಭಾರ ಶ್ರೀ

ಫೆ. 15: ಬೆಂಗಳೂರಿನ ಶಿಶುಗೃಹ ಪೂರ್ಣಪ್ರಜ್ಞಾ ಸಾರ್ವಜನಿಕ ಆಟದ ಮೈದಾನದಲ್ಲಿ ಶಿವರಾತ್ರಿ ಮಹೋತ್ಸವ Read More »

ಅನಾರೋಗ್ಯದಿಂದ ಯುವಕ ಸಾವು

ಪುತ್ತೂರು: ಅಲ್ಪ ಕಾಲದ ಅಸೌಖ್ಯದಿಂದ ಯುವಕನೊಬ್ಬ ಮೃತಪಟ್ಚ ಘಟನೆ ನಡೆದಿದೆ. ಏನೇಕಲ್ಲು ಗ್ರಾಮದ ಪದ್ಮಡ್ಕ ನಿವಾಸಿ ಸುಜಿತ್(27) ಎಂಬವರೇ ಮೃತ ದುರ್ದೈವಿ. ಇವರು ಅನಾರೋಗ್ಯದ ಹಿನ್ನೆಲೆ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಅಂತ್ಯ ಸಂಸ್ಕಾರ ಅವರ ತಾಯಿಯ ತವರು ಮನೆಯಾದ ಕೂತ್ಕುಂಜದ ಚಿದ್ದಲ್ಲು ದಾಮೋದರ ಗೌಡ ಅವರ ಮನೆಯಲ್ಲಿ ನಡೆಯಿತು. ಮೃತರು ತಾಯಿ, ಸಹೋದರರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದ ಯುವಕ ಸಾವು Read More »

error: Content is protected !!
Scroll to Top