ದಾಳಿಕೋರನ ಟಾರ್ಗೆಟ್‌ ಆಗಿದ್ದದ್ದು ಶಾರೂಕ್‌ ಖಾನ್‌

ಶಾರೂಕ್‌ ಮನೆ ಬಳಿ ಹಲವು ಬಾರಿ ಸುಳಿದಾಡಿದ್ದ ಆರೋಪಿ ಮುಂಬಯಿ : ಬಾಲಿವುಡ್ ನಟ ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಇದಕ್ಕೂ ಮೊದಲು ಸೂಪರ್‌ ಸ್ಟಾರ್‌ ಶಾರೂಕ್‌ ಖಾನ್‌ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂಬ ವಿಚಾರ ಬಹಿರಂಗವಾಗಿದ್ದು, ಹೀಗಾಗಿ ಇದು ಹಣಕ್ಕಾಗಿ ಮಾಡಿದ ದರೋಡೆ ಕೃತ್ಯ ಅಲ್ಲ ಎನ್ನಲಾಗಿದೆ.ಸೈಫ್ ಅಲಿ ಖಾನ್‌ ಮೇಲೆ ಹಲ್ಲೆ ಮಾಡುವ ಮುಂಚೆ ಶಾರುಖ್ ಮನೆಯ ಮುಂದೆ ಕೂಡ ಹಲವು ಬಾರಿ ಈ ಆರೋಪಿ ಕಾಣಿಸಿಕೊಂಡಿದ್ದ ಎಂದು ತನಿಖೆಯಲ್ಲಿ […]

ದಾಳಿಕೋರನ ಟಾರ್ಗೆಟ್‌ ಆಗಿದ್ದದ್ದು ಶಾರೂಕ್‌ ಖಾನ್‌ Read More »

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಹೆಂಡತಿಗೆ 14 ವರ್ಷ ಜೈಲು

ಭ್ರಷ್ಟಾಚಾರ ಪ್ರಕರಣದಲ್ಲಿ ಸುದೀರ್ಘ ಕಾರಾಗೃಹ ವಾಸ ಇಸ್ಲಾಮಾಬಾದ್‌: ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ಗೆ ಅಲ್ಲಿನ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಮ್ರಾನ್‌ ಜೊತೆಗೆ ಅವರ ಪತ್ನಿ ಬುಶ್ರಾ ಬೀಬಿ ಅವರಿಗೂ ಶಿಕ್ಷೆ ವಿಧಿಸಿದೆ. ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ 7 ಲಕ್ಷ ರೂ. ಇಮ್ರಾನ್ ಖಾನ್‌ಗೆ 10 ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ದಂಡ ಪಾವತಿಸಲು ಸಾಧ್ಯವಾಗದಿದ್ದರೆ ಇಮ್ರಾನ್‌ ಆರು ತಿಂಗಳು ಮತ್ತು ಬುಶ್ರಾ ಮೂರು

ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌, ಹೆಂಡತಿಗೆ 14 ವರ್ಷ ಜೈಲು Read More »

ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ ಆರೋಪಿ ಸೆರೆ

ಮುಂಬಯಿ : ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಇರಿದಿದ್ದ ಆರೋಪಿಯನ್ನು ಪೊಲೀಸರು ಘಟನೆ ನಡೆದ ಸುಮಾರು 30 ತಾಸುಗಳ ಬಳಿಕ ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಸೈಫ್ ಅಲಿ ಖಾನ್ ಲೀಲಾವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಪೊಲೀಸರು ಆರೋಪಿಯನ್ನು ಬಾಂದ್ರಾ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆ ನಡೆಸುತ್ತಿದ್ದಾರೆ. ದಾಳಿ ಮಾಡಿರುವುದರ ಹಿಂದಿನ ಉದ್ದೇಶ ಏನು? ಆತ ಸೈಫ್ ಮನೆ ತಲುಪಿದ್ದು ಹೇಗೆ? ಈ ದಾಳಿ ಹಿಂದೆ ಬೇರೆ ಯಾರದ್ದಾದರೂ ಕೈವಾಡ ಇದೆಯೇ

ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ ಮಾಡಿದ ಆರೋಪಿ ಸೆರೆ Read More »

ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ

ಉಪ್ಪಿನಂಗಡಿ : ಒಂದೂವರೆ ಕೆಜಿ ತೂಕದ ಗಾಂಜಾವೊಂದನ್ನು ರಿಕ್ಷಾ ಮುಖೇನಾ ಸಾಗಿಸುತ್ತಿರುವುದನ್ನು ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಾಲು ಸಹಿತ ಬಂಧಿಸಿದ್ದಾರೆ. 31ನೇ ನೆಕ್ಕಿಲಾಡಿಯಲ್ಲಿ ಎಸ್‌ಐ ಅವಿನಾಶ್ ಎಚ್. ಮತ್ತವರ ತಂಡ ವಾಹನ ತಪಾಸಣೆ ಮಾಡುತ್ತಿದ್ದಾಗ ಬಂಟ್ವಾಳದ ಕಡೆಯಿಂದ ಉಪ್ಪಿನಂಗಡಿಯತ್ತ ಬರುತ್ತಿದ್ದ ರಿಕ್ಷಾವನ್ನು ನಿಲ್ಲಿಸಲು ಸೂಚಿಸಿದ್ದು. ಆದರೆ ಚಾಲಕ ವಾಹನವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಅಬ್ದುಲ್ ಸಲೀಂ (35 ವ) ಆರೋಪಿ

ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ Read More »

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು

ಕಡಬ : ಬೈಕ್ ಸವಾರನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪೇರಡ್ಕ ಸಮೀಪ ನಡೆದಿದೆ. ಮೃತ ಬಾಲಕನನ್ನು ಪೇರಡ್ಕದ ಖಾಸಗಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ, ನೂಜಿಬಾಳ್ತಿಲ ಗ್ರಾಮದ ಹೊಸಮನೆ ಕಾನ ನಿವಾಸಿ ವಿಶ್ವನಾಥ್ ಎಂಬವರ ಪುತ್ರ ಆಶಿಶ್(16) ಎನ್ನಲಾಗಿದೆ. ಮನೆಯಿಂದ ಶಾಲೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಬಾಲಕನನ್ನು ಕಡಬದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ  ಗಂಭೀರ

ಬೈಕ್‍ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಬಾಲಕ | ಸ್ಥಳದಲ್ಲೆ ಮೃತ್ಯು Read More »

ನಟ ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್‌ ಎಂಟ್ರಿ

24 ತಾಸು ಕಳೆದರೂ ನಿಗೂಢವಾಗಿ ಉಳಿದ ಪ್ರಕರಣ ಮುಂಬಯಿ : ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ಅವರ ಮನೆಯೊಳಗೆ ಆಗಿರುವ ಮಾರಕ ದಾಳಿಯ ಬಗ್ಗೆ ಅನೇಕ ಅನುಮಾನಗಳು ಮೂಡಿರುವಂತೆಯೇ ಈ ಪ್ರಕರಣದ ತನಿಖೆಗೆ ಮುಂಬಯಿಯ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಕನ್ನಡಿಗ ದಯಾ ನಾಯಕ್‌ ಎಂಟ್ರಿಯಾಗಿದ್ದಾರೆ. ನಟನ ಮೇಲಾಗಿರುವ ದಾಳಿಯ ತನಿಖೆಗೆ ಏಳು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ಪೈಕಿ ಒಂದು ತಂಡದ ನೇತೃತ್ವ ದಯಾ ನಾಯಕ್‌ಗೆ ನೀಡಲಾಗಿದೆ. ಗುರುವಾರ ನಸುಕಿನ 2.30ರ ವೇಳೆಗೆ ವ್ಯಕ್ತಿಯೊಬ್ಬ

ನಟ ಸೈಫ್‌ ಅಲಿ ಖಾನ್‌ ಮೇಲೆ ಹಲ್ಲೆ : ತನಿಖೆಗೆ ದಯಾ ನಾಯಕ್‌ ಎಂಟ್ರಿ Read More »

ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯ ಕೋಟಿಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌

ಮಂಗಳೂರಿನ ಶಾಖಾ ವ್ಯವಸ್ಥಾಪಕಿಯ ಕಾರ್ಯಕ್ಕೆ ಮೆಚ್ಚುಗೆ ಮಂಗಳೂರು: ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯೊಬ್ಬರ ಕೋಟಿಗಟ್ಟಲೆ ಹಣ ಮಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರ ಸಮಯ ಪ್ರಜ್ಞೆಯಿಂದಾಗಿ ಉಳಿದಿದೆ. ಸೈಬರ್‌ ವಂಚಕರ ಬಲೆಗೆ ಸಿಲುಕಿದ್ದ ವೃದ್ಧೆಯನ್ನು ಎಚ್‌ಡಿಎಫ್‌ಸಿ ಬ್ಯಾಂಕಿನ ಕಂಕನಾಡಿ ಶಾಖಾ ವ್ಯವಸ್ಥಾಪಕರು ಸ್ವಲ್ಪದರಲ್ಲೇ ಬಚಾವ್‌ ಮಾಡಿದ್ದಾರೆ. ವೃದ್ಧೆಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿದ್ದ ಸೈಬರ್‌ ಖದೀಮರು ನಿಮ್ಮ ಡೆಬಿಟ್‌ ಕಾರ್ಡ್‌ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎಂದು ಬೆದರಿಸಿದ್ದರು. ಇದನ್ನು ನಂಬಿದ ವೃದ್ಧೆ ಬ್ಯಾಂಕ್‌ಗೆ ಧಾವಿಸಿ ಠೇವಣಿ ಇರಿಸಿದ್ದ ದೊಡ್ಡ

ಡಿಜಿಟಲ್‌ ಅರೆಸ್ಟ್‌ ಆಗಿದ್ದ ವೃದ್ಧೆಯ ಕೋಟಿಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌ Read More »

ಮೆಸ್ಕಾಂ ಉದ್ಯೋಗಿ ಅಶ್ರಫ್‍ ನಿಧನ

ಪುತ್ತೂರು: ಮೆಸ್ಕಾಂ ಉದ್ಯೋಗಿ, ಮಿಷನ್ ಗುಡ್ಡ ನಿವಾಸಿ ಆಶ್ರಫ್ ಇಂದು ಬೆಳಿಗ್ಗೆ ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ದಿ.ಅದ್ರಾಮ ರವರ ಪುತ್ರರಾಗಿದ್ದ ಅವರು ಚಿಂಙಾಣಿ ನಿವಾಸಿಯಾಗಿದ್ದು, ಬಳಿಕ ಪೋಳ್ಯ ಮಸೀದಿ ಬಳಿ ವಾಸವಿದ್ದು ಇದೀಗ ಉರ್ಲಾಂಡಿ ಯಲ್ಲಿರುವ ಪ್ಲಾಟ್ ಒಂದರಲ್ಲಿ ವಾಸವಾಗಿದ್ದರು. ಮೃತರು ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

ಮೆಸ್ಕಾಂ ಉದ್ಯೋಗಿ ಅಶ್ರಫ್‍ ನಿಧನ Read More »

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ | ಸನಾತನ ಸಂಸ್ಕೃತಿಯ ಎಲ್ಲಾ ಆಚರಣೆ ಹಬ್ಬಗಳಲ್ಲೂ ವಿಜ್ಞಾನ ಅಡಗಿದೆ : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಸಂಕ್ರಾಂತಿ ದಿನದಿಂದ ಸೂರ್ಯನು  ದಕ್ಷಿಣಾಯನದಿಂದ ಉತ್ತರಾಯನಕ್ಕೆ ತೊಡಗುತ್ತಾನೆ. ಮಕರ ಸಂಕ್ರಾಂತಿ ಕೃಷಿ ಚಟುವಟಿಕೆಗಳು ಮತ್ತು ಹೊಸ ಬೆಳೆಗಳ ಆಗಮನದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ದಿನವನ್ನು ಪ್ರಕೃತಿ ಮಾತೆಗೆ ಕೃತಜ್ಞತೆಯನ್ನು ಸಲ್ಲಿಸುವ ಹಬ್ಬವೆಂದು ಪರಿಗಣಿಸಲಾಗುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು. ಅವರು ನಗರದ ನೆಲ್ಲಿಕಟ್ಟೆಯಲ್ಲಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಆಯೋಜಿಸಿದ ಮಕರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂಕ್ರಾಂತಿ ಹಬ್ಬದ ಮಹತ್ವ ಹಾಗೂ ಸಂದೇಶ ನೀಡಿದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ | ಸನಾತನ ಸಂಸ್ಕೃತಿಯ ಎಲ್ಲಾ ಆಚರಣೆ ಹಬ್ಬಗಳಲ್ಲೂ ವಿಜ್ಞಾನ ಅಡಗಿದೆ : ಸುಬ್ರಹ್ಮಣ್ಯ ನಟ್ಟೋಜ Read More »

ಪ್ರಧಾನಿ ಹುದ್ದೆಯೇ ಅರಸಿ ಬಂದರೂ ಬೇಡ ಎಂದವರು

ಹುದ್ದೆ, ಪದವಿ, ಪ್ರಶಸ್ತಿಗಿಂತಲೂ ವ್ಯಕ್ತಿತ್ವ ದೊಡ್ಡದು ಎಂದು ಸಾಧಿಸಿ ತೋರಿಸಿದವರು ಕ್ರಿಕೆಟ್ ಲೆಜೆಂಡ್ ಆಟಗಾರ ರಾಹುಲ್ ದ್ರಾವಿಡ್ ಅವರಿಗೆ ಎರಡು ವರ್ಷಗಳ ಹಿಂದೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಆದರೆ ಎಲ್ಲರೂ ಆಶ್ಚರ್ಯ ಪಡುವಂತೆ ರಾಹುಲ್ ದ್ರಾವಿಡ್ ಈ ಗೌರವವನ್ನು ನಿರಾಕರಣೆ ಮಾಡಿದರು. ಅದಕ್ಕೆ ಅವರು ಕೊಟ್ಟ ಕಾರಣ ಕೂಡ ಸರಿಯಾಗಿಯೇ ಇತ್ತು. ನನ್ನ ಹೆಂಡತಿ ಡಾಕ್ಟರ್. ಆ ಉನ್ನತ ಪದವಿ ಪಡೆಯಲು ಅವರು ವರ್ಷಾನುಗಟ್ಟಲೆ ಹಗಲು ರಾತ್ರಿ ಅಭ್ಯಾಸವನ್ನು ಮಾಡಿದ್ದಾರೆ. ನನ್ನ

ಪ್ರಧಾನಿ ಹುದ್ದೆಯೇ ಅರಸಿ ಬಂದರೂ ಬೇಡ ಎಂದವರು Read More »

error: Content is protected !!
Scroll to Top