ಸುಳ್ಯ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ಕತ್ತಿಯಿಂದ ಹಲ್ಲೆ

ಸುಳ್ಯ : ಜಾಗದ ವಿವಾದಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ಸುಳ್ಯದ ಕೊಲ್ಲಮೊಗ್ರದ ಶಿವಾಲದಲ್ಲಿ ನಡೆದಿದೆ. ಕೊಲ್ಲಮೊಗ್ರ ಗ್ರಾಮದ ಶಿವಾಲ ವಿಶ್ವನಾಥ ರೈ ಹಲ್ಲೆಗೊಳಗಾದವರು. ಭರತ್ ಶಿವಾಲ ಹಲ್ಲೆ ನಡೆಸಿದ ಆರೋಪಿ. ವಿಶ್ವನಾಥ ರೈ ಮತ್ತು ಭರತ್ ಶಿವಾಲ ನಡುವೆ ಹಲವು ಸಮಯಗಳಿಂದ ಜಾಗದ ತಕರಾರು ಇತ್ತು. ಈ ನಡುವೆ ಭರತ್ ಶಿವಾಲ ರಸ್ತೆಯನ್ನು ಅಗಲೀಕರಣಗೊಳಿಸಿದ್ದರು. ಇದೇ ಸಂದರ್ಭ ವಿಶ್ವನಾಥ ರೈ ತನ್ನ ಜಾಗಕ್ಕೆ ಬೇಲಿ ಹಾಕುತ್ತಿದ್ದಾಗ ಮತ್ತೆ ವಿವಾದ ಉಂಟಾಗಿದೆ. ಬೇಲಿ ತೆಗೆಯುವ […]

ಸುಳ್ಯ: ಜಾಗದ ತಕರಾರಿನ ಹಿನ್ನೆಲೆಯಲ್ಲಿ ಕತ್ತಿಯಿಂದ ಹಲ್ಲೆ Read More »

ಉಡುಪಿಯಲ್ಲಿ ಮೋದಿಯ ರೋಡ್‌ ಶೋ ರದ್ದು

ನ.28ಕ್ಕೆ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಲಿರುವ ಪ್ರಧಾನಿ ಉಡುಪಿ: ನವೆಂಬರ್ 28ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸರುವುದನ್ನು ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ದೃಢಪಡಿಸಿದೆ. ನವೆಂಬರ್ 28ರಂದು ಪ್ರಧಾನಿ ಮೋದಿ ಉಡುಪಿಗೆ ಭೇಟಿ ನೀಡುವ ಬಗ್ಗೆ ಪ್ರಧಾನಿ ಕಚೇರಿ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಆ ವೇಳಾಪಟ್ಟಿಯ ಪ್ರಕಾರ ಪ್ರಧಾನಿ ಮೋದಿ ನವೆಂಬರ್ 28ರಂದು ಬೆಳಿಗ್ಗೆ 11.05ಕ್ಕೆ ದೆಹಲಿಯಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ

ಉಡುಪಿಯಲ್ಲಿ ಮೋದಿಯ ರೋಡ್‌ ಶೋ ರದ್ದು Read More »

ದ್ವಿಚಕ್ರ ವಾಹನ ಕಳ್ಳತನ: ಇಬ್ಬರ ಬಂಧನ

ಬೆಳ್ತಂಗಡಿ: ಪಾನೂರು ಶ್ರೀ ಗುರು ನಾರಾಯಣ ವೃತ್ತದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವೇಣೂರಿನ ‌ಮಹಮ್ಮದ್ ಇರ್ಷಾದ್ ಮತ್ತು ಪಡಂಗಡಿಯ ಸಾದಿಕ್ ಖಾನ್ ಬಂಧಿತ‌ ಆರೋಪಿಗಳು. ಬೆಳ್ತಂಗಡಿ ಕುಕ್ಕೇಡಿಯ ಸಂಪತ್ ಕುಮಾರ್ ಎಂಬವರಿಗೆ ‌ಸೇರಿದ ವಾಹನ ಇದಾಗಿತ್ತು. ಆರೋಪಿಗಳಿಂದ ಪೊಲೀಸರು ಕದ್ದೊಯ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದ್ವಿಚಕ್ರ ವಾಹನ ಕಳ್ಳತನ: ಇಬ್ಬರ ಬಂಧನ Read More »

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್

ಪುತ್ತೂರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಇದರ ಕೇಂದ್ರ ಸಮಿತಿಯ ಸಭೆಯನ್ನುಬೊಳುವಾರು ಬೈಲಿನ ಸೌಭರಿ ನಿವಾಸದಲ್ಲಿ ಸದಾನಂದ ರಾವ್ ಮತ್ತು ವನಿತಾ ಎಸ್ ರಾವ್ ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಯ್ಯೂರು ನಾರಾಯಣ ಭಟ್ ಮಾತನಾಡಿ, ಅನಾರೋಗ್ಯದ ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ನಾನಾ ಸೌಲಭ್ಯಗಳಿದ್ದರೂ ಅದನ್ನು ಪಡೆಯುವಲ್ಲಿ ಎದುರಾಗುವ ಸಮಸ್ಯೆಗಳು, ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಟ, ರೋಗಿಯ ಜೀವ ಉಳಿಸಲು ಕುಟುಂಬದ ಸದಸ್ಯರು ಎದುರಿಸುವ ಸಮಸ್ಯೆಗಳನ್ನು ನೋಡಿದಾಗ

ಸ್ವಚ್ಛತೆ ಮತ್ತು ಆರೋಗ್ಯ ಸೇವಾ ಕಾರ್ಯಗಳಿಗೆ ಮಹತ್ವ: ಕೆಯ್ಯೂರು ನಾರಾಯಣ ಭಟ್ Read More »

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ:

ಪುತ್ತೂರು : ಅಕ್ಷಯ ಪದವಿ ಕಾಲೇಜಿನಲ್ಲಿ ದ.ಕ ಹಾಗೂ ಕೊಡಗು ಜಿಲ್ಲಾಮಟ್ಟದ ನಾಲ್ಕನೇ ವರ್ಷದಅಟರ್ನೆಸ್ 2K25 ಪಿಯು ಫೆಸ್ಟ್ ಅತ್ಯುತ್ತಮವಾಗಿ ಸಂಪನ್ನಗೊಂಡಿತು. 18 ಕಾಲೇಜುಗಳಿಂದ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಫೆಸ್ಟ್ ನಲ್ಲಿ ಭಾಗವಹಿಸಿದ್ದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಕಬಡ್ಡಿ ತರಬೇತುದಾರ ಪ್ರಶಾಂತ್ ರೈ ಕೈಕಾರ (ಮ್ಯಾನೇಜರ್, ಬ್ಯಾಂಕ್ ಆಫ್ ಬರೋಡ ಪುತ್ತೂರು) ಆಗಮಿಸಿದ್ದು, ಅವರನ್ನು ಕ್ರೀಡಾ ಸಾಧನೆಗಾಗಿ ಸನ್ಮಾನಿಸಲಾಯಿತು.

ಅಕ್ಷಯ ಪದವಿ ಕಾಲೇಜು: “ಅಟರ್ನೆಸ್ 2K25” ಪಿಯು ಫೆಸ್ಟ್ ಸಂಪನ್ನ: Read More »

ಒಳನುಸುಳುಕೋರರನ್ನು ಹುಡುಕಿ – ಹುಡುಕಿ ಹೊರಗಟ್ಟಲಾಗುವುದು: ಅಮಿತ್ ಶಾ

ಗಾಂಧಿನಗರ: ಭಾರತದೊಳಗೆ ಸೇರಿಕೊಂಡಿರುವ ‌ಪ್ರತಿಯೊಬ್ಬ ಒಳನುಸುಳುಕೋರನನ್ನು ಸಹ ಹುಡುಕಿ – ಹುಡುಕಿ ಹೊರಕ್ಕಟ್ಟುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಡುಗಿದ್ದಾರೆ. ಗುಜರಾತ್‌‌ ಭುಜ್‌ನಲ್ಲಿ ನಡೆದ ಬಿ‌ಎಸ್‌ಎಫ್ ವಜ್ರ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಎಂದು ಹೇಳಿದ್ದಾರೆ. ಎಸ್‌ಐಆ‌ರ್ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚುನಾವಣಾ ಆಯೋಗಕ್ಕೆ ಪತ್ರ ಬರೆದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದು,

ಒಳನುಸುಳುಕೋರರನ್ನು ಹುಡುಕಿ – ಹುಡುಕಿ ಹೊರಗಟ್ಟಲಾಗುವುದು: ಅಮಿತ್ ಶಾ Read More »

ನೇಣು ಬಿಗಿದು ಯುವಕ ಆತ್ಮಹತ್ಯೆ

ಪುತ್ತೂರು: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಪುರುಷರಕಟ್ಟೆಯ ಇಂದಿರಾನಗರದ ಯುವಕನೊಬ್ಬ ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತನನ್ನು ಪ್ರತೀಕ್ ಜೋಗಿ (23) ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನ ಶೋ ರೂಮ್ ವರ್ಕ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗಷ್ಟೇ ಊರಿಗೆ ಬಂದಿದ್ದ. ನ. 21 ರಂದು ಮಧ್ಯಾಹ್ನ ಮನೆಯಲ್ಲಿ ಮೊಬೈಲ್ ನೋಡುತ್ತಿದ್ದ, ಬಳಿಕ ಕಾಣೆಯಾಗಿದ್ದ. ಅನುಮಾನಗೊಂಡ ಮನೆ ಮಂದಿ ಆತನನ್ನು ಹುಡುಕಾಡಿದ್ದು, ಈ ವೇಳೆ ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈತನ

ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಯಕ್ಷಗಾನ ಕಲಾವಿದರಿಗೆ ಅವಮಾನ ಉದ್ದೇಶಪೂರ್ವಕ : ಭರತ್‌ ಶೆಟ್ಟಿ

ಪುರುಷೋತ್ತಮ ಬಿಳಿಮಲೆ ಮೂಲಕ ಕಾಂಗ್ರೆಸ್‌ ಷಡ್ಯಂತ್ರ ಎಂದು ಆರೋಪ ಮಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಯಕ್ಷಗಾನ ಕಲಾವಿದರ ಕುರಿತು ನೀಡಿರುವ ಅವಮಾನಕಾರಿ ಹೇಳಿಕೆ ಉದ್ದೇಶಪೂರ್ವಕ. ಹಿಂದೂ ಸಂಪ್ರದಾಯಯ ಆಚಾರ, ವಿಚಾರಗಳಿಗೆ ಧಕ್ಕೆ ತರುವ ಕೆಲಸ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ. ಕರಾವಳಿ ಭಾಗದಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ. ಯಕ್ಷಗಾನವನ್ನು ದೈವಿಕ ಕಲೆಯನ್ನಾಗಿ ಆಚರಿಸುವವರು ನಾವುಗಳು. ಯಕ್ಷಗಾನದಲ್ಲಿ ದೇವರ ವೇಷ ಹಾಕಿದ ಕಲಾವಿದರನ್ನು ಕಂಡಾಗ ಕೈಮುಗಿಯುವವರು ನಾವು. ಬಹಳ ಶ್ರದ್ದಾ ,

ಯಕ್ಷಗಾನ ಕಲಾವಿದರಿಗೆ ಅವಮಾನ ಉದ್ದೇಶಪೂರ್ವಕ : ಭರತ್‌ ಶೆಟ್ಟಿ Read More »

ಧರ್ಮಸ್ಥಳ ಪ್ರಕರಣ : ಚಿನ್ನಯ್ಯನ ಜಾಮೀನು ಅರ್ಜಿ ಸೋಮವಾರ ವಿಚಾರಣೆ

ಬೆಳ್ತಂಗಡಿ : ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ಚಿನ್ನಯ್ಯ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಬುರುಡೆ ಷಡ್ಯಂತ್ರ ಪ್ರಕರಣದಲ್ಲಿ ಕಳೆದ 90 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯನಿಗೆ ಸುಳ್ಳು ಸಾಕ್ಷಿ ವರದಿ ಸಲ್ಲಿಕೆಯಾದ ಬಳಿಕ ಜಾಮೀನು ನೀಡಲು ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಚಿನ್ನಯ್ಯ ಪರ ವಕೀಲರು ನ.21ರಂದು ಎರಡನೇ ಭಾರಿಗೆ ಜಾಮೀನು ನೀಡಲು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯೇಂದ್ರ

ಧರ್ಮಸ್ಥಳ ಪ್ರಕರಣ : ಚಿನ್ನಯ್ಯನ ಜಾಮೀನು ಅರ್ಜಿ ಸೋಮವಾರ ವಿಚಾರಣೆ Read More »

ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಲಾರಿ ಪೊಲೀಸ್ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಯಾವುದೇ ಪರವಾನಗಿ ಹೊಂದಿದೆ ಮಡಿಕೇರಿಗೆ ‌ಕೇರಳದ ಕಡೆಯಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಿಂಚಿಪದವು ಎಂಬಲ್ಲಿಂದ ಸುಮಾರು 400 ಕೆಂಪುಕಲ್ಲುಗಳನ್ನು ಹೇರಿಕೊಂಡು ಮಡಿಕೇರಿಯ ಕಡೆಗೆ ಲಾರಿ ಹೋಗುತ್ತಿತ್ತು. ಈ ಲಾರಿಯನ್ನು ಕಲ್ಲುಗುಂಡಿ ಹೊರಠಾಣೆಯ ಸಮೀಪ ಪೊಲೀಸರು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಸುಳ್ಯ ಪೊಲೀಸರು ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ

ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಲಾರಿ ಪೊಲೀಸ್ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು Read More »

error: Content is protected !!
Scroll to Top