ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ

ಧಾರ್: ಮಧ್ಯಪ್ರದೇಶದ ಭೋಜ್‌ಶಾಲಾ ಸಂಕೀರ್ಣದ ಒಳಗಿರುವ ಕಮಲ್ ಮೌಲಾ ‌ಮಸೀದಿಯನ್ನು ಪ್ರಾಚೀನ ದೇವಾಲಯದ ಅವಶೇಷಗಳಿಂದ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷಾ ‌ವರದಿ ತಿಳಿಸಿದೆ. ಈ ವರದಿಯನ್ನು ರಾಜ್ಯ ಹೈಕೋರ್ಟ್‌ನ ಇಂದೋರ್ ಪೀಠಕ್ಕೂ ‌ಸಲ್ಲಿಕೆ ಮಾಡಲಾಗಿದ್ದು, ಅದರಲ್ಲಿ ಈ ಕಮಾಲ್ ಮೌಲಾ ಮಸೀದಿಯನ್ನು ಹಿಂದು ಸಮುದಾಯದ ವಾಗ್ದೇವಿ (ದೇವಿ ಸರಸ್ವತಿ) ದೇವಾಲಯವೆಂದು ಪರಿಗಣಿಸುತ್ತದೆ. ಆದರೆ ಮುಸ್ಲಿಂ ಪಕ್ಷದವರು ಇದನ್ನು 11ನೇ ಶತಮಾನದ ಕಮಾಲ್ ಮೌಲಾ ಮಸೀದಿಯೆಂದು ಹೇಳಿಕೊಳ್ಳುತ್ತಾರೆ. ವೈಜ್ಞಾನಿಕ ತನಿಖೆಗಳು, ಸಮೀಕ್ಷೆಗಳು ಮತ್ತು ಉತ್ಪನನಗಳು, […]

ಭೋಜ್‌ಶಾಲಾ ಸಂಕೀರ್ಣದ ಮಸೀದಿಯೊಳಗೆ ಹಿಂದೂ ದೇಗುಲದ ಅವಶೇಷಗಳು: ಎಎಸ್ಐ Read More »

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ

ಲಕ್ನೋ: ಉತ್ತರ ಪ್ರದೇಶದಲ್ಲಿ ಮಗನೇ ತಂದೆಯನ್ನು ಗುಂಡಿಕ್ಕಿ ಕೊಂದು, ದೇಹವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನ್ವೇಂದ್ರ ‌ಸಿಂಗ್ ಎಂದು ಗುರುತಿಸಲಾಗಿದೆ. ಆತನ ಪುತ್ರ ಅಕ್ಷತ್ ಪ್ರತಾಪ್ ಸಿಂಗ್ ಎಂಬಾತನೇ‌ ಆರೋಪಿ.‌ ಮನ್ವೇಂದ್ರ ಅವರು ಔಷಧ ಮತ್ತು ಮದ್ಯದ ಉದ್ಯಮ ನಡೆಸುತ್ತಿದ್ದರು. ಅವರು ತಮ್ಮ ಮಗನನ್ನು ಡಾಕ್ಟರ್ ಆಗುವಂತೆ ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಈ ವಿಷಯದಲ್ಲೇ ಮಗ

ಡಾಕ್ಟರ್ ಆಗು ಎಂದಿದ್ದಕ್ಕೆ ತಂದೆಯನ್ನೇ ಭೀಕರವಾಗಿ ಹತ್ಯೆಗೈದ ಪುತ್ರ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರ ಮೇಲೆಯೇ ಆರೋಪಿಗಳ ವಕೀಲರಿಂದ ಆರೋಪ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರೇ ಎಡವಟ್ಟು ಮಾಡಿದ್ದಾರೆ ಎಂದು ಆರೋಪಿಗಳ‌ ಪರ ವಕೀಲರು ಆರೋಪಿಸಿದ್ದಾರೆ. ಸದ್ಯ ಆರೋಪಿಗಳು ದಿನಕ್ಕೊಂದು ಎಂಬಂತೆ ಹೊಸ ಹೊಸ ಆರೋಪಗಳನ್ನು ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ನಿನ್ನೆಯೂ ‌ಮೂವರು ಆರೋಪಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ಪೊಲೀಸರು ನಮ್ಮ ಮೊಬೈಲ್ ಗಳನ್ನು ಯಾವುದೋ ಸ್ಥಳದಲ್ಲಿ ವಶಕ್ಕೆ ಪಡೆದು ಬಳಿಕ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದಿದ್ದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆಯಾದಾಗ ಆರೋಪಿಗಳನ್ನು ಟೈಲ್ಸ್ ಇರುವಂತಹ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪೊಲೀಸರ ಮೇಲೆಯೇ ಆರೋಪಿಗಳ ವಕೀಲರಿಂದ ಆರೋಪ Read More »

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ

ಪ್ರತಿಭಟನೆಗೆ ಸಂಚು ರೂಪಿಸಿದ್ದ ಉದಯ್‌ ಭಾನು ಚಿಬ್‌ ನವದೆಹಲಿ: ಭಾರತ ಎಐ ಇಂಪ್ಯಾಕ್ಟ್‌ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಶರ್ಟ್‌ ಬಿಚ್ಚಿ ಅರೆ ಬೆತ್ತಲೆ ಪ್ರತಿಭಟನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಉದಯ್‌ ಭಾನು ಚಿಬ್‌ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಹಲವಾರು ಸುತ್ತಿನ ವಿಚಾರಣೆಯ ನಂತರ ಬಂಧಿಸಲಾಗಿದೆ. ತಿಲಕ್ ಮಾರ್ಗ ಪೊಲೀಸ್ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಪೊಲೀಸ್ ಠಾಣೆ ಹೊರಗೆ ಭಾರಿ ಭದ್ರತೆ ಕಲ್ಪಿಸಲಾಗಿದೆ. ಎಐ ಸಭೆಯಲ್ಲಿ ಶರ್ಟ್‌ಲೆಸ್

ಎಐ ಶೃಂಗದಲ್ಲಿ ಅರೆ ಬೆತ್ತಲೆ ಪ್ರತಿಭಟನೆ : ಯುವ ಕಾಂಗ್ರೆಸ್‌ ಅಧ್ಯಕ್ಷನ ಬಂಧನ Read More »

ಎಸ್‌ಐಟಿ ತನಿಖೆಯಿಂದ ಬಯಲಾಯಿತು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಯ ಅಸಲಿ ಕಾರಣ

ರಿಯಲ್‌ ಎಸ್ಟೇಟ್‌ ಉದ್ಯಮಿಯ ಆತ್ಮಹತ್ಯೆಗೆ ಇದೇ ಕಾರಣವಂತೆ ಬೆಂಗಳೂರು: ಇಡೀ ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಬೆಂಗಳೂರಿನ ಖ್ಯಾತ ರಿಯಲ್‌ ಎಸ್ಟೇಟ್‌ ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆ ಹಿಂದಿನ ಕಾರಣ ಈಗ ಬಯಲಾಗಿದೆ. ಸಿ.ಜೆ.ರಾಯ್ ಆತ್ಮಹತ್ಯೆ ಕೇಸ್ ತನಿಖೆ ಬಹುತೇಕ ಮುಕ್ತಾಯವಾಗಿದ್ದು, ಎಸ್‌ಐಟಿ ಅಧಿಕಾರಿಗಳ ಇಲ್ಲಿಯವರೆಗಿನ ತನಿಖೆಯಲ್ಲಿ ರಾಯ್ ಆತ್ಮಹತ್ಯೆ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ. ಒಂದೇ ಕಾರಣದಿಂದ ರಾಯ್ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಇಲ್ಲಿಯವರೆಗಿನ ಎಸ್‌ಐಟಿ ತನಿಖೆಯ ವೇಳೆ ಬಹಿರಂಗವಾಗಿದೆ

ಎಸ್‌ಐಟಿ ತನಿಖೆಯಿಂದ ಬಯಲಾಯಿತು ಉದ್ಯಮಿ ಸಿ.ಜೆ.ರಾಯ್‌ ಆತ್ಮಹತ್ಯೆಯ ಅಸಲಿ ಕಾರಣ Read More »

ಮಾ.11ರಿಂದ ಸರ್ಕಾರಿ ವೈದ್ಯರ ಪ್ರತಿಭಟನೆ : ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆ

ಆಸ್ಪತ್ರೆಗಳಿಗೆ ಔಷಧ ಸಮರ್ಪಕ ಪೂರೈಕೆ, ನೇಮಕಾತಿ ನಿಯಮ ತಿದ್ದುಪಡಿ ಬೇಡಿಕೆ ಬೆಂಗಳೂರು : ವರ್ಗಾವಣೆ ನೀತಿ ಬದಲಾವಣೆ, ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15 ರವರೆಗೆ ಹೊರ ರೋಗಿಗಳ ಸೇವೆಯನ್ನು (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರ ಪ್ರತಿಭಟನೆಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸದಿದ್ದರೆ

ಮಾ.11ರಿಂದ ಸರ್ಕಾರಿ ವೈದ್ಯರ ಪ್ರತಿಭಟನೆ : ವೈದ್ಯಕೀಯ ಸೇವೆ ವ್ಯತ್ಯಯವಾಗುವ ಸಾಧ್ಯತೆ Read More »

ಹೂಡಿಕೆ ಲಾಭ ನಂಬಿ 19 ಲಕ್ಷ ರೂ. ಕಳೆದುಕೊಂಡ ಮಹಿಳೆ

ಮಂಗಳೂರು: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸುವ ಆಸೆಗೆ ಬಿದ್ದ ಮಹಿಳೆಯೊಬ್ಬರು ಬರೋಬ್ಬರಿ 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಮಹಿಳೆಯೇ ಸ್ವತಹ ಮೊಬೈಲ್‌ನಲ್ಲಿ ಗೂಗಲ್ ಮೂಲಕ ಸಾಫ್ಟೋನಿಕ್ ವೆಬ್‌ಸೈಟ್ ಹುಡುಕಾಡಿ ಎಪಿಕೆ ಫೈಲ್ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಬಳಿಕ ಸಾಫ್ಟೋನಿಕ್ ಆ್ಯಪ್ ಬಳಸಿ ಬ್ಯಾಂಕ್ ಖಾತೆಯ ವಿವರ ನೀಡಿದ್ದರು. ಹೆಚ್ಚಿನ ಲಾಭದ ಆಶೆಯಿಂದ ಈ ಆ್ಯಪ್‌ನಲ್ಲಿರುವ ನಾನಾ ಕಂಪನಿಗಳಿಗೆ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದರು. ಜನವರಿಯಲ್ಲಿ 1 ಲಕ್ಷ ರೂ. ಲಾಭ ಅವರಿಗೆ ಸಿಕ್ಕಿತ್ತು. ಬಳಿಕ ಅವರನ್ನು

ಹೂಡಿಕೆ ಲಾಭ ನಂಬಿ 19 ಲಕ್ಷ ರೂ. ಕಳೆದುಕೊಂಡ ಮಹಿಳೆ Read More »

ಏರ್‌ ಆಂಬುಲೆನ್ಸ್‌ ಪತನಗೊಂಡು ಏಳು ಮಂದಿ ಸಾವು

ಗಾಯಾಳುವನ್ನು ತುರ್ತು ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿದ್ದ ಖಾಸಗಿ ಏರ್‌ ಆಂಬುಲೆನ್ಸ್‌ ಪತನ ಹೊಸದಿಲ್ಲಿ: ಜಾರ್ಖಂಡ್‌ನ ಚಾತ್ರ ಜಿಲ್ಲೆಯ ಸಿಮಾರಿಯಾ ಎಂಬಲ್ಲಿ ಸೋಮವಾರ ಸಂಜೆ ಏರ್‌ ಆಂಬುಲೆನ್ಸ್‌ ಪತನಗೊಂಡು ಅದರಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಏರ್ ಆ್ಯಂಬುಲೆನ್ಸ್‌ನಲ್ಲಿದ್ದ ಎಲ್ಲ ಏಳು ಮಂದಿ ಮೃತಪಟ್ಟಿದ್ದಾರೆ. ವಿಮಾನ ರಾಂಚಿಯಿಂದ ದೆಹಲಿಗೆ ತೆರಳುತ್ತಿತ್ತು ಎಂದು ಚಾತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ಹೇಳಿದ್ದಾರೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದ್ದ ಬೀಚ್ಕ್ರಾಫ್ಟ್ ಸಿ90 (ವಿಐ-ಎಜೆವಿ) ರಾಂಚಿ ವಿಮಾನ ನಿಲ್ದಾಣದಿಂದ ರಾತ್ರಿ 7.11ಕ್ಕೆ ಟೇಕಾಫ್‌

ಏರ್‌ ಆಂಬುಲೆನ್ಸ್‌ ಪತನಗೊಂಡು ಏಳು ಮಂದಿ ಸಾವು Read More »

ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆ

ಎದೆಗೆ ಬಿದ್ದ ಏಟಿನಿಂದ ಸಾವನ್ನಪ್ಪಿದ 16ರ ಹರೆಯದ ಬಾಲಕ ಶಿವಮೊಗ್ಗ : ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಭೀಕರವಾಗಿ ಕೊಲೆಯಾದ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. ಶಿವಮೊಗ್ಗದ ಸೂಳೆಬೈಲು ಬಡಾವಣೆಯ ಸಂಕೇತ್ (16) ಕೊಲೆಯಾದ ವಿದ್ಯಾರ್ಥಿ. ಸೂಳೆಬೈಲು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಂಕೇತ್ ಸೋಮವಾರ ಸ್ಪೆಷಲ್ ಕ್ಲಾಸ್ ಮುಗಿಸಿ ಹೊರಬಂದಾಗ ಇತರ ಕೆಲ ವಿದ್ಯಾರ್ಥಿಗಳ ನಡುವೆ ಜಗಳವಾಗುತ್ತಿತ್ತು. ಅವರ ಜಗಳವನ್ನು ಬಿಡಿಸಲು ಹೋದಾಗ ಸಂಕೇತ್ ಮೇಲೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ

ಜಗಳ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಕೊಲೆ Read More »

ಬೀದಿ ದೀಪದ ಕಂಬ ಬಿದ್ದು ವ್ಯಕ್ತಿ ಸಾವು

ಮಂಗಳೂರು: ಬೀದಿ ದೀಪದ ಕಂಬ ಮುರಿದು ಬಿದ್ದು ಮೀನುಗಾರ ಕಾರ್ಮಿಕ ಮೃತಪಟ್ಟ ಘಟನೆ ಬಂದರು ಧಕ್ಕೆಯಲ್ಲಿ ನಡೆದಿದೆ. ತಮಿಳುನಾಡು ಮೂಲದ ಮುರುಗನ್ (35) ಎಂಬವರೇ ಮೃತ ದುರ್ದೈವಿ. ಅವರು ಧಕ್ಕೆಯಲ್ಲಿ ಮೀನು ತುಂಬಿ ತರುವುದು, ಐಸ್ ಹಾಕುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಮಾಡುತ್ತಿದ್ದರು. ಮುರುಗನ್ ಮೀನು ಹೊತ್ತು ತಂದು ಕುಳಿತಿದ್ದ ವೇಳೆ ಬೀದಿ ದೀಪದ ಕಂಬ ಅವರ ಮೇಲೆ ಮುರಿದು ಬಿದ್ದಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗೆ ಅವರು ಮೃತರಾಗಿದ್ದಾರೆ. ಮೃತ ರು

ಬೀದಿ ದೀಪದ ಕಂಬ ಬಿದ್ದು ವ್ಯಕ್ತಿ ಸಾವು Read More »

error: Content is protected !!
Scroll to Top