ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ತುರ್ತು ದ್ವಾರ ತೆರೆಯಲು ಯತ್ನಿಸಿದ ಕುಡುಕ ಪ್ರಯಾಣಿಕ

ದೆಹಲಿ : ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಸಂಬಂಧಪಟ್ಟ ಸಂಸ್ಥೆಗಳಿಗೆ ದೂರು ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ದಿಲ್ಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ 6E 308 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಅಮಲೇರಿದ ಸ್ಥಿತಿಯಲ್ಲಿ ತುರ್ತು ನಿರ್ಗಮನದ ದ್ವಾರ ತೆರೆಯಲು ಪ್ರಯತ್ನಿಸಿದ್ದಾನೆ. ಇದನ್ನು ಗಮನಿಸಿದ ಸಿಬ್ಬಂದಿ ಕ್ಯಾಪ್ಟನ್‌ಗೆ ಎಚ್ಚರಿಕೆ ನೀಡಿ ಅವನನ್ನು ತಡೆದಿದ್ದಾರೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ. ಬೆಂಗಳೂರಿಗೆ ಆಗಮಿಸಿದ ನಂತರ ಪ್ರಯಾಣಿಕನನ್ನು […]

ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ತುರ್ತು ದ್ವಾರ ತೆರೆಯಲು ಯತ್ನಿಸಿದ ಕುಡುಕ ಪ್ರಯಾಣಿಕ Read More »

ಪುತ್ತೂರು: ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜಾತ್ರೋತ್ಸವ : ದರ್ಶನ ಬಲಿ, ಬಟ್ಟಲು ಕಾಣಿಕೆ

ಪುತ್ತೂರು :ಕೋಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಉತ್ಸವದ ಅಂಗವಾಗಿ ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ ನಡೆದು ಬಳಿಕ ಮಹಾಅನ್ನಸಂತರ್ಪಣೆ ಜರಗಿತು. ಬಳಿಕ ಪುತ್ತೂರು ಯಕ್ಷಸಾರಥಿ ಅವರಿಂದ ಶ್ರೀ ದೇವಿ ಲೀಲೆ ಯಕ್ಷಗಾನ ಬಯಲಾಟ ನಡೆಯಿತು.

ಪುತ್ತೂರು: ಕೊಡಿಪ್ಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಜಾತ್ರೋತ್ಸವ : ದರ್ಶನ ಬಲಿ, ಬಟ್ಟಲು ಕಾಣಿಕೆ Read More »

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ’ಬಾಲಸ್ತುತಿ – 2023 ಉದ್ಘಾಟನೆ

ಪುತ್ತೂರು: ದೇಶ ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿರುವುದು ಇಲ್ಲಿನ ಸಂಸ್ಕೃತಿ ಸಂಸ್ಕಾರಗಳಿಂದ. ಆದರೆ ಅಂತಹ ಸಂಸ್ಕೃತಿಯಿಂದ ನಾವು ನಿಧಾನವಾಗಿ ದೂರ ಸರಿಯುತ್ತಿರುವುದು ಆತಂಕಕಾರಿ ವಿಚಾರ. ಮನೆಯಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಹಿಂದೂ ಧಾರ್ಮಿಕ ಶ್ಲೋಕಗಳನ್ನು ಮಕ್ಕಳು ನಿತ್ಯವೂ ಉಚ್ಚರಿಸುವಂತೆ ಮಾಡಬೇಕಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಮಾತೃ ಸುರಕ್ಷಾ ಪ್ರಮುಖ್ ಬಡೆಕ್ಕಿಲ ಗಣರಾಜ ಭಟ್ ಹೇಳಿದರು. ಅವರು ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಸಿಬಿಎಸ ಇ ವಿದ್ಯಾಲಯದ ವತಿಯಿಂದ ಆಯೋಜಿಸಲಾದ

ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ’ಬಾಲಸ್ತುತಿ – 2023 ಉದ್ಘಾಟನೆ Read More »

ರಾಹುಲ್‌ಗೆ ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ನ್ಯಾಯಾಧೀಶರ ನಾಲಗೆ ಕತ್ತರಿಸುವ ಬೆದರಿಕೆ

ಕಾಂಗ್ರೆಸ್‌ ನಾಯಕನ ವಿರುದ್ಧ ಕೇಸು ದಾಖಲು ಚೆನ್ನೈ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ನ್ಯಾಯಾಧೀಶರ ನಾಲಿಗೆ ಕತ್ತರಿಸುವುದಾಗಿ ತಮಿಳುನಾಡಿನ ಕಾಂಗ್ರೆಸ್ ನಾಯಕರೊಬ್ಬರು ಬೆದರಿಕೆಯೊಡ್ಡಿದ್ದಾರೆ.ಮೋದಿ ಹೆಸರಿನವರೆಲ್ಲ ಕಳ್ಳರು ಎಂದು ಟೀಕಿಸಿದ್ದ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸೂರತ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಚ್. ವರ್ಮಾ ಮಾ. 23 ರಂದು ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ರಾಹುಲ್‌ಗೆ ಶಿಕ್ಷೆ ವಿಧಿಸಿದ ಸೂರತ್ ನ್ಯಾಯಾಲಯದ ನ್ಯಾಯಾಧೀಶರ ನಾಲಗೆ ಕತ್ತರಿಸುವ ಬೆದರಿಕೆ Read More »

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ?

ಇವರೆಲ್ಲ ಹಾಸಿಗೆ ಇದ್ದಷ್ಟೇ ಕಾಲು ಚಾಚಿದ್ದರೆ ಸಾಧಕರಾಗುತ್ತಿರಲಿಲ್ಲ ‘ಗಾದೆಗಳು ವೇದಕ್ಕೆ ಸಮ’ ಎಂದರು ನಮ್ಮ ಹಿರಿಯರು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂದರು ಅವರು.ಬಾಲ್ಯದಲ್ಲಿ ನಾವೆಲ್ಲರೂ ಕಲಿತ ಈ ಮೇಲಿನ ಗಾದೆಯು ನಮಗೆ ಸಂತೃಪ್ತ ಬದುಕಿನ ಅಗತ್ಯವನ್ನು ಸೂಚಿಸುತ್ತದೆ.ನಮ್ಮ ಮಿತಿಗಳನ್ನು ಮೀರಿ ದೊಡ್ಡ ಆಸೆ ಇಟ್ಟುಕೊಳ್ಳುವುದು ಬೇಡ ಅಂತ ಅದರ ಅರ್ಥ. ಅವರು ಹಾಗೆ ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ. ಆದರೆ…ಬದುಕಿನಲ್ಲಿ ಭರವಸೆಯನ್ನು ಇಡಬಾರದು ಎಂದು ಯಾರೂ ಹೇಳಿಲ್ಲ. ಈ ಭರವಸೆಗಳೇ ಮುಂದೆ ನಮ್ಮ ಆಕಾಂಕ್ಷೆಗಳಾಗಿ, ನಮ್ಮ

ಕಾಲುಗಳು ಉದ್ದವಿದ್ದಷ್ಟು ಹಾಸಿಗೆಯನ್ನು ಮಾಡಬಹುದಲ್ಲ? Read More »

ಬೆಳ್ತಂಗಡಿ : ಆಲಿಕಲ್ಲು ಸಹಿತ ಮಳೆ

ಬೆಳ್ತಂಗಡಿ : ಬೇಸಗೆ ತಾಪಮಾನದಿಂದ ಬಸವಳಿದಿದ್ದ ಮಂದಿಗೆ ಮಳೆ ಕೊಂಚ ತಣಿಸಿದ್ದು, ಬೆಳ್ತಂಗಡಿ ತಾಲೂಕಿನ ಹಲವೆಡೆ ಎ.7ರ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಮಳೆಯಾಗಿದೆ. ಉಜಿರೆ, ಮುಂಡಾಜೆ, ಧರ್ಮಸ್ಥಳ, ಕೊಕ್ಕಡ, ನಾರಾವಿ, ಬೆಳ್ತಂಗಡಿ, ಚಾರ್ಮಾಡಿ, ಸವಣಾಲು, ಕಡಿರುದ್ಯಾವರ ಸಹಿತ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆ ಸುರಿದಿದೆ. ಗುರುವಾರ ಮಧ್ಯರಾತ್ರಿಯೇ ಮಳೆ ಮುನ್ಸೂಚನೆ ನೀಡಿದ್ದು, ಗುಡುಗು ಸಹಿತ ಹನಿ ಮಳೆಯಾಗಿತ್ತು. ಇದೀಗ ಶುಕ್ರವಾರ ತಣ್ಣನೆ ಗಾಳಿಯೊಂದಿಗೆ ಮಳೆ ಆರಂಭಗೊಂಡು ರಸ್ತೆ,‌ ಚರಂಡಿಗಳ್ಳಿ ನೀರು ಹರಿಯುವ ಮಟ್ಟಿಗೆ ಮಳೆಯಾಗಿದೆ. ಬೇಸಗೆ ಬಿಸಿಯಿಂದ

ಬೆಳ್ತಂಗಡಿ : ಆಲಿಕಲ್ಲು ಸಹಿತ ಮಳೆ Read More »

ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಏ. 7 ರಂದು ಎಫ್‌ಐಆರ್ ದಾಖಲಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘಿಸಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಆರೋಪದಲ್ಲಿ ಚುನಾವಣಾಧಿಕಾರಿ ದೂರು ಸಲ್ಲಿಸಿದ್ದು ಐಪಿಸಿಯ ಸೆಕ್ಷನ್ 171 E ಮತ್ತು 171 I ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಅನುಮತಿ ಪಡೆಯದೆ

ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್‌ ದಾಖಲು Read More »

ಹಿರಿಯ ದೈವಪಾತ್ರಿ ಅಣ್ಣು ಶೆಟ್ಟಿ ದೈವಾಧೀನ

ಮೂಡುಬಿದಿರೆ : ಹಿರಿಯ ದೈವಪಾತ್ರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಾಡಿ ಅಣ್ಣು ಶೆಟ್ಟಿ(78) ಅವರು ಅಲ್ಪಕಾಲದ ಅಸೌಖ್ಯದಿಂದ ಏ. 7 ರಂದುನ ನಿಧನ ಹೊಂದಿದರು. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಶುಕ್ರವಾರದ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾಡಿ ಹಜಂಕಾಲಬೆಟ್ಟು, ಮಾರ್ನಾಡು, ತೋಡಾರು ಸಹಿತ ದ.ಕ ಜಿಲ್ಲೆಯ ಕಾರ್ಕಳ ತಾಲೂಕಿನ ಹಲವಾರು ದೈವಸ್ಥಾನಗಳಲ್ಲಿ ದೈವಪಾತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮೂಡಬಿದಿರೆಯ ಮಾಸ್ತಿಕಟ್ಟೆಯಲ್ಲಿ ವಾಸವಾಗಿದ್ದ ಇವರ ಅಂತ್ಯಸಂಸ್ಕಾರವು ಮಾರ್ನಾಡು ಕಲ್ಲಬೆಟ್ಟು ಗುತ್ತುಮನೆಯಲ್ಲಿ ನಡೆಯಿತು. ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು

ಹಿರಿಯ ದೈವಪಾತ್ರಿ ಅಣ್ಣು ಶೆಟ್ಟಿ ದೈವಾಧೀನ Read More »

ಮಡಿವಂತಿಕೆಯ ರಥಕ್ಕೆ ಆನುವಂಶಿಕ ಸೇವೆ | ಮಹಾಲಿಂಗೇಶ್ವರ ದೇವರ ಹೂತೇರು ಶೃಂಗಾರದ ಚಾಕರಿ | ಸೇರಿಗಾರ ವೃತ್ತಿಯಿಂದ ಚಾಕರಿ ವೃತ್ತಿಗೆ ರಮಾನಾಥ ಕುಟುಂಬ

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರ ಉತ್ಸವಗಳ ಪೈಕಿ ಹೂತೇರು ಅಥವಾ ಪುಷ್ಪ ರಥಕ್ಕೆ ಹೆಚ್ಚಿನ ಮಹತ್ವ. ಬ್ರಹ್ಮರಥ, ಚಂದ್ರಮಂಡಲ ಇದ್ದರೂ, ಪುಷ್ಪರಥ ಅತೀ ಶ್ರದ್ಧೆಯ, ಭಕ್ತಿಯ ರಥ ಎಂದೇ ಜನಜನಿತ. ಹೂತೇರಿಗೆ ಮಡಿವಂತಿಕೆಯ ರಥ ಎಂದೂ ಕರೆಯಲಾಗುತ್ತದೆ. ಈ ರಥದ ಮೇಲ್ಭಾಗಕ್ಕೆ ಯಾರೆಂದರೆ ಯಾರು ಹೋಗುವಂತಿಲ್ಲ. ಅರ್ಚಕರು ರಥ ಏರಬೇಕಾದರೂ, ಮಡಿವಂತಿಕೆಯಲ್ಲಿ ಇರಬೇಕು ಎಂಬ ನಿಯಮವೂ ಇದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ಧ್ವಜಾರೋಹಣ ಏರಿದ ತಕ್ಷಣ ನಂದಿ ಮಂಟಪದ ನಂದಿಗೆ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ.

ಮಡಿವಂತಿಕೆಯ ರಥಕ್ಕೆ ಆನುವಂಶಿಕ ಸೇವೆ | ಮಹಾಲಿಂಗೇಶ್ವರ ದೇವರ ಹೂತೇರು ಶೃಂಗಾರದ ಚಾಕರಿ | ಸೇರಿಗಾರ ವೃತ್ತಿಯಿಂದ ಚಾಕರಿ ವೃತ್ತಿಗೆ ರಮಾನಾಥ ಕುಟುಂಬ Read More »

ಏ. 9: ಪುತ್ತೂರು ಜಾತ್ರೆಗೆ ಕಡೇಶಿವಾಲಯ ಯುವಶಕ್ತಿಯಿಂದ ಶ್ರಮದಾನ

ಪುತ್ತೂರು: ಕಡೇಶಿವಾಲಯ ಯುವಶಕ್ತಿ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 9ರಂದು ಶ್ರಮದಾನ ಸೇವೆ ನಡೆಯಲಿದೆ. ಯುವಶಕ್ತಿ ಸೇವಾಪಥ ದ.ಕ. ಇದರ ನೇತೃತ್ವದಲ್ಲಿ ಮಿತ್ರಸಂಸ್ಥೆಗಳ ಒಗ್ಗೂಡುವಿಕೆಯೊಂದಿಗೆ ಶ್ರಮದಾನ ಸೇವೆ ಆಯೋಜಿಸಲಾಗಿದೆ. ಹತ್ತೂರು ಸಂಭ್ರಮಿಸುವ ಪುತ್ತೂರ ಒಡೆಯನ ಜಾತ್ರೋತ್ಸವದ ಶುಭಸಮಯದಿ ಶ್ರಮಸೇವೆಗೈಯೋಣ ಬನ್ನಿ ಎಂಬ ಧ್ಯೇಯವಾಕ್ಯದೊಂದಿಗೆ ಶ್ರಮದಾನ ನಡೆಯಲಿದೆ. ಈಗಾಗಲೇ ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ಖ್ಯಾತಿ ಗಳಿಸಿರುವ ಕಡೇಶಿವಾಲಯ ಯುವಶಕ್ತಿ ತಂಡ ಏಪ್ರಿಲ್ 9ರಂದು ಜಾತ್ರೋತ್ಸವ ಹಿನ್ನೆಲೆಯಲ್ಲಿ ಶ್ರಮದಾನಕ್ಕೆ ಮುಂದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಏ. 9: ಪುತ್ತೂರು ಜಾತ್ರೆಗೆ ಕಡೇಶಿವಾಲಯ ಯುವಶಕ್ತಿಯಿಂದ ಶ್ರಮದಾನ Read More »

error: Content is protected !!
Scroll to Top