ಆಮ್ ಆದ್ಮಿ ರಾಷ್ಟ್ರಾದ್ಯಂತ ಸ್ಪರ್ಧೆ | ದ.ಕ.ದ 5 ಅಭ್ಯರ್ಥಿಗಳ ಪಟ್ಟಿ ಪ್ರಕಟ

ಪುತ್ತೂರು: ಆಮ್‍ ಆದ್ಮಿ ಪಕ್ಷ ಕಳೆದ 10 ವರ್ಷಗಳಲ್ಲಿ ಒಂದು ರಾಷ್ಟ್ರೀಯ ಪಕ್ಷವಾಗಿ ಗುರುತಿಸಿಕೊಂಡಿದ್ದು, ರಾಷ್ಟ್ರಾದ್ಯಂತ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಈಗಾಗಲೇ ದ.ಕ.ಜಿಲ್ಲೆಯಲ್ಲಿ ಐದು ಸ್ಥಾನಗಳಲ್ಲಿ ಅಭ್ಯರ್ಥಿಯ ಪಟ್ಟಿ ಪ್ರಕಟಗೊಳಿಸಲಾಗಿದೆ ಎಂದು ಆಮ್‍ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅಶೋಕ್‍ ಎಡಮಲೆ ತಿಳಿಸಿದ್ದಾರೆ. ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಪುತ್ತೂರಿನ ಸರಕಾರ ಆಸ್ಪತ್ರೆ ಮೇಲ್ದರ್ಜೆ ಸಹಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಬೆಂಬಲ ನೀಡುವ ಮೂಲಕ ಗುಣಮಟ್ಟದ ಆರೋಗ್ಯ ಹಾಗೂ ಶಿಕ್ಷಣ ಒದಗಿಸುವ […]

ಆಮ್ ಆದ್ಮಿ ರಾಷ್ಟ್ರಾದ್ಯಂತ ಸ್ಪರ್ಧೆ | ದ.ಕ.ದ 5 ಅಭ್ಯರ್ಥಿಗಳ ಪಟ್ಟಿ ಪ್ರಕಟ Read More »

ಡಿವೈಡರ್‌ ಗೆ ಕಾರು ಡಿಕ್ಕಿ : ನಂದರಬೆಟ್ಟು ಸದಾಶಿವ ಆಚಾರ್ಯ ಮೃತ್ಯು

ಬಂಟ್ವಾಳ : ಕಾರೊಂದು ಡಿವೈಡರ್ ಗೆ ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಎ. 7 ರಂದು ರಾಷ್ಟ್ರೀಯ ಹೆದ್ದಾರಿ ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಸಂಭವಿಸಿದೆ. ನಂದರಬೆಟ್ಟು ನಿವಾಸಿ ಸದಾಶಿವ ಆಚಾರ್ಯ (77) ಎಂಬವರೇ ಮೃತಪಟ್ಟ ವ್ಯಕ್ತಿ. ಮಂಗಳೂರು – ಬೆಂಗಳೂರು ರಸ್ತೆಯ ಬಿಸಿರೋಡಿನಲ್ಲಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ, ಸದಾಶಿವ ಆಚಾರ್ಯ ಮೃತಪಟ್ಟು, ಅವರ ಮೊಮ್ಮಗ ಚಾಲಕ ಅಕಾಶ್, ಅಳಿಯ ಸುರೇಶ್ ಆಚಾರ್ಯ, ಮಗ ಗಣೇಶ್ ಆಚಾರ್ಯ ಅವರು ಅಲ್ಪಸ್ವಲ್ಪ

ಡಿವೈಡರ್‌ ಗೆ ಕಾರು ಡಿಕ್ಕಿ : ನಂದರಬೆಟ್ಟು ಸದಾಶಿವ ಆಚಾರ್ಯ ಮೃತ್ಯು Read More »

ಮಂಗಳೂರು : ಮೂರು ಶೂಟೌಟ್‌ ಪ್ರಕರಣದಲ್ಲಿ ಬನ್ನಂಜೆರಾಜ ಖುಲಾಸೆ

ಮಂಗಳೂರು : ಕುಖ್ಯಾತ ಪಾತಕಿ ಬನ್ನಂಜೆರಾಜನ ವಿರುದ್ದ ಮಂಗಳೂರಿನಲ್ಲಿ ದಾಖಲಾಗಿದ್ದ 3 ಶೂಟೌಟ್‌ ಪ್ರಕರಣಗಳಲ್ಲಿ ಖುಲಾಸೆಗೊಂಡಿದೆ. ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರೂ ಪ್ರಕರಣಗಳಲ್ಲಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.ಈತನ ವಿರುದ್ದ ಪಾಂಡೇಶ್ವರ ಪೊಲೀಸ್‌ ಠಾಣೆ, ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಮೂರೂ ಪ್ರಕರಣಗಳಲ್ಲಿ ಪೊಲೀಸರು ತನಿಖೆ ನಡೆಸಿ ಬನ್ನಂಜೆರಾಜ ಮತ್ತು ಆತನ ಸಹಚರರ ಮೇಲೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಘಟನೆಗಳ ವೇಳೆಯಲ್ಲಿ ಬನ್ನಂಜೆರಾಜ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. 2015 ನೇ ಇಸವಿಯಲ್ಲಿ

ಮಂಗಳೂರು : ಮೂರು ಶೂಟೌಟ್‌ ಪ್ರಕರಣದಲ್ಲಿ ಬನ್ನಂಜೆರಾಜ ಖುಲಾಸೆ Read More »

ಪುತ್ತೂರಿನಲ್ಲಿ ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ

ಪುತ್ತೂರು:  ಪ್ರಭು ಯೇಸುಕ್ರಿಸ್ತರನ್ನು ಶಿಲುಬೆಗೇರಿಸುವ ದಿನವಾದ ಗುಡ್‌ ಫ್ರೈಡೇ(ಶುಭ ಶುಕ್ರವಾರ) ದಿನವನ್ನು ವಿಶ್ವದಾದ್ಯಂತ ಕ್ರೈಸ್ತ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದು, ಪುತ್ತೂರು ತಾಲೂಕಿನ ಚರ್ಚ್ಗಳಲ್ಲಿಯೂ ಗುಡ್‌ ಫ್ರೈಡೇ ದಿನವನ್ನು ಶ್ರದ್ಧಾಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು. ಕಲ್ವಾರಿ ಬೆಟ್ಟದ ಮೇಲೆ ಪ್ರಭು ಕ್ರಿಸ್ತರು ಮನುಕುಲದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ದಿನವನ್ನು ಶುಭ ಶುಕ್ರವಾರವನ್ನಾಗಿ ಆಚರಿಸಲಾಗುತ್ತದೆ. ಆ ದಿನದಂದು ಜಗತ್ತಿನಾದ್ಯಂತ ಕ್ರೈಸ್ತ ದೇವಾಲಯಗಳಲ್ಲಿ ಬಲಿಪೂಜೆಗಳು ಇರುವುದಿಲ್ಲ. ಆದರೆ ಅರ್ಥವತ್ತಾದ ಆರಾಧನೆ ಮತ್ತು ಪ್ರಾರ್ಥನೆಗಳು ಶುಕ್ರವಾರ ಬೆಳಿಗ್ಗೆಯಿಂದಲೇ ಆಯಾ ಚರ್ಚ್ ಗಳಲ್ಲಿ ನಡೆಯುತ್ತದೆ.

ಪುತ್ತೂರಿನಲ್ಲಿ ಕ್ರೈಸ್ತ ಬಾಂಧವರಿಂದ ಚರ್ಚ್ ಗಳಲ್ಲಿ ಶ್ರದ್ಧಾ ಭಕ್ತಿಯ ಗುಡ್ ಫ್ರೈಡೇ ಆಚರಣೆ Read More »

ನಾಯಿ ಮುಖ ನಾಪತ್ತೆಯಾಗಿ ಮತ್ತೆ ಟ್ವಿಟರ್‌ ಗೆ ಮರಳಿದ ನೀಲಿ ಹಕ್ಕಿ

ಸ್ಯಾನ್‌ ಫ್ರಾನ್ಸಿಸ್ಕೊ : ಕೆಲವೇ ದಿನಗಳ ಹಿಂದೆಯಷ್ಟೇ ಟ್ವಿಟರ್‌ನ ಸಿಇಒ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ನ ಲೋಗೊದಲ್ಲಿ ನೀಲಿ ಹಕ್ಕಿಯ ಚಿತ್ರವನ್ನು ತೆಗೆದು ಹಾಕಿ ಅದರ ಬದಲಿಗೆ ಡಾಗ್‌ ಕಾಯಿನ್‌ ಎಂಬ ಕ್ರಿಪ್ಟೊ ಕರೆನ್ಸಿ ಮೇಲಿರುವ ನಾಯಿಯ ಮೀಮ್ಸ್‌ ಚಿತ್ರವನ್ನು ಟ್ವಿಟರ್‌ನ ಲೋಗೊವಾಗಿ ಬಳಸಿದ್ದರು. ಆದರೆ ಇದೀಗ ಏ. 7 ರಂದು ನಾಯಿ ಮುಖದ ಲೋಗೋ ನಾಪತ್ತೆಯಾಗಿ ಮತ್ತೆ ನೀಲಿ ಹಕ್ಕಿಯನ್ನೇ ಬಳಸಲಾಗಿದೆ.2013ರಲ್ಲಿ ಜೋಕ್‌ನಂತೆ ಸೃಷ್ಟಿಯಾದ ಡಾಗ್‌ ಕಾಯಿನ್‌ ಬಳಿಕ ವ್ಯಾಪಕವಾಗಿ ಬಳಕೆಯಾಗಿ ಜನಪ್ರಿಯವಾಗಿದ್ದು, ಟೆಸ್ಲಾದಲ್ಲೂ ಡಾಗ್‌

ನಾಯಿ ಮುಖ ನಾಪತ್ತೆಯಾಗಿ ಮತ್ತೆ ಟ್ವಿಟರ್‌ ಗೆ ಮರಳಿದ ನೀಲಿ ಹಕ್ಕಿ Read More »

ಸುದೀಪ್ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಿಷೇಧಿಸುವಂತೆ ಒತ್ತಾಯ

ಬೆಂಗಳೂರು : ಮೇ 10 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ನಟ ಕಿಚ್ಚ ಸುದೀಪ್ ಘೋಷಿಸಿದ ಬೆನ್ನಲ್ಲೇ, ಜೆಡಿಎಸ್ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದಿದ್ದು, ನಟನನ್ನು ಒಳಗೊಂಡ ಚಲನಚಿತ್ರಗಳು, ಜಾಹೀರಾತುಗಳು ಮತ್ತು ಇತರ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸುವಂತೆ ಕೋರಿದೆ. ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸುದೀಪ್ ಅವರ ಸಿನಿಮಾ, ಜಾಹೀರಾತು, ಟಿವಿ ಕಾರ್ಯಕ್ರಮಗಳ ಪ್ರಸಾರವನ್ನು ನಿಷೇಧಿಸಬೇಕು ಎಂದು ಜೆಡಿಎಸ್ ರಾಜ್ಯ ಕಾನೂನು

ಸುದೀಪ್ ಸಿನಿಮಾದ ಪ್ರಚಾರ ಕಾರ್ಯಗಳನ್ನು ನಿಷೇಧಿಸುವಂತೆ ಒತ್ತಾಯ Read More »

ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ

ಬಂಡೀಪುರ ಅರಣ್ಯದಲ್ಲಿ ಹುಲಿ ಸಫಾರಿ ಬೆಂಗಳೂರು : ಬಂಡೀಪುರ ಅರಣ್ಯವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವೆಂದು ಘೋಷಿಸಿ 50 ವರ್ಷ ಸಂದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ.ಇಂದು ರಾತ್ರಿ 8.40ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಬಳಿಕ ವಿಮಾನ‌ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ರಾತ್ರಿ 8.50ಕ್ಕೆ ಮೈಸೂರಿನ ಅಡಿಸನ್​​​​​​​ ಬ್ಲೂ ಹೋಟೆಲ್​ಗೆ ತೆರಳಲಿದ್ದಾರೆ. ಇಂದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ನಾಳೆ ಬೆಳಗ್ಗೆ 6.20ಕ್ಕೆ ಹೋಟೆಲ್​ನಿಂದ ಮಂಡಕಳ್ಳಿ

ಇಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ Read More »

ಕರ್ನಾಟಕ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಯೋಜನೆ, ಗೌರವಾರ್ಪಣೆ

ಪುತ್ತೂರು: ಕರ್ನಾಟಕ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟಿನ ಸಮಾಜಮುಖಿ ಕೆಲಸ ಗಳನ್ನು ಗುರುತಿಸಿ ರಾಮನಗರ ಫ್ರೆಂಡ್ಸ್ ಕಾಪು ಪಡು ಇದರ 20 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಟ್ರಸ್ಟಿನ ಗೌರವಾದ್ಯಕ್ಸ ಉದಯ ಅರ್ಜುನಗುಳಿ ಹಾಗೂ ಕಾರ್ಯದರ್ಶಿ ಮನೋಹರ್ ಪಲಯಮಜಲು ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಟ್ರಸ್ಟಿನ ಪೋಷಕರು ಹಾಗೂ ಆಪತ್ ಭಾಂದವ ಈಶ್ವರ್ ಮಲ್ಪೆಯವರನ್ನು ಗೌರವಿಸಲಾಯಿತು. ಕಾಪು ಶ್ರೀ ಮಾರಿಯಮ್ಮ ಅಮ್ಮನವರ ಮಾರಿ ಉತ್ಸವದ ಸಂದರ್ಭದಲ್ಲಿ ಹೃದಯ ಸಮಸ್ಯೆಯಿಂದ ಬಲಳುತ್ತಿರುವ ಧರ್ಮಪಾಲ ಇವರ ಚಿಕಿತ್ಸೆಗೆ ನೆರವಾಗಲು ರಾಮನಗರ ಫ್ರೆಂಡ್ಸ್

ಕರ್ನಾಟಕ ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೇವಾಯೋಜನೆ, ಗೌರವಾರ್ಪಣೆ Read More »

ದಾವಣಗೆರೆಯಲ್ಲಿ ಬಿಎಂಡಬ್ಲ್ಯು ಕಾರು ಸಮೇತ ಬೆಳ್ಳಿ ವಶ

ನಟಿ ಶ್ರೀದೇವಿ ಪತಿ ಕಾರಿನಲ್ಲಿ ಬೆಳ್ಳಿ ಅಕ್ರಮ ಸಾಗಾಟ ದಾವಣಗೆರೆ : ಬಾಲಿವುಡ್‌ನ ಖ್ಯಾತ ನಟಿಯೊಬ್ಬರ ಪತಿಯ ಕುಟುಂಬಕ್ಕೆ ಸೇರಿದ ಬಿಎಂಡಬ್ಲ್ಯು ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 66 ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಬಳಿ ಚುನಾವಣಾಧಿಕಾರಿಯಾಗಿರುವ ತಹಶೀಲ್ದಾರ್‌ ಜಪ್ತಿ ಮಾಡಿದ್ದಾರೆ. ತಹಶೀಲ್ದಾರ್‌ ಡಾ.ಅಶ್ವತ್ಥ್‌ ತಪಾಸಣೆ ವೇಳೆ ಬಿಎಂಡಬ್ಲ್ಯು ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ ಬಾಕ್ಸ್​ಗಳು ಪತ್ತೆಯಾಗಿದ್ದು, ಇನ್ನಷ್ಟು ತಪಾಸಣೆ ನಡೆಸಿದಾಗ ಅದರೊಳಗೆ ಬೆಳ್ಳಿ ಸಾಮಾಗ್ರಿಗಳು ಸಿಕ್ಕಿವೆ. ಅವುಗಳ ಒಟ್ಟು ಮೌಲ್ಯ 39 ಲಕ್ಷ

ದಾವಣಗೆರೆಯಲ್ಲಿ ಬಿಎಂಡಬ್ಲ್ಯು ಕಾರು ಸಮೇತ ಬೆಳ್ಳಿ ವಶ Read More »

ನೈಜೀರಿಯಾದಲ್ಲಿ ಡಕಾಯಿತರ ದಾಳಿಯಿಂದ 46 ನಾಗರಿಕರ ಹತ್ಯೆ

ಎರಡು ದಿನ ನಿರಂತರ ದಾಳಿ ಲಾಗೋಸ್: ನೈಜೀರಿಯಾದ ಬೆನ್ಯೂ ರಾಜ್ಯದಲ್ಲಿ ಸಮುದಾಯವೊಂದರ ಮೇಲೆ ಶಸ್ತ್ರಸಜ್ಜಿತ ಡಕಾಯಿತರು ನಡೆಸಿದ ದಾಳಿಯಲ್ಲಿ ಕನಿಷ್ಠ 46 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.ರಾಜ್ಯದ ಉಮೊಗಿಡಿ ಸಮುದಾಯದಲ್ಲಿ ಮಂಗಳವಾರ ಮತ್ತು ಬುಧವಾರದ ನಡುವೆ ಸಂಭವಿಸಿದ ದಾಳಿಯಲ್ಲಿ ನೂರಾರು ನಿವಾಸಿಗಳು ಗಾಯಗೊಂಡಿದ್ದು, ಹಲವರು ತಮ್ಮ ಮನೆಗಳಿಂದ ಓಡಿಹೋದರು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿ ಖಚಿತಪಡಿಸಿದ್ದಾರೆ. ದಾಳಿಕೋರರು ಬುಧವಾರ ಮನಬಂದಂತೆ ಗುಂಡು ಹಾರಿಸಿ 46 ಜನರನ್ನು ಕೊಂದಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನೈಜೀರಿಯಾದಲ್ಲಿ ಡಕಾಯಿತರ ದಾಳಿಯಿಂದ 46 ನಾಗರಿಕರ ಹತ್ಯೆ Read More »

error: Content is protected !!
Scroll to Top