ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ

ಉಪ್ಪಿನಂಗಡಿ : ಸಮೀಪದ ಪೆರ್ನೆಯಲ್ಲಿ 2013 ಎಪ್ರಿಲ್‌ 9ರಂದು ಅಡುಗೆ ಅನಿಲ ಸಾಗಾಟ ಮಾಡುತ್ತಿದ್ದ ಟ್ಯಾಂಕರ್‌ ಅಪಘಾತಕ್ಕೀಡಾಗಿ ಅನಿಲ ಸೋರಿಕೆಯೊಂದಿಗೆ ಅಗ್ನಿ ಅನಾಹುತ ಸಂಭವಿಸಿದ ಭೀಕರ ಘಟನೆಯಿಂದ ಹಲವು ಕುಟುಂಬಗಳಿಗೆ ಸೇರಿದ 13 ಮಂದಿ ಸಾವನ್ನಪ್ಪಿ ಹಲವು ಮಂದಿ ಗಾಯಗೊಂಡ ಘಟನೆಗೆ 10 ವರ್ಷ ಸಂದರೂ ಅದರ ಕಹಿ ನೆನಪು ಇನ್ನೂ ಅಚ್ಚಳಿಯದೆ ಉಳಿದಿದೆ. ಮಂಗಳೂರಿನಿಂದ ಬೆಂಗಳೂರಿನತ್ತ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್‌ ಪೆರ್ನೆ ತಿರುವಿನಲ್ಲಿ ಮಗುಚಿ ಬಿದ್ದಿದ್ದು, ಅನಿಲ ಸೋರಿಕೆ ಆರಂಭವಾಗಿ ಅಗ್ನಿ ಸ್ಪರ್ಶವಾಗಿತ್ತು. ಧಗಧಗಿಸಲಾರಂಭಿಸಿದ ಬೆಂಕಿಯ […]

ಇನ್ನೂ ಅಚ್ಚಳಿಯದೆ ಉಳಿದ ಕಹಿ ನೆನಪು ಪೆರ್ನೆಯ ಟ್ಯಾಂಕರ್‌ ದುರಂತ Read More »

ಇರಾಕ್ ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಚ್ಚಾ ತೈಲ ರಷ್ಯಾದಿಂದ ಭಾರತಕ್ಕೆ ಆಮದು

ದೆಹಲಿ : ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣ ಹೊಸ ದಾಖಲೆ ನಿರ್ಮಿಸಿದೆ. ಇರಾಕ್ ನಿಂದ ಆಮದು ಮಾಡಿಕೊಳ್ಳುತ್ತಿದ್ದಕ್ಕಿಂತಲೂ ದುಪ್ಪಟ್ಟು ಪ್ರಮಾಣದಲ್ಲಿ ನಾವು ಈಗ ರಷ್ಯಾದಿಂದ ತೈಲವನ್ನು ಖರೀದಿಸಿದ್ದೇವೆ. ಬೆಳವಣಿಗೆ ನಿಧಾನಗತಿಯಲ್ಲಿರುವುದರಿಂದ ತೈಲ ಆಮದಿನಲ್ಲಿ ಯಾವುದೇ ಬದಲಾವಣೆಯೂ ಕಂಡುಬಂದಿಲ್ಲ. ರಷ್ಯಾ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ಏಕೈಕ ದೊಡ್ಡ ರಾಷ್ಟ್ರವಾಗಿದ್ದು, ಭಾರತ ಆಮದು ಮಾಡಿಕೊಳ್ಳುತ್ತಿರುವ ಒಟ್ಟಾರೆ ತೈಲದ ಪೈಕಿ ಮೂರನೇ ಒಂದರಷ್ಟನ್ನು ಪೂರೈಕೆ ಮಾಡುತ್ತಿರುವ ಮೂಲಕ ರಷ್ಯಾ ಸತತ 6 ನೇ ತಿಂಗಳು ಈ

ಇರಾಕ್ ಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಚ್ಚಾ ತೈಲ ರಷ್ಯಾದಿಂದ ಭಾರತಕ್ಕೆ ಆಮದು Read More »

ಗೇಲ್ ಪೈಪ್ ಲೈನ್ ಗ್ಯಾಸ್, ಸಿಎನ್‌ಜಿ ಬೆಲೆ ಪ್ರತಿ ಯೂನಿಟ್‌ಗೆ 7 ರೂ ಕಡಿತ

ಬೆಂಗಳೂರು : ಹೊಸ ದೇಶೀಯ ಅನಿಲ ಬೆಲೆಯ ಪ್ರಯೋಜನಗಳನ್ನು ಗ್ರಾಹಕರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ, ಗೇಲ್ ಗ್ಯಾಸ್ ಲಿಮಿಟೆಡ್ ತನ್ನ ಬೆಲೆ ಕಡಿತ ಮಾಡಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡದಲ್ಲಿ ಗೇಲ್ ಕಂಪನಿಯು ತನ್ನ ಡೊಮೆಸ್ಟಿಕ್ (ಗೃಹಬಳಕೆ) ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಮತ್ತು ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್‌ಜಿ) ಬೆಲೆಗಳನ್ನು ಪ್ರತಿ ಯೂನಿಟ್‌ಗೆ 7 ರೂ.ಗಳಷ್ಟು ಕಡಿತಗೊಳಿಸುವುದಾಗಿ ಭಾನುವಾರ ಪ್ರಕಟಿಸಿದೆ.ಪರಿಷ್ಕೃತ ಬೆಲೆಗಳು ಭಾನುವಾರದಿಂದಲೇ ಜಾರಿಗೆ ಬಂದಿದ್ದು, ಪ್ರತಿ

ಗೇಲ್ ಪೈಪ್ ಲೈನ್ ಗ್ಯಾಸ್, ಸಿಎನ್‌ಜಿ ಬೆಲೆ ಪ್ರತಿ ಯೂನಿಟ್‌ಗೆ 7 ರೂ ಕಡಿತ Read More »

ಚುನಾವಣೆ ಸಂದರ್ಭ ತೇಜೊವಧೆಯ ಫೊಟೋ ವೈರಲ್ ದ್ರೋಹ | ಫೊಟೋ ವೈರಲ್ ಕೃತ್ಯ ಎಸಗಿದ್ದು ಬಿಜೆಪಿಗರೇ ಎಂದ ಅಮಳ ರಾಮಚಂದ್ರ | ಮಹಿಳೆಯ ಅಗೌರವದ ವೀಡಿಯೋ ಬಗ್ಗೆ ಬಿಜೆಪಿ ಏಕೆ ಮೌನ? | ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್

ಪುತ್ತೂರು: ಮಹಿಳೆಯೊಂದಿಗಿನ ಜನಪ್ರತಿನಿಧಿಯ ಫೊಟೋ ವೈರಲ್ ಮಾಡಿರುವುದು ಯಾವ ಸಂದರ್ಭದಲ್ಲಿ ಎನ್ನುವುದು ಮುಖ್ಯವಾಗುತ್ತದೆ. ಚುನಾವಣೆ ಸಂದರ್ಭದಲ್ಲಿ, ಅದೂ ಅಭ್ಯರ್ಥಿ ಆಯ್ಕೆಗೆ ಮೊದಲೇ ಮಹಿಳೆಯೊಂದಿಗಿನ ಫೊಟೋವನ್ನು ವೈರಲ್ ಮಾಡಿರುವುದು ದ್ರೋಹಕ್ಕೆ ಸಮನಾದ ಕೃತ್ಯ. ಆದ್ದರಿಂದ ಮಹಿಳೆಗೆ ಅಗೌರವ ತೋರಿಸಿದ ಈ ಘಟನೆಯ ಕುರಿತು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಸತ್ಯವನ್ನು ಸಮಾಜಕ್ಕೆ ಬಹಿರಂಗಪಡಿಸುವಂತೆ ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಒತ್ತಾಯಿಸಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಇಂತಹ ಘಟನೆಗಳೇನು ಹೊಸತಲ್ಲ. ರೇಣುಕಾಚಾರ್ಯರಿಂದ ಹಿಡಿದು ಇಂದಿನವರೆಗೆ ಹಲವು ಘಟನೆಗಳಿಗೆ

ಚುನಾವಣೆ ಸಂದರ್ಭ ತೇಜೊವಧೆಯ ಫೊಟೋ ವೈರಲ್ ದ್ರೋಹ | ಫೊಟೋ ವೈರಲ್ ಕೃತ್ಯ ಎಸಗಿದ್ದು ಬಿಜೆಪಿಗರೇ ಎಂದ ಅಮಳ ರಾಮಚಂದ್ರ | ಮಹಿಳೆಯ ಅಗೌರವದ ವೀಡಿಯೋ ಬಗ್ಗೆ ಬಿಜೆಪಿ ಏಕೆ ಮೌನ? | ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿದ ಕಾಂಗ್ರೆಸ್ Read More »

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಎ. 8 ರಂದು ಸಂಭವಿಸಿದೆ. ಬೆಳ್ಯಪ್ಪ ಗೌಡ(75) ಎಂಬವರೇ ಮೃತ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಎ. 8 ರಂದು ದನದ ಕೊಟ್ಟಿಗೆಯ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡಬ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ Read More »

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ : ತೊಕ್ಕೊಟ್ಟು ಜಂಕ್ಷನ್‌ನಲ್ಲಿರುವ ಹೊಲಿಗೆ ಸಂಬಂಧಿತ ಮಳಿಗೆಯೊಂದರ ಮಾಲಕ ತನ್ನ ಅಂಗಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.10 ರಂದು ಬೆಳಗ್ಗೆ ಸಂಭವಿಸಿರುತ್ತದೆ. ಪ್ರವೀಣ್ ಆಳ್ವ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೂಲತ ಸೇವಂತಿಗುಡ್ಡೆ ನಿವಾಸಿಯಾಗಿದ್ದ ಇವರು ಪ್ರಸ್ತುತ ಕನೀರುತೋಟದಲ್ಲಿ ವಾಸಿಸುತ್ತಿದ್ದರು. ತೊಕ್ಕೊಟ್ಟು ಜಂಕ್ಷನ್ ಬಳಿ ಟೈಲರ್‌ಗಳಿಗೆ ಸಂಬಂಧಿಸಿದ ಹೊಲಿಗೆ ನೂಲು ಸೇರಿದಂತೆ ಇತರ ಕಚ್ಚಾ ವಸ್ತುಗಳನ್ನು ಪೂರೈಸುವ ಅಂಗಡಿಯನ್ನು ಕಳೆದ ಏಳೆಂಟು ವರ್ಷಗಳಿಂದ ನಡೆಸುತ್ತಿದ್ದರು. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅವರು‌ ಬೆಳಗ್ಗೆ 6.30ಕ್ಕೆ ಮನೆಯಿಂದ

ತೊಕ್ಕೊಟ್ಟು : ವ್ಯಾಪಾರಿ ನೇಣು ಬಿಗಿದು ಆತ್ಮಹತ್ಯೆ Read More »

ಇಂದಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ | ಪೇಟೆ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ದೇವರು ಪೇಟೆ ಸವಾರಿಗೆ ತೆರಳುವ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ ಸಂಜೆ ವೇಳೆಗೆ ಶ್ರೀ ಮಹಾಲಿಂಗೇಶ್ವರ ದೇವರ ಬಲಿ ಉತ್ಸವ ನಡೆದು, ದೇವಸ್ಥಾನದ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆದು ಬಳಿಕ ಶ್ರೀ ದೇವರು ನಿಗದಿತ ಕಟ್ಟೆ ಪೂಜೆಗಾಗಿ ಪೇಟೆ ಸವಾರಿಗೆ ತೆರಳುವರು. ಈ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ನಗರಸಭೆ ವತಿಯಿಂದ ಈ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ದೇವರು ಯಾವೆಲ್ಲಾ ಪ್ರದೇಶಕ್ಕೆ ಕಟ್ಟೆಪೂಜೆಗೆ

ಇಂದಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ | ಪೇಟೆ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ Read More »

1.999 ಕೆಜಿ ಗಾಂಜಾ ವಶ : ಯುವಕನ ಬಂಧನ

ಮಂಗಳೂರು : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಏ. 10 ರಂದು ಮರಕಡ್ಡದ ಪಡುಶೆಡ್ಡೆ ರಸ್ತೆ ಬದಿಯಲ್ಲಿ ಸಂಛವಿಸಿದೆ.ಬಂಧಿತ ಆರೋಪಿಯನ್ನು ಮಲ್ಪೆ ನಿವಾಸಿ ಸುಹಾನ್ ಎಸ್ ಪೂಜಾರಿ (23) ಎಂದು ಗುರುತಿಸಲಾಗಿದೆ. ಸುಹಾನ್ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮರಕಡ್ಡದ ಪಡುಶೆಡ್ಡೆ ಬಳಿ ರಸ್ತೆ ಬದಿ ಸ್ಕೂಟರ್‌ನಲ್ಲಿ ಕುಳಿತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.ಆತನಿಂದ 1.999 ಕೆಜಿ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಅನ್ನು ಪೊಲೀಸರು ಜಪ್ತಿ

1.999 ಕೆಜಿ ಗಾಂಜಾ ವಶ : ಯುವಕನ ಬಂಧನ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣದ ಮೂಲಕ ಚಾಲನೆ | ಇತಿಹಾಸದಲ್ಲಿ ಪ್ರಥಮ ಬಾರಿಗೆ ಶ್ರೀ ವರುಣ ದೇವರ ಪೂಜೆಯೊಂದಿಗೆ ಜಾತ್ರೆ ಆರಂಭ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಸೋಮವಾರ ಬೆಳಿಗ್ಗೆ ಧ್ವಜಾರೋಹಣದ ಮೂಲಕ ಚಾಲನೆ ನೀಡಲಾಯಿತು. ಬೆಳಿಗ್ಗೆ ಗಂಟೆ 9.25 ರ ನಂತರದ ವೃಷಭ ಲಗ್ನ ಸುಮುಹೂರ್ತದಲ್ಲಿ ಭಕ್ತಾದಿಗಳ ಜಯ ಘೋಷದೊಂದಿಗೆ ಧ್ವಜಾರೋಹಣ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕ ವಿ.ಎಸ್.ಭಟ್ ವಿವಿಧ ವೈದಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ಸೋಮವಾರ ಮುಂಜಾನೆಯಿಂದಲೇ ಸೀಮೆಯ ಭಕ್ತಾದಿಗಳು ಫಲಪುಷ್ಪ, ಸೀಯಾಳ, ವಿವಿಧ ಹಸಿರುವಾಣಿಯನ್ನು ಶ್ರೀ ದೇವಸ್ಥಾನಕ್ಕೆ ಒತ್ತಾಯಿಸಿದರು. ಬಳಿಕ ಧ್ವಜಸ್ತಂಭದ ಕಟ್ಟೆಗೆ ಹಸಿರುವಾಣಿಯನ್ನು ಕಟ್ಟಿ ಶೃಂಗರಿಸಲಾಯಿತು. ಮಧ್ಯಾಹ್ನ ಮಹಾಪೂಜೆ

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆಗೆ ಧ್ವಜಾರೋಹಣದ ಮೂಲಕ ಚಾಲನೆ | ಇತಿಹಾಸದಲ್ಲಿ ಪ್ರಥಮ ಬಾರಿಗೆ ಶ್ರೀ ವರುಣ ದೇವರ ಪೂಜೆಯೊಂದಿಗೆ ಜಾತ್ರೆ ಆರಂಭ Read More »

ಮಠಂದೂರು ಪರ ಕಾರ್ಯಕರ್ತರ ಒಲವು | ಅಭ್ಯರ್ಥಿಯಾಗಿ ಘೋಷಣೆಯಾದರೆ ಫೀಲ್ಡಿಗಿಳಿದು ಕೆಲಸಕ್ಕೆ ಉತ್ಸುಕ | ಗೆಲುವಿಗೆ ಕಾರಣವಾಗಲಿದೆ ಅಭಿವೃದ್ಧಿ ಪರ ಕಾರ್ಯ

ಪುತ್ತೂರು: ಹಾಲಿ ಶಾಸಕ ಸಂಜೀವ ಮಠಂದೂರು ಪರ ಕಾರ್ಯಕರ್ತರ ಒಲವು ಮತ್ತೆ ಹೆಚ್ಚಾಗಿದೆ. ಪಕ್ಷ ಸಂಜೀವ ಮಠಂದೂರು ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದರೆ, ಗೆಲುವಿಗಾಗಿ ಶ್ರಮ ಹಾಕುತ್ತೇವೆ ಎಂದು ಉಪ್ಪಿನಂಗಡಿ ಭಾಗದ ಬಿಜೆಪಿ ಕಾರ್ಯಕರ್ತರು ಅಭಿಪ್ರಾಯಿಸಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಲ್ಲಸಲ್ಲದ ಅಪವಾದಗಳನ್ನು ಹಾಕಿ, ಮತದಾರರ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸಂಜೀವ ಮಠಂದೂರು ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ, ಈ ರೀತಿಯಲ್ಲಿ ತೇಜೊವಧೆ ಮಾಡುವುದು ತರವಲ್ಲ. ಓರ್ವ ಶಾಸಕನಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ.

ಮಠಂದೂರು ಪರ ಕಾರ್ಯಕರ್ತರ ಒಲವು | ಅಭ್ಯರ್ಥಿಯಾಗಿ ಘೋಷಣೆಯಾದರೆ ಫೀಲ್ಡಿಗಿಳಿದು ಕೆಲಸಕ್ಕೆ ಉತ್ಸುಕ | ಗೆಲುವಿಗೆ ಕಾರಣವಾಗಲಿದೆ ಅಭಿವೃದ್ಧಿ ಪರ ಕಾರ್ಯ Read More »

error: Content is protected !!
Scroll to Top