ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ

ಬೆಂಗಳೂರು : ಈ ವರ್ಷದ ಮೊದಲ ಸೂರ್ಯಗ್ರಹಣ ವೈಶಾಖ ಅಮವಾಸ್ಯೆ ದಿನವಾದ ಏ.20 ರಂದು ಸಂಭವಿಸಲಿದೆ. ಅಂಟಾರ್ಟಿಕಾ, ಆಸ್ಟ್ರೇಲಿಯಾ, ದಕ್ಷಿಣ ಹಿಂದೂ ಮಹಾಸಾಗರ, ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ದಕ್ಷಿಣ ಪೆಸಿಫಿಕ್ ಪ್ರದೇಶಗಳಲ್ಲಿ ಗ್ರಹಣ ಗೋಚರಿಸುತ್ತದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದಿದ್ದರೂ ಜ್ಯೋತಿಶ್ಶಾಸ್ತ್ರದ ಪ್ರಕಾರ ಅದರ ಪರಿಣಾಮ ಇದೆ.2023ರಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣ ಸಂಭವಿಸಲಿದೆ. ಈ ಪೈಕಿ ಮೊದಲ ಗ್ರಹಣ ಏ.20ರದ್ದು. ಗ್ರಹಣ ಬೆಳಗ್ಗೆ 7.04ಕ್ಕೆ ಶುರುವಾಗಿ ಮಧ್ಯಾಹ್ನ 12.29ಕ್ಕೆ ಕೊನೆಗೊಳ್ಳುತ್ತದೆ. ಎರಡನೇ ಸೂರ್ಯಗ್ರಹಣ ಮುಂಬರುವ […]

ಏ.20 ರಂದು ಈ ವರ್ಷದ ಮೊದಲ ಸೂರ್ಯಗ್ರಹಣ Read More »

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ

ಪ್ರಯೋಗ ಖಚಿತ-ಬಂಡಾಯ ತಪ್ಪಿಸಲು ತಂತ್ರಗಾರಿಕೆ ದೆಹಲಿ : ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬವಾಗಿದೆ. ಸೋಮವಾರವೇ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಮತ್ತು 170 ರಿಂದ 180 ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿರುತ್ತದೆ ಎಂದು ಹೇಳಲಾಗಿತ್ತು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ದಿಲ್ಲಿಯಲ್ಲಿ ಸುದ್ದಿಗಾರರಿಗೆ ಇಂದು (ಸೋಮವಾರ) ರಾತ್ರಿಯೊಳಗೆ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು.ಆದರೆ ನಿರೀಕ್ಷೆಯಂತೆ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ. ಅರುಣಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದಿಲ್ಲಿಗೆ ಮರಳುವುದು

ಬಹುನಿರೀಕ್ಷಿತ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಳಂಬ Read More »

ಈ ಸಲವೂ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ

ಸ್ಕೈಮೆಟ್‌ ವರದಿಯಲ್ಲಿದೆ ಕಳವಳಕಾರಿ ಅಂಶ ದೆಹಲಿ : ಕಳೆದ ಋತುವಿನಲ್ಲಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮವಾಗಿ ಈ ಬೇಸಿಗೆಯಲ್ಲಿ ಈಗಾಗಲೇ ನದಿ, ಕೆರೆ ತೊರೆಗಳೆಲ್ಲ ಬತ್ತಿ ಹೋಗಿ ನೀರಿಗೆ ಹಾಹಾಕಾರ ಎದ್ದಿದೆ. ಪರಿಸ್ಥಿತಿ ಹೀಗಿರುವಾಗ ಹವಾಮಾನ ಮುನ್ಸೂಚನೆ ನೀಡುವ ಸ್ಕ್ಯಮೇಟ್‌ ಸಂಸ್ಥೆ ಮುಂದಿನ ಮಳೆಗಾಲದಲ್ಲೂ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂಬ ವರದಿಯನ್ನು ನೀಡಿ ಜನರನ್ನು ಆತಂಕಕ್ಕೆ ತಳ್ಳಿದೆ. ಭಾರತದಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಸಂಸ್ಥೆ ಸ್ಕೈಮೆಟ್ ಹೇಳಿದೆ.ಮುಂಬರುವ ಮಾನ್ಸೂನ್‌ನಲ್ಲಿ

ಈ ಸಲವೂ ಮಾನ್ಸೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಮಳೆ Read More »

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ

ಬೆಂಗಳೂರು ಪೊಲೀಸರ ಕಾರ್ಯಾಚರಣೆ ಬೆಂಗಳೂರು : ಬೆಂಗಳೂರು ಪೊಲೀಸರು ಇಂದು ವಿದೇಶಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ 8.50 ಕೋಟಿ ರೂ.ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.ದಕ್ಷಿಣ ವಿಭಾಗದ ವಿವಿ ಪುರಂ ಹಾಗೂ ಜಯನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 5 ಮಂದಿ ನೈಜೀರಿಯಾ ಪ್ರಜೆಗಳು ಸೆರೆಯಾಗಿದ್ದಾರೆ.7.32 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಎಂಡಿಎಂಎ, 1 ಕೆಜಿ 150 ಗ್ರಾಂ ಬ್ರೌನ್‍ಶುಗರ್, 310 ಗ್ರಾಂ ಕೊಕೈನ್‍ನನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವೀಸಾ ಅವಧಿ 3 ವರ್ಷಗಳ ಹಿಂದೆಯೇ

8.50 ಕೋ. ರೂ. ಮೌಲ್ಯದ ಡ್ರಗ್ಸ್ ವಶ – ಐವರು ನೈಜೀರಿಯಾ ಪ್ರಜೆಗಳ ಬಂಧನ Read More »

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೋತ್ಸವಕ್ಕೆ ಬಲ್ನಾಡಿನಿಂದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಆಗಮನ ಹಾಗೂ ವರ್ಷಾವಧಿ ನೇಮ ನಡಾವಳಿ ಕುರಿತು ಪೂರ್ವಭಾವಿ ಸಭೆ ದೈವಸ್ಥಾನದ ಸಭಾಭವನದಲ್ಲಿ ನಡೆಯಿತು. ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ ಅಧ್ಯಕ್ಷತೆ ವಹಿಸಿ, ಏ.16 ರಂದು ಸಲು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಆಗಮಿಸಲಿದ್ದು,ಈ ನಿಟ್ಟಿನಲ್ಲಿ ಈ ಬಾರಿ ಬೆಳಗ್ಗೆಯಿಂದಲೇ ಹೂ ಅರ್ಪಿಸಿ ಪ್ರಸಾದ ಪಡೆದುಕೊಳ್ಳಲು ಭಕ್ತಾದಿಗಳಿಗೆ ಅವಕಾಶ ನೀಡಲಾಗಿದೆ. ಭಂಡಾರ ಸಂಜೆ ಆಗಮಿಸಿದ ಬಳಿಕ

ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪೂರ್ವಭಾವಿ ಸಭೆ Read More »

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ

ರಾಮನ ಪಾತ್ರ ವಿಶ್ವದ ಅದ್ಭುತ ನನ್ನ ಜನ್ಮ ನಕ್ಷತ್ರ ಪುನರ್ವಸು. ಅದು ಶ್ರೀ ರಾಮಚಂದ್ರನ ಜನ್ಮ ನಕ್ಷತ್ರ ಕೂಡ. ನಾನು ಕೂಡ ರಾಮನ ಹಾಗೆ ನನ್ನ ಹೆತ್ತವರಿಗೆ ಹಿರಿಯ ಮಗ. ಆದರೆ ನಮ್ಮ ಹೋಲಿಕೆಯು ಅಷ್ಟಕ್ಕೇ ನಿಂತು ಬಿಡುತ್ತದೆ.ಏಕೆಂದರೆ ಶ್ರೀರಾಮನ ಹಾಗೆ ಬದುಕುವುದು ತುಂಬಾನೆ ಕಷ್ಟ. ಶ್ರೀಕೃಷ್ಣನ ಹಾಗೆ ಯೋಚನೆ ಮಾಡುವುದು ಕೂಡ ಕಷ್ಟ. ನನಗೆ ಎರಡೂ ಈವರೆಗೆ ಸಾಧ್ಯವಾಗಲೇ ಇಲ್ಲ. ಅದರಲ್ಲಿಯೂ ಮೊದಲನೆಯದ್ದು ಭಾರಿ ಕಷ್ಟ. ವಾಲ್ಮೀಕಿ ಕೆತ್ತಿದ್ದು ಅದ್ಭುತ ವ್ಯಕ್ತಿತ್ವ ರಾಮ ಶ್ರೀ ರಾಮನ

ರಾಮ ಮಾತ್ರವಲ್ಲ ರಾವಣನಂತಾಗುವುದು ಕೂಡ ಕಷ್ಟ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆ ಆರಂಭ | ಬಲಿ ಉತ್ಸವ

ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭಗೊಂಡಿದ್ದು, ಉತ್ಸವದ ಅಂಗವಾಗಿ ಸೋಮವಾರ ಸಂಜೆ ಶ್ರೀ ದೇವರ ಬಲಿ ಉತ್ಸವ ನಡೆಯಿತು. ಬಳಿಕ ದೇವಸ್ಥಾನದ ವಠಾರದಲ್ಲಿರುವ ಕಟ್ಟೆಯಲ್ಲಿ ಪೂಜೆ ನಡೆಯಿತು. ಭಕ್ತಾದಿಗಳು ಸೇವಾ ಪೂಜೆ ಮಾಡಿಸಿ ಪ್ರಸಾದ ಸ್ವೀಕರಿಸಿದರು. ಬಳಿಕ ಶ್ರೀ ದೇವರು ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕ್ತೇಶ್ವರ ನಗರ, ಕಲ್ಲೇಗ ಪೇಟೆ ಸವಾರಿಗೆ ತೆರಳಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರನ ಜಾತ್ರೆ ಆರಂಭ | ಬಲಿ ಉತ್ಸವ Read More »

ಅಮ್ಚಿನಡ್ಕದಲ್ಲಿ ಗುಡ್ಡವೊಂದಕ್ಕೆ ಬೆಂಕಿ | ಆತಂಕಗೊಂಡ ಸ್ಥಳೀಯರು | ತಪ್ಪಿದ ಭಾರೀ ಅನಾಹುತ

ಪುತ್ತೂರು: ಅಮ್ಚಿನಡ್ಕದಲ್ಲಿ ರಬ್ಬರ್ ಗುಡ್ಡೆ ಬಳಿ ಸೋಮವಾರ ಸಂಜೆ ಬೆಂಕಿ ಹತ್ತಿಕೊಂಡ ಪರಿಣಾಮ ಸಮೀಪದ ನಿವಾಸಿಗಳು ಆತಂಕಗೊಂಡಿದ್ದಾರೆ. ಸಂಜೆ 6:30 ರ ವೇಳೆಗೆ ಅಮ್ಚಿನಡ್ಕ ಎಂಬಲ್ಲಿ ಎನ್ ಎಸ್ ಯು ಐ ಮುಖಂಡ ಎಡ್ವರ್ಡ್ ಡಿಸೋಜ ರವರ ಮನೆಯ ಸಮೀಪ ರಬ್ಬರ್ ಗುಡ್ಡೆ ಬಳಿ ಬೆಂಕಿಯು ಹೊತ್ತಿ ಉರಿದಿದೆ. ಬೆಂಕಿಯನ್ನು ಗಮನಿಸಿದ ಹತ್ತಿರದ ನಿವಾಸಿಯೊಬ್ಬರು ಬೊಬ್ಬೆ ಹೊಡೆದಾಗ ತಕ್ಷಣವೇ ವಿಷಯ ತಿಳಿದ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆಯ ನಾಯಕ ಎಡ್ವರ್ಡ್ ಡಿಸೋಜ ರವರು ಬೆಂಕಿ

ಅಮ್ಚಿನಡ್ಕದಲ್ಲಿ ಗುಡ್ಡವೊಂದಕ್ಕೆ ಬೆಂಕಿ | ಆತಂಕಗೊಂಡ ಸ್ಥಳೀಯರು | ತಪ್ಪಿದ ಭಾರೀ ಅನಾಹುತ Read More »

ಕ್ಷೇತ್ರದ ಅಭಿವೃದ್ಧಿಯೇ  ಮಠಂದೂರು ಗೆಲುವಿಗೆ ಶ್ರೀ ರಕ್ಷೆ.

ಪುತ್ತೂರು: ಸಾವಿರಾರು ಕೋಟಿ ರೂಪಾಯಿಗಳ ಅನುದಾನದ ಮೂಲಕ ಅಭಿವೃದ್ಧಿ ಮತ್ತು ಪಕ್ಷ ಸಂಘಟನೆಗಾಗಿ ಸಾಕಷ್ಟು ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಶಾಸಕ ಸಂಜೀವ ಮಠಂದೂರುರವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿಯುವುದು ನಿಚ್ಚಳವಾಗಿದೆ.ಪುತ್ತೂರು ಕ್ಷೇತ್ರ ಬಿಜೆಪಿ ಸೇರಿದಂತೆ ಜಿಲ್ಲಾ ಬಿಜೆಪಿಯಲ್ಲಿ ಸುದೀರ್ಘ ಕಾಲ ಪಕ್ಷ ಸಂಘಟನೆಗಾಗಿ  ದುಡಿದಿರುವ ಹಾಲಿ ಶಾಸಕ ಮಠಂದೂರು ಪಕ್ಷದ ಶಿಸ್ತಿನ ಸಿಪಾಯಿಯೂ ಹೌದು. ತನ್ನ ಜೀವನದುದ್ದಕ್ಕೂ ಪಕ್ಷ ಸಂಘಟನೆಗಾಗಿ ಸಾಕಷ್ಟು ಸಮಯಗಳನ್ನು ಮೀಸಲಿರಿಸಿ ನಿರಂತರ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು.ತಾನು ಶಾಸಕನಾಗುವುದಕ್ಕಿಂತಲೂ ಮುಂಚೆಯೇ ಪಕ್ಷದಲ್ಲಿ ಬೇರೆ ಶಾಸಕರಾಗಿದ್ದಾಗಲೂ ಕ್ಷೇತ್ರದ

ಕ್ಷೇತ್ರದ ಅಭಿವೃದ್ಧಿಯೇ  ಮಠಂದೂರು ಗೆಲುವಿಗೆ ಶ್ರೀ ರಕ್ಷೆ. Read More »

ನಳ್ಳಿ ನೀರಿನ ದುರುಪಯೋಗ ಮಾಡಿದರೆ ಯಾವುದೇ ಮುನ್ಸೂಚನೆಯಿಲ್ಲದೆ ಜೋಡಣೆ ಕಟ್ – ನಗರಸಭೆ ಎಚ್ಚರಿಕೆ

ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನೀರು ಸರಬರಾಜು ಬಳಕೆದಾರರು ತಮ್ಮ ಮನೆಗಳಿಗೆ ಪಡೆದುಕೊಂಡಿರುವ ನಳ್ಳಿ ನೀರಿನ ಜೋಡಣೆ ಮೂಲಕ ಕೃಷಿ, ಗಿಡ, ಕಟ್ಟಡ ಕಾಮಗಾರಿಗೆ ನೀರು ಬಳಸುತ್ತಿರುವ ಕುರಿತು ನಗರಸಭೆಗೆ ಈಗಾಗಲೇ ದೂರುಗಳು ಬಂದಿ್‍ದ್ದು, ಸಮಸ್ಯೆ ಉಂಟಾಗಿದೆ. ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿರುವ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಸಾರ್ವಜನಿಕರು ಮಿತವಾಗಿ ನೀರನ್ನು ಬಳಕೆ ಮಾಡಬೇಕಾಗಿದ್ದು, ಈ ರೀತಿ ನೀರಿನ ದುಪಯೋಗ ಮಾಡದಂತೆ ಎಚ್ಚರಿಕೆ ನೀಡಿದೆ. ಈ ರೀತಿ ಕಂಡು ಬಂದಲ್ಲಿ ನಗರಸಭೆ ವತಿಯಿಂದ ಯಾವುದೇ ಮುನ್ಸೂಚನೆ

ನಳ್ಳಿ ನೀರಿನ ದುರುಪಯೋಗ ಮಾಡಿದರೆ ಯಾವುದೇ ಮುನ್ಸೂಚನೆಯಿಲ್ಲದೆ ಜೋಡಣೆ ಕಟ್ – ನಗರಸಭೆ ಎಚ್ಚರಿಕೆ Read More »

error: Content is protected !!
Scroll to Top