ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟ : 18 ಸಾವಿರ ದನಗಳು ಸಾವು

ಸ್ಫೋಟದ ಬಳಿಕ ಹತ್ತಿಕೊಂಡ ಬೆಂಕಿ ಟೆಕ್ಸಾಸ್‌ : ಅಮೆರಿಕದ ಟೆಕ್ಸಾಸ್‌ ರಾಜ್ಯದ ಗ್ರಾಮೀಣ ಭಾಗದಲ್ಲಿರುವ ಫಾರ್ಮ್‌ ಒಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ 18 ಸಾವಿರಕ್ಕೂ ಅಧಿಕ ದನಗಳು ಮೃತಪಟ್ಟಿವೆ.ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟದ ಬಳಿಕ ಬೆಂಕಿಹತ್ತಿಕೊಂಡು ಸಾವಿರಾರು ದನಗಳು ಜೀವಂತ ಸುಟ್ಟು ಕರಕಲಾಗಿವೆ. ಇದು ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಫಾರ್ಮ್‌ ಆಗಿದ್ದು, ಸ್ಫೋಟದ ಕಾರಣ ತಿಳಿದುಬಂದಿಲ್ಲ. ಟೆಕ್ಸಾಸ್‌ ನಗರ ಶೆರಿಫ್‌ ಕಚೇರಿ ಆಕಾಶದೆತ್ತರ ಚಾಚಿದ ಅಗ್ನಿಜ್ವಾಲೆಯ ಚಿತ್ರವನ್ನು ಹಂಚಿಕೊಂಡು 18 ಸಾವಿರಕ್ಕೂ ಅಧಿಕ ದನಗಳು ಸತ್ತಿವೆ […]

ಸೌತ್‌ಫೋರ್ಕ್‌ ಡೈರಿ ಫಾರ್ಮ್ಸ್‌ನಲ್ಲಿ ಸ್ಫೋಟ : 18 ಸಾವಿರ ದನಗಳು ಸಾವು Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ

ಯುವಕನ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲು ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಜತೆ ಲೈಂಗಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭ ಧರಿಸುವಂತೆ ಮಾಡಿದ್ದ ನಾರಾವಿಯ ಮಂಜುನಗರದ ಸಂದೇಶ್‌ (23) ಎಂಬ ಯುವಕನನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಲಾಗಿದೆ.ದ್ವಿತೀಯ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿ ಬುಟ್ಟಿಗೆ ಹಾಕಿಕೊಂಡಿದ್ದ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೋಗಿ ಮದುವೆಯಾಗುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಪೋಷಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ Read More »

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು

ಸಂವಿಧಾನ ಶಿಲ್ಪಿಯ ಜಯಂತಿ ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಅವರ ಸಾಧನೆಗಳ ಬಗ್ಗೆ, ಹೋರಾಟಗಳ ಬಗ್ಗೆ ಎಷ್ಟು ಬರೆದರೂ ಅದು ಮುಗಿಯುವುದೇ ಇಲ್ಲ. ಜಗತ್ತಿನ ಎಲ್ಲ ಸಂವಿಧಾನಗಳನ್ನೂ ಆಳವಾಗಿ ಅಧ್ಯಯನ ಮಾಡಿ ಅವರು ಭಾರತಕ್ಕೆ ನೀಡಿದ ಶಕ್ತಿಶಾಲಿ ಸಂವಿಧಾನ ಅತ್ಯಂತ ದೊಡ್ಡದು, ಅತ್ಯಂತ ವಿಸ್ತಾರವಾದದು, ಅತ್ಯಂತ ಶ್ರೀಮಂತವಾದದ್ದು, ಅತ್ಯಂತ ಘನವಾದದ್ದು ಮತ್ತು ಅತ್ಯಂತ ತೂಕದ್ದು. ಅದಕ್ಕಾಗಿ ಭಾರತ ಬಾಬಾ ಸಾಹೇಬರನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.ಅಂತಹ ಅಂಬೇಡ್ಕರರ ಬದುಕು ಮತ್ತು ಬರವಣಿಗೆಗಳ ನಡುವೆ ಯಾವುದೇ

ಬಾಬಾ ಅಂಬೇಡ್ಕರ್ ಅವರ ವಿಶ್ವವಿಖ್ಯಾತ ಉದ್ಧರಣೆಗಳು Read More »

ಅಂಬಿಕಾ ಮಹಾವಿದ್ಯಾಲಯದಲ್ಲಿ  ಸ್ಮಾರ್ಟ್ ಬೋರ್ಡ್ ಬಳಕೆ ತರಬೇತಿ

ಪುತ್ತೂರು: ಆಧುನಿಕ ಕಾಲಘಟ್ಟದ ಶಿಕ್ಷಣ ವ್ಯವಸ್ಥೆ ಸಾಕಷ್ಟು ಬದಲಾಗಿದೆ. ಇಂಟರ್‍ಯಾಕ್ಟಿವ್ ಸ್ಮಾರ್ಟ್ ಬೋರ್ಡ್ ಈಗ ಪ್ರಚಲಿತಕ್ಕೆ ಬರುತ್ತಿದೆ. ಹಾಗಾಗಿ ಪಾರಂಪರಿಕವಾಗಿದ್ದ ಸುಣ್ಣದ ಕಡ್ಡಿ, ಕರಿಹಲಗೆಯ ಬದಲಾಗಿ ಸ್ಮಾಟ್ ಬೋರ್ಡ್‌ಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಕರಿಹಲಗೆಯನ್ನಷ್ಟೇ ಅಲ್ಲದೆ ತಮಗೆ ಬೇಕಾದ ಬಣ್ಣದ ಹಿನ್ನೆಲೆ ಹಾಗೂ ಅಕ್ಷರಗಳನ್ನು ರೂಪಿಸಬಹುದು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಸುಮಾರು 1.75 ಲಕ್ಷ ರೂ.

ಅಂಬಿಕಾ ಮಹಾವಿದ್ಯಾಲಯದಲ್ಲಿ  ಸ್ಮಾರ್ಟ್ ಬೋರ್ಡ್ ಬಳಕೆ ತರಬೇತಿ Read More »

ಕೊಡಗು : ವಿ.ಹಿಂ.ಪ. ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ | ಹತ್ಯೆಗೆ ಯತ್ನ

ಕೊಡಗು : ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುವ ಮೂಲಕ ಹತ್ಯೆಗೆ ಯತ್ನಿಸಿದ ರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರು ಬುಧವಾರ ಕುಶಾಲನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚೆಟ್ಟಳ್ಳಿ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ ಹತ್ಯೆಗೆ ಯತ್ನ ನಡೆದಿದೆ.  ದುಷ್ಕರ್ಮಿಗಳು ಹಾರಿಸಿದ ಗುಂಡು ಕೃಷ್ಣಮೂರ್ತಿ ಅವರು ಚಲಾಯಿಸುತ್ತಿದ್ದ ಕಾರಿಗೆ ತಗುಲಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಮಡಿಕೇರಿಗೆ ಬಂದ

ಕೊಡಗು : ವಿ.ಹಿಂ.ಪ. ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ | ಹತ್ಯೆಗೆ ಯತ್ನ Read More »

ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ : ಕಡೂರು ಟಿಕೆಟ್ ಫಿಕ್ಸ್

ಚಿಕ್ಕಮಗಳೂರು: ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಕಾಂಗ್ರೆಸ್ ಸೇರಿ ಚುನಾವಣೆಗೆ ಟಿಕೆಟ್​​ ಸಿಗದೆ ನಿರಾಶರಾಗಿದ್ದ ವೈಎಸ್​ವಿ ದತ್ತಾ ಮತ್ತೆ ಜೆಡಿಎಸ್​​ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ, ಕಡೂರು ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿಯನ್ನಾಗಿಯೂ ಅವರನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಪಕ್ಷದ ನಾಯಕ ಹೆಚ್​ಡಿ ರೇವಣ್ಣ ಗುರುವಾರ ಸಂಜೆ ಘೋಷಣೆ ಮಾಡಿದರು. ಕಡೂರು ಕ್ಷೇತ್ರದ ಜೆಡಿಎಸ್​​ ಅಭ್ಯರ್ಥಿಯಾಗಿ ದತ್ತಾ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ನಾಮಪತ್ರ ಸಲ್ಲಿಸುವ ದಿನ ದೇವೇಗೌಡರು ಆಗಮಿಸಲಿದ್ದಾರೆ. ಈ ಬಗ್ಗೆ ದೇವೇಗೌಡರೇ ಹೇಳಿದ್ದಾರೆ. ಅವರ ಮಾತಿಗೆ ಎಲ್ಲರೂ ಬೆಲೆ ಕೊಡಬೇಕು

ಮತ್ತೆ ಜೆಡಿಎಸ್ ಸೇರಿದ ವೈಎಸ್​ವಿ ದತ್ತಾ : ಕಡೂರು ಟಿಕೆಟ್ ಫಿಕ್ಸ್ Read More »

ಕೆಎಸ್.ಆರ್.ಟಿ.ಸಿ. ಬಸ್ ದ್ವಿಚಕ್ರ ವಾಹಕ್ಕೆ ಡಿಕ್ಕಿ : ದ್ವಿಚಕ್ರ ಸವಾರ ಬಲಿ

ಬಂಟ್ವಾಳ :  ಕೆಎಸ್.ಆರ್.ಟಿ.ಸಿ.ಬಸ್ಸೊಂದು ದ್ವಿಚಕ್ರಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಇಲ್ಲಿನ ಸಮೀಪದ ಸರಪಾಡಿ ನಿವಾಸಿ  ಸೇಸಪ್ಪ ಯಾನೆ ಶ್ರೇಯಸ್ (30) ಎಂದು ಗುರುತಿಸಲಾಗಿದೆ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಈತ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ದ್ವಿಚಕ್ರದಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಬಿಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿಯಲ್ಲಿರುವ ತನ್ನ ಮನೆಗೆ ದ್ವಿಚಕ್ರದಲ್ಲಿ

ಕೆಎಸ್.ಆರ್.ಟಿ.ಸಿ. ಬಸ್ ದ್ವಿಚಕ್ರ ವಾಹಕ್ಕೆ ಡಿಕ್ಕಿ : ದ್ವಿಚಕ್ರ ಸವಾರ ಬಲಿ Read More »

ಸುಳ್ಯದ ಅಜ್ಜಾವರದಲ್ಲಿ ಕೆರೆಗೆ ಬಿದ್ದ ನಾಲ್ಕು ಆನೆಗಳ ಹಿಂಡು

ಸುಳ್ಯ: ಕಾಡಾನೆಗಳ ಹಿಂಡೊಂದು ನಾಡಿಗೆ ಬಂದು ತೋಟವೊಂದರ ಕೆರೆಗೆ ಬಿದ್ದು ಮೇಲೆ ಬರಲಾಗದೆ ಸಿಕ್ಕಿ ಬಿದ್ದಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ಗುರುವಾರ ನಡೆದಿದೆ. ಅಜ್ಜಾವರ ಗ್ರಾಮದ ತುದಿಯಡ್ಕ ಎಂಬಲ್ಲಿ ತೋಟವೊಂದರ ಮಧ್ಯೆ ಕೆರೆಗೆ ಎರಡು ದೊಡ್ಡ ಆನೆ, ಎರಡು ಮರಿ ಆನೆ ಸಹಿತ ನಾಲ್ಕು ಆನೆಗಳು ಕೆರೆಗಿಳಿದಿದ್ದು, ಮೇಲೆ ಬರಲಾಗದೇ ಕೆರೆಯಲ್ಲೇ ಸಿ್ಕ್ಕಿ ಹಾಕಿಕೊಂಡಿದೆ. ಕೆರೆಯಲ್ಲಿ ತುಂಬಾ ನೀರಿದ್ದ ಪರಿಣಾಮ ಮೇಲೆ ಬರಲಾಗಲಿಲ್ಲ. ಕೆರೆಯಲ್ಲೇ ಆಚೀಚೆ ಓಡಾಡುತ್ತಿದ್ದು, ಆನೆಗಳಿಗೆ ಮೇಲೆ ಬರಲು ಇನ್ನೂ ಸಾಧ್ಯವಾಗಿಲ್ಲ. ಸುಳ್ಯ

ಸುಳ್ಯದ ಅಜ್ಜಾವರದಲ್ಲಿ ಕೆರೆಗೆ ಬಿದ್ದ ನಾಲ್ಕು ಆನೆಗಳ ಹಿಂಡು Read More »

ಬೈಂದೂರು ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ ಬಳಿ ಬೆಂಕಿ

ಪುತ್ತೂರು : ಸಿಎಂ ಬೊಮ್ಮಾಯಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ ಬಳಿ ಬೆಂಕಿ ಕಾಣಿಸಿಕೊಂಡ ಘಟನೆ ಎ. 13 ರಂದು ಬೈಂದೂರಿನಲ್ಲಿ ಸಂಭವಿಸಿದೆ. ಬೊಮ್ಮಾಯಿ ಅರೆಶಿರೂರು ಹೆಲಿಪ್ಯಾಡ್‌ ಮೂಲಕ ಕೊಲ್ಲೂರಿಗೆ ಆಗಮಿಸಿದ ವೇಳೆ ಈ ಘಟನೆ ಸಂಭವಿಸಿದೆ. ಬೆಂಕಿ ತಗುಲುವ ಮುನ್ನವೇ ಸಿಎಂ ಬೆಂಗಾವಲು ಪಡೆ ಅಲ್ಲಿಂದ ತೆರಳಿದ್ದಾರೆ. ಹೆಲಿಕಾಫ್ಟರ್‌ ಪ್ಯಾನ್‌ ಗಾಳಿಗೆ ಬೆಂಕಿ ಕಾಣಿಸಿಕೊಂಡಿದ್ದು, ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅವಘಡವನ್ನು ತಪ್ಪಿಸಿದ್ದಾರೆ. ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ

ಬೈಂದೂರು ಸಿಎಂ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಹೆಲಿಪ್ಯಾಡ್‌ ಬಳಿ ಬೆಂಕಿ Read More »

ಪುತ್ತೂರು ಜಾತ್ರೆ : ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ರದ್ದು

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ಎ.17ರಂದು ಜರುಗುವ ಬ್ರಹ್ಮರಥೋತ್ಸವದಂದು ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಎ.17ರ ಸೋಮವಾರ ಕಿಲ್ಲೆ ಮೈದಾನದಲ್ಲಿನ ನಡೆಯುವ ಸಂತೆಯನ್ನು ರದ್ದುಗೊಳಿಸಲಾಗಿದೆ. ಪ್ರತಿ ಬಾರಿ ಬ್ರಹ್ಮರಥೋತ್ಸವದಂದು ಪುತ್ತೂರಿನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಆ ದಿನ ವಾಹನ ಪಾರ್ಕಿಂಗ್ ಗೆ ಕಿಲ್ಲೆ ಮೈದಾನ ಸಹಿತ ಹಲವಾರು ಮೈದಾನಗಳನ್ನು ಗುರುತಿಸಲಾಗುತಿತ್ತು. ಈ ಬಾರಿ ಎ.17ರಂದು ಸೋಮವಾರ ಆಗಿರುವುದರಿಂದ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಿದರೆ ವಾಹನ ಪಾರ್ಕಿಂಗ್ ಗೆ ತೊಂದರೆ ಆಗುವ

ಪುತ್ತೂರು ಜಾತ್ರೆ : ಸೋಮವಾರ ಕಿಲ್ಲೆ ಮೈದಾನದಲ್ಲಿ ನಡೆಯುವ ಸಂತೆ ರದ್ದು Read More »

error: Content is protected !!
Scroll to Top