ಇಂದು ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆ

ಸಂಜೆ 4 ಗಂಟೆಗೆ ಬಿಜೆಪಿ ಎಂಎಲ್‌ಸಿಗೆ ರಾಜೀನಾಮೆ ಬೆಂಗಳೂರು : ಬಿಜೆಪಿ ಎಂಎಲ್‌ಸಿ ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಲಕ್ಷ್ಮಣ್‌ ಸವಧಿ ಒಪ್ಪಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಮಾತನಾಡಿ, ಸವದಿ ನಮ್ಮ ಕುಟುಂಬದ ಸದಸ್ಯರಾಗಲು ನಿರ್ಧಾರಿಸಿದ್ದಾರೆ . ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಒಪ್ಪಿದ್ದಾರೆ. ಸಂಜೆ 4 ಗಂಟೆಗೆ ಅಧಿಕೃತವಾಗಿ ಕಾಂಗ್ರೆಸ್‌ […]

ಇಂದು ಲಕ್ಷ್ಮಣ್‌ ಸವಧಿ ಕಾಂಗ್ರೆಸ್‌ ಸೇರ್ಪಡೆ Read More »

ಸುಳ್ಯ ವಿಧಾನಸಭಾ ಕ್ಷೇತ್ರ : ನಂದಕುಮಾರ್ ಮತ್ತು ಕೃಷ್ಣಪ್ಪ ಬಣಗಳ ಸಭೆ ಕರೆದ ಡಿ.ಕೆ.ಶಿ

ಸುಳ್ಯ : ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಎ. 14 ರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ. ಈಗಾಗಲೇ ಸುಳ್ಯದಲ್ಲಿ ಜಿ. ಕೃಷ್ಣಪ್ಪ ಅವರನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದ್ದು, ಇದರಿಂದ ನಂದಕುಮಾರ್ ಅಭಿಮಾನಿಗಳಾದ ಕಾಂಗ್ರೆಸ್ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ಅಲ್ಲದೇ ನಂದಕುಮಾರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುವ ಸಿದ್ಧತೆ ಕೂಡ ನಡೆಸಿದ್ದಾರೆ.‌ ಕಾಂಗ್ರೆಸ್ ಬಿಫಾರಂ ನೀಡಬೇಕು ಇಲ್ಲದಿದ್ದರೆ ಪಕ್ಷೇತರರಾಗಿ‌ ಸ್ಪರ್ಧೆ

ಸುಳ್ಯ ವಿಧಾನಸಭಾ ಕ್ಷೇತ್ರ : ನಂದಕುಮಾರ್ ಮತ್ತು ಕೃಷ್ಣಪ್ಪ ಬಣಗಳ ಸಭೆ ಕರೆದ ಡಿ.ಕೆ.ಶಿ Read More »

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ

ಪುತ್ತೂರು: ಪುತ್ತೂರು ಬಿಜೆಪಿ ಕಚೇರಿಯಲ್ಲಿ  ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ, ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯ್ಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಎಸ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹಾಗೂ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ Read More »

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ

ಪುತ್ತೂರು: ಪುತ್ತೂರು-ಸುಳ್ಯ ಮುಖ್ಯರಸ್ತೆಯ ಸಂಪ್ಯದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು. ತರಬೇತಿ ಕಾರ್ಯಕ್ರಮವನ್ನು ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಜಯರಾಮ್ ರೈ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿ ಸಾಲ ಸೌಲಸೌಲಭ್ಯದ ಸಂಪೂರ್ಣ ಮಾಹಿತಿ ನೀಡಿದರು. ಕೆರಿಯರ್ ಕೌನ್ಸಿಲರ್ ಮಹಮ್ಮದ್ ರಫೀಕ್ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸ್ ಆಯ್ಕೆ ಮಾಡುವಾಗ ಇತರರಿಂದ ಪ್ರೇರಿತರಾಗಬಾರದು. ಬದಲಾಗಿ ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಕೋರ್ಸ್ ಆಯ್ಕೆ

ಸಂಪ್ಯ ಅಕ್ಷಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ Read More »

ಪೊಲೀಸ್‌ ಠಾಣೆಯ ಮೇಲೇರಿ ಮಹಿಳೆ ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು : ಮಹಿಳೆಯೋರ್ವರು ಪೊಲೀಸ್‌ ಠಾಣೆಯ ಮಹಡಿ ಮೇಲೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಎ. 14 ರಂದು ಮೂಡಿಗೆರೆಯಲ್ಲಿ ಬೆಳಗ್ಗೆ ಸಂಭವಿಸಿದೆ. ಶಿಲ್ಪ ಎಂಬುವವರೇ ಆತ್ಮಹತ್ಯೆ ಯತ್ನಿಸಿದ ಮಹಿಳೆ. ವಿಷಯ ತಿಳಿದ ಪೊಲೀಸರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವುಯಾಗಿದ್ದಾರೆ. ಮಹಿಳೆಗೆ ಪ್ರಕರಣವೊಂದರಲ್ಲಿ ಕೋರ್ಟ್‌ ಸಮನ್ಸ್‌ ಜಾರಿಗೊಳಿಸಿತ್ತು. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ವರದಿಯಾಗಿದೆ. ಶಿಲ್ಪ‌ ಮತ್ತು ಆಕೆಯ ಅಕ್ಕನ ನಡುವೆ ಗಲಾಟೆ ‌ಹಾಗೂ ಪೊಲೀಸ್‌ ಠಾಣೆಯಲ್ಲಿ ಮಹಿಳಾ ಪೊಲೀಸ್ ‌ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ

ಪೊಲೀಸ್‌ ಠಾಣೆಯ ಮೇಲೇರಿ ಮಹಿಳೆ ಆತ್ಮಹತ್ಯೆಗೆ ಯತ್ನ Read More »

ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋದ ಬಿಸಿ ನೀರ ಚಿಲುಮೆ

ಉಪ್ಪಿನಂಗಡಿ : ಕರಾವಳಿ ಜಲ್ಲೆಗಳಲ್ಲಿ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿದ್ದು, ರಣಬಿಸಿಲಿನಿಂದ ಜನತೆ ಹೈರಾಣಾಗಿದ್ದಾರೆ. ನದಿ ಕೆರೆಗಳು ಬತ್ತಿ ಹೋಗುತ್ತಿದ್ದು, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸುವಂತಾಗಿದೆ. ಈ ಬಾರಿಯ ಬಿಸಿಲಿನ ಬೇಗೆಗೆ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದಲ್ಲಿರುವ ಬಿಸಿ ನೀರ ಚಿಲುಮೆಯು ಸಂಪೂರ್ಣ ಬತ್ತಿ ಹೋಗಿದ್ದು, ನೀರಿನ ಅಂಶವೇ ಇಲ್ಲದಂತೆ ಒಣಗಿ ಹೋಗಿದೆ. ಸರಿ ಸುಮಾರು 36.6 ಡಿಗ್ರಿ ಉಷ್ಣಾಂಶವನ್ನು ಹೊಂದಿದ್ದ ಇಲ್ಲಿನ ಬಿಸಿ ನೀರ ಚಿಲುಮೆಯು ಚರ್ಮರೋಗ ನಿವಾರಕ ಗುಣವನ್ನು ಹೊಂದಿದ್ದು, ಇಲ್ಲಿ ಸ್ನಾನ

ಬೇಸಗೆಯಲ್ಲಿ ಸಂಪೂರ್ಣ ಬತ್ತಿ ಹೋದ ಬಿಸಿ ನೀರ ಚಿಲುಮೆ Read More »

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು

ಕರಾವಳಿ ಪ್ರದೇಶದ ಸಂಸ್ಕೃತಿ, ಕಲೆಗಳನ್ನು ನೋಡುವುದೇ ಒಂದು ಚಂದ. ಕರಾವಳಿ ಪ್ರದೇಶ ವಿಶಿಷ್ಟ ಖಾದ್ಯಗಳಿಗೂ ಪ್ರಸಿದ್ಧವಾಗಿದೆ. ಅಡುಗೆಗೆ ತರಕಾರಿ ಹಣ್ಣುಗಳನ್ನು ಮಾತ್ರ ಬಳಸದೆ ವಿವಿಧ ರೀತಿಯ ಎಲೆಗಳನ್ನು ಹೂಗಳನ್ನು ಬಳಸಿ ಅಡುಗೆ ಮಾಡುವುದು ಇಲ್ಲಿನ ವಿಶೇಷ. ಇದು ಬೇರೆ ಯಾವ ಪ್ರದೇಶದಲ್ಲೂ ನೋಡಲು ಸವಿಯಲು ಸಿಗುವುದು ಅಪರೂಪ.ಎಲೆಯಲ್ಲಿ ಬೇಯಿಸಿದ ಆಹಾರದ ರುಚಿಯೇ ಅದ್ಭುತ. ಎಲೆಯಲ್ಲಿ ಮಾಡುವ ಊಟ ಆಹಾ ಎಂಥ ಪರಿಮಳ ಎಂಥ ರುಚಿ. ಕೆಲವು ಎಲೆಗಳನ್ನು ತಿನ್ನಲು ಸಾಧ್ಯವಾಗದ ಕಾರಣ ಆ ಎಲೆಯನ್ನು ಬಳಸಿ ಆಹಾರ

ಆರೋಗ್ಯಧಾರಾ – ಅಡುಗೆಗೆ ಬಳಸುವ ವಿವಿಧ ಎಲೆಗಳ ಆರೋಗ್ಯದ ಗುಟ್ಟು Read More »

ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ | ಜೆಡಿಎಸ್ ಸೇರ್ಪಡೆಗೊಂಡ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ

ಪುತ್ತೂರು: ಕಾಂಗ್ರೆಸ್ ಪ್ರಬಲ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು ಇಂದು ಜೆಡಿಎಸ್ ಸೇರ್ಪಡೆಗೊಳ್ಳಲಿದ್ದು, ಕರಾವಳಿ ಭಾಗದಲ್ಲಿ ನೆಲೆ ಕಂಡುಕೊಳ್ಳಲು ಶ್ರಮಿಸುತ್ತಿದ್ದ ಜೆಡಿಎಸಿಗೆ ಹೊಸ ಭರವಸೆ ಸಿಕ್ಕಂತಾಗಿದೆ. ಸೂಕ್ತ ನಾಯಕತ್ವವನ್ನು ಎದುರು ನೋಡುತ್ತಿದ್ದ ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರು, “ಕಾಂಗ್ರೆಸಿನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ.

ಪುತ್ತೂರು ಜೆಡಿಎಸ್ ಅಭ್ಯರ್ಥಿಯಾಗಿ ದಿವ್ಯಪ್ರಭಾ ಚಿಲ್ತಡ್ಕ | ಜೆಡಿಎಸ್ ಸೇರ್ಪಡೆಗೊಂಡ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ Read More »

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ

ಕಚೇರಿಗೆ ಕರೆ ಮಾಡಿ 100 ಕೋ. ರೂ. ಕೇಳಿದ್ದ ಆರೋಪಿ ದೆಹಲಿ : ಕೇಂದ್ರ ರಸ್ತೆ, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ವ್ಯಕ್ತಿ ದಾವೂದ್ ಇಬ್ರಾಹಿಂ ಗ್ಯಾಂಗ್, ಲಷ್ಕರ್-ಎ-ತೊಯ್ಬಾ, ಪಿಎಫ್ಐ ಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕರೆ ಮಾಡಿದ ವ್ಯಕ್ತಿ ಜಯೇಶ್ ಪೂಜಾರಿ ಅಲಿಯಾಸ್ ಕಂಥಾ, ಅಲಿಯಾಸ್ ಸಲೀಮ್ ಶಾಹಿರ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಕೊಲೆಯ ಪ್ರಕರಣದ ಅಪರಾಧಿಯಾಗಿದ್ದಾನೆ. ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ Read More »

ಪುತ್ತಿಲರೊಂದಿಗಿನ ಸಂಘ ಪರಿವಾರದ ಮುಖಂಡರ ಮಾತುಕತೆ ವಿಫಲ  | ಇಂದು ಪ್ರಕಟಗೊಳ್ಳಲಿದೆ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ

ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳುತ್ತಿದ್ದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆಭ್ಯರ್ಥಿ ಆಯ್ಕೆಯಲ್ಲಿ ಅಸಮಾಧಾನ ಉಂಟಾಗಿರುವುದರ ಪರಿಣಾಮ ಹಿಂದೂ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಸಂಘ ಪರಿವಾರದ ಜಿಲ್ಲೆಯ ಹಿರಿಯ ಮುಖಂಡರು ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಬೆಂಬಲಿಗರ ಜತೆ ಬುಧವಾರ ರಾತ್ರಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಮಟ್ಟದ

ಪುತ್ತಿಲರೊಂದಿಗಿನ ಸಂಘ ಪರಿವಾರದ ಮುಖಂಡರ ಮಾತುಕತೆ ವಿಫಲ  | ಇಂದು ಪ್ರಕಟಗೊಳ್ಳಲಿದೆ ಪಕ್ಷೇತರರಾಗಿ ಸ್ಪರ್ಧಿಸುವ ನಿರ್ಧಾರ Read More »

error: Content is protected !!
Scroll to Top