ವಿವೇಕಾನಂದ ಕಾಲೇಜಿನಲ್ಲಿ ರಕ್ತದಾನ ಶಿಬಿರ | ವಿದ್ಯಾರ್ಥಿಗಳಿಂದ 156 ಯೂನಿಟ್ ರಕ್ತ ಸಂಗ್ರಹ

ಪುತ್ತೂರು: ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯುತ್ತ) ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಿತು. ರೆಡ್ ಕ್ರಾಸ್, ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್‌ ರೇಂಜರ್, ವಿದ್ಯಾರ್ಥಿ ಸಂಘ, ರೋಟರಿ-  ಕ್ಯಾಂಪ್ಕೋ ರಕ್ತ ನಿಧಿ ಕೇಂದ್ರ ಪುತ್ತೂರು, ರೋಟರಿ ರಕ್ತ ನಿಧಿ ಕೇಂದ್ರ, ಮಂಗಳೂರು ವೆನ್‌ಲಾಕ್ ಸರ್ಕಾರಿ ಆಸ್ಪತ್ರೆ, ಪ್ರಾದೇಶಿಕ ರಕ್ತ ನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರೋಟರಿಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಶೆಣೈ, ವೈದ್ಯಾಧಿಕಾರಿ ಡಾ.ಶರತ್‌ಕುಮಾರ್‌ ರಾವ್, ಕಾಲೇಜಿನ ಐಕ್ಯೂಎಸಿ ಸಂಯೋಜಕ […]

ವಿವೇಕಾನಂದ ಕಾಲೇಜಿನಲ್ಲಿ ರಕ್ತದಾನ ಶಿಬಿರ | ವಿದ್ಯಾರ್ಥಿಗಳಿಂದ 156 ಯೂನಿಟ್ ರಕ್ತ ಸಂಗ್ರಹ Read More »

ಜೈಲಿನಲ್ಲಿದ್ದುಕೊಂಡೆ ದಿಲ್ಲಿ ಲೆಫ್ಟಿನೆಂಟ್ ಗರ್ವನರ್‌ಗೆ ಪತ್ರ ಬರೆದ ವಂಚಕ ಸುಕೇಶ್‌

ಆಪ್‌ ನಾಯಕರ ಜತೆಗಿನ ವಾಟ್ಸಾಪ್‌ ಚಾಟ್‌ ಬಹಿರಂಗ ಹೊಸದಿಲ್ಲಿ : ವಂಚಕ ಸುಕೇಶ್ ಚಂದ್ರಶೇಖರ್ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪುತ್ರಿ ಬಿಆರ್‌ಎಸ್ ನಾಯಕಿ ಕೆ. ಕವಿತಾ ಮತ್ತು ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ ತಾನು ವ್ಯವಹಾರಗಳಿಗೆ ಸಂಬಂಧಿಸಿ ಮಾಡಿರುವ ವಾಟ್ಸಾಪ್ ಚಾಟ್‌ಗಳನ್ನು ಬಿಡುಗಡೆ ಮಾಡಿ ಸಂಚಲನವುಂಟು ಮಾಡಿದ್ದಾನೆ. ಅವರೊಂದಿಗೆ ತಾನು ನಡೆಸಿರುವ ಸಂಭಾಷಣೆ ಆಮ್ ಆದ್ಮಿ ಪಾರ್ಟಿಯ ಮುಖಂಡ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮದ್ಯ ನೀತಿ ಹಗರಣದಲ್ಲಿ ಆರೋಪಿಯಾಗಿರುವ

ಜೈಲಿನಲ್ಲಿದ್ದುಕೊಂಡೆ ದಿಲ್ಲಿ ಲೆಫ್ಟಿನೆಂಟ್ ಗರ್ವನರ್‌ಗೆ ಪತ್ರ ಬರೆದ ವಂಚಕ ಸುಕೇಶ್‌ Read More »

ಈಶ್ವರಪ್ಪ ರಾಜಕೀಯ ನಿವೃತ್ತಿ ವಿರೋಧಿಸಿ ಪಾಲಿಕೆ ಸದಸ್ಯರ ಸಾಮೂಹಿಕ ರಾಜೀನಾಮೆ

ಶಿವಮೊಗ್ಗ: ಹಿರಿಯ ನಾಯಕ ಈಶ್ವರಪ್ಪ ಅವರ ಚುನಾವಣಾ ನಿವೃತ್ತಿಯಿಂದ ಎದ್ದಿರುವ ಬೇಗುದಿಯನ್ನು ಶಮನಗೊಳಿಸಲು ಪಕ್ಷದ ನಾಯಕರು ಹೆಣಗಾಡುತ್ತಿದ್ದಾರೆ. ಶಿವಮೊಗ್ಗದ ಈಶ್ವರಪ್ಪ ಬೆಂಬಲಿಗರು ಮತ್ತು ಅಭಿಮಾನಿಗಳು ನಿವೃತ್ತಿ ಹಿಂದೆ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಡ ಹೇರುತ್ತಿದ್ದು, ಇದೀಗ ನಿವೃತ್ತಿ ವಿರೋಧಿಸಿ ಶಿವಮೊಗ್ಗ ಪಾಲಿಕೆ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಕೆ.ಎಸ್‌.ಈಶ್ವರಪ್ಪ ನಿರ್ಧಾರಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂಬ ಒತ್ತಾಯಿಸುತ್ತಿದ್ದಾರೆ. ಮೇಯರ್- ಉಪಮೇಯರ್ ಸೇರಿದಂತೆ ಎಲ್ಲ 19

ಈಶ್ವರಪ್ಪ ರಾಜಕೀಯ ನಿವೃತ್ತಿ ವಿರೋಧಿಸಿ ಪಾಲಿಕೆ ಸದಸ್ಯರ ಸಾಮೂಹಿಕ ರಾಜೀನಾಮೆ Read More »

ಬೈಂದೂರು : ಹೊಸ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ – ಸುಕುಮಾರ ಶೆಟ್ಟಿ ಕೈತಪ್ಪಿದ ಟಿಕೆಟ್‌

ಹೊಸದಿಲ್ಲಿ : ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಒಂದೇ ದಿನದ ಅಂತರದಲ್ಲಿ ಬಿಡುಗಡೆಗೊಳಿಸರುವ ಬಿಜೆಪಿ ಕೆಲವೊಂದು ಅಚ್ಚರಿಗಳನ್ನು ನೀಡಿದೆ. ಅದರಲ್ಲಿ ಗಮನಾರ್ಹವಾದದ್ದು ಬೈಂದೂರು ವಿಧಾನಸಭೆ ಕ್ಷೇತ್ರದಿಂದ ಸುಕುಮಾರ ಶೆಟ್ಟಿಯುವರನ್ನು ಕೈಬಿಟ್ಟು ಗುರುರಾಜ್‌ ಗಂಟಿಹೊಳಿ ಅವರಿಗೆ ಟಿಕೆಟ್‌ ನೀಡಿದ್ದು.ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾದ 24 ಗಂಟೆಗಳಲ್ಲೇ 2ನೇ ಪಟ್ಟಿ ದಿಢೀರ್ ಬಿಡುಗಡೆಯಾಗಿದೆ. 2ನೇ ಪಟ್ಟಿ ಗುರುವಾರ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಬುಧವಾರ ರಾತ್ರಿ 11 ಗಂಟೆಗೆ 2ನೇ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಬೈಂದೂರು : ಹೊಸ ಅಭ್ಯರ್ಥಿಗೆ ಮಣೆ ಹಾಕಿದ ಬಿಜೆಪಿ – ಸುಕುಮಾರ ಶೆಟ್ಟಿ ಕೈತಪ್ಪಿದ ಟಿಕೆಟ್‌ Read More »

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭ

ಬೆಂಗಳೂರು : ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ(ಏಪ್ರಿಲ್ 13) ಆರಂಭವಾಗಲಿದೆ. ಏ.20ರ ವರೆಗೆ ನಾಮಪತ್ರ ಸಲ್ಲಿಸಸಲು ಅವಕಾಶವಿದೆ. ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಮತ್ತು 16ರಂದು ಭಾನುವಾರ ರಜಾ ದಿನವಾಗಿದ್ದು, ಅಂದು ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಹೀಗಾಗಿ ನಾಮಪತ್ರ ಸಲ್ಲಿಕೆಗೆ ಏಳು ದಿನಗಳಲ್ಲಿ ಎರಡು ದಿನ ಸರ್ಕಾರಿ ರಜೆ ಇರಲಿದ್ದು, ಐದು ದಿನಗಳು ಮಾತ್ರ ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಇದೆ. ಇದೇ ಮೊದಲ ಬಾರಿಗೆ ಆನ್‌ಲೈನ್​ ಮೂಲಕ

ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದ ಆರಂಭ Read More »

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ

1962ರ ಮಾರ್ಚ್ 17ರಂದು ಹರ್ಯಾಣಾದ ಕರ್ನಾಲದಲ್ಲಿ ಬನಾರಸಿ ಲಾಲ್ ಚಾವ್ಲಾ ಮತ್ತು ಸಂಜ್ಯೊತಿಯವರ ಹಿರಿಯ ಮಗಳಾಗಿ ಜನಿಸಿದ ಆಕೆಗೆ ಬಾಲ್ಯದಿಂದಲೂ ಆಕಾಶದಲ್ಲಿ ಹಾರಾಡುವ ಕನಸು. ಎತ್ತರದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡುತ್ತಾ ತಾನೂ ರೆಕ್ಕೆ ಕಟ್ಟಿ ಹಾರಬೇಕು ಎಂದು ತನ್ನ ಅಪ್ಪನ ಜತೆ ಹೇಳುತ್ತಾ ಬೆಳೆದವರು ಆಕೆ. ಬಾಲ್ಯದಿಂದಲೂ ಆಕೆಗೆ ಅಪ್ಪನೇ ಐಕಾನ್, ಲೆಜೆಂಡ್ ಎಲ್ಲವೂ. ಮೂರನೇ ವಯಸ್ಸಿಗೇ ಅಪ್ಪನಿಗೆ ವಿಮಾನ ತೋರಿಸಿ ತಾನೂ ಹಾರಬೇಕು ಎಂದು ದುಂಬಾಲು ಬಿದ್ದವಳು ಕಲ್ಪನಾ. ಅಪ್ಪನೂ ಆಕೆಯ ಪ್ರತಿಯೊಂದು ಕನಸಿನ ಈಡೇರಿಕೆಗೆ

ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ, ಭಾರತದ ಹೆಣ್ಣು ಮಕ್ಕಳಿಗೆ ಆಕಾಶದ ಎತ್ತರವೂ ಕಡಿಮೆ ಎಂದ ಕಲ್ಪನಾ ಚಾವ್ಲಾ Read More »

ಬೇಸರ ಇದೆ. ಆದರೆ ಪಕ್ಷ ತೀರ್ಮಾನಕ್ಕೆ ಬದ್ಧ | ಶಾಸಕ ಸಂಜೀವ ಮಠಂದೂರು

ಪುತ್ತೂರು: ಕಳೆದ 5 ವರ್ಷದಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ನಿರಂತರ ಶ್ರಮ ವಹಿಸಿದ್ದೇನೆ. ಆದರೂ ಸಿಟ್ಟಿಂಗ್ ಎಂ.ಎಲ್.ಎ. ಆಗಿದ್ದು, ನನಗೆ ಅವಕಾಶ ಸಿಗಲಿಲ್ಲ ಎಂಬ ವಿಚಾರಕ್ಕೆ ಬೇಸರ ಇದೆ. ಆದರೆ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ನ್ಯೂಸ್ ಪುತ್ತೂರು ಜೊತೆ ಮಾತನಾಡಿದ ಅವರು, ಕಾರ್ಯಕರ್ತರು, ಮುಖಂಡರು ಬೆಂಬಲ ಸೂಚಿಸಿದ್ದಾರೆ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು, ಸಂಘಟನೆಗೆ ಅವರೆಲ್ಲಾ ನನ್ನ ಜೊತೆ ನಿಂತಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಚಿರಋಣಿಯಾಗಿದ್ದೇನೆ. ಪಕ್ಷದ ತೀರ್ಮಾನ ಬೇಸರ ತಂದಿದೆ

ಬೇಸರ ಇದೆ. ಆದರೆ ಪಕ್ಷ ತೀರ್ಮಾನಕ್ಕೆ ಬದ್ಧ | ಶಾಸಕ ಸಂಜೀವ ಮಠಂದೂರು Read More »

ಸಿಇಟಿ, ನೀಟ್ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಜೊತೆಗೆ ಸಂವಾದ

ಪುತ್ತೂರು: ಯಾವುದೇ ಪರೀಕ್ಷೆಎದುರಿಸುವಲ್ಲಿ ಆಸಕ್ತಿಯ ಜೊತೆ ನಿರಂತರ ಅಭ್ಯಾಸ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಅಗತ್ಯ ಪುಸ್ತಕಗಳನ್ನು ಸಂಗ್ರಹಿಸಿ ಓದಬೇಕು. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿದುಕೊಳ್ಳಬೇಕು. ಅರಿತುಕೊಂಡ ವಿಷಯಗಳ ಬಗ್ಗೆ ಪುನರ್ ಮನನ ಮಾಡಿಕೊಳ್ಳುವ ಅಭ್ಯಾಸ ಹೆಚ್ಚಿಸಿಕೊಂಡರೆ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬಹುದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ವಾಮನ್ ಪೈ ಹೇಳಿದರು. ನರೇಂದ್ರ ಪದವಿ ಪೂರ್ವಕಾಲೇಜಿನಲ್ಲಿ ಸಿಇಟಿ, ನೀಟ್‌ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಜೊತೆ ನಡೆದ ಸಂವಾದ

ಸಿಇಟಿ, ನೀಟ್ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳ ಜೊತೆಗೆ ಸಂವಾದ Read More »

ಪ್ರದೀಪ್ ದೇವರಗುಂಡ ಕುಶಾಲಪ್ಪ ಬೆಳ್ತಂಗಡಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ! | ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ ಹೊಂದಿರುವ ಪ್ರದೀಪ್ ದೇವರಗುಂಡ

ಬೆಳ್ತಂಗಡಿ: ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯವಾಗಿದ್ದ ಉದ್ಯಮಿ ಪ್ರದೀಪ್ ದೇವರಗುಂಡ ಕುಶಾಲಪ್ಪ ಅವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಉದ್ಯಮಿಯಾಗಿ ಗುರುತಿಸಿಕೊಂಡಿರುವ ಪ್ರದೀಪ್ ಕುಶಾಲಪ್ಪ , ಬೆಳ್ತಂಗಡಿ ತಾಲೂಕಿನ ಅನೇಕ ಸಮಸ್ಯೆಗಳತ್ತ ಗಮನ ಹರಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಂಕಲ್ಪದೊಂದಿಗೆ ಚುನಾವಣಾ ಆಖಾಡಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಾಜಕೀಯ ಎಂದರೆ ಶಿಸ್ತು, ನಿಯತ್ತು ಬೇಕು. ಜನಸೇವೆ ಮಾಡುವ ಏಕೈಕ ಗುರಿಯನ್ನು ರಾಜಕೀಯ ಹೊಂದಿರಬೇಕು. ಆದರೆ ಪ್ರಸ್ತುತ ರಾಜಕೀಯದಲ್ಲಿ ಇವೆಲ್ಲಾ ಕಣ್ಮರೆ

ಪ್ರದೀಪ್ ದೇವರಗುಂಡ ಕುಶಾಲಪ್ಪ ಬೆಳ್ತಂಗಡಿಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ! | ಭ್ರಷ್ಟಾಚಾರ ಮುಕ್ತ ಸಮಾಜದ ಆಶಯ ಹೊಂದಿರುವ ಪ್ರದೀಪ್ ದೇವರಗುಂಡ Read More »

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧರ್ಮಸ್ಥಳ ಭೇಟಿ | ವಿಶೇಷ ಪೂಜೆ

ಧರ್ಮಸ್ಥಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಬೀಡಿನಲ್ಲಿ(ಹೆಗ್ಗಡೆಯವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಗತಿಸಿದರು. ಬಳಿಕ ಧರ್ಮಸ್ಥಳದ ಶ್ರೀ ಮಂಜುನಾಥ ಸ್ಚಾಮಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಸಾಂಪ್ರಾದಾಯಿಕವಾಗಿ ಕ್ಷೇತ್ರದಿಂದ  ದೇವಳದ ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್, ದೇವಳ ಪಾರುಪಾತ್ಯಗಾರ ಲಕ್ಷ್ಮೀನಾರಾಯಣ ರಾವ್, ಮಹಾವೀರ ಅಜ್ರಿ, ದೀಕ್ಷಿತ್

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧರ್ಮಸ್ಥಳ ಭೇಟಿ | ವಿಶೇಷ ಪೂಜೆ Read More »

error: Content is protected !!
Scroll to Top