ಇಂದಿನಿಂದ ಎರಡು ದಿನ ದಿಲ್ಲಿಯಲ್ಲಿ ಕನ್ನಡ ಕಲರವ

ಬಾರಿಸು ಕನ್ನಡ ಡಿಂಡಿಮವ ಉತ್ಸವಕ್ಕೆ ಪ್ರಧಾನಿ ಚಾಲನೆ ಹೊಸದಿಲ್ಲಿ : ಇಲ್ಲಿನ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಎರಡು ದಿನ ನಡೆಯಲಿರುವ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವವನ್ನು ಇಂದು ಸಂಜೆ 5ಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.ದೆಹಲಿ ಕರ್ನಾಟಕ ಸಂಘದ 75ನೇ ವಾರ್ಷಿಕೋತ್ಸವದ ನಿಮಿತ್ತ ಎರಡು ದಿನ (25 ಮತ್ತು 26)ದಿಲ್ಲಿಯಲ್ಲಿ ಕನ್ನಡ ಕಲರವ ಕೇಳಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಏಕ್‌ ಭಾರತ ಶ್ರೇಷ್ಠ್‌ ಭಾರತ್‌’ ಆಶಯಕ್ಕೆ ಅನುಗುಣವಾಗಿ, ಕರ್ನಾಟಕದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಇತಿಹಾಸವನ್ನು ಕೊಂಡಾಡಲು ‘ಬಾರಿಸು […]

ಇಂದಿನಿಂದ ಎರಡು ದಿನ ದಿಲ್ಲಿಯಲ್ಲಿ ಕನ್ನಡ ಕಲರವ Read More »

ಆರ್ಯಾಪು, ಕುಟ್ರುಪ್ಪಾಡಿ, ಅನಂತಾಡಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆ | ಬಿರುಸಿನ ಮತದಾನ | ಶಾಸಕ ಸಂಜೀವ ಮಠಂದೂರು ಭೇಟಿ

ಪುತ್ತೂರು: ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯ ಹುದ್ದೆಗೆ ಶನಿವಾರ ಉಪಚುನಾವಣೆ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಬಿರುಸಿನ ಮತದಾನ ಆಗುತ್ತಿದೆ. ಶಾಸಕ ಸಂಜೀವ ಮಠಂದೂರು ಸೇರಿದಂತೆ ರಾಜಕೀಯ ಪ್ರಮುಖರು ಭೇಟಿ ನೀಡಿ, ಚುನಾವಣಾ ಆಗುಹೋಗುಗಳನ್ನು ವೀಕ್ಷಿಸುತ್ತಿದ್ದಾರೆ. ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಗಿರೀಶ್ ಗೌಡ ಮರಿಕೆ ಅವರ ನಿಧನದಿಂದ ತೆರವಾಗಿದ್ದ ಹುದ್ದೆಗೆ ಉಪಚುನಾವಣೆ ನಡೆಯುತ್ತಿದೆ. ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ  ಅಭ್ಯರ್ಥಿಯಾಗಿ ಯತೀಶ್ ಡಿ.ಬಿ. ಸಂಟ್ಯಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್ ರೈ ತೊಟ್ಲ ಸ್ಪರ್ಧಿಸುತ್ತಿದ್ದಾರೆ. ಕಡಬದ

ಆರ್ಯಾಪು, ಕುಟ್ರುಪ್ಪಾಡಿ, ಅನಂತಾಡಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆ | ಬಿರುಸಿನ ಮತದಾನ | ಶಾಸಕ ಸಂಜೀವ ಮಠಂದೂರು ಭೇಟಿ Read More »

ಬೆಳೆವಿಮೆ ಸಾಫ್ಟ್’ವೇರ್ ದೋಷಕ್ಕೆ ಶಾಸಕರಿಂದ ಪರಿಹಾರ | ಸಂಜೀವ ಮಠಂದೂರಿಗೆ ಅಭಿನಂದನೆ ಸಲ್ಲಿಸಿದ ಬನ್ನೂರು ರೈತರ ಸೇವಾ ಸಹಕಾರಿ ಸಂಘ

ಪುತ್ತೂರು: ಬೆಳೆವಿಮೆ ಸಾಫ್ಟ್’ವೇರ್ ನಲ್ಲಿ ರೈತರ ದಾಖಲೆ ಎಂಟ್ರಿ ಸಂದರ್ಭ ಎದುರಾಗುತ್ತಿದ್ದ ತಾಂತ್ರಿಕ ದೋಷವನ್ನು ಪರಿಹರಿಸುವಲ್ಲಿ ಶಾಸಕ ಸಂಜೀವ ಮಠಂದೂರು ಅವರ ಕ್ರಮ ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಬೆಳೆವಿಮೆ ಸಾಫ್ಟ್’ವೇರ್ ಗೆ ದಾಖಲೆಗಳ ನೋಂದಣಿ ಮಾಡುವಾಗ, 3-4 ಸರ್ವೆ ನಂಬರ್ ಬದಲಿಗೆ ಒಂದು ಸರ್ವೆ ನಂಬರನ್ನು ಮಾತ್ರ ಆಯ್ಕೆ ಮಾಡಲು ಆಗುತ್ತಿತ್ತು. ಅಂದರೆ ರೈತರ ಒಂದು ಸರ್ವೆ ನಂಬರ್ ಬಿಟ್ಟು, ಉಳಿದ ಸರ್ವೆ ನಂಬರ್‍ಗಳು ದಾಖಲಾಗುತ್ತಿರಲಿಲ್ಲ.

ಬೆಳೆವಿಮೆ ಸಾಫ್ಟ್’ವೇರ್ ದೋಷಕ್ಕೆ ಶಾಸಕರಿಂದ ಪರಿಹಾರ | ಸಂಜೀವ ಮಠಂದೂರಿಗೆ ಅಭಿನಂದನೆ ಸಲ್ಲಿಸಿದ ಬನ್ನೂರು ರೈತರ ಸೇವಾ ಸಹಕಾರಿ ಸಂಘ Read More »

ಸ್ವ ಉದ್ಯೋಗದಿಂದ ಮಹಿಳೆಯರ ಸಬಲೀಕರಣ- ಆನಂದ ಕೆ | ಹೊಲಿಗೆ ತರಬೇತಿ ಸಮಾರೋಪ ಸಮಾರಂಭ

ಪುತ್ತೂರು : ಸ್ವ ಉದ್ಯೋಗದಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಜೊತೆಗೆ ಸಬಲೀಕರಣಗೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜ್ಞಾನ ವಿಕಾಸ ಯೋಜನೆಯಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಹೊಲಿಗೆ ತರಬೇತಿ ಪಡೆದುಕೊಂಡವರು ಕಲಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ತಾಲೂಕು ಯೋಜನಾಧಿಕಾರಿ ಆನಂದ ಕೆ ಹೇಳಿದರು. ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ದೇವಸ್ಯ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆದ ಹೊಲಿಗೆ ತರಬೇತಿ ಕೇಂದ್ರದ

ಸ್ವ ಉದ್ಯೋಗದಿಂದ ಮಹಿಳೆಯರ ಸಬಲೀಕರಣ- ಆನಂದ ಕೆ | ಹೊಲಿಗೆ ತರಬೇತಿ ಸಮಾರೋಪ ಸಮಾರಂಭ Read More »

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ

ಕಾವು : ಮಾಡ್ನೂರು ಗ್ರಾಮದ ಸಸ್ಪೆಟ್ಟಿ ಎಂಬಲ್ಲಿ ವಿದ್ಯುತ್ ಶಾರ್ಟ್‍ ಸರ್ಕ್ಯೂಟಿನಿಂದ ಬೆಂಕಿ ಹತ್ತಿಕೊಂಡು ಅರ್ಧ ಎಕ್ರೆ ಜಾಗದಲ್ಲಿರುವ ಗೇರು ಮರಗಳು ಸುಟ್ಟು ಹೋಗಿ ನಷ್ಟ ಉಂಟಾದ ಘಟನೆ ನಡೆದಿದೆ. ರಾಮಕೃಷ್ಣ ಭಟ್ ಎಂಬವರ ಜಾಗದಲ್ಲಿ ಸುತ್ತಲು ಹುಲ್ಲು ಪೊದೆಗಳು ಬೆಳೆದಿದ್ದು, ಹಠಾತ್ತನೇ ವಿದ್ಯುತ್‍ ಪರಿವರ್ತಕದಲ್ಲಿ ಶಾರ್ಟ್‍ ಸರ್ಕ್ಯೂಟಿನಿಂದ ಉಂಟಾದ ಪರಿಣಾಮ ಪೊದೆಗಳಿಗೆ ಬೆಂಕಿ ಹಿಡಿದು ಗೇರು ಮರಗಳನ್ನು ಆವರಿಸಿದೆ. ಅಗ್ನಿಶಾಮಕ ದಳದವರಿಗೆ ಕರೆ ಮಾಹಿತಿ ತಿಳಿಸಲಾಯಿತು. ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿ

ವಿದ್ಯುತ್‍ ಶಾರ್ಟ್‍ ಸರ್ಕ್ಯೂಟ್: ಗೇರು ಮರಗಳು ಸುಟ್ಟು ನಷ್ಟ Read More »

ಆರ್ಯಾಪು: ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಿಂದ ಬಿರುಸಿನ ಚುನಾವಣಾ ಪ್ರಚಾರ

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್‌ನ ಉಪಚುನಾವಣೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಯತೀಶ ಡಿ.ಬಿ. ಅವರ ಪರವಾಗಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಅವರು ಅಂತಿಮ ಹಂತದ ಚುನಾವಣಾ ಪ್ರಚಾರ ನಡೆಸಿದರು. ಆರ್ಯಾಪು ಗ್ರಾ.ಪಂ.ನ ೪ನೇ ವಾರ್ಡ್‌ನ ಮತದಾರರನ್ನು ಭೇಟಿಯಾದ ಬೂಡಿಯಾರ್ ರಾಧಾಕೃಷ್ಣ ರೈ ಅವರು, ಉಪಚುನಾವಣೆಯಲ್ಲಿ ಟೇಬಲ್ ಗುರುತಿಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು. ಮನೆ ಭೇಟಿ, ಅಂಗಡಿ ಮೊದಲಾದೆಡೆ ಮತದಾರರನ್ನು ಭೇಟಿಯಾದ ಅವರು, ಬಿರುಸಿನ ಪ್ರಚಾರ ನಡೆಸಿದರು.

ಆರ್ಯಾಪು: ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಿಂದ ಬಿರುಸಿನ ಚುನಾವಣಾ ಪ್ರಚಾರ Read More »

ಆರ್ಯಾಪು ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ ಡಿ.ಬಿ. ಮತಯಾಚನೆ

ಪುತ್ತೂರು: ಆರ್ಯಾಪು ಗ್ರಾಮದ ವಾರ್ಡ್ ಸಂಖ್ಯೆ ೪ಕ್ಕೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ ಡಿ.ಬಿ. ಅವರು ಕಣಕ್ಕಿಳಿದಿದ್ದು, ವಾರ್ಡ್ ವ್ಯಾಪ್ತಿಯಲ್ಲಿ ಮತ ಯಾಚನೆಯ ಕಾರ್ಯ ನಡೆಸಿದರು. ತನ್ನ ಚುನಾವಣಾ ಗುರುತಾದ ಟೇಬಲ್ ಚಿಹ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು. ಜನರ ಬಳಿ ಮತಯಾಚನೆ ಮಾಡುತ್ತಾ ಮಾತನಾಡಿದ ಯತೀಶ ಡಿ.ಬಿ. ಅವರು, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ತಾನು, ಇದೀಗ ಸಂಟ್ಯಾರ್‌ನಲ್ಲಿ ವಾಸವಾಗಿದ್ದೇನೆ. ಕಾರ್ಪೊರೇಟ್ ಜಗತ್ತಿನ ಜೊತೆಗೆ ಗ್ರಾಮೀಣ ಭಾಗದ ಆಗುಹೋಗುಗಳನ್ನು ಅರಿತುಕೊಂಡಿರುವುದರಿಂದ, ಜನರ

ಆರ್ಯಾಪು ಗ್ರಾ.ಪಂ. ಉಪಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ ಡಿ.ಬಿ. ಮತಯಾಚನೆ Read More »

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು

ಪುತ್ತೂರು: ಹಂತಕ ಕಾಡಾನೆಯನ್ನು ಸೆರೆ ಹಿಡಿದ ಬಳಿಕ, ಉಪಟಳ ನೀಡುವ ಉಳಿದ ಆನೆಗಳ ಪತ್ತೆ ಕಾರ್ಯವನ್ನು ಅರಣ್ಯ ಇಲಾಖೆ ಮುಂದುವರಿಸಿದೆ. ಗುಂಡ್ಯ ಭಾಗದಲ್ಲಿ ಅರಣ್ಯ ಇಲಾಖೆ ನರ್ಸರಿಗಳನ್ನು ಕಾಡಾನೆಗಳು ಹಾಳು ಗೆಡವಿದೆ ಎನ್ನುವ ಮಾಹಿತಿ ಲಭಿಸಿದ್ದು, ಕಾರ್ಯಾಚರಣೆಯನ್ನು ಆ ಭಾಗಕ್ಕೆ ಕೇಂದ್ರಿಕರಿಸಲಾಗಿದೆ. ಮೊದಲಿಗೆ ಆನೆಗಳ ಪತ್ತೆ ಕಾರ್ಯ ನಡೆದ ಬಳಿಕವಷ್ಟೇ ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಒಟ್ಟು 5 ಆನೆಗಳ ಪೈಕಿ ಅಭಿಮನ್ಯು ಹಾಗೂ ಇನ್ನೊಂದು ಆನೆಯನ್ನು ಸೆರೆ ಹಿಡಿದ ಕಾಡಾನೆಯ ಜೊತೆ

ಗುಂಡ್ಯದಲ್ಲಿ ಅರಣ್ಯ ಇಲಾಖೆ ನರ್ಸರಿಯನ್ನು ಪುಡಿಮಾಡಿದ ಕಾಡಾನೆಗಳು Read More »

ಫೆ.25 ರಿಂದ ಮಾ.6 : ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ | ಪುತ್ತೂರಿನಿಂದ ಹೊರಟ ಹಸಿರುವಾಣಿ ಮೆರವಣಿಗೆ

ಪುತ್ತೂರು : ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.25 ರಿಂದ ಮಾ.6 ರ ತನಕ ನಡೆಯುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಹಸಿರುವಾಣಿ ಮೆರವಣಿಗೆ ಶುಕ್ರವಾರ ಸಂಜೆ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮುಖ್ಯ ರಸ್ತೆಯಿಂದ ಹೊರಟ ಹಸಿರುವಾಣಿ ಮೆರವಣಿಗೆ , ಸಂಪ್ಯ, ಕುಂಬ್ರ ಮಾರ್ಗವಾಗಿ ಶ್ರೀ ಕ್ಷೇತ್ರವನ್ನು ಸಂಜೆ ಹೊತ್ತಿಗೆ ತಲುಪಿತು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ವ್ಯವಸ್ಥಾಪನಾ

ಫೆ.25 ರಿಂದ ಮಾ.6 : ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ | ಪುತ್ತೂರಿನಿಂದ ಹೊರಟ ಹಸಿರುವಾಣಿ ಮೆರವಣಿಗೆ Read More »

ಫೆ.26 : ಸಾಲ್ಮರ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ 44ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಪುತ್ತೂರು : ಪುತ್ತೂರಿನ ಹೊರವಲಯದ ಸಾಲ್ಮರ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ವತಿಯಿಂದ 44ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.26 ಭಾನುವಾರ ಸಂಜೆ 6.30 ರಿಂದ ಸಾಲ್ಮರ ಕಟ್ಟೆ ವಠಾರದಲ್ಲಿ ನಡೆಯಲಿದೆ. ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಬೇಕಾಗಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫೆ.26 : ಸಾಲ್ಮರ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ 44ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ Read More »

error: Content is protected !!
Scroll to Top