ಬಿಜೆಪಿ ಮೆರವಣಿಗೆಯಲ್ಲಿ ಕೇಸರಿ ರಂಗು | ಸ್ಟಾರ್ ಪ್ರಚಾರಕರಾಗಿ ತೇಜಸ್ವಿ ಸೂರ್ಯ, ನಟಿ ಶೃತಿ ಭಾಗಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗುರುವಾರ ಬೃಹತ್ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಿದರು. ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಬೃಹತ್ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರೊಂದಿಗೆ ದೇವಸ್ಥಾನದ ವಠಾರದಿಂದ ಹೊರಟು ಮುಖ್ಯರಸ್ತೆಯಾಗಿ ಬಸ್ ನಿಲ್ದಾಣದ ತನಕ ಸಾಗಿ ಅಲ್ಲಿಂದ ಕೋರ್ಟ್ ರಸ್ತೆಯಾಗಿ ಕಿಲ್ಲೇ ಮೈದಾನದಲ್ಲಿ ಸಮಾಪನಗೊಂಡಿತು. ಬಳಿಕ ಕಿಲ್ಲೇ ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆಯಿತು. ಕೇಸರಿ ರಂಗು : ಬೃಹತ್ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಿಂದ ಹಿಡಿದು […]

ಬಿಜೆಪಿ ಮೆರವಣಿಗೆಯಲ್ಲಿ ಕೇಸರಿ ರಂಗು | ಸ್ಟಾರ್ ಪ್ರಚಾರಕರಾಗಿ ತೇಜಸ್ವಿ ಸೂರ್ಯ, ನಟಿ ಶೃತಿ ಭಾಗಿ Read More »

ಟಿಕೇಟ್ ಘೋಷಣೆಗೆ ಮೊದಲಿನ ಪುತ್ತಿಲ ಹೇಳಿಕೆ ವೈರಲ್ | ಹೇಳಿಕೆಯಂತೆ ನಡೆಯದ ಪುತ್ತಿಲ ಎಂದು ಕುಟುಕಿದ ನೆಟ್ಟಿಗರು

ಪುತ್ತೂರು: ಬಿಜೆಪಿ ಟಿಕೇಟ್ ಘೋಷಣೆಗೆ ಮೊದಲು ಅರುಣ್ ಕುಮಾರ್ ಪುತ್ತಿಲ ಅವರು ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. “ನಾನು ಸಂಘ ಪರಿವಾರದ ಕಾರ್ಯಕರ್ತ. ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡುವವರನ್ನು ಗೆಲ್ಲಿಸುವುದು ಜವಾಬ್ದಾರಿ…” ಎಂಬ ಹೇಳಿಕೆ ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. “ಇದೇನು ಹೇಳುವುದೊಂದು, ಮಾಡುವುದೊಂದು” ಎಂಬಂತಾಗಿದೆಯಲ್ಲವೇ? ಬಿಜೆಪಿ ಹೈಕಮಾಂಡ್ ಟಿಕೇಟ್ ನೀಡಿರುವ ವ್ಯಕ್ತಿಗೆ ಬೆಂಬಲ ನೀಡದೇ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಸ್ವತಃ ಬಿಜೆಪಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಯುದ್ಧಕ್ಕೆ

ಟಿಕೇಟ್ ಘೋಷಣೆಗೆ ಮೊದಲಿನ ಪುತ್ತಿಲ ಹೇಳಿಕೆ ವೈರಲ್ | ಹೇಳಿಕೆಯಂತೆ ನಡೆಯದ ಪುತ್ತಿಲ ಎಂದು ಕುಟುಕಿದ ನೆಟ್ಟಿಗರು Read More »

ಸೂಕ್ತ ದಾಖಲೆ ಇಲ್ಲದೆ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದು ವಶ

ರಾಮದುರ್ಗ : ಪಟ್ಟಣದ ಮೂಲಕ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದನ್ನು ಪೊಲೀಸರು ಗುರುವಾರ ನಸುಕಿನಲ್ಲಿ ವಶಕ್ಕೆ ಪಡೆದಿದ್ದಾರೆ.ಕಾರಿನಲ್ಲಿ ವ್ಯಕ್ತಿಯೊಬ್ಬರು ಈ ಹಣ ಸಾಗಣೆ ಮಾಡುತ್ತಿದ್ದರು. ಬೀಟ್ ನಲ್ಲಿದ್ದ ಪೊಲೀಸರು ತಪಾಸಣೆ ಮಾಡಿದಾಗ 500 ಮುಖಬೆಲೆಯ ನೋಟುಗಳು ಪತ್ತೆಯಾದವು.ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಣ ಹಾಗೂ ಕಾರನ್ನು ವಶಕ್ಕೆ ಪಡೆದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆಗೆ ಪ್ರಕರಣ ಒಪ್ಪಿಸಲಾಗಿದೆ ಎಂದು ಎಸ್ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಸೂಕ್ತ ದಾಖಲೆ ಇಲ್ಲದೆ ಬೆಳಗಾವಿಗೆ ಸಾಗಣೆ ಮಾಡುತ್ತಿದ್ದ 1.54 ಕೋಟಿ ನಗದು ವಶ Read More »

ಈ ಮಾಸಾಂತ್ಯ ಪಿಯುಸಿ ಫಲಿತಾಂಶ ಪ್ರಕಟ

ಏ.24 ಅಥವಾ 25ರಂದು ಪ್ರಕಟ ಬೆಂಗಳೂರು : 2022–23ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಈ ಸಲ ಬಹಳ ಬೇಗ ಪ್ರಕಟವಾಗಲಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಏಪ್ರಿಲ್​ ಕೊನೆಯ ವಾರದಲ್ಲಿ ಫಲಿತಾಂಶ ಪ್ರಕಟವಾಗುವುದು ಬಹುತೇಕ ಖಚಿತವಾಗಿದೆ. ಏ. 24 ಅಥವಾ ಏ. 25 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣಾ ಪ್ರಕ್ರಿಯೆಗಳ ಜತೆಗೆ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಉಪನ್ಯಾಸಕರು ಮೌಲ್ಯಮಾಪನ

ಈ ಮಾಸಾಂತ್ಯ ಪಿಯುಸಿ ಫಲಿತಾಂಶ ಪ್ರಕಟ Read More »

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು

ದಾನ ಪಡೆಯಲು ಸೇರಿದ ಜನಜಂಗುಳಿಯಿಂದಾಗಿ ನೂಕುನುಗ್ಗಲು ಸನಾ : ಯೆಮೆನ್‌ ದೇಶದ ರಾಜಧಾನಿ ಸನಾದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 85 ಜನರು ಸಾವಿಗೀಡಾಗಿದ್ದಾರೆ. ಶಾಲೆಯಲ್ಲಿ ಏರ್ಪಡಿಸಿದ್ದ ಜಕಾತ್‌ ಕಾರ್ಯಕ್ರಮದಲ್ಲಿ ದಾನ ಪಡೆಯಲು ಸೇರಿದ್ದ ಜನಜಂಗುಳಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ.85 ಮಂದಿ ಸಾವಿಗೀಡಾಗಿ 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದುರ್ಘಟನೆ ಅಲ್ಲಿನ ಕಾಲಮಾನ ಪ್ರಕಾರ ಇಂದು ಬೆಳಗ್ಗೆ ಸಂಭವಿಸಿದೆ.

ಸನಾದಲ್ಲಿ ಭೀಕರ ಕಾಲ್ತುಳಿತ : 85 ಸಾವು Read More »

ಈ ವರ್ಷ ಬರೀ 180 ದಿನಗಳು ಮಾತ್ರ ಬೋಧನಾ ದಿನಗಳು

ಶಾಲಾ ಮಕ್ಕಳಿಗೆ ಕಡಿಮೆಯಾದ ಬೋಧನಾ ದಿನಗಳು ಬೆಂಗಳೂರು : ಶಾಲಾ ಶಿಕ್ಷಣ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ 2023-24ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆ 244 ದಿನಗಳು ಇರಲಿವೆ. 26 ಶಾಲಾ ದಿನಗಳು ಕಡಿತಗೊಂಡಿವೆ. ಹೀಗಾಗಿ ಈ ವರ್ಷ ಒಟ್ಟು 244 ಶಾಲಾ ದಿನಗಳು ಇರಲಿದ್ದು, ಇದರಲ್ಲಿ 180 ದಿನಗಳು ಮಾತ್ರ ಬೋಧನಾ ದಿನಗಳು ನಡೆಯಲಿವೆ ಎಂದು ಮಾರ್ಗಸೂಚಿ ತಿಳಿಸಿದೆ. ಕಳೆದ ವರ್ಷದಲ್ಲಿ ಹೆಚ್ಚುವರಿಯಾಗಿದ್ದ ಕಲಿಕಾ ಚೇತರಿಕೆ ಈ ವರ್ಷ ಇಲ್ಲದಿರುವುದು ಮತ್ತು ಈ

ಈ ವರ್ಷ ಬರೀ 180 ದಿನಗಳು ಮಾತ್ರ ಬೋಧನಾ ದಿನಗಳು Read More »

ಸಿದ್ದರಾಮಯ್ಯನವರಿಗಿಂತ ಅವರ ಪತ್ನಿ ಹೆಚ್ಚು ಶ್ರೀಮಂತೆ

ಮಾಜಿ ಮುಖ್ಯಮಂತ್ರಿ ಬಳಿ 9.58 ಕೋ.ರೂ. ಚರಾಸ್ತಿ, 9.43 ಕೋ.ರೂ. ಸ್ಥಿರಾಸ್ತಿ ಮೈಸೂರು : ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗಿಂತ ಅವರ ಪತ್ನಿ ಪಾರ್ವತಿಯವರೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.ನಾಮಪತ್ರದ ಜತೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆಸಿದ್ದರಾಮಯ್ಯ ಅವರು 9.58 ಕೋಟಿ ಚರಾಸ್ತಿ, 9.43 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ 11.26 ಕೋಟಿ ರೂ. ಚರಾಸ್ತಿ, 19.56 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. 1.29 ಕೋಟಿ

ಸಿದ್ದರಾಮಯ್ಯನವರಿಗಿಂತ ಅವರ ಪತ್ನಿ ಹೆಚ್ಚು ಶ್ರೀಮಂತೆ Read More »

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹುಲಿಭೂತ, ರಕ್ತೇಶ್ವರಿ ನೇಮ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವದ ಅಂಗವಾಗಿ ಶ್ರೀ ದೈವಗಳ ನೇಮೋತ್ಸವ ಬುಧವಾರ ರಾತ್ರಿ ನಡೆಯಿತು. ಬೆಳಿಗ್ಗೆ ವೀರಮಂಗಲದಿಂದ ಶ್ರೀ ದೇವರು ಅವಭೃತ ಸ್ಣಾನದ ಬಳಿಕ ಶ್ರೀ ದೇವಸ್ಥಾನಕ್ಕೆ ಆಗಮಿಸಿ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತ್ತು. ರಾತ್ರಿ ಚೂರ್ಣೋತ್ಸವ, ವಸಂತ ಕಟ್ಟೆ ಪೂಜೆ ನಡೆಯಿತು. ಬಳಿಕ ಹುಲಿಭೂತ, ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹುಲಿಭೂತ, ರಕ್ತೇಶ್ವರಿ ನೇಮ Read More »

ಏ.27 ರಂದೇ ಮೋದಿ ರೋಡ್‌ ಶೋ ?..

ಆಡಳಿತ ವಿರೋಧಿ ಅಲೆ ಪ್ರಭಾವ ಕಡಿಮೆ ಮಾಡಲು ಬಿಜೆಪಿ ತಂತ್ರಗಾರಿಕೆ ರಾಜ್ಯಕ್ಕೆ ಬರಲಿದ್ದಾರೆ ಅಮಿತ್‌ ಶಾ, ಯೋಗಿ ಆದಿತ್ಯನಾಥ್‌, ಸ್ಮೃತಿ ಇರಾನಿ… ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಏ.27 ರಂದು ರಾಜ್ಯದ ಕೆಲವೆಡೆ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ರಾಜ್ಯಕ್ಕೆ ಆಗಮಿಸಿ ಚುನಾವಣಾ ತಯಾರಿ ಬಗ್ಗೆ ಮಹತ್ವದ ಚರ್ಚೆಗಳನ್ನು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಸಮಾವೇಶಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಬಿಜೆಪಿ

ಏ.27 ರಂದೇ ಮೋದಿ ರೋಡ್‌ ಶೋ ?.. Read More »

ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ

ಈಶ್ವರಪ್ಪ ಮಗನಿಗಿಲ್ಲ ಟಿಕೆಟ್‌ ಬೆಂಗಳೂರು : ಆಡಳಿತರೂಢ ಬಿಜೆಪಿ ಅಭ್ಯರ್ಥಿಗಳ ನಾಲ್ಕನೇ ಮತ್ತು ಅಂತಿಮ ಪಟ್ಟಿಯನ್ನು ಬುಧವಾರ ರಾತ್ರಿ ಬಿಡುಗಡೆ ಮಾಡಿದೆ.ಇತ್ತೀಚಿಗಷ್ಟೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಾವು ಪ್ರತಿನಿಧಿಸುತ್ತಿರುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ತಮ್ಮ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿದೆ.ಈ ಮುಂಚೆ ಮೂರು ಹಂತಗಳಲ್ಲಿ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದ ಬಿಜೆಪಿ ಶಿವಮೊಗ್ಗ ಮತ್ತು ಮಾನ್ವಿ

ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟ Read More »

error: Content is protected !!
Scroll to Top