ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಪುತ್ತೂರು: ನರೇಂದ್ರ ಪದವಿಪೂರ್ವ ಕಾಲೇಜಿನ 20 ಬಡ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190 ವತಿಯಿಂದ ತಲಾ 5 ರೂ. ಸಾವಿರ ವಿದ್ಯಾರ್ಥಿವೇತನ ವಿತರಿಸಲಾಯಿತು. ಎಂ ಸಿ ಆರ್ ಟಿ ನ ಅಧ್ಯಕ್ಷ ನಿಹಾಲ್ ಶೆಟ್ಟಿ, ಉಪಾಧ್ಯಕ್ಷ ವಿಖ್ಯಾತ್ ಶೆಟ್ಟಿ , ಖಜಾಂಚಿ ಆಶ್ರಯ್ ಭಂಡಾರಿ, ಕಾರ್ಯದರ್ಶಿ ಕಿರಣ್  ಹಾಗೂ ಎಂ ಸಿ ಆರ್ ಟಿ ನ ಟೇಬಲರ್,  ಪುತ್ತೂರಿನ ಸ್ವರ್ಣೋದ್ಯಮಿ ಸುಧನ್ವ ಆಚಾರ್ಯ 1.22 ಲಕ್ಷದ ಚೆಕ್ಕನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಖಜಾಂಚಿ […]

ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ Read More »

ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ

ಪುತ್ತೂರು: ಮಾರ್ಚಿನಲ್ಲಿ ನಡೆದ ದ್ವಿತೀಯ ಪಿಯು ಫಲಿತಾಂಶ ಏ. 21ರಂದು ಬೆಳಿಗ್ಗೆ 10ಕ್ಕೆ ಪ್ರಕಟವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿದೆ. ಇಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಬಳಿಕ ಇಲಾಖೆಯ ವೆಬ್ ತಾಣ https://karresults.nic.inನಲ್ಲಿ ಫಲಿತಾಂಶ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ Read More »

ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಬ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ಗುರುವಾರ ನಾಮಪತ್ರ ಸಲ್ಲಿಸಿದರು. ಬುಧವಾರ ತನ್ನ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸುವ ಪ್ರಕಟಣೆ ನೀಡಿದ್ದರು. ಯಾವುದೋ ಕಾರಣಗಳಿಂದ ನಾಮಪತ್ರ ಸಲ್ಲಿಕೆಯಾಗಿಲ್ಲ.  ಗುರುವಾರ ಬೆಳಿಗ್ಗೆ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಐ.ಸಿ.ಕೈಲಾಸ್, ಮಹಿಳಾ ಪದಾಧಿಕಾರಿಗಳಾದ ಝೊಹರಾ ನಿಸಾರ್, ಪದ್ಮಾಮಣಿ ಉಪಸ್ಥಿತರಿದ್ದರು.

ಪುತ್ತೂರು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ ನಾಮಪತ್ರ ಸಲ್ಲಿಕೆ Read More »

ಬಿಜೆಪಿಯನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ | ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಕರೆ

ಪುತ್ತೂರು: ಈ ಬಾರಿ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರನ್ನು 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು ಎಂದು ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಕರೆ ನೀಡಿದರು. ಅವರು ಗುರುವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದರು. ಪುತ್ತೂರು ವಿಧಾನಸಭಾ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಜಿ.ಪಂ. ಸದಸ್ಯರಾಗಿ, ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ

ಬಿಜೆಪಿಯನ್ನು 50 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿ | ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆ ಬಳಿಕ ನಡೆದ ಸಮಾವೇಶದಲ್ಲಿ ತೇಜಸ್ವಿ ಸೂರ್ಯ ಕರೆ Read More »

ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅನಧಿಕೃತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮೇ 31 ರ ವರೆಗೆ ಗಡುವು

ನಿಗದಿತ ಗಡುವಿನಲ್ಲಿ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಅಂತಹ ಶಾಲೆಗಳನ್ನು ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ಬೆಂಗಳೂರು : ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅನಧಿಕೃತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಮೇ 31 ರ ವರೆಗೆ ಗಡುವು ನೀಡಿದೆ. ಒಂದು ವೇಳೆ ನಿಗದಿತ ಗಡುವಿನಲ್ಲಿ ಸಮಸ್ಯೆ ಬಗೆಹರಿಯದೇ ಹೋದಲ್ಲಿ ಅಂತಹ ಶಾಲೆಗಳನ್ನು ಮುಚ್ಚುವಂತೆ ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಅನಧಿಕೃತ ಖಾಸಗಿ ಶಾಲೆಗಳು ನಡೆಯುತ್ತಿರುವುದರ ಬಗ್ಗೆ ಪೋಷರು ದೂರು ನೀಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ ಹಾಗೂ

ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅನಧಿಕೃತ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮೇ 31 ರ ವರೆಗೆ ಗಡುವು Read More »

ಮೋದಿ ಉಪನಾಮ ಅವಹೇಳನ : ತಡೆಯಾಜ್ಞೆ ನೀಡಲು ಕೋರ್ಟ್ ನಕಾರ

ಅರ್ಜಿ ವಜಾಗೊಳಿಸಿದ ನ್ಯಾಯಾಲಯ ಸೂರತ್ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮೋದಿ ಉಪನಾಮದ ಅವಹೇಳನಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯ ಶಿಕ್ಷೆಗೆ ತಡೆಯಾಜ್ಞೆ ನೀಡಲು ಸೂರತ್ ಕೋರ್ಟ್ ನಿರಾಕರಿಸಿದೆ.ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಈ ಹಿಂದೆ ರಾಹುಲ್ ಗಾಂಧಿಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಕ್ಕೆ ನ್ಯಾಯಾಲಯ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. ಏಪ್ರಿಲ್ 3 ರಂದು ಪ್ರಕರಣದಲ್ಲಿ ಅಪರಾಧ ಸಾಬೀತಾದ ನಂತರ ಮೇಲ್ಮನವಿ ಸಲ್ಲಿಸಿದ್ದ ರಾಹುಲ್ ಗಾಂಧಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿತ್ತು. ಸೂರತ್‌

ಮೋದಿ ಉಪನಾಮ ಅವಹೇಳನ : ತಡೆಯಾಜ್ಞೆ ನೀಡಲು ಕೋರ್ಟ್ ನಕಾರ Read More »

ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಪತ್ತೆ

ದೆಹಲಿ : ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಲು ಎಂಬುವವರು ಪತ್ತೆಯಾಗಿದ್ದಾರೆ.ಅನುರಾಗ್ ಮಲು ಮೌಂಟ್ ಅನ್ನಪೂರ್ಣ ನ್ನು ಇಳಿಯುತ್ತಿದ್ದಾಗ ಕ್ಯಾಂಪ್ 3 ರಿಂದ ಸೋಮವಾರದಂದು, ನಾಪತ್ತೆಯಾಗಿದ್ದರು. ಆದರೆ ಅವರು 6000 ಮೀಟರ್ ಎತ್ತರದಿಂದ ಕಂದಕಕ್ಕೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು. ಗುರುವಾರದಂದು ಮಲು ಅವರ ಸಹೋದರ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನದ ಕಿಶನ್ಘರ್ ನ ನಿವಾಸಿಯಾಗಿರುವ ಮಲೂ (34) ಮೌಂಟ್ ಅನ್ನಪೂರ್ಣದ ಕ್ಯಾಂಪ್

ನೇಪಾಳದಲ್ಲಿ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಪತ್ತೆ Read More »

ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ | ಕಂಬ ಮುರಿತ | ಚಾಲಕನಿಗೆ ಗಾಯ

ಪುತ್ತೂರು: ಟಿಪ್ಪರ್ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬೆದ್ರಾಳ ರೈಲ್ವೇ ಸೇತುವೆ ಬಳಿ ಗುರುವಾರ ನಡೆದಿದೆ. ಬೆದ್ರಾಳ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ಟಿಪ್ಪರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಉರುಳಿ ಬಿದ್ದಿದ್ದು, ತಂತಿಗಳು ತುಂಡಾಗಿದೆ. ಅಪಘಾತದಿಂದ ಟಿಪ್ಪರ್ ಚಾಲಕನ ಕೈಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ | ಕಂಬ ಮುರಿತ | ಚಾಲಕನಿಗೆ ಗಾಯ Read More »

ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಗುರುವಾರ ನಾಮಪತ್ರ ಸಲ್ಲಿಸಿದರು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಬೃಹತ್ ಮೆರವಣಿಗೆಯಲ್ಲಿ ಸಾಗಿ ಅಲ್ಲಿಂದ ಸಹಾಯಕ ಆಯುಕ್ತರ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಜಿಲ್ಲಾ ಸಹಪ್ರಭಾರಿಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.

ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ನಾಮಪತ್ರ ಸಲ್ಲಿಕೆ Read More »

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅರಂತೋಡು ಗ್ರಾಮ ಉಳುವಾರು ಎಂಬಲ್ಲಿ ಏ. 18 ರಂದು ಸಂಭವಿಸಿದೆ. ಚಂದ್ರಕಾಂತ್‌ (34) ಎಂಬವರೇ ಮೃತ ವ್ಯಕ್ತಿ. ಇವರು ಸುಮಾರು 25 ವರ್ಷಗಳಿಂದ ಫಿಡ್ಸ್‌ ಖಾಯಿಲೆಯಿಂದ ಬಳಲುತ್ತಿದ್ದು, ಮರ್ಕಂಜ ಗ್ರಾಮದ ನಿವಾಸಿಯಾಗಿದ್ದ ಇವರು ಕೆಲವು ದಿನಗಳಿಂದ ಸುಳ್ಯ ತಾಲೂಕು ಅಂರತೋಡು ಗ್ರಾಮದ ಉಳುವಾರು ಹೆಂಡತಿ ಮನೆಯಲ್ಲಿ ವಾಸವಾಗಿದ್ದರು. ಏ. 18 ರಂದು ಖಾಯಿಲೆ ಉಲ್ಬಣಗೊಂಡ ಪರಿಣಾಮ, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು

ಸುಳ್ಯ : ಫಿಡ್ಸ್ ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಸಾವು Read More »

error: Content is protected !!
Scroll to Top