ಮಾ.12 : ಬಂಟರ ಸಂಘದಿಂದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಪುತ್ತೂರು : ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರು ಇವರ ಸಹಕಾರದಲ್ಲಿ ಪುತ್ತೂರು ತಾಲೂಕು ಬಂಟರ ಸಂಘ ಹಾಗೂ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾ.12 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಕೊಂಬೆಟ್ಟು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿದೆ ಎಂದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ತಿಳಿಸಿದ್ದಾರೆ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು […]

ಮಾ.12 : ಬಂಟರ ಸಂಘದಿಂದ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ Read More »

ಮಾರ್ಚ್ 11 ಕ್ಕೆ ಅಣ್ಣಾಮಲೈ ಪುತ್ತೂರಿಗೆ

ಪುತ್ತೂರಿಗೆ ಆಗಮಿಸಲಿದೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಪುತ್ತೂರು: ಮಾರ್ಚ್ 11 ಕ್ಕೆ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಪುತ್ತೂರಿಗೆ ಆಗಮಿಸಲಿದ್ದು, ಸ್ಟಾರ್ ಪ್ರಚಾರಕರಾಗಿ ಅಣ್ಣಾಮಲೈ ಆಗಮಿಸಲಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಮಾಹಿತಿ ನೀಡಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ನಾಲ್ಕು ಮೂಲೆಗಳಿಂದ ಹೊರಟಿರುವ ವಿಜಯ ಸಂಕಲ್ಪ ಯಾತ್ರೆ ೨೫ರಂದು ಪ್ರದಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಸಮಾಪನಗೊಳ್ಳಲಿದೆ‌ ಮಾರ್ಚ್ ೧೧ರಂದು ಪುತ್ತೂರಿಗೆ ಆಗಮಿಸಲಿದ್ದು, ಪುತ್ತೂರು ವೆಂಕಟರಮಣ ದೇವಸ್ಥಾನದ ಸಮೀಪ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸದ

ಮಾರ್ಚ್ 11 ಕ್ಕೆ ಅಣ್ಣಾಮಲೈ ಪುತ್ತೂರಿಗೆ Read More »

ಆಸ್ಟ್ರೇಲಿಯ ಪ್ರಧಾನಿ ಜತೆ ಟೆಸ್ಟ್‌ ಪಂದ್ಯ ವೀಕ್ಷಿಸಿದ ಮೋದಿ

ಅಹಮದಾಬಾದ್‌ : ಭಾರತ ಹಾಗೂ ಆಸ್ಟ್ರೇಲಿಯ ನಡುವಿನ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯ ಪ್ರಧಾನಿ ಆಂಥೋನಿ ಆಲ್ಬನೀಸ್‌ ಜತೆ ಪ್ರಧಾನಿ ನರೇಂದ್ರರ ಮೋದಿ ಸಾಕ್ಷಿಯಾದರು.ಜಗತ್ತಿನ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಎನಿಸಿಕೊಂಡಿರುವ ಮೊಟೇರಾದಲ್ಲಿನ ಪಂದ್ಯವನ್ನು ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಆಲ್ಬನೀಸ್‌ ಜತೆಯಾಗಿ ಇಂದು ವೀಕ್ಷಿಸಿಸದರು. ಸ್ಟೇಡಿಯಂಗೆ ಮರುನಾಮಕರಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮೈದಾನಕ್ಕಾಗಮಿಸಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ.ಮೈದಾನಕ್ಕಾಗಮಿಸಿದ

ಆಸ್ಟ್ರೇಲಿಯ ಪ್ರಧಾನಿ ಜತೆ ಟೆಸ್ಟ್‌ ಪಂದ್ಯ ವೀಕ್ಷಿಸಿದ ಮೋದಿ Read More »

ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ

ಬೆಂಗಳೂರು : ಕಾಂಗ್ರೆಸ್​​ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಿದ್ಧಪಡಿಸಿದೆ. ನಿನ್ನೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಮೊದಲ ಹಂತದಲ್ಲಿ 120 ಕ್ಷೇತ್ರಗಳ ಸಂಭಾವ್ಯ ಟಿಕೆಟ್​ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯ ನಾಯಕರು ನಿನ್ನೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿದರು.ಸಿದ್ದರಾಮಯ್ಯ ಹಾಗೂ ಡಿಕೆಶಿ ಸೇರಿಕೊಂಡು 120 ಕ್ಷೇತ್ರಗಳ

ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿ Read More »

ಕರ್ನಾಟಕದ ಕರಾವಳಿಯಿಂದ ಉಗ್ರರಿಗೆ ಕೋಟಿಗಟ್ಟಲೆ ಹಣ ರವಾನೆ

ಮಂಗಳೂರು : ಬಂಟ್ವಾಳದ ನಂದವಾರದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಸೆರೆ ಹಿಡಿದಿರುವ ಮೂವರು ಬಿಹಾರದ ಉಗ್ರರಿಗಾಗಿ ಸುಮಾರು 25 ಕೋ. ರೂ. ರವಾನಿಸಿರುವ ಲೆಕ್ಕ ಸಿಕ್ಕಿದೆ. ನಂದಾವರ, ಪುತ್ತೂರು ಮತ್ತು ಕೇರಳದ ಮಂಜೇಶ್ವರದಿಂದ ಎನ್‌ಐಎ ಐವರನ್ನು ಬಂಧಿಸಿದ್ದು, ಇವರೆಲ್ಲ ನಿಷೇಧಿತ ಪಿಎಫ್‌ಐ ಕಾರ್ಯಕರ್ತರಾಗಿದ್ದರು.ವಿಧ್ವಂಸಕ ಕೃತ್ಯ ಎಸಗಿರುವ ಸಂಚಿನಲ್ಲಿ ಸಕ್ರಿಯವಾಗಿ ಭಾಗಿಯಾದ ಆರೋಪ ಅವರ ಮೇಲಿದೆ. ಕರಾವಳಿಯಿಂದ ಬರೀ ಒಂದು ಕೃತ್ಯಕ್ಕೆ ಸುಮಾರು 25 ಕೋ. ರೂ. ರವಾನೆಯಾಗಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ.ಕರಾವಳಿಯಲ್ಲಿ ಉಗ್ರರಿಗೆ ಹಣಕಾಸಿನ ನೆರವು ಒದಗಿಸುವ

ಕರ್ನಾಟಕದ ಕರಾವಳಿಯಿಂದ ಉಗ್ರರಿಗೆ ಕೋಟಿಗಟ್ಟಲೆ ಹಣ ರವಾನೆ Read More »

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಹಿಜಾಬ್‌ ನಿಷೇಧ ಮುಂದುವರಿಕೆ; ಪರೀಕ್ಷಾ ಕೇಂದ್ರಗಳಲ್ಲಿ ಬಿಗು ಬಂದೋಬಸ್ತ್‌ ಬೆಂಗಳೂರು : ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿದ್ದು, ರಾಜ್ಯದ 1,109 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. 5,716 ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿಕೊಂಡಿದ್ದು, ಕಲಾ ವಿಭಾಗದಲ್ಲಿ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 2,44,120 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾಗುವ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತಿಲ್ಲ.

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ Read More »

ಕೃಷ್ಣ ಮಠಕ್ಕೆ ಜಾಗ ಕೊಟ್ಟಿರುವುದು ಹಿಂದು ಅರಸ : ಪೇಜಾವರ ಶ್ರೀ

ಉಡುಪಿ : ಉಡುಪಿಯ ಶ್ರೀಕೃಷ್ಣ ಮಠಕ್ಕೆ ಮತ್ತು ಶ್ರೀ ಅನಂತೇಶ್ವರ ದೇಗುಲಕ್ಕೆ ಅರಸ ರಾಮಭೋಜ ಎನ್ನುವವರು ಜಾಗ ನೀಡಿದ್ದಾರೆಯೇ ಹೊರತು ಬೇರೆ ಯಾರೂ ಅಲ್ಲ. ಇದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಶಾಸನಗಳು ಇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ. ಆಧಾರ ರಹಿತವಾದ ಹೇಳಿಕೆ ನೀಡುವವರ ಮಾತಿನ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ. ಉಡುಪಿಯ ಕೃಷ್ಣ ಮಠ, ಅನಂತೇಶ್ವರ ಸನ್ನಿಧಿಗೆ ರಾಮಭೋಜ ಎಂಬ ಅರಸ ಹಾಗೂ ಕುಂಜಿತ್ತಾಯ ಮನೆತನದವರು ಜಮೀನು ನೀಡಿದ್ದಾರೆ ಎನ್ನುವುದಕ್ಕೆ ದಾಖಲೆಗಳು

ಕೃಷ್ಣ ಮಠಕ್ಕೆ ಜಾಗ ಕೊಟ್ಟಿರುವುದು ಹಿಂದು ಅರಸ : ಪೇಜಾವರ ಶ್ರೀ Read More »

ಬಾಲಿವುಡ್‌ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ನಿಧನ

ಮುಂಬಯಿ : ಬಾಲಿವುಡ್‌ನ ಹಿರಿಯ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ಇಂದು ನಿಧನರಾಗಿದ್ದಾರೆ. ಅವರಿಗೆ 58 ವರ್ಷ ಪ್ರಾಯವಾಗಿತ್ತು.ಹಿರಿಯ ನಟ ಅನುಪಮ್‌ ಖೇರ್‌ ಟ್ವೀಟ್‌ ಮೂಲಕ ಸತೀಶ್‌ ಕೌಶಿಕ್‌ ನಿಧನರಾಗಿರುವುದನ್ನು ತಿಳಿಸಿದ್ದಾರೆ. ನಟಿ ಕಂಗನಾ ರಣಾವತ್‌ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.ಸತೀಶ್‌ ಕೌಶಿಕ್‌, ನಟ, ನಿರ್ದೇಶಕ, ಚಿತ್ರಕಥೆ ಲೇಖಕ, ನಿರ್ಮಾಪಕ ಹೀಗೆ ಎಲ್ಲವೂ ಆಗಿದ್ದರು. ಹಾಸ್ಯ ಪಾತ್ರಗಳಲ್ಲಿ ಅವರು ಮಿಂಚುತ್ತಿದ್ದರು. ಎಲ್ಲ ಪ್ರಮುಖ ನಟರೊಂದಿಗೆ ಸತೀಶ್‌ ಕೌಶಿಕ್‌ ನಟಿಸಿದ್ದಾರೆ. ಹರ್ಯಾಣದವರಾದ ಅವರು ಚಿತ್ರರಂಗಕ್ಕೆ ಬರುವ ಮೊದಲು

ಬಾಲಿವುಡ್‌ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ನಿಧನ Read More »

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ

ರಷ್ಯಾದಲ್ಲಿ ಪ್ರತಿಯೊಬ್ಬರೂ ರಷ್ಯನ್ ಭಾಷೆ ಮಾತಾಡುತ್ತಾರೆ. ಜಪಾನ್‌ನಲ್ಲಿ ಪ್ರತಿಯೊಬ್ಬರಿಗೂ ಜಪಾನಿ ಭಾಷೆ ಗೊತ್ತಿದೆ. ಚೀನಾದಲ್ಲಿ ಪ್ರತಿಯೊಬ್ಬರಿಗೂ ಚೀನಿ ಭಾಷೆಯ ಪರಿಚಯ ಇದೆ. ಸ್ಪೇನ್‌ನಲ್ಲಿ ಪ್ರತಿಯೊಬ್ಬರೂ ಸ್ಪಾನಿಷ್ ಭಾಷೆಯನ್ನು ಪ್ರೀತಿಯಿಂದ ಕಲಿತು ಮಾತಾಡುತ್ತಾರೆ.ಭಾರತದಲ್ಲಿ ರಾಷ್ಟ್ರಭಾಷೆ ಯಾವುದು ಎಂದು ಕೇಳಿದರೆ ಹೆಚ್ಚಿನವರು ಹಿಂದಿ ಎಂದು ಹೇಳುತ್ತಾರೆ. ಆದರೆ ಅದು ಖಂಡಿತ ಸತ್ಯ ಅಲ್ಲ. ನಮ್ಮ ಸಂವಿಧಾನದಲ್ಲಿ ಅದರ ಉಲ್ಲೇಖ ಇಲ್ಲ. ರಾಷ್ಟ್ರ ಭಾಷೆಯಾಗಿ ಒಂದು ಭಾಷೆಯನ್ನು ಬೆಳೆಸಬೇಕು ಎಂಬ ಆಸೆ ಅಂಬೇಡ್ಕರ್ ಅವರಿಗೆ ಇದ್ದಿದ್ದರೂ ಅದನ್ನು ಅವರು ನಮ್ಮ ಸಂವಿಧಾನದಲ್ಲಿ

ಇಡೀ ದೇಶ ಮಾತನಾಡುವ ಒಂದು ರಾಷ್ಟ್ರಭಾಷೆ ನಮಗೆ ಬೇಕು – ಆ ಅರ್ಹತೆ ಇರುವುದು ಕೇವಲ ಮೂರು ಭಾಷೆಗಳಿಗೆ Read More »

ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ

ಪುತ್ತೂರು: ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ ಕಾರ್ಯಕ್ರಮ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಬುಧವಾರ ನಡೆಯಿತು. ಬೆಳಿಗ್ಗೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಸಂಸ್ಕಾರ ಮಂಗಲ ಹೋಮ, ಆಶ್ಲೇಷಾ ಬಲಿ, ಅಷ್ಟವಟು ಆರಾಧನೆ, ಪಂಚವಿಂಶತಿ ಕಲಶ ಪೂಜೆ, ನಾಗಪ್ರತಿಷ್ಠೆ ಪಂಚಾಮೃತಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಪ್ರಸಾದ ವಿತರಣೆಯಾಗಿ, ಬಳಿಕ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಡಾ.ಎಂ.ಕೆ.ಪ್ರಸಾದ್  ಮತ್ತಿತರರು ಉಪಸ್ಥಿತರಿದ್ದರು. ಸ್ಥಳ ದಾನಿಗಳಾದ

ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ Read More »

error: Content is protected !!
Scroll to Top