ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ವಿರುದ್ಧ ಮುಂದುವರಿದ ಕಾರ್ಯಾಚರಣೆ

ಮುಖಂಡರ ಮನೆ, ಕಚೇರಿ ಮತ್ತಿತರ ಸಂಸ್ಥಾಪನೆ ಶೋಧ ದೆಹಲಿ : ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ನಾಯಕರಿಗೆ ಸೇರಿದ ಮನೆ ಮತ್ತಿತರ ಸಂಸ್ಥಾಪನೆಗಳ ಮೇಲಿನ ದಾಳಿ ಕಾರ್ಯಾಚರಣೆ ಮುಂದುವರಿದಿದೆ. ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಲ್ಕು ರಾಜ್ಯಗಳಲ್ಲಿ ಬೃಹತ್‌ ಮಟ್ಟದ ಕಾರ್ಯಾಚರಣೆ ಪ್ರಾರಂಭಿಸಿದೆ.ಬಿಹಾರ, ಉತ್ತರ ಪ್ರದೇಶ, ಪಂಜಾಬ್‌ ಮತ್ತು ಗೋವಾ ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ನೂರಾರು ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಸಲಾಗುತ್ತಿದೆ.

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ವಿರುದ್ಧ ಮುಂದುವರಿದ ಕಾರ್ಯಾಚರಣೆ Read More »

ಚುನಾವಣಾ ಕಣದಲ್ಲಿ ದಿನದಿನಕ್ಕೂ ಬದಲಾಗುತ್ತಿದೆ ಟ್ರೆಂಡ್‌

ರಾಜಕೀಯ ಪಂಡಿತರ ಅಂದಾಜಿಗೂ ನಿಲುಕುತ್ತಿಲ್ಲ ಚುನಾವಣಾ ಕಣ ಬೆಂಗಳೂರು : ಮತದಾನಕ್ಕೆ ಇನ್ನು ಕೆಲವೇ ದಿನಗಳು ಉಳಿದಿದ್ದರೂ ಚುನಾವಣಾ ಕಣದಲ್ಲಿ ದಿನದಿನಕ್ಕೂ ಟ್ರೆಂಡ್‌ ಬದಲಾಗುತ್ತಿದೆ. ಈ ಸಲದ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಂದಾಜಿಸಲು ರಾಜಕೀಯ ವಿಶ್ಲೇಷಕರು ಕೂಡ ತಿಣುಕಾಡುತ್ತಿದ್ದಾರೆ. ಮೊದಲೆಲ್ಲ ಚುನಾವಣೆ ಘೋಷಣೆಯಾದ ಬಳಿಕ ಟ್ರೆಂಡ್‌ ಯಾವ ರೀತಿ ಇದೆ ಎಂಬ ಒಂದು ಅಂದಾಜು ಸಿಗುತ್ತಿತ್ತು. ಕೆಲವೊಂದಿಷ್ಟು ಸಮೀಕ್ಷೆಗಳು ಕೂಡ ಈ ಸಲ ಯಾವ ಪಕ್ಷ ಬಹುಮತ ಪಡೆಯಬಹುದು ಎಂದು ಅಂದಾಜಿಸಲು ನೆರವಾಗುತ್ತಿದ್ದವು. ಆದರೆ

ಚುನಾವಣಾ ಕಣದಲ್ಲಿ ದಿನದಿನಕ್ಕೂ ಬದಲಾಗುತ್ತಿದೆ ಟ್ರೆಂಡ್‌ Read More »

ಕೇಂದ್ರ ಸಚಿವೆ ಡಾ. ಭಾರತಿ ಪವಾರ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ

ಪುತ್ತೂರು: ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವೆ ಡಾ. ಭಾರತಿ ಪವಾರ್ ಅವರು ಮಂಗಳವಾರ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಡಾ. ಭಾರತಿ ಪವಾರ್ ಅವರಿಗೆ ಬಿಜೆಪಿ ಕಚೇರಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ಹೂ ನೀಡಿ ಸ್ವಾಗತಿಸಿದರು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ಸೀರೆ, ಬಳೆ, ಕುಂಕುಮ ನೀಡಿ ಆದರಿಸಿದರು. ಇದೇ ಸಂದರ್ಭ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ನಗರಸಭೆ ಉಪಾಧ್ಯಕ್ಷೆ ಗೌರಿ ಬನ್ನೂರು,

ಕೇಂದ್ರ ಸಚಿವೆ ಡಾ. ಭಾರತಿ ಪವಾರ್ ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ Read More »

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಶ್ರೇಯೋಭಿವೃದ್ಧಿಗೆ ಕುಂಟಾರು ರವೀಶ ತಂತ್ರಿಗಳಿಂದ ವಿಶೇಷ ಪ್ರಾರ್ಥನೆ

ಪುತ್ತೂರು : ಪುತ್ತೂರು ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಗೆಲುವು, ಶ್ರೇಯೋಭಿವೃದ್ಧಿಗಾಗಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿ ಕುಂಟಾರು ಶ್ರೀ ರವೀಶ ತಂತ್ರಿಗಳು ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು. ವಿಶೇಷ ಪ್ರಾರ್ಥನೆ ಸಲ್ಲಿಸಿದ ತಂತ್ರಿಗಳು ಬಳಿಕ ಆಶಾ ತಿಮ್ಮಪ್ಪ ಅವರಿಗೆ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಜಿಲ್ಲಾ ವಿಭಾಗ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ

ಪುತ್ತೂರು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಶ್ರೇಯೋಭಿವೃದ್ಧಿಗೆ ಕುಂಟಾರು ರವೀಶ ತಂತ್ರಿಗಳಿಂದ ವಿಶೇಷ ಪ್ರಾರ್ಥನೆ Read More »

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ

ಮುಂಬಯಿ-ಮಂಗಳೂರು ರೈಲಿನಲ್ಲಿ ನಡೆದ ಮನಕಲಕುವ ಘಟನೆ ಮಂಗಳೂರು : ರೈಲಿನಲ್ಲಿ ಮೃತಪಟ್ಟ ವ್ಯಕ್ತಿಯ ಶವ ಮುಂಬಯಿಯಿಂದ ಮಂಗಳೂರು ತನಕ ಬಂದು ವಾಪಸು ಮುಂಬಯಿಗೆ ಹೋದ ಘಟನೆ ಮುಂಬಯಿ-ಮಂಗಳೂರು ಜಂಕ್ಷನ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ನಾಪತ್ತೆಯಾಗಿದ್ದಾರೆಂದು ಭಾವಿಸಿ ಈ ವ್ಯಕ್ತಿಯ ಮನೆಯವರು ಮಂಗಳೂರು ಮತ್ತು ಮುಂಬಯಿಯಲ್ಲಿ ಹಲವು ನಿಲ್ದಾಣಗಳಲ್ಲಿ ಹುಡುಕಾಡಿದ್ದರು. ರೈಲಿನ ಸಿಬ್ಬಂದಿ ಕೂಡ ಇಡೀ ರೈಲನ್ನು ಹುಡುಕಾಡಿ ರೈಲಿನಲ್ಲಿ ಪತ್ತೆಯಾಗಿಲ್ಲ ಎಂದು ವರದಿ ನೀಡಿದ್ದರು. ಆದರೆ ಶವ ಭರ್ತಿ 24 ತಾಸು ಶೌಚಾಲಯದ ಒಳಗೆ

ರೈಲಿನ ಟಾಯ್ಲೆಟ್‌ನಲ್ಲಿ ಮೃತದೇಹ ಪತ್ತೆ : ಹೊರಜಗತ್ತಿಗೆ ವಿಷಯ ತಿಳಿದದ್ದು 24 ತಾಸು ಬಳಿಕ Read More »

ಯೆಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್…

ಐಪಿಎಲ್ ಕಣದಲ್ಲಿ ಚೆನ್ನೈ ತಂಡ ಈ ಬಾರಿ ಶಿಖರದಲ್ಲಿ 2023ರ ಐಪಿಎಲ್ ಕೂಟ\ ಈಗ ರೋಮಾಂಚನದ ಶಿಖರ ಮುಟ್ಟಿದ್ದು ಸೋಮವಾರದ ಪಂದ್ಯ ಮುಗಿದಾಗ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಪ್ಲೇಸಲ್ಲಿ ಬಂದು ಕೂತಿದೆ. ಒಟ್ಟು ಏಳು ಪಂದ್ಯಗಳಲ್ಲಿ ಐದು ಪಂದ್ಯ ಗೆದ್ದಿರುವ ‘ವಿಸಿಲ್ ಪೋಡು’ ತಂಡ ಹತ್ತು ಅಂಕಗಳ ಜತೆಗೆ ಪಾಯಿಂಟ್ ಟೇಬಲಿನ ಟಾಪ್‌ನಲ್ಲಿ ಬಂದು ಕೂತಿದೆ.ಯಾವ ತಂಡವನ್ನು ಅಂಕಲ್‌ಗಳ ತಂಡ ಎಂದು ಕ್ರಿಕೆಟ್ ಪಂಡಿತರು ಟೀಕೆ ಮಾಡಿದ್ದರೋ ಆ ತಂಡದಲ್ಲಿ ಈಗ

ಯೆಲ್ಲೋ ಆರ್ಮಿ ಮತ್ತು ಧೋನಿ ಎಂಬ ಲೆಜೆಂಡ್… Read More »

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುತ್ತೂರು ಶಾಸನಗಳ ಕುರಿತು ಪ್ರಬಂಧ ಮಂಡನೆಗೆ ಪುತ್ತೂರು ಉಮೇಶ್ ನಾಯಕ್ ಅವರ ಪ್ರಬಂಧ ಆಯ್ಕೆ

ಪುತ್ತೂರು: ಭಾರತ ಸರಕಾರದ ಅಧೀನವಿರುವ ಉನ್ನತ ಶಿಕ್ಷಣ ಇಲಾಖೆ ಸಚಿವಾಲಯದ ಶಾಸ್ತ್ರೀಯ  ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಭಾರತೀಯ ಭಾಷಾ ಸಂಸ್ಥಾನಂ ಮೈಸೂರು  ಇವರು  ಆಯೋಜಿಸಿರುವ  ಶಾಸ್ತ್ರೀಯ ಕನ್ನಡ ಸಾಂಸ್ಕೃತಿಕ ಪರಿಶೋಧನಾ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ  ‘ಪುತ್ತೂರ ಶಾಸನಗಳು ಮತ್ತು ಅದರಲ್ಲಿ ಉಲ್ಲೇಖಿಸುವ ವಿಷಯಗಳ ವರ್ಗೀಕರಣ ಮತ್ತು ಆರ್ಥ ವ್ಯವಸ್ಥೆ’ ಕುರಿತು ರಚಿಸಿರುವ ಪ್ರಬಂಧ ಮಂಡನೆಗೆ ಆಯ್ಕೆಯಾಗಿದೆ. ಏ.26 ರಿಂದ  28ರ ತನಕ

ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುತ್ತೂರು ಶಾಸನಗಳ ಕುರಿತು ಪ್ರಬಂಧ ಮಂಡನೆಗೆ ಪುತ್ತೂರು ಉಮೇಶ್ ನಾಯಕ್ ಅವರ ಪ್ರಬಂಧ ಆಯ್ಕೆ Read More »

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀಣೋದ್ಧಾರ, ಪುನಃಪ್ರತಿಷ್ಟಾಪನೆ | ಬಪ್ಪಳಿಗೆಯ ಶ್ರೀಚಕ್ರ ನಿವಾಸದಲ್ಲಿ ಸಮಾಲೋಚನಾ ಸಭೆ, ಸಮಿತಿ ರಚನೆ

ಪುತ್ತೂರು: ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀಣೋದ್ಧಾರ – ಪುನಃಪ್ರತಿಷ್ಟಾಪನೆ ಪ್ರಯುಕ್ತ ಪೂರ್ವಭಾವಿ ಸಭೆ ಬಪ್ಪಳಿಗೆಯಲ್ಲಿನ ಸುಬ್ರಹ್ಮಣ್ಯ ನಟ್ಟೋಜ ಅವರ ನಿವಾಸ ಶ್ರೀ ಚಕ್ರದಲ್ಲಿ ಭಾನುವಾರ ನಡೆಯಿತು. ಎನ್.ಕೆ.ಜಗನ್ನಿವಾಸ ರಾವ್ ಮಾತನಾಡಿ, ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಲಕಯದ ಪುನಃಪ್ರತಿಷ್ಟೆ ಸಮಸ್ತ ಊರಿಗೆ ಸಂಬಂಧಿಸಿದ್ದು. ಊರವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಉಳ್ಳಾಲ್ತಿ ಅಮ್ಮನವರ ಕೃಪೆಗೆ ಪಾತ್ರರಾಗುವಂತಾಗಬೇಕು ಎಂದರು. ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶ್ರೀ ಉಳ್ಳಾಲ್ತಿ ಅಮ್ಮನವರ ಮೂಲಸ್ಥಾನ ತೊಟ್ಟಿಲಕಯ ನಟ್ಟೋಜ ಕುಟುಂಬಸ್ಥರಿಗೆ ಸೇರಿದ ಜಾಗದಲ್ಲಿದ್ದರೂ ದೇವರು

ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀಣೋದ್ಧಾರ, ಪುನಃಪ್ರತಿಷ್ಟಾಪನೆ | ಬಪ್ಪಳಿಗೆಯ ಶ್ರೀಚಕ್ರ ನಿವಾಸದಲ್ಲಿ ಸಮಾಲೋಚನಾ ಸಭೆ, ಸಮಿತಿ ರಚನೆ Read More »

ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ಪರ ಭಾಗವಹಿಸದಂತೆ ಪ್ರತಿಷ್ಠಿತ ಕ್ಯಾಂಪ್ಕೋದಿಂದ ಸಿಬ್ಬಂದಿಗಳಿಗೆ ನೋಟೀಸ್ ಜ್ಯಾರಿ

ಪುತ್ತೂರು: ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಳ್ಳುವುದು ಅಥವಾ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದು ಅಥವಾ ಅವರೊಂದಿಗೆ ಸಂಬಂಧ ಇರಿಸಬಾರದು ಎಂದು ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆ ತನ್ನ ಸಿಬ್ಬಂದಿಗಳಿಗೆ ನೋಟೀಸ್ ಜ್ಯಾರಿ ಮಾಡಿದೆ. ನಿಯಮಗಳ ಪ್ರಕಾರ ಯಾವುದೇ ನೌಕರ ರಾಜಕೀಯ ಪಕ್ಷ ಅಥವಾ ರಾಜಕೀಯದಲ್ಲಿ ಸದಸ್ಯನಾಗಿರಬಾರದು ಹಾಗೂ ಪಕ್ಷದ ಚಟುವಟಿಕೆಗಳಿಗೆ ಸಹಾಯ ಮಾಡುವುದು, ಶಾಸಕಾಂಗದ ಸದಸ್ಯನಾಗಲು ಅನುಮತಿಯಿಲ್ಲದೆ ಚುನಾವಣೆಗೆ ನಿಲ್ಲುವ ಮತ್ತು ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರಬಾರದು. ಈ ನಿಯಮವನ್ನು ಎಲ್ಲಾ ಸಿಬ್ಬಂದಿಗಳು ಅನುಸರಿಸಲು

ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ ಪರ ಭಾಗವಹಿಸದಂತೆ ಪ್ರತಿಷ್ಠಿತ ಕ್ಯಾಂಪ್ಕೋದಿಂದ ಸಿಬ್ಬಂದಿಗಳಿಗೆ ನೋಟೀಸ್ ಜ್ಯಾರಿ Read More »

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಚಿಹ್ನೆ ಬ್ಯಾಟ್

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ  ಅರುಣ್ ಕುಮಾರ್ ಪುತ್ತಿಲ ತಮ್ಮ ಚುನಾವಣಾ ಚಿಹ್ನೆಯನ್ನು ಸೋಮವಾರ ಪ್ರಕಟಿಸಿದ್ದು, ಬ್ಯಾಟ್ ಚಿಹ್ನೆಯೆಂದು ಘೋಷಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲೇ ಉಳಿದಿದ್ದ ಅರುಣ್ ಕುಮಾರ್ ಪುತ್ತಿಲ ಯಾವ ಚಿಹ್ನೆ ಆಯ್ಕೆ ಮಾಡಲಿದ್ದಾರೆ ಎಂದು ಕುತೂಹಲವಿತ್ತು.  ಇದೀಗ ಬ್ಯಾಟ್‍ ಚಿಹ್ನೆ ಆಯ್ಕೆ ಮಾಡುವ ಮೂಲಕ ಬ್ಯಾಟ್ ಬೀಸಿ ಎದುರಾಳಿಯನ್ನು ಸೋಲಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ.

ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರ ಚಿಹ್ನೆ ಬ್ಯಾಟ್ Read More »

error: Content is protected !!
Scroll to Top