ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಧರ್ಮಸ್ಥಳ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆರಿಯಾ ಗ್ರಾಮದ ಸಿಯೊನ್ ಆಶ್ರಮದಲ್ಲಿ ಏ.23 ರಂದು ಸಂಭವಿಸಿದೆ.ಕಿಶೋರ್ ಕುಮಾರ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮಧ್ಯಾಹ್ನದ ಊಟಕ್ಕೆ ಬಾರದೇ ಇರುವುದನ್ನು ಗಮನಿಸಿ ಆಶ್ರಮದ ಸಿಬ್ಬಂಧಿ ಜಿಬಿನ್ ಎಂಬವರು ಹೋಗಿ ನೋಡಿದಾಗ, ಹಾಲ್‌ನ ಪ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ

ಪುತ್ತೂರು: ಕಾಣಿಯೂರು, ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ಮಧ್ಯಾಹ್ನ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಇದ್ದಕ್ಕಿದ್ದಂತೆ ಜೋರಾಗಿ ಸುರಿದ ಮಳೆಯಿಂದಾಗಿ, ವಾತಾವರಣ ತಂಪಾಗಿದೆ. ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ಕಾಣಿಯೂರು, ಸುಬ್ರಹ್ಮಣ್ಯ ಭಾಗದ ಜನರಿಗೆ ಮಳೆ ತಂಪೆರೆದಿದೆ.

ವಿವಿಧೆಡೆ ಗುಡುಗು ಸಹಿತ ಭಾರೀ ಮಳೆ Read More »

ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿಯೇ ಗೆಲುವಿಗೆ ಕಾರಣವಾಗಲಿದೆ | ಒಳಮೊಗ್ರು ಪರ್ಪುಂಜದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಶಾ ತಿಮ್ಮಪ್ಪ

ಪುತ್ತೂರು: ಹಿಂದುತ್ವ, ರಾಷ್ಟ್ರೀಯತೆ, ಅಭಿವೃದ್ಧಿಯನ್ನೇ ಗುರಿಯಾಗಿಟ್ಟುಕೊಂಡು ಬಿಜೆಪಿ ಸರಕಾರ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಆಡಳಿತ ನಡೆಸಿದೆ. ಎಲ್ಲೂ ಒಂದು ವರ್ಗ, ಜಾತಿ ಎಂಬ ಬೇಧವನ್ನು ಮಾಡಿಲ್ಲ. ಆದ್ದರಿಂದ ಈ ಬಾರಿ ಮತ್ತೊಮ್ಮೆ ಬಿಜೆಪಿ ಸರಕಾರ ಅಧಿಕಾರಕ್ಕೆ ಏರಲಿದೆ ಎಂದು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು. ಒಳಮೊಗ್ರು ಪರ್ಪುಂಜ ಬಾರಿಕೆ ನಿವಾಸಿ ನಾರಾಯಣ ಶೆಟ್ಟಿ ಅವರ ಮನೆಯಲ್ಲಿ ನಡೆದ ಒಳಮೊಗ್ರು ಶಕ್ತಿ ಕೇಂದ್ರ ಬಿಜೆಪಿ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದಲ್ಲಿ ಅತಿ

ರಾಷ್ಟ್ರೀಯತೆ, ಹಿಂದುತ್ವ, ಅಭಿವೃದ್ಧಿಯೇ ಗೆಲುವಿಗೆ ಕಾರಣವಾಗಲಿದೆ | ಒಳಮೊಗ್ರು ಪರ್ಪುಂಜದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಶಾ ತಿಮ್ಮಪ್ಪ Read More »

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಂಜನಾಗೆ  97.33 ಶೇ.

ಪುತ್ತೂರು: 2022-23ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ ಸಂಜನಾ ಕೆ ಶೇಕಡ 97.33 (584) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಪುತ್ತೂರು ಕೆಎಸ್ ಆರ್‍ ಟಿಸಿ ಉದ್ಯೋಗಿ ಕೃಷ್ಣಪ್ಪ ಕೆ, ಹಾಗೂ ಕ್ಯಾಂಪ್ಕೋ ಡೆಪ್ಯೂಟಿ ಮ್ಯಾನೇಜರ್ ಉಷಾ ದಂಪತಿ ಪುತ್ರಿ ಸಂತ ಫಿಲೋಮಿನ ಕಾಲೇಜಿನ ವಿದ್ಯಾರ್ಥಿನಿ

ಪಿಯುಸಿ ವಿಜ್ಞಾನ ವಿಭಾಗದಲ್ಲಿ ಸಂಜನಾಗೆ  97.33 ಶೇ. Read More »

ಕೃಷ್ಣನಗರ ಗೇರು ಸಂಸ್ಕರಣಾ ಘಟಕಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ | ಮತಯಾಚನೆ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪುತ್ತೂರಿನ ಕೃಷ್ಣನಗರದಲ್ಲಿರುವ ಗೇರು ಸಂಸ್ಕರಣಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿದರು. ಭೇಟಿ ನೀಡಿದ ಅವರು ಸಭೆ ನಡೆಸಿ ಅಲ್ಲಿನ ಸಿಬ್ಬಂದಿಗಳೊಂದಿಗೆ ಮಾತನಾಡಿ ಮತ ಯಾಚಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೃಷ್ಣನಗರ ಗೇರು ಸಂಸ್ಕರಣಾ ಘಟಕಕ್ಕೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಭೇಟಿ | ಮತಯಾಚನೆ Read More »

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು

ಸುಳ್ಯ : ಬೆಂಗಳೂರಿನಲ್ಲಿ ನಡೆದ ಕಾರು ಬೈಕ್‌ ಡಿಕ್ಕಿ ಅಪಘಾತದಲ್ಲಿ ಕೊಲ್ಲಮೊಗ್ರ ನಿವಾಸಿಯೋರ್ವರು ಸಾವನಪ್ಪಿರುವ ಘಟನೆ ಏ.25 ರಂದು ಸಂಭವಿಸಿದೆ. ಕೊಲ್ಲಮೊಗ್ರ ಧರ್ಮಪಾಲ ಗೌಡ ಬಾಳೆಬೈಲು ಮತ್ತು ವಿಮಲಾಕ್ಷಿ ದಂಪತಿಯ ಪುತ್ರ ಯತೀಶ್ ಬಾಳೆಬೈಲು(30) ಮೃತಪಟ್ಟವರು. ಸೋಮವಾರ ಬೆಳಗ್ಗೆ ಯತೀಶ್ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಯತೀಶ್ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅವಿವಾಹಿತರಾಗಿರುವ ಯತೀಶ್ ಬೆಂಗಳೂರಿನ ವಿಮಾನ ನಿಲ್ದಾಣ ಬಳಿ ಉದ್ಯೋಗದಲ್ಲಿದ್ದರು. ಮೃತರು

ಕಾರು ಬೈಕ್‌ ಡಿಕ್ಕಿ : ಅಪಘಾತದಲ್ಲಿ ಸುಳ್ಯದ ಯುವಕ ಸಾವು Read More »

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ

ಪುತ್ತೂರು : ಕಾಂಗ್ರೆಸ್ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದೀಗ ಸುಳ್ಯಕ್ಕೆ ಆಗಮಿಸಿದ್ದಾರೆ. ಸುಳ್ಯ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದಾರೆ. ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸುಳ್ಯದ ಹೆಲಿಪ್ಯಾಡ್ ಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಸಮಾವೇಶ ನಡೆಯಲಿರುವ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಸಭಾಂಗಣದ ಬಳಿ ಆಗಮಿಸಿ ಸಭೆಯಲ್ಲಿ ಭಾಗವಹಿಸಿ, ಪಾಲ್ಗೊಂಡಿದ್ದಾರೆ‌. ಸುಳ್ಯಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ನಾಯಕರು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳ್ಯಕ್ಕೆ ಭೇಟಿ Read More »

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ವಿಚಾರಣೆ ಮೇ 9 ಕ್ಕೆ ಮುಂದೂಡಿದೆ

ದೆಹಲಿ : ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಪಡಿಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರವನ್ನು ಸುಪ್ರೀಂಕೋರ್ಟ್ ಮೇ 9 ಕ್ಕೆ ಮುಂದೂಡಿದೆ. ಇದರಿಂದ ಬಸವರಾಜ ಬೊಮ್ಮಾಯಿ ಅವರ ಸಂಪುಟದ ನಿರ್ಧಾರ ಜಾರಿಗೆ ಬಿದ್ದಿರುವ ಅಂಕುಶ ಮುಂದುವರೆದಿದೆ. ಮುಸ್ಲಿಮರಿಗೆ ಒಬಿಸಿ ವರ್ಗದಲ್ಲಿ ನೀಡಲಾಗುತ್ತಿದ್ದ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಂಗಳವಾರ ಮುಂದುವರೆಸಿತು. ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ದ್ವಿಸದಸ್ಯ ಪೀಠಕ್ಕೆ

ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ವಿಚಾರಣೆ ಮೇ 9 ಕ್ಕೆ ಮುಂದೂಡಿದೆ Read More »

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ

ತೃಶೂರ್ : ಎಂಟು ವರ್ಷದ ಬಾಲಕಿ ಮೊಬೈಲ್ ಫೋನ್ ಸ್ಫೋಟಗೊಂಡು ಮೃತಪಟ್ಟಿರುವ ದಾರುಣ ಘಟನೆ ಕೇರಳದಲ್ಲಿ ಸಂಭವಿಸಿದೆ. ಮೂರನೇ ತರಗತಿ ಬಾಲಕಿ ಆದಿತ್ಯಶ್ರೀ ರಾತ್ರಿ ತಾಯಿಯ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಅದು ಸ್ಫೋಟಗೊಂಡಿದೆ. ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಸುಟ್ಟ ಗಾಯವಾಗಿದ್ದ ಬಾಲಕಿಯನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯಿದರೂ ಪ್ರಯೋಜನವಾಗಲಿಲ್ಲ. ತಶೂರು ಸಮೀಪದ ತಿರುವಿಲಾಮಲದ ಪಟ್ಟಿಪರಂಬು ಎಂಬಲ್ಲಿ ಈ ಘಟನೆ ಸಂಭವಿಸಿದೆ. ವಿಧಿವಿಜ್ಞಾನ ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಗೇಮ್ ಆಡುತ್ತಿದ್ದಾಗ ಮೊಬೈಲ್ ಸ್ಪೋಟ Read More »

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ

ಬೆದರಿಕೆಯೊಡ್ಡಿದವನನ್ನು ಗುರುತಿಸಿದ ಪೊಲೀಸರು ಲಖನೌ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಮತ್ತೆ ಜೀವ ಬೆದರಿಕೆ ಕರೆ ಬಂದಿದೆ. 112 ಟೋಲ್‌ಫ್ರೀ ನಂಬರ್‌ನಿಂದ ಕರೆ ಮಾಡಿ ಬೆದರಿಕೆವೊಡ್ಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ಪಡೆ ರಂಗಕ್ಕಿಳಿದಿದ್ದು, ಕರೆ ಮಾಡಿದ ವ್ಯಕ್ತಿಯನ್ನು ರಿಹಾನ್‌ ಎಂದು ಗುರುತಿಸಿದೆ. ಅವನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈತ ಕರೆ ಮಾಡಿದ್ದಲ್ಲದೆ ಸೋಷಿಯಲ್‌ ಮೀಡಿಯಾದಲ್ಲಿ ಮೆಸೇಜ್‌ ಕೂಡ ಹಾಕಿದ್ದ. ಆತನ ಡಿಪಿಯಲ್ಲಿ ಅಲ್ಲಾವು ಎಂದು ಬರೆದಿರುವ ಫೊಟೊ ಇದೆ.

ಉ. ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಮತ್ತೆ ಜೀವ ಬೆದರಿಕೆ ಕರೆ Read More »

error: Content is protected !!
Scroll to Top