ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ

ಬೀಡಿ, ಸಿಗರೇಟ್, ಪಾನ್ ಮಸಾಲ ಪತ್ತೆ ಮಂಗಳೂರು : ಅಕ್ರಮ ಚಟುವಟಿಕೆ ಮಾಹಿತಿ ಹಿನ್ನೆಲೆ ಮಂಗಳೂರು ನಗರದ ಕೊಡಿಯಾಲಬೈಲ್​​ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರು ಎ. 2 ರಂದು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ತಪಾಸಣೆ ವೇಳೆ ಬೀಡಿ, ಸಿಗರೇಟ್​​, ಪಾನ್​​ ಮಸಾಲ, ಗುಟ್ಕಾ ಪತ್ತೆಯಾಗಿದೆ. ಜಿಲ್ಲಾ ಕಾರಾಗೃಹಕ್ಕೆ ದಿಢೀರ್ ದಾಳಿ ನಡೆಸಿದ ಸುಮಾರು 300 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸತತ 1 ಗಂಟೆ 15 ನಿಮಿಷಗಳ ಕಾಲ ಕಾರಾಗೃಹ ತಪಾಸಣೆ ನಡೆಸಿದ್ದಾರೆ. […]

ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ Read More »

ಏ.4 ರಿಂದ 6 : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ವರ್ಷಾವಧಿ ಜಾತ್ರೋತ್ಸವಏ.ಮಾ.4 ರಿಂದ 6 : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ವರ್ಷಾವಧಿ ಜಾತ್ರೋತ್ಸವ

ಪುತ್ತೂರು: ಹನುಮಗಿರಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೋತ್ಸವ ಏ.4 ರಿಂದ 6 ರ ತನಕ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಏ.4 ರಂದು ಮಧ್ಯಾಹ್ನ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಉಗ್ರಾಣ ತುಂಬಿಸುವುದು, ರಾತ್ರಿ ಸಹಸ್ರ ದೀಪಾಲಂಕಾರ ಸಹಿತ ರಂಗಪೂಜೆ, ಪವಮಾನ ರಥೋತ್ಸವ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಏ.5 ರಂದು ಬೆಳಿಗ್ಗೆ ನಾಗತಂಬಿಲ, ಗಣಪತಿ ಹೋಮ, ಮಧ್ಯಾಹ್ನ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಸಂಜೆ

ಏ.4 ರಿಂದ 6 : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ವರ್ಷಾವಧಿ ಜಾತ್ರೋತ್ಸವಏ.ಮಾ.4 ರಿಂದ 6 : ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ವರ್ಷಾವಧಿ ಜಾತ್ರೋತ್ಸವ Read More »

ಫೆಬ್ರವರಿ ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್‌

ಸೇವಾ ಷರತ್ತುಗಳ ಉಲ್ಲಂಘನೆಯನ್ನು ಆಧರಿಸಿ ಈ ಕ್ರಮ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್​ಆ್ಯಪ್ ಫೆಬ್ರವರಿ ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. 2021 ಬಳಕೆದಾರರ ಸುರಕ್ಷತ ಕಾಯಿದೆ 4(1)(D) ಅಡಿಯಲ್ಲಿ ವಾಟ್ಸ್​ಆ್ಯಪ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಫೆಬ್ರವರಿ 1ರಿಂದ 28ರ ಅವಧಿಯಲ್ಲಿ ಅನೇಕ ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್​ಆ್ಯಪ್​ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 4,597,400 ವಾಟ್ಸ್​ಆ್ಯಪ್​ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು

ಫೆಬ್ರವರಿ ತಿಂಗಳಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರ ವಾಟ್ಸ್​ಆ್ಯಪ್ ಖಾತೆ ಬ್ಯಾನ್‌ Read More »

ನಾಳೆ (ಮಾ.3) : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ | ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಏ.3 ರಂದು ವಿವಿಧ ವೈದಿಕ ಕಾರ್ಯಕ್ರ ಮಗಳೊಂದಿಗೆ ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಹೊರೆಕಾಣಿಕೆ ಸಮರ್ಪಣೆ ಭಾನುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಶಾಂತಿಗೋಡು ವಿಷ್ಣುಮೂರ್ತಿ ಭಜನಾ ಮಂದಿರದಿಂದ ಭಕ್ತಾದಿಗಳು ಸಮರ್ಪಿಸಿದ ಹೊರೆಕಾಣಿಕೆ ಮೆರವಣಿಗೆ ಸಾಗಿ ಶ್ರೀ ದೇವಸ್ಥಾನದಲ ಉಗ್ರಾಣದಲ್ಲಿ ಜಮಾವಣೆಗೊಂಡಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.

ನಾಳೆ (ಮಾ.3) : ಶಾಂತಿಗೋಡು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವ | ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ Read More »

ಜೈಲು ಶಿಕ್ಷೆ ವಿರುದ್ಧ ನಾಳೆ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ಮೇಲ್ಮನವಿ

ಶಿಕ್ಷೆ ರದ್ದುಪಡಿಸುವಂತೆ ಕೋರಿಕೆ ದೆಹಲಿ : ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸಂಸತ್ತಿನಿಂದ ಅನರ್ಹಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಅಪರಾಧ ಮತ್ತು ಶಿಕ್ಷೆಯ ವಿರುದ್ಧ ಸೋಮವಾರ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆ ವಿಧಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಅವರು ತಮ್ಮ ಅರ್ಜಿಯಲ್ಲಿ ಸೆಷನ್ಸ್ ನ್ಯಾಯಾಲಯವನ್ನು ಕೋಡಲಿದ್ದಾರೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯ ನೀಡಿರುವ ಶಿಕ್ಷೆಗೆ

ಜೈಲು ಶಿಕ್ಷೆ ವಿರುದ್ಧ ನಾಳೆ ಸೂರತ್ ಸೆಷನ್ಸ್ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ಮೇಲ್ಮನವಿ Read More »

66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಚೋರನ ಬಂಧನ

ಅತಿದೊಡ್ಡ ಅಂತರ್‌ಜಾಲ ಮಾಹಿತಿ ಕಳ್ಳತನ ಪ್ರಕರಣ ಹೈದರಾಬಾದ್ : 66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಸೈಬರ್‌ ಚೋರನೊಬ್ಬನನ್ನು ಹೈದರಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ನ 56 ಲಕ್ಷ ಜನರು ಸೇರಿ ಎಂಟು ಮೆಟ್ರೋ ನಗರಗಳು, 24 ರಾಜ್ಯಗಳ 44 ವಿಭಾಗಗಳಲ್ಲಿ ಜನರ ಮಾಹಿತಿಯನ್ನು ಕಳ್ಳತನ ಮಾಡಿರುವ ದೇಶದ ಅತಿ ದೊಡ್ಡ ಡೇಟಾ ಕಳವು ಪ್ರಕರಣ ಇದು ಎಂದು ಸೈಬರಾಬಾದ್ ಪೊಲೀಸರು ಹೇಳಿದ್ದಾರೆ. ಒಟ್ಟಾರೆ 66.9 ಕೋಟಿ ಜನರ ಮತ್ತು ಖಾಸಗಿ ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ

66.9 ಕೋಟಿ ಭಾರತೀಯರ ಡೇಟಾ ಕದ್ದಿದ್ದ ಖತರ್‌ನಾಕ್‌ ಚೋರನ ಬಂಧನ Read More »

ಮಾಜಿ ಆಲ್‌ರೌಂಡರ್, ಅರ್ಜುನ ಪ್ರಶಸ್ತಿ ವಿಜೇತ ಮೊದಲ ಭಾರತೀಯ ಕ್ರಿಕೆಟಿಗ ನಿಧನ

ದೆಹಲಿ : ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಕ್ರಿಕೆಟಿಗ, ಭಾರತದ ಮಾಜಿ ಆಲ್‌ರೌಂಡರ್ ಸಲೀಂ ದುರಾನಿ (88) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಜನವರಿಯಲ್ಲಿ ನೆಲಕ್ಕೆ ಬಿದ್ದಿದ್ದು, ಪರಿಣಾಮವಾಗಿ ಅವರ ತೊಡೆಯ ಮೂಳೆ ಮುರಿತಗೊಂಡಿದ್ದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ಕ್ಯಾನ್ಸರ್‌ನಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ಆಕ್ರಮಣಕಾರಿ ಎಡಗೈ ಬ್ಯಾಟ್ಸ್‌ಮನ್, ದುರಾನಿ ಭಾರತಕ್ಕಾಗಿ 29 ಟೆಸ್ಟ್‌ಗಳಲ್ಲಿ 1202 ರನ್ ಗಳಿಸಿದ್ದು, 75 ವಿಕೆಟ್‌ಗಳನ್ನು ಪಡೆದಿದ್ದರು.ಸಲೀಂ

ಮಾಜಿ ಆಲ್‌ರೌಂಡರ್, ಅರ್ಜುನ ಪ್ರಶಸ್ತಿ ವಿಜೇತ ಮೊದಲ ಭಾರತೀಯ ಕ್ರಿಕೆಟಿಗ ನಿಧನ Read More »

ಆಯಿಲ್‌ ಫಿಲ್ಲಿಂಗ್ ವೇಳೆ ಪೈಪ್ ಸ್ಪೋಟ : ನಾಲ್ವರಿಗೆ ಗಾಯ

ಮಂಗಳೂರು : ಬಿಟುಮೆನ್ ಆಯಿಲ್ ಫಿಲ್ಲಿಂಗ್ ವೇಳೆ ಪೈಪ್‌ ಸ್ಪೋಟಗೊಂಡು ನಾಲ್ವರು ಕಾರ್ಮಿಕರು ಗಾಯಗೊಂಡ ಘಟನೆ ಮಂಗಳೂರಿನಿಂದ ವರದಿಯಾಗಿದೆ. ಮಂಗಳೂರಿನ ನವಬಂದರಿನಲ್ಲಿ ನಡೆದ ಈ ದುರಂತ ಹಡಗಿನಿಂದ ನೇರವಾಗಿ ಟ್ಯಾಂಕರ್‌ಗೆ ಬಿಟುಮೆನ್ ಆಯಿಲ್ ವರ್ಗಾಯಿಸುವಾಗ ಸಂಭವಿಸಿದೆ. ಆದರೆ ಶಿಪ್‌ನಲ್ಲಿ ಬಂದ ಬಿಟುಮೆನ್ ಆಯಿಲ್ ಅನ್ನು ಟ್ಯಾಂಕಿಗೆ ಮೊದಲು ವರ್ಗಾಯಿಸುವುದು ನಿಯಮ. ಆಯಿಲ್‌ ಅನ್ನು ಟ್ಯಾಂಕರ್‌ಗೆ ವರ್ಗಾಯಿಸುವ ವೇಳೆ ಪೈಪ್ ಸ್ಪೋಟಗೊಂಡು ಆಯಿಲ್ ಕಾರ್ಮಿಕರ ಮೈ ಮೇಲೆ ಬಿದ್ದಿದ್ದು ತಕ್ಷಣವೇ ಅವರನ್ನು ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರಲ್ಲಿ

ಆಯಿಲ್‌ ಫಿಲ್ಲಿಂಗ್ ವೇಳೆ ಪೈಪ್ ಸ್ಪೋಟ : ನಾಲ್ವರಿಗೆ ಗಾಯ Read More »

ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆಯೇ ಚುನಾವಣಾ ಗೆಲುವಿಗಾಗಿ ಸ್ಪರ್ಧೆ

ಗಾದಿ ತೋರಿಸಿ ಆಸೆ ಜೀವಂತವಾಗಿರಿಸಿ ಗೆಲ್ಲುವ ತಂತ್ರ ಪುತ್ತೂರು : ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸು ಪಡೆದುಕೊಂಡಿವೆ. ಮೂರು ಪ್ರಮುಖ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಆದರೆ ಚುನಾವಣಾ ಪ್ರಕ್ರಿಯೆ ನಿರ್ಣಾಯಕ ಹಂತಕ್ಕೆ ಬಂದು ತಲುಪಿದ್ದರೂ ಮತದಾರರಿಗೆ ಈ ಸಲ ಮುಖ್ಯಮಂತ್ರಿ ಯಾರಾಗಬಹುದು ಎಂಬ ಒಂದು ಸಣ್ಣ ಅಂದಾಜು ಕೂಡ ಸಿಗುತ್ತಿಲ್ಲ. ಪಕ್ಷಗಳಲ್ಲೇ ಯಾರನ್ನು ಮುಖ್ಯಮಂತ್ರಿ ಮಾಡಬೇಕೆಂಬ ನಿರ್ಧಾರ ಇನ್ನೂ ಆಗಿಲ್ಲ. ಜೆಡಿಎಸ್‌ನಲ್ಲಿ ಮಾತ್ರ ಈ ಗೊಂದಲ ಇಲ್ಲ. ಏಕೆಂದರೆ

ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆಯೇ ಚುನಾವಣಾ ಗೆಲುವಿಗಾಗಿ ಸ್ಪರ್ಧೆ Read More »

ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಕರನ್ನು ಹತ್ಯೆ ಮಾಡಿದ್ದ ರೌಡಿಯ ಎನ್‌ಕೌಂಟರ್‌

3 ವರ್ಷದ ಬಳಿಕ ಪೊಲೀಸರಿಗೆ ಸಿಕ್ಕಿದ ಕುಖ್ಯಾತ ಪಾತಕಿ ಲಖನೌ : ಮೂರು ವರ್ಷದ ಹಿಂದೆ ಕ್ರಿಕೆಟಿಗ ಸುರೇಶ್ ರೈನಾ ಅವರ ಮೂವರು ಸಂಬಂಧಿಕರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಕುಖ್ಯಾತ ಕ್ರಿಮಿನಲ್‌ನನ್ನು ಮುಜಾಫರ್‌ನಗರದ ಶಾಹಪುರ್ ಪ್ರದೇಶದಲ್ಲಿ ಎನ್‌ಕೌಂಟರ್‌ನಲ್ಲಿ ಪೊಲೀಸರು ಹೊಡೆದುರುಳಿಸಿದ್ದಾರೆ. ತ್ರಿವಳಿ ಕೊಲೆ ಸೇರಿದಂತೆ ಹತ್ತಾರು ಡಕಾಯಿತಿ ಮತ್ತು ಕೊಲೆ ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿ ರಶೀದ್ ಅಲಿಯಾಸ್ ಚಲ್ತಾ ಫಿರ್ತಾ ಅಲಿಯಾಸ್ ಸಿಪಾಹಿಯಾ ತಲೆಗೆ 50 ಸಾವಿರ ರೂ.ಬಹುಮಾನ ಘೋಷಿಸಲಾಗಿತ್ತು. ನಿನ್ನೆ ರಾತ್ರಿ ಆತ ಪೊಲೀಸರ ಗುಂಡಿಗೆ

ಕ್ರಿಕೆಟಿಗ ಸುರೇಶ್ ರೈನಾ ಸಂಬಂಧಿಕರನ್ನು ಹತ್ಯೆ ಮಾಡಿದ್ದ ರೌಡಿಯ ಎನ್‌ಕೌಂಟರ್‌ Read More »

error: Content is protected !!
Scroll to Top