ಜೂನ್ 11-13: ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ, ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪುತ್ತೂರು: ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಜೂನ್ 11ರಿಂದ 13ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಜೂನ್ 11ರಂದು ಬೆಳಿಗ್ಗೆ 10.30ಕ್ಕೆ ಹೊರೆಕಾಣಿಕೆ ಸಂಗ್ರಹ, ಸಂಜೆ 4.30ಕ್ಕೆ ಕಾಣಿಯೂರು ಶ್ರೀ ಅಮ್ಮನವರ ದೇವಸ್ಥಾನದಿಂದ ಶ್ರೀ ವಿಷ್ಣುಮೂರ್ತಿ ದೈವದ ಬೆಳ್ಳಿಯ ಮೊಗ ಮತ್ತು ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ 5ಕ್ಕೆ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 5.30ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, […]

ಜೂನ್ 11-13: ಪುಣ್ಚತ್ತಾರು ಶ್ರೀ ವಿಷ್ಣುಮೂರ್ತಿ, ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ Read More »

ನೆಟ್ಟಣ: ಗಾಳಿ ಮಳೆಗೆ ಎರಡು ಕಾರುಗಳ ಮೇಲೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ

ನೆಟ್ಟಣ: ಸೋಮವಾರ ರಾತ್ರಿ ಸುರಿದ ಗುಡುಗು ಸಹಿತ ಗಾಳಿ ಮಳೆಗೆ ಕಡಬ ತಾಲೂಕಿನ ನೆಟ್ಟಣದಲ್ಲಿ ಹೆದ್ದಾರಿ ಬದಿಯಲ್ಲಿದ್ದ ಮರಗಳು ಎರಡು ಕಾರುಗಳ ಮೇಲೆ ಬಿದ್ದ ಪರಿಣಾಮ ಕಾರುಗಳು ಜಖಂಗೊಂಡಿದ್ದು,ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡ ಬಗ್ಗೆ ವರದಿಯಾಗಿದೆ. ಕಡಬದ ನೆಟ್ಟಣದ ಕೇಂದ್ರೀಯ ನಾಟಾ ಸಂಗ್ರಹ ಘಟಕದ ಬಳಿ ಈ ಘಟನೆ ಸಂಭವಿಸಿದೆ. ಭಾರೀ ಗಾಳಿಗೆ ಹೆದ್ದಾರಿ ಬದಿಯ ದೂಪದ ಹಲವು ಮರಗಳು ರಸ್ತೆಗೆ ಬಿದ್ದಿವೆ. ಈ ವೇಳೆ ಸಂಚರಿಸುತ್ತಿದ್ದ ನ್ಯಾನೋ ಹಾಗೂ ಆಮ್ನಿ ಕಾರುಗಳ ಮೇಲೆ ಮರ ಬಿದ್ದಿದೆ.

ನೆಟ್ಟಣ: ಗಾಳಿ ಮಳೆಗೆ ಎರಡು ಕಾರುಗಳ ಮೇಲೆ ಬಿದ್ದ ಮರ, ಸಂಚಾರ ಅಸ್ತವ್ಯಸ್ತ Read More »

ಸವಿತಾ ಸೌಹಾರ್ದ ಸಹಕಾರಿ ನಿ. ಹಾಗೂ ಸೌಂದರ್ಯ ವರ್ಧಕ ಮಾರಾಟ ಮಳಿಗೆ ಶುಭಾರಂಭ

ಪುತ್ತೂರು: ಬಿ.ಸಿ.ರೋಡ್ ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಮೂರನೇ ಶಾಖೆ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಪುತ್ತೂರಿನ ಶಿವ ಆರ್ಕೇಡ್ ನ ಒಂದನೇ ಮಹಡಿಯಲ್ಲಿ ಮಂಗಳವಾರ ಶುಭಾರಂಭಗೊಂಡಿತು. ಪುತ್ತೂರು ಸರಸ್ವತಿ ಕ್ರಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಸಹಕಾರಿ ಕ್ಷೇತ್ರದ ಕಾಶಿ ಪುತ್ತೂರು. ಸಹಕಾರಿ ಕ್ಷೇತ್ರ ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಸಹಕಾರಿ ಕ್ಷೇತ್ರ ತನ್ನದೇ ಆದ ಛಾಪು

ಸವಿತಾ ಸೌಹಾರ್ದ ಸಹಕಾರಿ ನಿ. ಹಾಗೂ ಸೌಂದರ್ಯ ವರ್ಧಕ ಮಾರಾಟ ಮಳಿಗೆ ಶುಭಾರಂಭ Read More »

9 ವರ್ಷ ಪೂರೈಸಿದ ಕೇಂದ್ರ ಸರಕಾರ: ಜನತೆಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ

ಹೊಸದಿಲ್ಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 30ಕ್ಕೆ 9 ವರ್ಷಗಳನ್ನು ಪೂರೈಸಿದೆ. ಕೇಂದ್ರದ ಬಿಜೆಪಿ ಸರ್ಕಾರದ 9ನೇ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕೃತಜ್ಞತೆ ತಿಳಿಸಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ. ರಾಷ್ಟ್ರದ ಸೇವೆಯಲ್ಲಿ 9 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ನಾನು ನಮ್ರತೆ ಮತ್ತು ಕೃತಜ್ಞತೆಯಿಂದ ತುಂಬಿದ್ದೇನೆ. ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ, ಕೈಗೊಂಡ ಪ್ರತಿಯೊಂದು ನಿರ್ಧಾರ ಜನರ ಜೀವನವನ್ನು ಸುಧಾರಿಸುವ ಬಯಕೆಯಿಂದ ಕೂಡಿದೆ.

9 ವರ್ಷ ಪೂರೈಸಿದ ಕೇಂದ್ರ ಸರಕಾರ: ಜನತೆಗೆ ಕೃತಜ್ಞತೆ ಸಲ್ಲಿಸಿದ ನರೇಂದ್ರ ಮೋದಿ Read More »

ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ

ಪುತ್ತೂರು: ಸೂಕ್ತ ಆಯ್ಕೆ ಹಾಗೂ ನಿರಂತರ ಪರಿಶ್ರಮ ಯಶಸ್ಸಿಗೆ ದಾರಿ ಎಂದು ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಣೇಶ್ ಕುಲಾಲ್ ಮಾಣಿಲ ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ 13 ವಿದ್ಯಾರ್ಥಿಗಳಿಗೆ  ತಲಾ 2000  ರೂ ನಗದು ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದ ಇವರು ತನ್ನ ಭರವಸೆಯಂತೆ ಡಿಸ್ಟಿಂಕ್ಷನ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಗದು

ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ Read More »

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರು‌ ಆಸ್ಪತ್ರೆಯಿಂದ ಡಿಸ್ಚಾರ್ಜ್

ಪುತ್ತೂರು: ಬ್ಯಾನರ್ ವಿಚಾರದಲ್ಲಿ‌ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಯುವಕರು ಸೋಮವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಇದೇ ಸಂದರ್ಭ ಹರ್ಷ ವ್ಯಕ್ತಪಡಿಸಿದ ಪುರುಷರಕಟ್ಟೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನು, ಹಲವು ಮುಖಂಡರು ಬಂದು ಆರೋಗ್ಉ ವಿಚಾರಿಸಿದ್ದರು.

ಪೊಲೀಸ್ ದೌರ್ಜನ್ಯಕ್ಕೊಳಗಾದ ಯುವಕರು‌ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಬನ್ನೂರು: ಹಾಡಹಗಲೇ ಮನೆಯಿಂದ ಕಳ್ಳತನ

ಪುತ್ತೂರು: ಸೋಮವಾರ ಹಾಡಹಗಲೇ ಮನೆಯಿಂದ ಕಳ್ಳತನ ನಡೆಸಿರುವ ಘಟನೆ ಬನ್ನೂರಿನಲ್ಲಿ ನಡೆದಿದೆ. ಬನ್ನೂರು ಕುಂಟ್ಯಾನ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮೌನಿಶ್‌ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಸೋಮವಾರ ಮಧ್ಯಾಹ್ನ 12 ಗಂಟೆಗೆ ಮನೆಯವರು ಬಂದಾಗ ಮನೆ ಹಿಂಭಾಗ ಬೀಗ ಮುರಿದು ಕಳ್ಳರು ಒಳಹೊಕ್ಕು ಕಳ್ಳತನ ಮಾಡಿರುವುದು ಗಮನಕ್ಕೆ ಬಂದಿದೆ. ಮನೆಯ ವಸ್ತುಗಳೆಲ್ಲಾ ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು ಪೊಲೀಸರಿಗೆ ದೂರು ನೀಡಲಾಗಿದೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಘಟನಾ ಸ್ಥಳಕ್ಕೆ ಆಗಮಿಸಿದ್ದು

ಬನ್ನೂರು: ಹಾಡಹಗಲೇ ಮನೆಯಿಂದ ಕಳ್ಳತನ Read More »

ನಾಳೆ (ಮೇ 30): ಪುತ್ತೂರಿನಲ್ಲಿ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ

ಪುತ್ತೂರು: ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ಕಳೆದ 11 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ದಕ್ಷ ಆಡಳಿತ ಮಂಡಳಿ  ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ಪ್ರಾಮಾಣಿಕವಾಗಿ ವ್ಯವಹಾರ ನಡೆಸಿ ಗ್ರಾಹಕ ವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ. 2022ರಲ್ಲಿ ದಶಮಾನೋತ್ಸವ ಸಂಭ್ರಮದಲ್ಲಿದ್ದ ಸಂದರ್ಭ ಸಂಭ್ರಮದ ನೆನಪಿಗಾಗಿ ಮಂಗಳೂರಿನ ಕೇಂದ್ರ ಭಾಗದಲ್ಲಿ ತನ್ನ ಶಾಖೆಯನ್ನು ತೆರೆಯುವುದರ ಜತೆಗೆ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆಯನ್ನೂ ಆರಂಭಿಸಿದೆ. ಸವಿತಾ’ಸ್ ಬ್ಯೂಟಿ ಕಾರ್ನರ್ ಎಂಬ ಹೆಸರಿನಲ್ಲಿ ಸಹಕಾರಿ ತತ್ವದಡಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು

ನಾಳೆ (ಮೇ 30): ಪುತ್ತೂರಿನಲ್ಲಿ ಸವಿತಾ ಸೌಹಾರ್ದ ಸಹಕಾರಿ ನಿಯಮಿತ ಹಾಗೂ ಸೌಂದರ್ಯ ವರ್ಧಕ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ Read More »

ಧರ್ಮಸ್ಥಳದ ಜನಮಂಗಳ ಯೋಜನೆಯಡಿ ವೀಲ್ ಚೇರ್ ಕೊಡುಗೆ

ಪುತ್ತೂರು: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿರುವ ಆರ್ಯಾಪು ಗ್ರಾಮದ ಕೋಟ್ಲಾರು ನಿವಾಸಿ ಚನಿಯಪ್ಪ ನಾಯ್ಕ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜನಮಂಗಳ ಕಾರ್ಯಕ್ರಮದಡಿ ವೀಲ್ ಚೇರ್ ನೀಡಲಾಯಿತು. ತಾಲೂಕು ಯೋಜನಾಧಿಕಾರಿ ಶಶಿಧರ್ ವೀಲ್ ಚೇರ್ ವಿತರಿಸಿದರು. ಸೇವಾಪ್ರತಿನಿಧಿ ಆಶಾಲತಾ, ಶೌರ್ಯ ಘಟಕದ ಬಲ್ನಾಡು ಪ್ರತಿನಿಧಿ ವಿನಯ ನಾಯ್ಕ ಮತ್ತು ಮನೆಯವರು ಉಪಸ್ಥಿತರಿದ್ದರು.

ಧರ್ಮಸ್ಥಳದ ಜನಮಂಗಳ ಯೋಜನೆಯಡಿ ವೀಲ್ ಚೇರ್ ಕೊಡುಗೆ Read More »

ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಅವರಿಗೆ ದುಬೈನಲ್ಲಿ ಅಭಿನಂದನೆ

ಸವಣೂರು: ಪೇಟೆ ಪಟ್ಟಣಗಳಲ್ಲಿ ಸಿಗುವ ಗುಣಮಟ್ಟದ ವಿದ್ಯಾಭ್ಯಾಸ ನಮ್ಮ ಸವಣೂರು ಗ್ರಾಮದಲ್ಲಿ ಸಿಗಬೇಕು. ಸವಣೂರು ಅಭಿವೃದ್ಧಿಯಾಗಬೇಕು, ನಮ್ಮೆಲ್ಲರಲ್ಲಿ ಒಗ್ಗಟ್ಟಿರಬೇಕು, ಜಾತ್ಯತೀತತೆ ಬೆಳೆಯಬೇಕು ಇದು ನನ್ನ ಧೈಯವಾಗಿತ್ತು ಎಂದು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ, ಸವಣೂರು ಸೀತಾರಾಮ ರೈ ಅವರು ದುಬೈಯಲ್ಲಿ ಹೇಳಿದರು. ದುಬೈ ನಗರದ ಐಬಿಸ್ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಮತ್ತು ಅಮೃತರಶ್ಮಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.  ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ನಿರ್ಮಾಣಕ್ಕೆ ಮೊದಲು ಸವಣೂರಿನಲ್ಲಿ ಹಿರಿಯ ಪ್ರಾಥಮಿಕ ಶಾಲೆ,

ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಅವರಿಗೆ ದುಬೈನಲ್ಲಿ ಅಭಿನಂದನೆ Read More »

error: Content is protected !!
Scroll to Top