ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿಯೊಬ್ಬರು ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಅವರ ಮೃತದೇಹ ಚಿಕ್ಕಮುಡ್ನೂರು ಗ್ರಾಮದ ಗುತ್ತಿಕಲ್ಸ್  ಎಂಬಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿಕ್ಕಮುಡ್ನೂರು ಗ್ರಾಮದ ಪುಳುವಾರು ನಿವಾಸಿ ಶಿವಪ್ಪ ಗೌಡ (45) ಎಂಬವರ ಮೃತದೇಹ ಪತ್ತೆಯಾಗಿದೆ. ಶಿವಪ್ಪ ಗೌಡ ಮಾ.`17 ರಂದು ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೊರ ಹೋಗಿದ್ದರು. ಬಳಿಕ ವಾಪಾಸು ಬಾರದೆ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ Read More »

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ

ಮಂಗಳೂರು : ನಗರದ ಖಾಸಗಿ ವೈದ್ಯಕೀಯ ಕಾಲೇಜಿನ ಹೆಸರಿನಲ್ಲಿ ಮೆಡಿಕಲ್‌ ಸೀಟು ಕೊಡಿಸುವುದಾಗಿ ಹೇಳಿ ಮೋಸ ಮಾಡಿದ್ದ ಪ್ರಕರಣದಲ್ಲಿ ನೋಯ್ಡಾ ಮೂಲದ ಆರೋಪಿಯನ್ನು ಮಹಾರಾಷ್ಟ್ರದ ಪೊಲೀಸರು ಮುಂಬೈನ ನೆರೋಲ್ ನಲ್ಲಿ ಏ. 2 ರಂದು ಬಂಧಿಸಿ ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.ಬಂಧಿತನನ್ನು ಇಫ್ತಿಕರ್ ಅಹ್ಮದ್ (31) ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೆಂದು ಗುರುತಿಸಲಾಗಿದೆ. ಬೀದರ್‌ ಮೂಲದ ವ್ಯಕ್ತಿಯೋರ್ವರು, ತಮ್ಮಿಂದ 22.5 ಲಕ್ಷ ರೂ. ಪಡೆದು ಖಾಸಗಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ದೊರಕಿಸುವುದಾಗಿ ನಂಬಿಸಿ ಇಫ್ತಿಕರ್ ಅಹ್ಮದ್ ಹಾಗೂ ಮತ್ತಿತರರು

ಮೆಡಿಕಲ್‌ ಸೀಟು ಕೊಡಿಸುವುದಾಗಿ ವಂಚಿಸಿದ ಆರೋಪಿಯ ಬಂಧನ Read More »

ಕಟ್ಟಿ ನೇಮೊಡು ಜೀವ ಪೊ೦ಡ ಅರ್ದಲ ದೆಪ್ಪರೆ ಇಜ್ಜಿ | ಪರತಿ ಮಾಂಗಣೆ ಪಾಡ್ದನದಲ್ಲೂ ಉಲ್ಲೇಖ

ಪುತ್ತೂರು: ದೈವಾರಾಧನೆ ಕಲೆಯಲ್ಲ ಬದುಕು, ಆರಾಧನಾ ಪ್ರಾಕಾರ. ಇಲ್ಲಿನ ಪ್ರತಿಯೊಂದು ಆಚರಣೆಗೂ ಒಂದೊಂದು ಹಿನ್ನೆಲೆ ಇದೆ. ದೈವಾರಾಧನೆಯ ನಡೆಯಲ್ಲೇ ದೈವ ನರ್ತಕ ಮೃತಪಟ್ಟರೆ, ಅದಕ್ಕೂ ಒಂದು ಕ್ರಮವಿದೆ. ದೈವಾರಾಧನೆ ನಡೆಯುತ್ತಿರುವಾಗಲೇ ದೈವ ನರ್ತಕ ಕುಸಿದು ಬಿದ್ದು ಮೃತಪಟ್ಟ ಘಟನೆ ಇತ್ತೀಚೆಗೆ ದೋಳ್ಪಾಡಿಯಲ್ಲಿ ನಡೆದಿತ್ತು. ಕೆಲ ವರ್ಷಗಳ ಹಿಂದೆ ಉಡುಪಿಯಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಅಲ್ಲಿ ಬೈದರ್ಕಳ ನೇಮೋತ್ಸವದಲ್ಲಿ ಕೋಟಿ ದೈವದ ನರ್ತಕ ಕುಸಿದು ಬಿದ್ದು ಮೃತಪಟ್ಟಿದ್ದರು. ಇಂತಹ ಘಟನೆ ನಡೆದಾಗ ಮುಖದ ಬಣ್ಣ ತೆಗೆಯದೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಕಟ್ಟಿ ನೇಮೊಡು ಜೀವ ಪೊ೦ಡ ಅರ್ದಲ ದೆಪ್ಪರೆ ಇಜ್ಜಿ | ಪರತಿ ಮಾಂಗಣೆ ಪಾಡ್ದನದಲ್ಲೂ ಉಲ್ಲೇಖ Read More »

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ

ಬೆಳ್ತಂಗಡಿ : ಪಡಂಗಡಿಯಲ್ಲಿ ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದ್ದು ಪರಾರಿಯಾದ ಘಟನೆ ಮಾ. 30 ರಂದು ಸಂಭವಿಸಿದೆ.ಪಡಂಗಡಿ ಗ್ರಾಮದ ಜಾನೆಬೈಲು ಪುತ್ಯೆ ಮನೆ ಎಂಬಲ್ಲಿ ಮನೆ ಯಜಮಾನ ಜುವಾಮ್‌ ಗೋವಿಯಸ್‌ (64) ಅವರಿಗೆ ಹಲ್ಲೆ ನಡೆಸಿದ್ದಾರೆ. ಪರಿಚಿತರಾದ ರಿಯಾಜ್‌ ಮತ್ತು ಫೈಝಲ್‌ ಎಂಬವರೇ ಹಣ ಎಗರಿಸಿದ ಆರೋಪಿಗಳು. ಜುವಾಮ್‌ ಗೋವಿಯಸ್‌ ಅವರು ತನ್ನ ಮಗನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮನೆಯಲ್ಲಿ ಈ ಹಿಂದೆ ರಬ್ಬರ್‌ ಟ್ಯಾಪಿಂಗ್‌ ಮಾಡುತ್ತಿದ್ದ

ಮನೆ ಯಜಮಾನನಿಗೆ ಹಲ್ಲೆ : ಗೂಗಲ್ ಪೇ ಮೂಲಕ ಹಣ ವರ್ಗಾವಣೆ Read More »

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ

ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿ ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ಚುನಾವಣಾ ಆಯೋಗ ಕಣ್ಗಾವಲನ್ನು ಹೆಚ್ಚಿಸಿದೆ.ಚುನಾವಣೆ ಪ್ರಕ್ರಿಯೆ ಮುಕ್ತವಾಗಿ ಹಾಗೂ ನ್ಯಾಯಯುತ ರೀತಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸುವಂತೆ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಿದೆ.ನಾಯಕರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ಜನರು ನಿಯಂತ್ರಣ ಕೊಠಡಿಗಳ ಸಹಾಯವಾಣಿ ಸಂಖ್ಯೆ 080-28604331 ಮತ್ತು 080-28600954ಗಳ ಮೂಲಕ ದೂರು ನೀಡಬಹುದಾಗಿದೆ ಎಂದು ಚುನಾವಣಾ ಆಯೋಗ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ನೀಡಲು ಸಹಾಯವಾಣಿ Read More »

ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಪ್ರಯಾಣಿಕನಿಂದ ಬೆಂಕಿ

ರೈಲು ಹಳಿಯಲ್ಲಿ ಮೂವರ ಶವ ಪತ್ತೆ ಕೋಝಿಕ್ಕೋಡ್‌ : ರೈಲಿನ ಸಹ ಪ್ರಯಾಣಿಕನಿಗೆ ವ್ಯಕ್ತಿಯೋರ್ವ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಕೇರಳದಲ್ಲಿ ಸಂಭವಿಸಿದೆ. ಇದರ ಪರಿಣಾಮವಾಗಿ 8 ಪ್ರಯಾಣಿಕರು ಸುಟ್ಟ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಲಪ್ಪುಳ-ಕಣ್ಣೂರು ಎಕ್ಸ್‌ಕ್ಯೂಟಿವ್‌ ಎಕ್ಸ್‌ಪ್ರೆಸ್‌ ರೈಲಿನ ಡಿ1 ಬೋಗಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ಸಂಭವಿಸಿದೆ.ಈ ನಡುವೆ ಈ ಘಟನೆ ಸಂಭವಿಸಿದ 100 ಮೀಟರ್‌ ಅಂತರದಲ್ಲಿ ಮೂರು ಮೃತದೇಹಗಳು ರೈಲು ಹಳಿ ಪಕ್ಕ ಸಿಕ್ಕಿವೆ. ಮೃತ ಮೂವರು ಒಂದೇ ಕುಟುಂಬದವರು ಎಂದು ಪೊಲೀಸರು

ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಪ್ರಯಾಣಿಕನಿಂದ ಬೆಂಕಿ Read More »

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ 20 ರ‍್ಯಾಲಿ

ಅಧಿಕಾರ ಉಳಿಸಿಕೊಳ್ಳಲು ಮೋದಿ ವರ್ಚಸ್ಸು ಬಳಕೆ ದೆಹಲಿ : ಭಾರತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕವನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನಪಡುತ್ತಿರುವ ಬಿಜೆಪಿ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನೇ ಪೂರ್ಣವಾಗಿ ನೆಚ್ಚಿಕೊಂಡಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸುವಂಥ ಯೋಜನೆಯನ್ನು ಪಕ್ಷದ ಚುನಾವಣಾ ರಣತಂತ್ರ ಹೆಣೆಯುತ್ತಿರುವ ತಂಡ ರೂಪಿಸುತ್ತಿದೆ.ಈ ಬಾರಿ ಕಾಂಗ್ರೆಸ್‌ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅಥವಾ ಬಹುಮತದ ಸಮೀಪಕ್ಕೆ ಬರುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ನುಡಿದಿರುವ ಭವಿಷ್ಯ ಬಿಜೆಪಿ

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯ 20 ರ‍್ಯಾಲಿ Read More »

ಏ.5 ರಿಂದ 8 : ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ

ಪುತ್ತೂರು: ರೆಂಜಿಲಾಡಿ ಗ್ರಾಮದ ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ ಏ.5 ರಿಂದ 8 ರ ತನಕ ನಡೆಯಲಿದೆ.ಏ.5 ರಂದು ಬೆಳಿಗ್ಗೆ ಧ್ವಜಾರೋಹಣ, ಉಗ್ರಾಣ ಮುಹೂರ್ತ, ಕ್ಷೇತ್ರ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಕ್ಷೇತ್ರದ ದೈವಜ್ಞರಾದ ಬಾಲಕೃಷ್ಣ ನಾಯರ್ ಹಾಗೂ ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕದವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಏ.6 ರಂದು ನೂಜಿಗುತ್ತು ಮನೆಯಿಂದ ದೈವಗಳ ಆಭರಣವನ್ನು ಹಾಗೂ

ಏ.5 ರಿಂದ 8 : ನೂಜಿಬೈಲ್ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಹಾಗೂ ನೇಮೋತ್ಸವ Read More »

ಕಾಂಗ್ರೆಸ್‌ ಫೈಲ್ಸ್‌ ವೀಡಿಯೊ ಸರಣಿ ಮೂಲಕ ಬಿಜೆಪಿ ತಿರುಗೇಟು

ದೆಹಲಿ : ಕಾಂಗ್ರೆಸ್‌ ಆಡಳಿತ ಕಾಲದಲ್ಲಿ ನಡೆದಿರುವ ಭ್ರಷ್ಟಾಚಾರಗಳ ವೀಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದರಲ್ಲಿ 48,20,69,00,00,000 ರೂ. ಭ್ರಷ್ಟಾಚಾರ ಎಸಗಲಾಗಿತ್ತು ಎಂದು ಆರೋಪಿಸಲಾಗಿದೆ. ಕಾಂಗ್ರೆಸ್‌ ಫೈಲ್ಸ್‌ ಎಂಬ ಈ ವೀಡಿಯೊ ಸರಣಿಯಮನ್ನು ಬಿಜೆಪಿ 2024ರ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಯಾರಿಸಿದೆ. ಬಿಜೆಪಿಯ ಅಧಿಕೃತ ಟ್ವಿಟ್ಟರ್‌ ಖಾತೆಯಿಂದಲೇ ವೀಡಿಯೊ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ಆಡಳಿತದಲ್ಲಿ ಜನರ ಹಣವನ್ನು ಅಕ್ಷರಶಃ ‘ದರೋಡೆ’ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ‘ಕಾಂಗ್ರೆಸ್ ಫೈಲ್ಸ್’ ಶೀರ್ಷಿಕೆಯ ಸರಣಿಯ

ಕಾಂಗ್ರೆಸ್‌ ಫೈಲ್ಸ್‌ ವೀಡಿಯೊ ಸರಣಿ ಮೂಲಕ ಬಿಜೆಪಿ ತಿರುಗೇಟು Read More »

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ 4.5 ಕೋಟಿ ರೂ. ಮೌಲ್ಯದ ಸೀರೆ ವಶ

ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಆಯೋಗದ ಅಧಿಕಾರಿಗಳು ಒಂದೇ ದಿನ ಬರೋಬ್ಬರಿ 4.5 ಕೋಟಿ ಮೌಲ್ಯದ ಸೀರೆ, ನಗದು, ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಶಿವಮೊಗ್ಗ ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಶುಕ್ರವಾರ ರಾತ್ರಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 4.5 ಕೋಟಿ ಮೌಲ್ಯದ ಸೀರೆ, 1.6 ಕೋಟಿ ನಗದು, 1.56 ಲಕ್ಷ ಮೌಲ್ಯದ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ನಿತ್ಯ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್ ಠಾಣಾ

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ 4.5 ಕೋಟಿ ರೂ. ಮೌಲ್ಯದ ಸೀರೆ ವಶ Read More »

error: Content is protected !!
Scroll to Top